ಮಾಹೇಶ್ವರನ ಜ್ಞಾನಿಸ್ಥಲ - ಏಕದೇವೋಪಾಸನೆ
ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೋ
ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೋ!
ದೈವ, ದೈವವೆಂದು ಕಾಲಿಡಲಿಂಬಿಲ್ಲಾ!!
ದೈವನೊಬ್ಬನೆ ಕೂಡಲಸಂಗಮದೇವ.
Transliteration Maḍake daiva, mora daiva, bīdiya kallu daiva,
haṇige daiva, billanāri daiva, kāṇiro
koḷaga daiva, giṇṇilu daiva, kāṇiro!
Daiva, daivavendu kāliḍalimbilla!!
Daivanobbane kūḍalasaṅgamadēva.
Manuscript
English Translation 2 The pot is a god. The winnowing
fan is a god. The stone in the
street is a god. The comb is a
god. The bowstring is also a
god. The bushel is a god and the
spouted cup is a god.
Gods, gods, there are so many
there's no place left
for a foot.
There is only
one god. He is our Lord
of the Meeting Rivers.
Translated by: A K Ramanujan
Book Name: Speaking Of Siva
Publisher: Penguin Books
----------------------------------
Is god, the stone upon the roadside too!
The comb is god, the bowstring too,
The jar a god, the pippet too!
So many gods! there is no space
To put your foot! the only God
Is Lord Kūḍala Saṅgama!
Translated by: L M A Menezes, S M Angadi
Hindi Translation मटका देव है, सूप देव है, मार्ग का पत्थर देव है,
कंधी देव है, धनुष की डोरी देव है
मापक देव है, लुटिया देव है!
देव, देव, कहते पैर रखने के लिए भी स्थान नहीं है ।
देव एक ही है, मम कूडलसंगमदेव ॥
Translated by: Banakara K Gowdappa
Telugu Translation కుండ దేవుడు నడివీధి గుండు దేవుడు
చేట దేవుడు చీపురుకట్టదేవుడు
వింటినారి దేవుడు వినరో ముంత దేవుడు
గిన్నె దేవుడు చూడుడో
దేవుడు దేవుడన కాలిడ చోటులేదు
దేవుడొక్కడే కూడల సంగమదేవుడు.
Translated by: Dr. Badala Ramaiah
Tamil Translation பானை கடவுள், முறம் கடவுள், வீதியிலுள்ள கல் கடவுள்
சீப்பு கடவுள், உழக்கு கடவுள் காணீரோ!
படி கடவுள், கிண்டி கடவுள் காணீரோ!
கடவுள் கடவுள் என காலிட இடமில்லை
கடவுள் ஒருவனே, நம் கூடல சங்கம தேவன்.
Translated by: Smt. Kalyani Venkataraman, Chennai
Marathi Translation
सूप, घागरी, खडक, धोंडा
धनूष्य, दोरो, कंगवा, आंडा
माप, लोटके, देव फाटके
जागा नच ठेवाया पाऊल
धरती वरले विचित्र बाहुल
पाय कोडे ठेऊ आता?
(म्हणून) कूडलसंगमात राहू !
अर्थ – मूर्ख जनानी प्रत्येक जड वरतूस एवढे महत्व दिले की, कालांतराने त्या वस्तू देवच होऊन बसल्या. जसे सूप, घागर, खडक, धोंडा, माप, लोटके, कंगवा, धनुष्य इत्यादि सर्वव दैवत झाल्यामुळे पृथ्वीवर पाऊल ठेवण्यासही कोठे जागा उरली नाही. म्हणून मी या सर्वाना सोडून एकमेव तुझेच चिंतन करीत राहीन व त्यातच देहभान विसरुन शेवटी तुझ्यातच लीन होईन. असे महात्मा बसवेश्वर धरतीवरील अनेक व विचित्र देवी देवतांना पाहून आपल्या मनातील प्रकट करीत आहेत.
Translated by Rajendra Jirobe, Published by V B Patil, Hirabaug, Chembur, Mumbai, 1983
मडके देव, सूप देव, रस्त्याचा दगड देव,
कंगवा देवा, धनुष्याची दोरी देव पहा.
माप देव, लोटा देव पहा !
असंख्य देवांच्यामुळे जमिनीवर पाय ठेवण्यास जागा नाही
एकच देव कूडलसंगमदेव आहे.
Translated by Shalini Sreeshaila Doddamani
ಶಬ್ದಾರ್ಥಗಳು ಇಂಬು = ; ಕೊಳಗ = ; ಗಿಣ್ಣಿಲು = ; ಬಿಲ್ಲ = ; ಮೊರ = ;
ಕನ್ನಡ ವ್ಯಾಖ್ಯಾನ ಮತ್ತೆ ಯಾವುದು ದೇವರಲ್ಲ ? ಮನೆಯಲ್ಲಿ ಬೀದಿಯಲ್ಲಿ ಹೊಲದಲ್ಲಿ ಎಲ್ಲೆಲ್ಲೂ ದೇವರೇ ಕಾಲು ಕೈಗಳಿಗೆ ಸಿಕ್ಕುತ್ತಿರುವಾಗ ನಮಗಿನ್ನೇನು ಆ ದೇವರ ಸಾಕ್ಷಾತ್ಕಾರವಾದಂತೆಯೇ! ಅಷ್ಟೇ ಅಲ್ಲ ಅವನನ್ನು ನಾವು ಅಧೀನಪಡಿಸಿಕೊಂಡು ಅವನಿಂದ ದವಸಧಾನ್ಯವನ್ನು ಶುಚಿಮಾಡಿಸುತ್ತಿದ್ದೇವೆ, ಬೇಟೆಯಾಡಿಸುತ್ತಿದ್ದೇವೆ, ಅಡಿಗೆ ಮಾಡಿಸುತ್ತಿದ್ದೇವೆ, ಅಳೆದು ಸುರಿಸಿ ವ್ಯಾಪಾರ ಮಾಡಿಸುತ್ತಿದ್ದೇವೆ, ಗಂಧ ಪನ್ನೀರನ್ನು ತರಿಸುತ್ತಿದ್ದೇವೆ ಕಡೆಗೆ ನಮ್ಮ ತಲೆಯಲ್ಲಿರುವ ಹೇನು ಸೀರನ್ನೂ ಹೆಕ್ಕಿ ತೆಗೆಸುತ್ತಿದ್ದೇವೆ-ಎಂದು ಹಾಸ್ಯಮಾಡುತ್ತಿರುವಂತಿದೆ ಬಸವಣ್ಣನವರು.
ಕೇವಲ ಹಾಸ್ಯ ಅವರ ಉದ್ದೇಶವಲ್ಲ-ನಮ್ಮ ಕಾಲಡಿಯಾಗಿರುವ ಈ ಉಪಕರಣಪದಾರ್ಥಗಳು ದೇವರಲ್ಲ-ಯಾವನ ಕಾಲುಗಳನ್ನು ಕಾಣುವುದು ವಿಷ್ಣ್ವಾದಿ ಮಹಾಶಿವಭಕ್ತರಿಗೂ ಸಾಧ್ಯವಾಗಲಿಲ್ಲವೋ-ಅಂಥ ಆದಿಯಿಲ್ಲದ, ಆದಿಗೆಲ್ಲಾ ಅನಾದಿಯಾದ ಶಿವಶಕ್ತಿಯೇ ದೇವರು ಎಂಬುದು ಅವರ ಉದ್ದೇಶ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು