ಮಾಹೇಶ್ವರನ ಜ್ಞಾನಿಸ್ಥಲ - ಲಿಂಗನಿಷ್ಠೆ
ಲಿಂಗಶಿವಾಲಯದ ಮುಂದೆ ಸಿಂಹ ಶೂದ್ರಿಕನಿಲ್ಲದಿಲ್ಲ;
ನಂದಿಕೇಶ್ವರ ಭೃಂಗಿನಾಟ್ಯ ನಮ್ಮ ಲಿಂಗನ ಮುಂದೆ;
ಇದಕ್ಕೆ ದಿಷ್ಟ, ದೀವಿಗೆ ನಮ್ಮ ಲಿಂಗನ ಮುಂದೆ.
ಅನ್ಯದೈವವೆಂಬುದ ತೂರಿಯೂ ಕಾಣಬಾರದು.
ನೊಸಲ ಕಣ್ಣಭವನೊಬ್ಬನೆ ನಮ್ಮ ಕೂಡಲಸಂಗಮದೇವ.
Transliteration Liṅgaśivālayada munde sinha śūdrikanilladilla;
nandikēśvara bhr̥ṅgināṭya nam'ma liṅgana munde;
idakke diṣṭa, dīvige nam'ma liṅgana munde.
An'yadaivavembuda tōriyū kāṇabāradu.
Nosalakaṇṇabhavanobbane nam'ma kūḍalasaṅgamadēva.
Manuscript
English Translation 2 Before a Liṅga temple there must be
A lion and a Śūdrika.
Before our Liṅga ,Nandikēśvara
And the dance of Bhr̥ṅgi;
Before our Liṅga,
As a signal there is a lamp
Before our Liṅga
Even if placed before the eyes, I see not
An alien God? The unborn one
with eye on forehead is our Lord
Kūḍala Saṅgama!
Translated by: L M A Menezes, S M Angadi
Hindi Translation शिवालय का पुरोभाग
सिंह शूद्रिक के बिना न रहता,
नंदिकेश्वर और भृंगी नाट्य करते हैं।
मम लिंगदेव के सामने
दिष्ट ज्योति जल रही है
मम लिंगदेव के सामने
दिखाने पर भी अन्य देवों को नहीं देखना चाहिए ,
एक ही है फालाक्ष परमेश्वर कूडलसंगमदेव ॥
Translated by: Banakara K Gowdappa
Telugu Translation శివాలయమునకు ముందు
సింహళూద్రికలు నిల్చినవి
నంది భృంగి నాట్యములు మా
శివుని సన్నిధి సాగుచున్నవి
నందాదీపము వెలిగె మా స్వామి కట్టెదుట
పరదై వములు చొచ్చుకొని వచ్చినా కనపడవు
నొసటి కంటి దేవుడొక్కడే కనపడె సంగమదేవుడు,
Translated by: Dr. Badala Ramaiah
Tamil Translation இலிங்க சிவாலயத்தின் முன்பு சிங்கம் தாழ்ந்ததுதான்
நந்திகேசுவரர், பிருங்கியின் நடனம் நம் இலிங்கம் முன்பு
இதற்குப் புலப்படும் விளக்கு நம் இலிங்கம்முன்பு
வேறு கடவுள் தென்படினும் காணலாகாது
பிறப்பிலி, கண் நுதலோன் ஒருவனே கடவுள்
நம் கூடலசங்கம தேவன்.
Translated by: Smt. Kalyani Venkataraman, Chennai
Marathi Translation
लिंग शिवालयासमोर सिंह शुद्रिकांचे चिन्ह नसते.
नंदिकेश्वराचे भुगीनृत्य आमच्या लिंगासमोर असते.
दीपस्तंभ आमच्या लिंगासमोर असतो.
अन्य देवाच्या मंदिरासमोर काही दिसत नाही.
त्रिनयन परशिव एकच देव आहे कूडलसंगमदेव.
Translated by Shalini Sreeshaila Doddamani
ಶಬ್ದಾರ್ಥಗಳು ಅಭವ = ಶಿವ, ಹುಟ್ಟಿಲ್ಲದ್ದು; ಆಲಯ = ವಾಸಸ್ಥಳ, ಮನೆ; ದಿಷ್ಟ = ; ದೀವಿಗೆ = ; ನಂದಿ = ; ನಾಂಟ್ಯ = ; ನೊಸಲು = ; ಭೃಂಗಿ = ; ಶೂದ್ರಿಕ = ;
ಕನ್ನಡ ವ್ಯಾಖ್ಯಾನ ತ್ರಿಲೋಚನ ಶಿವನಲ್ಲದೆ ಮತ್ತೊಂದು ಘನದೈವವಿಲ್ಲವೆನ್ನುತ್ತ-ಆ ಶಿವಾಲಯದ ವರ್ಣನೆ ಮಾಡಿ-ಅಲ್ಲಿ ನಡೆಯುವ ದೀವಿಗೆಯ ಒಂದು ದಿವ್ಯ(ಪವಾಡ)ವನ್ನು ಪ್ರಸ್ತಾಪಿಸಲಾಗಿದೆ ಈ ವಚನದಲ್ಲಿ.
ಲಿಂಗಶಿವಾಲಯವೆಂದರೆ-ಅದರ ಮುಮ್ಮುಖದಲ್ಲಿ ಸಿಂಹಸೂತ್ರಿ[=ಶೂದ್ರಿ?]ಕ ಮತ್ತು ನಂದಿಕೇಶ್ವರನ, ಹಾಗೂ ನಾಟ್ಯವಾಡುತ್ತಿರುವ ಭೃಂಗಿಯ ಪ್ರತಿಮಾಶಿಲ್ಪಗಳಿರುವವು.
ಸಿಂಹಸೂತ್ರಿ[=ಶೂದ್ರಿ?]ಕವೆಂಬುದು ಶಿವಾಲಯದ ಕಳಶದಿಂದ ಕೆಳಭಾಗಕ್ಕಿರುವುದೆಂದು ತಿಳಿಯಬರುವುದು. ಹರಿಹರನ ಪ್ರಭುದೇವರ ರಗಳೆಯಲ್ಲಿ-ನೆಲದಲ್ಲಿ ಹೂತು ಹೋಗಿದ್ದ ಅನಿಮಿಷಲಿಂಗ ಶಿವಾಲಯವನ್ನು ಮೇಲಿಂದ ಕೆಳಕ್ಕೆ ಅಗೆದು ಬಿಡಿಸಿದ ಸಂದರ್ಭವನ್ನು ನೋಡಿ: “ಕೋಟಿ ಗುದ್ದಲಿಗಳಿಕ್ಕಿದವು ಕೆಲಬಲದಲ್ಲಿ| ನೋಟಕರಚ್ಚರಿಯೆನಲ್ಕಗೆಯ ತೊಡಗಿದುದಲ್ಲಿ| ಕಳಶ-ಕೆಳಗಣ ಸಿಂಹಸೂತ್ರಿ[ಸೂದ್ರಿR]ಕಂ ಮಂಟಪದ| ವಳಯದಿರ್ಕೆಲದ ವೃಷಭಾಂಕಿತ ಶಿವಾಲಯದ| ತುದಿಯಿಂ ಮೊದಲ್ವರಂ ನಿಮಿಷಕ್ಕೆ ಬಿಡಿಸಿದರು(ಪಂಕ್ತಿ 215-220)
ಈ ಸಿಂಹಸೂತ್ರಿ[=ಶೂದ್ರಿ]ಕವೆಂಬುದು-ಉಜ್ಜಯಿನಿಯನ್ನು ಅಳಿದ ವಿಕ್ರಮಾಂಕನಿಗೆ ಸರಿಮಿಗಿಲಾಗಿ ಕೀರ್ತಿಶಾಲಿಯಾದ ಶೈವ ಶೂದ್ರಕ ಮತ್ತು ಅವನ (?) ಸಿಂಹ ಚಿಹ್ನೆಗೆ (ಹೊಯ್ಸಳ ಸಿಂಹದಂತೆ) ಸಂಬಂಧಿಸಿದೆಯೋ ತಿಳಿಯದು
ಮತ್ತು “ಮಂಟಪದ ವಳಯ”ದ ಎರಡೂ ಬದಿಗೆ ವೃಷಭಾಂಕಿತವಿರುವುದಲ್ಲದೆ-ನಾಟ್ಯವಾಡುತ್ತಿರುವ ಭೃಂಗಿಯ ಪ್ರತಿಮಾಶಿಲ್ಪವೂ ಇರುವುದು. ಈ ಭೃಂಗಿಯಾದರೋ “ಕಿವಿಯಲ್ಲಿ ಸರ್ಪಕುಂಡಲ, ತೋಳಲ್ಲಿ ರತ್ನದ ಬಳೆ, ವಜ್ರದ ಕಂಕಣ, ಮುತ್ತಿನಹಾರ, ಪಾದದಲ್ಲಿ ಗೆಜ್ಜೆ ಮತ್ತು ಬಿದುರಿನ ಬಳೆ ಧರಿಸಿ, ಚಲ್ಲಣ ಉಟ್ಟು, ಕಾಸೆಯನ್ನು ಕಟ್ಟಿ ಮೈಗೆಲ್ಲ ಭಸ್ಮೋದ್ಧೂಳನ ಮಾಡಿಕೊಂಡು, ಕೈಯಲ್ಲೊಂದು ಲಾಕುಳವನ್ನು ಹಿಡಿದು-ಮೂರು ಕಾಲಿಂದ ಕುಣಿದು ಶಿವನನ್ನು ನಗಿಸುವ ಕಾಯಕದವನು. ಶಕ್ತಿದೇವತೆಯಾದ ಪಾರ್ವತಿಯ ಅಂಶವಾಗಿ ತನ್ನ ದೇಹದಲ್ಲಿದ್ದ ಮಾಂಸರಕ್ತವನ್ನೆಲ್ಲ ತೊರೆದು-ಕೇವಲ ಅಸ್ಥಿಪಂಜರ ರೂಪನಾದ ಮಹಾಶಿವಭಕ್ತನು”(ಬಸವೇಶ್ವರ ಷಟ್ಸ್ಥಲ ವಚನದ ಕಥಾಸಾರ, ಪುಟ 72).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು