•  
  •  
  •  
  •  
Index   ವಚನ - 558    Search  
 
ಮಾಹೇಶ್ವರನ ಜ್ಞಾನಿಸ್ಥಲ - ಮಾರಿಮಸಣೆ
ಮಾರಿಕವ್ವೆಯ ನೋಂತು ಕೊರಳಲ್ಲಿ ಕಟ್ಟಿಕೊಂಬರು, ಸಾಲಬಟ್ಟರೆ ಮಾರಿಕೊಂಬರಯ್ಯಾ! ಸಾಲಬಟ್ಟರೆ ಅವರನೊತ್ತೆಯನಿಟ್ಟುಕೊಂಡುಂಬರಯ್ಯಾ! ಮಾರುವೊಗನೊತ್ತೆವೋಗ ನಮ್ಮ ಕೂಡಲಸಂಗಮದೇವ.
Transliteration Mārikavveya nōntu koraḷalli kaṭṭikombaru, sālabaṭṭare mārikombarayya! Sālabaṭṭare avaranotteyaniṭṭukoṇḍumbarayya! Māruvoganottevoga nam'ma kūḍalasaṅgamadēva.
Manuscript
English Translation 2 Because they have vowed to Mārikavve , They wear her about their neck: When they contact a debt, they sell her! Or pawn her for the wherewithal to eat! Our Lord Kūḍala Saṅgama Is neither to be sold nor pawned! Translated by: L M A Menezes, S M Angadi
Hindi Translation मारी का व्रत कर उसे गले में बाँध लेते हैं; ऋणी होने पर बेचते हैं, ऋणी होने पर उसे गिरवि रखते हैं, मम कूडलसंगमदेव को न बेच सकते हैं न गिरवी रख सकते हैं ॥ Translated by: Banakara K Gowdappa
Telugu Translation వ్రతమని మారినిగొంతుకు కట్టుకొందురు? కొందరు అప్పుల బడ అమ్మి వేయుదురయ్యా! అప్పుల కుదవిడబోదురయ్యా! అమ్మబడడు కుదువబడడు మా కూడలసంగమ దేవుడు. Translated by: Dr. Badala Ramaiah
Tamil Translation மாரியம்மனை நேர்ந்து கொண்டு கழுத்தில் கட்டிக் கொள்வர் கடன்படின் விற்று விடுவர் ஐயனே கடன்படின் அதை அடகுவைத்து உண்பர் ஐயனே மாறுதலற்ற உண்மைப் பொருளாம் நம் கூடல சங்கமதேவன். Translated by: Smt. Kalyani Venkataraman, Chennai
Marathi Translation दुर्गम्मा पोचम्मा, करून त्या मूर्ति गळ्यात बांधिति, ताईत ते कर्ज होता मूर्ति, टाकिती विकून ठेऊनि गहाण, भरती पोट विकला जाणारा, नव्हे माझा देव कूडलसंगम सम, अन्य नाही अर्थ - अज्ञानी जन दुर्गम्मा, पोचम्माची, मरिअम्मा व अंबाबाईची मूर्ति करुन विविध प्रकारचे ताईत गळ्यात बांधून मिरवितात. त्यांना कर्ज झाल्यास ते त्या मूर्ति विकूनही टाकतात. प्रसंगी गहाण ठेऊन पोटाची खळगी भरतात. माझा कूडलसंगमदेव (परशिव) विकला जात नाही वा गहाण ठेवलाही जात नाही. Translated by Rajendra Jirobe, Published by V B Patil, Hirabaug, Chembur, Mumbai, 1983 मारिकांबाला ताईतात घालून गळ्यात घालतात. कर्ज झाल्यावर विकून टाकतात देवा, कर्ज झाल्यावर गहाण ठेवून पोट भरतात देवा. विकले न जाणारे, गहाण न ठेवले जाणारे आमचे कूडलसंगमदेव आहेत. Translated by Shalini Sreeshaila Doddamani
ಶಬ್ದಾರ್ಥಗಳು ಒತ್ತೆ = ; ಕೊರಳು = ; ನೋಂತು = ; ಬಟ್ಟಡೆ = ; ಯೋಗ = ;
ಕನ್ನಡ ವ್ಯಾಖ್ಯಾನ ಜನ ಮಾರಮ್ಮನನ್ನು ಪೂಜಿಸಿ ಅವಳ ಮುಖಾಕೃತಿಯನ್ನು ಕೊರಳಲ್ಲಿ ಕಟ್ಟಿಕೊಳ್ಳುತ್ತಿದ್ದರು. ಮಾಡಿದ ಸಾಲವನ್ನು ತೀರಿಸಬೇಕಾದಾಗ ಅದನ್ನು ಮಾರುವುದೂ, ಹೊಸದಾಗಿ ಸಾಲ ಮಾಡಬೇಕಾದಾಗ ಅದನ್ನು ಒತ್ತೆಯಿಡುವುದೂ ಅವರಲ್ಲಿ ರೂಢಿಯಲ್ಲಿತ್ತು. ಆದರೆ ಶಿವಭಕ್ತರಾಗಿ ಶಿವಲಿಂಗವನ್ನು ಕೊರಳಲ್ಲಿ ಕಟ್ಟಿಕೊಂಡರೆ, ಆ ಲಿಂಗ ಮಾರಲಾಗಲಿ ಒತ್ತೆಯಿಡಲಾಗಲಿ ಬರುವುದಿಲ್ಲ-ಎಂಬ ಬಸವಣ್ಣನವರ ಈ ಮಾತನ್ನು ಗಮನಿಸಿದರೆ-ಬಸವಣ್ಣನವರ ಕಾಲದ ಶಿವಭಕ್ತರು ಲಿಂಗವನ್ನು ಈಗಿನಂತೆ ಚಿನ್ನ ಬೆಳ್ಳಿ ಮುಂತಾದ ಲೋಹಗಳ ಕರಡಿಗೆಯಲ್ಲಿ ದಾರದಿಂದ ಧರಿಸದೆ-ಬಟ್ಟೆಯ ಸುರುಳಿಯಲ್ಲಿ ಕಟ್ಟಿಕೊಳ್ಳುತ್ತಿದ್ದರು ಅಥವಾ ಕಟ್ಟಿಗೆಯ ಭರಣಿಗಳಲ್ಲಿ ಇಟ್ಟುಕೊಳ್ಳುತ್ತಿದ್ದರೆನಿಸುವುದು. ಮತ್ತು ಮೂಲತಃ ಕಲ್ಲಿನಿಂದ ಮಾಡಿದ ಆ ಶಿವಲಿಂಗ “ಅ-ಮೂಲ್ಯ”ವೆಂಬುದು ಪ್ರಸಿದ್ಧವೇ ಇದೆ. (ನೋಡಿ ವಚನ-589)

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು