ಮಾಹೇಶ್ವರನ ಜ್ಞಾನಿಸ್ಥಲ - ಏಕದೇವೋಪಾಸನೆ
ಗುಡಿಯೊಳಗಿರ್ದು ಗುಡಿಯ ನೇಣ ಕೊಯಿದರೆ,
ಗುಡಿಯ ದಡಿ ಬಿದ್ದು ಹಲ್ಲು ಹೋಹುದು, ನೋಡಾ!
ಪೊಡವಿಗೀಶ್ವರನ ಗರ್ಭಾಸನದೊಳಗಿರ್ದು
ನುಡಿವರು ಮತ್ತೊಂದು ದೈವವುಂಟೆಂದು:
ತುಡುಗುಣಿ ನಾಯನು ಹಿಡಿತಂದು ಸಾಕಿದರೆ
ತನ್ನೊಡೆಯಂಗೆ ಬಗಳುವಂತೆ ಕಾಣಾ,
ಕೂಡಲಸಂಗಮದೇವಾ!
Transliteration Guḍiyoḷagirdu guḍiya nēṇa koyidare,
guḍiya daḍi biddu hallu hōgu, nōḍā!
Poḍavigīśvarana garbhāsanadoḷagirdu
nuḍivaru mattondu daivavuṇṭendu:
Tuḍuguṇi nāyanu hiḍitandu sākidare
tannoḍeyaṅge bagaḷuvante kāṇā,
kūḍalasaṅgamadēvā!
Manuscript
English Translation 2 Look, if you cut the tent-rope while
You're still in the tent,
The tent-pole falls, your teeth are gone!
Housed in the inner shrine
Of the world's lord, they say
That other gods there be:
O Kūḍala Saṅgama Lord,
It is like a thievish dog
You have brought home and tamed, and now
Barks at his master!
Translated by: L M A Menezes, S M Angadi
Hindi Translation देखो तंबू के भीतर रहकर तंबू की रस्सी काट दो,
तो तंबू का स्तंभ गिरने से दांत टूटेंगे ।
विश्वेश्वर के गर्भगृह से रहकर कहते हैं-‘अन्य देव हैं’ ।
जैसे दुष्ट कुत्ते को लाकर पालने से
अपने स्वामी को देख भोंकता है, कूडलसंगमदेव ॥
Translated by: Banakara K Gowdappa
Telugu Translation గుడినుండి గుడి త్రాళ్ళు కోసిన
గుడికప్పు కూలి పండ్లు రాలకపోవునే?
జగదీశ్వరుని గర్భవాసమందుండి
పరుడు దైవమని పల్కితివా
చెనటి కుక్కను దెచ్చి సాకిన
తన ప్రభుని చూచి మొఱగినట్లై పోవురా
కూడల సంగమదేవా!
Translated by: Dr. Badala Ramaiah
Tamil Translation கூடாரத்தினுள்ளே இருந்து, அதன் கயிற்றைக் கொய்தால்
கூடாரத்தின் கோல்விழுந்து பல் அகலும் காணாய்
ஈசுவரனிடமிருந்து தோன்றி, வேறு
ஒரு கடவுள் உண்டு என்று கூறுவர்
திருட்டு நாயை பிடித்து வந்து வளர்த்தால்
அது தன் உடையனைக் கண்டு குலைத்ததனையதாம்
கூடல சங்கம தேவனே.
Translated by: Smt. Kalyani Venkataraman, Chennai
Marathi Translation
मंदिरी थांबूनि, पाडिताती खांब
पडता मंदिर, पडती दात
जगदीश्वराच्या, गर्भो राहूनीया
अन्य देवतांना, पूजिता का?
चोरश्वानापरि, भुंकता मंदीरी
कूडलसंगमशिरी, भार त्यांचा
अर्थ - जर एखाद्याने मंदिरात जाऊन त्याच मंदिराचे खांब पाडण्यास आरंभ केला तर ते मंदिर त्याच्याच डोक्यावर कोसळेल. त्यात त्याचे हातपाय तुटतील व दात पडतील. जगदीश्वराच्या त्रीखाल विश्वरूप चैतन्यात राहून अन्य देवतांची पूजा करणे म्हणजे मालकाची चोरी करून मालकावरच भुंकणाऱ्या कुत्र्याप्रमाणेच त्यांचे जिणे होय. अशांचा भार माझ्या कूडलसंगमदेवाच्या (परमेश्वराच्या) डोक्यावर येणे मला मूळीच आवडत नाही. असे लोक भूमीला भारच होत.
Translated by Rajendra Jirobe, Published by V B Patil, Hirabaug, Chembur, Mumbai, 1983
तंबूत राहून त्याची दोरी कापली तर
तंबूचा खांब पडून दात पडणारच पहा.
जगदीश्वराच्या गर्भात राहून अन्य
देवांची स्तुती करणारे चोरट्या कुत्र्यासम आहेत.
आपल्या मालकाला पाहून भुंकतात पहा कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಆವಾಸ = ವಾಸಸ್ಥಳ, ಮನೆ; ಈಶ್ವರ = ; ಕೊಯ್ಯಿ = ; ಗರ್ಭ = ; ತುಡುಗುಣಿ = ; ದÀಡಿ = ; ನೇಣ = ; ಪÉÆಡವಿ = ; ಹೋಹು = ;
ಕನ್ನಡ ವ್ಯಾಖ್ಯಾನ ಶಿವಧರ್ಮಕ್ಕೆ ಸೇರಿದವನು ಆ ಶಿವನನ್ನೇ ಮಹಾದೇವನೆಂದು ಕಡೆತನಕ ನಂಬಿ ಆರಾಧಿಸಬೇಕು. ಇಲ್ಲದಿದ್ದರೆ ಕುಟೀರವೊಂದರಲ್ಲಿ ವಾಸವಾಗಿದ್ದವನು-ಅದರ ಅಡ್ಡ ತೊಲೆಯ ಹಗ್ಗವನ್ನೇ ಕತ್ತರಿಸಿದರೆ-ಅವನ ಎತ್ತಿದ ಮೂತಿಯ ಮೇಲೆ ಆ ತೊಲೆ ಬಿದ್ದು ಹಲ್ಲುದುರುವಂತೆ ಕೇಡಾಗದಿರದು-ಎನ್ನುವರು ಬಸವಣ್ಣನವರು
ಮತ್ತು ಶಿವಧರ್ಮಕ್ಕೆ ಸೇರಿದ ಕುಟಿಲರು ಕೆಲವರು ಒಳಗೊಳಗೆ ಆ ಶಿವನನ್ನೇ ಜರಿಯುವುದನ್ನು ಗಮನಿಸಿದ್ದ ಬಸವಣ್ಣನವರು-ಅಂಥ ಹೀನಸ್ವಭಾವದವರನ್ನು-ಕದ್ದು ತಿನ್ನುವ ಚಾಳಿಯ ಬೀದಿಯ ನಾಯನ್ನು ಮನೆಗೆ ತಂದು ಸಾಕಿದರೆ-ಅದು ಆ ಒಡೆಯನಿಗೇ ಬೊಗಳುವುದೆಂದು ಕಟುವಾಗಿ ಟೀಕಿಸಿದರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು