•  
  •  
  •  
  •  
Index   ವಚನ - 561    Search  
 
ಮಾಹೇಶ್ವರನ ಜ್ಞಾನಿಸ್ಥಲ - ರಕ್ಷಕ
ಬನ್ನಿರೆ ಅಕ್ಕಗಳು, ಹೋಗಿರೆ ಆಲದ ಮರಕ್ಕೆ! ಕಚ್ಚುವುವೆ ನಿಮ್ಮ, ಚಿಪ್ಪಿನ ಹಲ್ಲುಗಳು? ಬೆಚ್ಚಿಸುವುವೆ ನಿಮ್ಮ ಬಚ್ಚಣಿಯ ರೂಹುಗಳು? ನಮ್ಮ ಕೂಡಲಸಂಗಮದೇವನಲ್ಲದೆ ಪರದೈವಂಗಳು ಮನಕ್ಕೆ ಬಂದುವೆ, ಬಿಕ್ಕನೆ ಬಿರಿವ ದೈವಂಗಳು?
Transliteration Bannire akkagaḷu, hōgire ālada marakke! Kaccuve nim'ma, cippina hallugaḷu? Beccisuve nim'ma baccaṇiya rūhugaḷu? Nam'ma kūḍalasaṅgamadēvanallade paradaivaṅgaḷu manakke banduve, bikkane biriva daivaṅgaḷu?
Manuscript
English Translation 2 Come, sisters, go to the banyan-tree! Do they bite, those teeth made of shells? Do covered effiges make you afraid? Did other gods Than our Lord Kūḍala Saṅgama Allure your hearts- those gods That suddenly crack and go? Translated by: L M A Menezes, S M Angadi
Hindi Translation आइए बहनों, चलिए वटवृक्ष की ओर- क्या तुम्हें सीप के दाँत काटेंगे? तुम्हें रंगे हुए रूप भयभीत करेंगे? मम कूडलसंगमदेव को छोड तुम्हें फूटनेवाले परदैव अभीष्ट हुए? Translated by: Banakara K Gowdappa
Telugu Translation రండో అక్కలారా; మఱ్ఱికడ కేగుచుంటిరే! కొఱుకువడునే మీపంటి చిప్పలు, తఱగుపడునే మీ మెఱుగు రూపములు? మా కూడల సంగమదేవుడు గాక పరదైవములు మనసుకు వచ్చునే పట్టనివిరుగు దైవములు. Translated by: Dr. Badala Ramaiah
Tamil Translation தமக்கையரே வாரீர், ஆலமரத்திடம் செல்வீர் உங்களைச் சிப்பியின் பற்கள் கடிக்குமோ? அச்சுறுத்துமோ உம்முடைய ஒப்பனை வடிவங்கள் நம் கூடல சங்கம தேவனின்றி நெட்டுயிர்த்து, சிதறுண்ட மனமுடைய கடவுளரால் மனதிற்குள் வரவியலுமோ? Translated by: Smt. Kalyani Venkataraman, Chennai
Marathi Translation वटवृक्ष पूजण्या का जातात माय भगिनी ! त्या तोक्षण दंत पंक्तिस मीतात काय भगिनी ! विकृत रूपे तयांची का आवडती तयांना मितात काय म्हणूनी त्या सर्प देवतांना कूडलसंगमाची दृष्टी करिने ज्यास नष्ट ती काय हो आवडती दैवते भूत भ्रष्ट अर्थ - भारतात विविध प्रकारच्या प्राण्यांची व वृक्षांची पूजा केली जाते. ज्ञानपूर्ण ज्योति श्री बसवेश्वरांना कूडलसंगमदेवाच्या (परमेश्वराच्या) कृपेनी प्रश्न उत्पन्न होतो व ते वरील वचनात माता भगिनींना उद्देशून म्हणतात मातांनों! तुम्ही षटवृक्षाच्या, नागसर्पाच्या किंवा भूताखेतांच्या पूजनास का जाता. ते तुम्हास भितो घालतात का? की ते तुम्हास आवडतात. माझ्या कूडलसंगमदेवाच्या एकमात्र दृष्टीक्षेपाने ज्या देवतांची भयानकता नष्ट होते व ते नम्र होतात. अशा परमेश्वराचेच पूजन तुम्ही कां करीत नाही. व्यर्थ दैवत पूजनेच्या पाठी कां लागता ? खऱ्या परमेश्वराची पूजा करा म्हणजे तुम्हास तुमची इष्ट प्राप्ती होईल. Translated by Rajendra Jirobe, Published by V B Patil, Hirabaug, Chembur, Mumbai, 1983 या बहिणीनों, वटवृक्षाची पूजा करायला निघाला. चावणार नाही का तुमच्या देवाचे तीक्ष्णदात, घाबरविणारे नाही तुमच्या देवाचे विकृतरूप, आमच्या कूडलसंगमदेवाविना अन्य देव तुम्हाला आवडले? चकनाचूर होणारे हे देव तुम्हाला आवडले ? Translated by Shalini Sreeshaila Doddamani
ಶಬ್ದಾರ್ಥಗಳು ಕಚ್ಚು = ; ಚಿಕ್ಕನೆ = ; ಬಚ್ಚಣಿ = ; ಬಿರಿವ = ; ಬೆಚ್ಚು = ; ರೂಹು = ;
ಕನ್ನಡ ವ್ಯಾಖ್ಯಾನ ಹಾಳು ಮೊರಡಿಗಳಲ್ಲಿ, ಊರ ದಾರಿಗಳಲ್ಲಿ, ಕೆರೆಬಾವಿಗಳಲ್ಲಿ, ಹಿರಿಯಾಲದ ಮರದಲ್ಲಿ ವಾಸಮಾಡಿಕೊಂಡಿರುವ ಮಾರಯ್ಯ ಬೀರಯ್ಯ ಮುಂತಾದ ಕ್ರೂರದೇವತೆಗಳ ಬಳಿ-ಪೂಜಿಸಲೆಂದೇ ಆಗಲಿ-ಹೋಗಲು ಯಾರಿಗಾದರೂ ಭಯವೇ ! ಹೆಂಗಸರು ಮಕ್ಕಳೆಂದ ಮೇಲೆ ಅವರಿಗೆ ಭಯವಿನ್ನೂ ಅಧಿಕವೇ ! ಊರ ಹೊರಗೆ ಭಯಂಕರವಾಗಿ ಹಬ್ಬಿದ ಆಲದ ಮರದ ಕೆಳಗೆ ನಡೆಯುವ ಇಂಥ ಯಾವುದೋ ಪೂಜಾಸಂದರ್ಭಕ್ಕೆ ಹಾಜರಾಗಲು ಅಳುಕಿ ಹಿಂಜರಿಯುತ್ತಿದ್ದ ಹೆಂಗಸರನ್ನು ಕಂಡು ಬಸವಣ್ಣನವರು-ಅವರೊಡನೆ ಗಂಭೀರವಾದ ಇಂಗಿತದೊಡನೆಯೇ ಆದರೂ ಸರಸವಾಗಿ ಮಾತು ಬೆಳಸುತ್ತಿರುವಂತಿದೆ : ಬನ್ನಿ ಅಕ್ಕಂದಿರೇ ಬನ್ನಿ-ಯಾಕೆ ದಿಗಿಲುಗೊಂಡು ಹಿಮ್ಮೆಟ್ಟುತ್ತಿದ್ದೀರಿ? ನಡೆಯಿರಿ ಆಲದ ಮರದ ಬಳಿಗೆ. ಆ ಮರದಡಿಯ ನಿಮ್ಮ ವ್ಯಂತರದೇವನ ಶಂಖದ ಹಲ್ಲುಗಳು ನಿಮ್ಮನ್ನು ಕಚ್ಚುವವೇನು? ಅವನ ವರ್ಣರಂಜಿತರೂಪ ನಿಮ್ಮನ್ನು ಹೆದರಿಸುವುದೇನು? ಅಂಥ ದೈವಗಳಿಗೆ ನೀವು-ಶಿವಶಂಕರನನ್ನು ಬಿಟ್ಟು-ಹೇಗಾದರೂ ಒಲಿದಿರೋ ! ಮೆತ್ತದೆ ಬಿಟ್ಟರೆ ಬಿರುಕುಬಿಡುವ ಇಂಥ ದುರ್ದೈವಗಳಿಗೆ ನೀವು ಹೇಗಾದರೂ ಒಲಿದಿರೋ ! ಎನ್ನುತ್ತಿರುವರು ಬಸವಣ್ಣನವರು. ಇಲ್ಲಿ ಅವರು ಕುರಿತಿರುವ ಅನ್ಯದೈವ ವ್ಯಂತರವೇ ಆಗಲಿ ಬೆಂತರವೇ ಆಗಲಿ-ಅವು ಮಣ್ಣಿಂದ ಮಾಡಿದ ಮೂರ್ತಿಗಳೆಂದೂ, ಬಣ್ಣ ಬಳಿದು ಮಾಡಿದವುಗಳೆಂದೂ-ಅವುಗಳಿಗೆ ಹಲ್ಲುಗಳನ್ನು ತಿನ್ನುವುದಕ್ಕೆ ಬದಲಾಗಿ ಕಪ್ಪೆಚಿಪ್ಪು ಮುಂತಾದುವನ್ನು ತಂದು ಅವುಗಳ ಬಾಯಲ್ಲಿ ಹೂತು ಸಿಕ್ಕಿಸುತ್ತಿದ್ದರೆಂದೂ ಊಹಿಸಬಹುದು. ಊರ ಹೊರಗೆ, ಆಲದ ಮರದ ಕೆಳಗೆ-ಬಳಿದ ಬಣ್ಣದಿಂದ ರಾವು ಸುರಿಯುವ, ಕಿಸಿದ ಬಾಯಲ್ಲಿ ಅಗಲವಾಗಿ ಹಲ್ಲುಗಿಂಜಿರುವ ಆ ದೇವರುಗಳನ್ನು ನೋಡಲು ಅಬಲೆಯರಿಗೆ ಭಯವಾಗುವುದಿಲ್ಲವೆ? ಹೀಗೆ ಭಕ್ತಿಯನ್ನು ಬಿಟ್ಟು, ಭಯವನ್ನು ಹುಟ್ಟಿಸುವ ದೇವರೇಕೆ ನಿಮಗೆ ಪ್ರಿಯವಾದನೆಂದು ಬಸವಣ್ಣನವರು ಜನಸಾಮಾನ್ಯರನ್ನು ಕುರಿತು-ಈ ಅಕ್ಕಗಳ ನೆಪದಲ್ಲಿ-ಕೇಳುತ್ತಿರುವರು. ಮಾನವ ಮನೋದೌರ್ಬಲ್ಯಗಳೇ ಮೂರ್ತಿವೆತ್ತಂತಿರುವ ಈ ದೈವಗಳು ಸಾಮಾಜಿಕವಾಗಿ ದುರ್ಬಲರಾದವರಿಗೆ ಪ್ರಿಯವಾಗುವುದೊಂದು ದುರದೃಷ್ಟದ ಸಂಗತಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು