•  
  •  
  •  
  •  
Index   ವಚನ - 560    Search  
 
ಮಾಹೇಶ್ವರನ ಜ್ಞಾನಿಸ್ಥಲ - ಪ್ರಾಣಿಬಲಿ
ಮೊರನ ಗೋಟಿಗೆ ಬರ್ಪ ಕಿರುಕುಳ ದೈವಕ್ಕೆ ಕುರಿಯನಿಕ್ಕಿಹೆವೆಂದು ನಲಿನಲಿದಾಡುವರು: ಕುರಿ ಸತ್ತು ಕಾವುದೆ ಹರಮುಳಿದವರ? ಕುರಿ ಬೇಡ, ಮರಿ ಬೇಡ: ಬರಿಯ ಪತ್ರೆಯ ತಂದು ಮರೆಯದೆ ಪೂಜಿಸು ನಮ್ಮ ಕೂಡಲಸಂಗಮದೇವನ.
Transliteration Morana gōṭige barpa kirukuḷadaivakke kuriyanikkihevendu nalinalidāḍuvaru: Kuri sattu kāvude hara muḷidavara? Kuri bēḍa, mari bēḍa: Bariya patreya tandu mareyade pūjisu nam'ma kūḍalasaṅgamadēvana.
Manuscript
English Translation 2 They leap and dance when they have placed A sheep before a petty god Slipped in the corner of a winnowing-fan: Does the slain sheep protect Those who have earned our Hara's rage? No sheep, no lamb: just bring Some bilwa-leaves and adore Our Lord Kūḍala Saṅgama. Translated by: L M A Menezes, S M Angadi
Hindi Translation सूर्य के कोने में रखी गई निक्षिप्त क्षुद्र देवी के सामने भेड की बलि चढाकर नृत्य करते हैं। भेड मरकर हर के कोप से उन्हें बचायेगी? न भेड चाहिए न मेमना केवल बिल्वपत्र लाकर बिना भूले- मम कूडलसंगमदेव की पूजा कर ॥ Translated by: Banakara K Gowdappa
Telugu Translation చేటగోటికి వచ్చు చెనటి దేవతలకు గొఱ్ఱె నిత్తుమని వెఱ్ఱిగా కూ సెదరే! హరుడలుగువారిని గొట్టెచచ్చి కాచునే? గొఱ్ఱె వలదు గిఱ్ఱె వలదు వట్టి ప త్తిరిదెచ్చి భక్తి పూజింపుడో కూడల సంగమదేవుని. Translated by: Dr. Badala Ramaiah
Tamil Translation முறத்தின் மூலையிலுள்ள இழிந்த கடவுளுக்கு ஆட்டை அளித்தோம் என மகிழ்ந்தாடுவர் ஆடு, மாண்டபின், சிவன் சினந்தோரைக் காக்குமோ? ஆடு வேண்டாம், குட்டி வேண்டாம் வில்வ இலையினால் மறக்காமல் பூசிப்பாய் நம் கூடல சங்கம தேவனை. Translated by: Smt. Kalyani Venkataraman, Chennai
Marathi Translation तांदुळ आणि लिंबु, ठेऊनि सुपात बळी ते घेतात, बकऱ्यांचा गाती नाचताती, होऊनि बेभान देवीसी पाहून, लाकडाच्या देवी कुमारिका, काष्टाचे बाहुल पाडितसे भूल, तुम्हा सर्वां शिवाचा तो कोप होई तुम्हावरी वाचविल तरी, कोण सांगा न वाचवी बोकड, बळी गेले पाप देवी ते निष्पाप, मूर्तिमंत कूडलसंगमदेवा ! बेलपत्री पुरे कोंबडे बकरे, नको कांही अर्थ - अज्ञान लोक मूर्तिचा अर्थ न जाणता मूर्ति पूजा करतात. मागील फोल प्रथेप्रमाणे तांदूळ व लिंबु सुपात ठेऊन, देवीपुढे निष्पाप बकऱ्याचे बळी घेतात. तसेच वासनाबद्ध जन बेभान होऊन पोचम्मा-मरिअम्मा, अंबाबाई सारख्या अविवाहित देवीपुढे गातात काय आणि नाचतात काय? काय हा वेडाचार ! अरे ते तर लाकडाचे - धातूचे बाहुले आहेत. अशावर निश्चित रुद्राचा कोप होईल. आणि त्यांना त्राता कोणीही उरणार नाही. माझ्या कूडलसंगम देवाच्या (परशिवा) पूजेसाठी एक बेलाचे पान (बेलपत्री) पुरे आहे. त्याला कोंबड्या बकऱ्याची किंवा लिंबु तांदळाची मुळीच गरज नाही. ती केवळ शुद्ध असा ज्ञानमुक्त भक्तिचा भूकेला आहे. Translated by Rajendra Jirobe, Published by V B Patil, Hirabaug, Chembur, Mumbai, 1983 झाडाच्या डोलीत राहणाऱ्या क्षुद्र देवाला बकरीचा बळी देवून नाचतात. बकरी मरुन शिवाचा कोप दूर करणार आहे? बकरी नको, कोकरु नको, फक्त बेलपत्र आणून न विसरता पूजा कर आमच्या कूडलसंगमदेवाची. Translated by Shalini Sreeshaila Doddamani
ಶಬ್ದಾರ್ಥಗಳು ಕಾವುದು = ; ಗೋಟೆ = ; ಬಪ್ಪ = ; ಮುಳಿ = ; ಮೊರ = ; ಹರ = ;
ಕನ್ನಡ ವ್ಯಾಖ್ಯಾನ ಹಿಂದಿನ ವಚನದ ವ್ಯಾಖ್ಯಾನದಲ್ಲಿ ಹೇಳಿರುವಂತೆ ಮೊರದೊಳಗೆ ಬಿಜಯಮಾಡುವ ದೈವ ಮಾರಿಯೊಂದೇ ಅಲ್ಲ-ಎಲ್ಲ ಕಿರುಕುಳದೈವಗಳಿಗೂ ಮೊರವೇ ಏರಿಬರುವ ರಥ-ಎಂದು ಬಸವಣ್ಣನವರು ಹಾಸ್ಯ ಮಾಡುತ್ತಿರುವರು. ಇಂಥ ಮಾರಿಮಸಣಿಗಳಿಗೆ ಕುರಿಯನ್ನೂ ಮರಿಯನ್ನೂ ಬಲಿಕೊಟ್ಟು ಉದ್ಧಾರವಾದೆವೆಂದು ಸಂಭ್ರಮಿಸುವ ಮುಗ್ಧ ಜನರನ್ನು ಕುರಿತು-“ಕುರಿ ಸತ್ತು ಕಾವುದೇ ಹರ ಮುಳಿದವರ” ಎಂದು ಅನುಕಂಪೆಯಿಂದ ಪ್ರಶ್ನಿಸುತ್ತಿರುವರು. ತನ್ನ ಒಂದಂಶವೇ ಆದ ಮನುಷ್ಯನು ಮೌಢ್ಯದಿಂದ ಭಯದಿಂದ ಪುಡಿ ದೇವರುಗಳ ಕಾಲಕಸವಾದರೆ ಅವರ ಮೇಲೆ ಶಿವನಿಗೆ ಕೋಪವಲ್ಲವೆ ? ಹರನ ಈ ಮುಳಿಸಿಂದ ಪಾರಾಗಬೇಕಾದರೆ ಜನ ಪೂಜೆಯ ಹೆಸರಿನಲ್ಲಿ ಪ್ರಾಣಿಹಿಂಸೆ ಮಾಡುವುದನ್ನೂ, ಆ ಮೂಲಕವೇ ಒಲಿಯುವೆನೆಂಬ ದೇವತೆಗಳನ್ನೂ ತಿರಸ್ಕರಿಸಿ-ಬಡವರಿಗೂ ಸರಳಮಾರ್ಗಕ್ಕೂ ಒಗ್ಗುವ, ಎಲ್ಲ ಜೀವರಾಶಿಯನ್ನೂ ಪ್ರೀತಿಸುವ ರಕ್ಷಿಸುವ, ಶಿವನಿಗೇ ಮೊರೆಹೊಗಬೇಕೆಂಬುದು ಈ ವಚನದ ತಾತ್ಪರ್ಯ. ಒಟ್ಟಿನಲ್ಲಿ ಜನರು ಮುಗ್ಧರಾಗಲಿ ಮತಿವಂತರಾಗಲಿ-ಇಬ್ಬರೂ ಆತ್ಮವನ್ನು ಕ್ಷುದ್ರೀಕರಿಸಿಕೊಳ್ಳದೆ ಸುಲಭವಾಗಿ ಉದ್ಧಾರವಾಗುವಗಂಭೀರವಾದೊಂದು ಭಕ್ತಿಮಾರ್ಗವನ್ನೇ ಬಸವಣ್ಣನವರು ಬೋಧಿಸುತ್ತಿರುವರು. ಈ ವಚನದಲ್ಲಿ ಬರುವ-“ಕುರಿ ಸತ್ತು ಕಾವುದೇ ಹರ ಮುಳಿದವರ”ಎಂಬ, ಮತ್ತು “ಕುರಿ ಬೇಡ ಮರಿ ಬೇಡ ಬರಿಯ ಪತ್ರೆಯ ತಂದು ಮರೆಯದೆ ಪೂಜಿಸು ನಮ್ಮ ಕೂಡಲ ಸಂಗಮದೇವನ” ಎಂಬ ನುಡಿಮುತ್ತುಗಳು ಅನರ್ಘ್ಯವಾದುವು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು