•  
  •  
  •  
  •  
Index   ವಚನ - 559    Search  
 
ಮಾಹೇಶ್ವರನ ಜ್ಞಾನಿಸ್ಥಲ - ಮಾರಿಮಸಣೆ
ಉಣಲುಡಲು ಮಾರಿಯಲ್ಲದೆ, ಕೊಲಲು ಕಾಯಲು ಮಾರಿಯೇ? ತನ್ನ ಮಗನ ಜವನೊಯ್ದಲ್ಲಿ ಅದೆತ್ತ ಹೋದಳಾ ಮಾರಿಕವ್ವೆ? ಈವ ಕಾವರೆ ನಮ್ಮ ಕೂಡಲಸಂಗಯ್ಯನಲ್ಲದೆ ಮತ್ತೊಂದು ದೈವವಿಲ್ಲಾ.
Transliteration Uṇaluḍalu māriyallade, kolalu kāyalu māriyē? Tanna magana javanoydalli adetta hōdaḷā mārikavve? Īva kāvare nam'ma kūḍalasaṅgayyanallade mattondu daivavilla.
Manuscript
English Translation 2 Mari should serve to eat and wear; But does she serve to slay and save? Where had she gone when Death Snatched off her own son? To give and guard There is no other god Than Lord Kūḍala Saṅgama! Translated by: L M A Menezes, S M Angadi
Hindi Translation खाने और पहनने के लिए ‘मारी’ है? क्या मारने और रक्षा करने के लिए है ? जब उसके पुत्र को यम ले गया तब मारी कहाँ गई थी? देने और रक्षा करने के लिए कूडलसंगमदेव के अतिरिक्त और कोई देव नहीं है ॥ Translated by: Banakara K Gowdappa
Telugu Translation తిన కట్ట మారియగు గాని చంప రక్షింప మారియగునే? తన బిడ్డను యముడు చంపగ యెట కురికెనో యీ మహామారి? వీరేమి కాతురు కూడల సంగయ్య దప్ప వేరు దైవము లేదు. Translated by: Dr. Badala Ramaiah
Tamil Translation உண்ண, உடுக்க மாரியல்லதே கொல்ல, மாரியே? தன் மகனை யமன் கொண்டு சென்ற பொழுது அன்று எங்கு சென்றனள் மாரி? ஈவதற்கு, காப்பதற்கு நம் கூடல சங்கய்யன் இன்றி, வேறொரு கடவுள் இல்லை. Translated by: Smt. Kalyani Venkataraman, Chennai
Marathi Translation खाणारी-नेसणारी मारीकांबामारणारी-वाचविणारी कशी होईल? तिच्या पुत्राला यम नेत असता तेव्हा कोठे गेली होती मारीकांबा? वरदान देणे-रक्षण करणे यामध्ये कूडलसंगमदेवाविना दुसरा देव नाही. Translated by Shalini Sreeshaila Doddamani
ಶಬ್ದಾರ್ಥಗಳು ಈವಡೆ = ; ಕಾಯ = ; ಕಾವಡೆ = ; ಜವ = ; ಮಾರಿ = ;
ಕನ್ನಡ ವ್ಯಾಖ್ಯಾನ ಢಕ್ಕೆಯ ಬೊಮ್ಮಣ್ಣ(ಮಾರಯ್ಯ)ನ ವಚನಗಳಲ್ಲಿ-ಮಾರಿಯ ಒಂದು ಮೂರ್ತಿಚಿತ್ರ ಸಿಗುವುದು. ಆ ಮಾರಿಯನ್ನು ಮುಮ್ಮೂಲೆಯ ಒಂದು ಮೊರದಲ್ಲಿ ಮುಹೂರ್ತಮಾಡಿ ಎಡಗೈಯಲ್ಲಿ ಹಿಡಿದು ಬಲಗೈಯಿಂದ ಢಕ್ಕೆಯನ್ನು ಬಾರಿಸುತ್ತ ಹೊತ್ತು ತರುವರು. ಆ ಮಾರಿಯ ಒಂದು ಕೈಯಲ್ಲಿ ಕತ್ತಿ, ಇನ್ನೊಂದು ಕೈಯಲ್ಲಿ ಬಟ್ಟಲಿರುತ್ತದೆ. ಎರಡೂ ಕೈಯಲ್ಲಿ ಬಳೆ ತೊಟ್ಟಿರುವಳು, ಇಂಥ ಮಾರಿಯನ್ನು ಹೊತ್ತು ಮನೆ ಮನೆಯ ಮುಂದೆ ನಿಂತು ಢಕ್ಕೆಯನ್ನು ಬಾರಿಸುತ್ತ, ನಡುನಡುವೆ ಅವಳ ಮಹಿಮೆಯನ್ನು ಸಾರುತ್ತ ಭಕ್ತರಿಂದ ಪಡಿಪದಾರ್ಥವನ್ನೂ ಕಾಣಿಕೆಯನ್ನೂ ಸಂಗ್ರಹಿಸುವರು. ಹೀಗೆ ಭಕ್ತರು ಅರ್ಪಿಸಿದ್ದನ್ನು ಉಣ್ಣಲು ಉಡಲು ಮಾತ್ರ ಬಲ್ಲಳು ಮಾರಿದೇವಿ-ಭಕ್ತರಿಗೆ ವರಗಳನ್ನು ಕೊಡಲಾಗಲಿ, ಬಂದ ಕಷ್ಟಗಳನ್ನು ಪರಿಹರಿಸಲಾಗಲಿ ಅವಳಿಗಾಗದು-ಎನ್ನುತ್ತ ಉದಾಹರಣೆಗಾಗಿ-ತನ್ನ ಮಗನನ್ನೇ ಯಮನು ಎಳೆದುಕೊಂಡು ಹೋಗುವಾಗ ಅವಳು ಆ ಬಳಿಯೇ ಸುಳಿಯಲಿಲ್ಲವೆಂಬ ಘಟನೆಯೊಂದನ್ನು ಪ್ರಸ್ತಾಪಿಸಿರುವರು ಬಸವಣ್ಣನವರು. ಭಕ್ತರಿಗೆ ವರಗಳನ್ನು ಕೊಡು(ಈಯು)ವುದಾಗಲಿ, ಅವರನ್ನು ರಕ್ಷಿಸು(ಕಾಯು)ವುದಾಗಲಿ ಶಿವನೊಬ್ಬನಿಗೇ ಸಾಧ್ಯ-ಶಿವನ ಈ ಮಹಾದಾನಗುಣ ಮತ್ತು ಸಂರಕ್ಷಣಶಕ್ತಿ ವಿಷ್ಣು ಮುಂತಾದ ದೊಡ್ಡ ದೈವಗಳಿಗೇ ಇಲ್ಲವೆಂದ ಮೇಲೆ-ಈ ಪಾಮರಿ ಮಾರಿಗೆಲ್ಲಿಯದೆಂಬುದು ತಾತ್ಪರ್ಯ(ನೋಡಿ ವಚನ 548). ಈ ಮಾರಿಯ ಮಗ ಜೋಕುಮಾರನು ಸುಭಿಕ್ಷದ ಮತ್ತು ಸಂತಾನದ ದೈವವೆಂಬ ಅಭಿಪ್ರಾಯವಿದೆ. ಈ ಫಲವಂತಿಕೆಗಾಗಿ ರಾಷ್ಟಮಟ್ಟದಲ್ಲಿ ಕಾಮನು, ಪ್ರಾಂತ್ಯಮಟ್ಟದಲ್ಲಿ ಜೋಕುಮಾರನು ಅಸಂಖ್ಯ ಭಕ್ತಕೋಟಿಯನ್ನು ಆಕರ್ಷಿಸಿದ್ದಾರೆ. ಜೋಕುಮಾರನ ಅಗಲವಾದ ಮುಖ, ಅಗಲವಾದ ಕಣ್ಣು, ನಿಗುರಿದ ನೀಳವಾದ ಶಿಶ್ನ-ಅವನೊಬ್ಬ ಬೆದೆದೇವರೆಂಬುದಕ್ಕೆ ಸಾಕ್ಷಿ. ಕಿಸಿದ ಹಲ್ಲಿನ ಅವನ ನಗೆ-ಅವನ ಭಂಡಕಾಮುಕತನಕ್ಕೆ ದ್ಯೋತಕವಾಗಿದೆ. ಈ ಜೋಕುಮಾರನ ಸಂಬಂಧವಾಗಿ ಬಸವೇಶ್ವರ ಷಟ್ಸ್ಥಲ ವಚನದ ಕಥಾಸಾರದಲ್ಲಿ ಸಿಗುವ ವಿವರವನ್ನು ಈ ಮುಂದೆ ಕೊಟ್ಟಿದೆ : ಒಬ್ಬ ಗಂಧರ್ವನು ಸ್ವರ್ಗದಿಂದ ಮರ್ತ್ಯಕ್ಕೆ ಬಂದು ಮಾರಿಯ ಸಂಗವನ್ನು ಮಾಡಲು-ಅವಳು ಬಸುರಿಯಾದಳು. ಹುಟ್ಟಿದ ಗಂಡುಮಗು ಹುಟ್ಟಿದೇಳು ದಿವಸಕ್ಕೇ ಹೊಲೆಗೇರಿಗೆ ಹೋಗಿ ಹಾದರ ಮಾಡಿ-ಆ ಫಲವಾಗಿಯೇ ಕೊಲೆಯಾಯಿತು. ಯಮದೂತರು ಹಿಡಿಯಲು ಬಂದಾಗ ಅಗಸರ ಒಗೆಯುವ ಕಲ್ಲಿನ ಮರೆಯಲ್ಲಿ ಬಚ್ಚಿಟ್ಟುಕೊಂಡಿತು. ಅದನ್ನು ಯಮದೂತರು ಹುಡುಕಿ ಹಿಡಿದು ಯಮನಿಗೊಪ್ಪಿಸಿದರು. “ಅದು ಕಾರಣದಿಂದಗಸರು (ಸೂತಕವೆಂದು) ಏಳು ದಿನಕ್ಕೆ ಮೇಕಲ್ಲ ಮೇಲೆ (ಬಟ್ಟೆಗಳನ್ನು)ತೊಳೆಯಲಿಲ್ಲ.” ಮಾರಿಯಾದರೊ ತನ್ನ ಈ ಮಗನ ಹೆತ್ತೊಸಗೆ ಸತ್ತೊಸಗೆಯನ್ನು ಏಳುದಿನದೊಳಗೇ ಮಾಡಿ-ಊರಕ್ಕಿ ಊರೆಣ್ಣೆ ಉಣ್ಣು ಮಗನೇ ಜೋ ಎಂದು ಜೋಗುಳವಾಡಲು ಅವನು ಜೋಕುಮಾರನೆಂದು ಹೆಸರುವಾಸಿಯಾದನು.(ಪುಟ:71-72) ಎಂತೂ ಅತಿಕಾಮಿಯಾದ ಜೋಕುಮಾರನು ಮಾರಿಯ ಮಗನೆಂಬುದು ತಾತ್ತ್ವಿಕವಾಗಿ ಅರ್ಥಪೂರ್ಣವಾಗಿದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು