•  
  •  
  •  
  •  
Index   ವಚನ - 563    Search  
 
ಮಾಹೇಶ್ವರನ ಜ್ಞಾನಿಸ್ಥಲ - ದೇವರು
ರಿಣ ತಪ್ಪಿದ ಹೆಂಡಿರಲ್ಲಿ, ಗುಣ ತಪ್ಪಿದ ನಂಟರಲ್ಲಿ, ಜೀವವಿಲ್ಲದ ದೇಹದಲ್ಲಿ ಫಲವೇನೋ? ಆಳ್ದನೊಲ್ಲದ ಆಳಿನಲ್ಲಿ, ಸಿರಿ ತೊಲಗಿದ ಅರಸಿನಲ್ಲಿ, ವರವಿಲ್ಲದ ದೈವದಲ್ಲಿ ಫಲವೇನೊ? ಕಳಿದ ಹೂವಿನಲ್ಲಿ ಕಂಪ, ನುಳಿದ ಸೂಳೆಯಲ್ಲಿ ಹೆಂಪ, ಕೊಳಚೆಯ ನೀರಿನಲ್ಲಿ ಗುಂಪನರಸುವಿರಿ, ಮರುಳೇ- ವರಗುರು ವಿಶ್ವಕ್ಕೆಲ್ಲ ಗಿರಿಜಾಮನೋವಲ್ಲಭ- ಪರಮ ಕಾರಣಿಕ ನಮ್ಮ ಕೂಡಲಸಂಗಮದೇವ.
Transliteration Riṇa tappida heṇḍiralli, guṇa tappida naṇṭaralli, jīvavillada dēhadalli phalavēno? Āḷdanolladāḷadalli, siri tolagidarasinalli, varavillada daivadalli phalavēno? Kaḷida hūvinalli kampa, nuḷida sūḷeyalli hempa, koḷaceya nīrinalli gumpanarasuviri, maruḷē- varaguru viśvakkella girijāmanōvallabha- parama kāraṇika nam'ma kūḍalasaṅgamadēva.
Manuscript
English Translation 2 What price a faithless wife, A kinsman without love, a lifeless form? What price is an unwanted slave, A fortune- forsaken king, Or an unblessing god? Folly to seek Fragrance in flower too long in bloom, Charm in a wizened whore, Depth in a stagnant pool: He who is lord of the heart Of Her the mountain-born, Prime teacher of the world, Is our Lord, Kūḍala Saṅgama:! Translated by: L M A Menezes, S M Angadi
Hindi Translation विश्वासहीन पत्नी, गुणहीन संबंधी जीवहीन देह से क्या प्रयोजन है? शासन का अनपेक्षी धनहीन राजा से सेवक, वर देने में अशक्त देवता से क्या प्रयोजन है? मुरझाए पुष्प में सुगंध, वृद्ध वेश्या में विलास एवं पंक जल में गहराई दूँढता है रे पागल वरगुरु गिरिजा मनोवल्लभ परमकारणिक मम कूडलसंगमदेव है॥ Translated by: Banakara K Gowdappa
Telugu Translation ఋణము తీర భార్య: గుణముచెడ చుట్టము. జీవముపోవ దేహమున ఫలమేమో? ప్రభుడు మెచ్చని భటుడు భాగ్య మడగిన ప్రభుడు వరమీని వేల్పున ఫలమేమో? వాడిన పూలకంపు; ముదిలంజ బెళుకు ముఱికినీట లోతు చూతురే మూర్ఖుడా; వరగురుడు విశ్వమున కెల్ల గిరిజా మనోహరుడు పరమ కారుణికుడయ్యా కూడల సంగమదేవుడు. Translated by: Dr. Badala Ramaiah
Tamil Translation அன்பற்ற மகளிரால், நல்லியல்பற்ற உறவினரால் உயிரற்ற உடலால் என்ன நன்மை? அரசன் விரும்பாத சேவகனால், தொலைத்த செல்வத்தைத் தேடுவதால் வரமளிக்காத கடவுளால் என்ன நன்மை? உலர்ந்த மலரில் நறுமணத்தை முதிர்த்த பரத்தையிடம் இன்பத்தை அழுக்கு நீரில் தண்மையைத் தேடுவரோ, மருளே வரகுரு, உலகனைத்திற்கும், கிரிஜாவின் கணவன் மேலான உலகின் தலைவன் நம் கூடல சங்கமதேவனன்றோ. Translated by: Smt. Kalyani Venkataraman, Chennai
Marathi Translation पति प्रीतीहीन, जैसी ती ललना सर्व अलंकार जाण, तिचे व्यर्थ हळदी कुंकूम लेपन, वैभवी भूषण सौभाग्य ते जाण, तिचे व्यर्थ शिवप्रीतीहीन, तैसा भक्त जाण विभूती लेपन, त्याचे व्यर्थ रुद्राक्षाच्या माळा, भगवी भूषणे दांभिक ते जिणे, त्याचे व्यर्थ शरणवंशी ऐसे, जगणे अमान्य येणे तू प्रसन्न, कैसा होशी कूडलसंगमदेवा ! आचार ते घडावे कृपेपात्र व्हावे तुजलागी अर्थ - एखादी स्त्री हळदीलेपन करून स्वच्छ स्नान केलेली कपाळावर व केसात सौभाग्य चिन्ह असलेले कुंकुम लावलेली आणि सर्व अलंकार भूषण परिधान केलेली असेल परंतु पतिप्रेमापासून वंचित असेल तर तिच्यासाठी ते सर्व करणे व्यर्थ होय. अगदी त्याप्रमाणे शिवावर प्रेम नाही असा शिवकृपाहीन मानवाने केलेला बाह्याचार म्हणजे त्या ललने प्रमाणेच होय. त्याचे ते लिंगधारण व रूद्राक्षधारण त्या ललनेप्रमाणेच व्यर्थ होय शरण धर्मात असा दंभाचार मुळीच नसतो व ते त्यांना मुळीच मान्य नसते. म्हणून हे कूडलसंगगदेवा (परमेश्वरा) तू आम्हाकडून तोच आचार करुन घे. जेणे करुन तू प्रसन्न व्हावास. Translated by Rajendra Jirobe, Published by V B Patil, Hirabaug, Chembur, Mumbai, 1983 प्रितीहीन पत्नी, गुणहीन पाहुणा, जीवाविना देह, यांचा काय उपयोग? मालकाचा विश्वास गमावलेला सेवक, वैभवहीन राजा, वर न देणारा देव यांचा काय उपयोग ? कोमेजलेल्या फुलात सुगंध, तिरस्कृत वेश्येत विलास गढूळ पाण्यात निर्मळता शोधतो मुर्खा विश्वाचे वरगुरु गिरिजा मनोवल्लभ, परम कर्ता करविता आमचे कूडलसंगमदेव. Translated by Shalini Sreeshaila Doddamani
ಶಬ್ದಾರ್ಥಗಳು ಅರಸು = ಹುಡುಕು; ಆಳಿ = ಸಮೂಹ; ಆಳ್ವ = ಆಳುವ; ಕಂಪು = ; ಕಳಿ = ; ಗಿರಿಜ = ; ತೊಲಗು = ; ನಂಟ = ; ಮರುಳೆ = ; ರಿಣ = ; ವಲ್ಲಭ = ; ಹೆಂಪ = ;
ಕನ್ನಡ ವ್ಯಾಖ್ಯಾನ ಈ ವಚನದ ಕುರಿತ ವಿಷಯ-ಕೂಡಲ ಸಂಗಮಶಿವನು ವಿಶ್ವಕ್ಕೆಲ್ಲಾ ಪರಮಗುರು-ಆದರೂ ಗಿರಿಜಾಮನೋವಲ್ಲಭ, ಆದ್ದರಿಂದ ಪರಮಕಾರಣಿಕನೆಂಬುದು. ಈ ಮುಖ್ಯ ವಿಷಯವನ್ನು ಸಯುಕ್ತಿಕವಾಗಿ ನಿರೂಪಿಸುವ ವ್ಯರ್ಥಪ್ರಯತ್ನದಲ್ಲಿ-ಮೂರು ಮೂರು ನಿದರ್ಶನಗಳ ಮೂರು ಉಕ್ತಿಗುಚ್ಚಗಳನ್ನು ಕೊಡಲಾಗಿದೆ: ರುಣ ತಪ್ಪಿದ ಹೆಂಡಿರಲ್ಲಿ, ಗುಣ ತಪ್ಪಿದ ನಂಟರಲ್ಲಿ, ಜೀವವಿಲ್ಲದ ದೇಹದಲ್ಲಿ ಫಲವಿಲ್ಲವೆಂಬುದೊಂದು, ಒಡೆಯನು ಒಲ್ಲದ ಆಳಿನಲ್ಲಿ, ಐಶ್ವರ್ಯ ಹೋದ ರಾಜನಲ್ಲಿ, ವರಕೊಡದ ದೇವರಲ್ಲಿ ಫಲವಿಲ್ಲವೆಂಬುದಿನ್ನೊಂದು, ಬಾಡಿದ ಹೂವಿನಲ್ಲಿ ಕಂಪನ್ನೂ, ಬಿಟ್ಟ ಸೂಳೆಯಲ್ಲಿ ಘನತೆಯನ್ನೂ, ಕೊಳಚೆಯ ನೀರಿನಲ್ಲಿ ಆಳವನ್ನೂ ನಿರೀಕ್ಷಿಸಲಾಗದೆಂಬುದು ಮೂರನೆಯದು. ಈ ನಿದರ್ಶನಗಳ ಮಾಲೆಯಲ್ಲಿ ಯಾವೊಂದು ನಿದರ್ಶನವೂ ಮುಖ್ಯ ವಿಷಯವನ್ನು ಬೆಂಬಲಿಸುತ್ತಿಲ್ಲ. ಕೌಟುಂಬಿಕ ಸುಖವಿಲ್ಲದ, ಸೂಳೆಯ ಸುಖವೂ ಇಲ್ಲದ, ಧನಿಕನಾದೊಬ್ಬ ಒಡೆಯನ ಪೋಷಣೆಯೂ ಇಲ್ಲದ-ಮತ್ತು ಕಂಪು-ಹೆಂಪು-ಗುಂಪು ಎಂಬಂಥ ಪ್ರಾಸಪ್ರಿಯನಾದೊಬ್ಬ ಕುಕವಿ ಹೊಸೆದು ಕಟ್ಟಿದ ನಿರರ್ಥಕ(ಅಥವಾ ಮಾಲೋಪಮಾ) ವಚನವಿದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು