ಮಾಹೇಶ್ವರನ ಜ್ಞಾನಿಸ್ಥಲ - ಏಕದೇವೋಪಾಸನೆ
ಅಸಮಾಕ್ಷ ಲಿಂಗಕ್ಕೆ ಅನ್ಯದೈವವ ಸರಿಯೆಂಬವನ ಬಾಯಲ್ಲಿ
ಮಸೆದ ಕೂರಲಗನಿಕ್ಕದೆ ಮಾಣ್ಬನೆ?
ಹುಸಿಯಾಗಿ ನುಡಿದವನ ನಾಯಾಗಿ ಬಗುಳಿಸನೆ?
ಹಿರಿಯರುತ್ತಮರೆನ್ನದವರ ಕುದುರೆಯಾಗಿ ಕಟ್ಟಿಸನೆ?
ಗುರುಲಘುವೆಂಬವರ ಬಾಯಲ್ಲಿ ಮೆಟ್ಟಿ ಹುಡಿಯ ಹೊಯ್ಯದೆ ಮಾಣ್ಬನೆ?
ಪರಸ್ತ್ರೀಗಳುಪಿದವರ ಹಿಡಿ ಕಂಡಗೊಯ್ಯನೆ?
ಕೂಡಲಸಂಗಮದೇವಾ, ನಿಮ್ಮ ಹೇಳಿದ ಹೇಳಿಕೆಯಿಂದ
ಪಿಂಬೇರ ಮೈಲಿಗೆ ಮೇಳವಾಡುತ್ತಿದ್ದ, ಕಾಣಾ, ತ್ರೈಜಗದೊಳಗೆ!
Transliteration Asamākṣaliṅgakke an'yadaivava sariyembavana bāyalli
maseda kūralaganikkade māṇbane?
Husiyāgi nuḍidavana nāyāgi baguḷisane?
Hiriyaruttamarennadavara kudureyāgi kaṭṭisane?
Gurulaghuvembavara bāyalli meṭṭi huḍiya hoyyade māṇbane?
Parastrīgaḷupidavara hiḍi khaṇḍagoyyane?
Kūḍalasaṅgamadēvā, nim'ma hēḷikeyinda
pimbēra mailige mēḷavāḍuttidda, kāṇā, traijagadoḷage!
Manuscript
English Translation 2 Will He not surely thrust a whetted blade
Into the mouth of those who say
That there are other gods
Than the odd-eyed God?
Will He not surely make them bark
Dog-like, who deal in lies?
Will he not surely tie them up
Horse-like, who do not say
The greater are the best?
Will he not surely set His foot
Upon their necks and feed them dust,
Who talk of great as small?
Will He not crush them in a mill
Who covet their neighbour's wife?
Will He not chop a lump of fiesh
From those who covet another's goods?
O Kūḍala Saṅgama Lord,
Because of the verdict given by you,
In the three worlds,Mailāra of Pimbēra
Danced with his party
Translated by: L M A Menezes, S M Angadi
Hindi Translation विरूपाक्ष सम अन्य देव हैं
कहनेवाले के मुँह में
तीक्ष्ण कृपाण भोंकना छोड देंगे?
मिथ्यावादी से श्वानवत् नहीं भुंकवायेंगे?
‘बडे लोग उत्तम हैं’ यों नहीं कहनेवालों को
अश्ववत् नहीं बंधवायेंगे?
गुरु को लघु कहनेवालों को कुचलकर
धूल झोंकना छोड देंगे?
पर ललना लोलुप को कोल्हू में रख न छोडेंगे?
पर धनलोलुप को खंडित नहीं करेंगे-?
कूडलसंगमदेव तव आदेशानुसार
तिंबेर मैलुग तीनों लोकों में
निज मंडली सहित नृत्य करता था ॥
Translated by: Banakara K Gowdappa
Telugu Translation అసమాక్షునకు సమమంచు పరదైవమును పల్కెడి
వానినోట చురకత్తి పొడవక మానునే?
తప్పు పల్కు వానిని కుక్కగా మొలిగింపడే?
గురుడె గొప్ప అనని వానిని గుఱ్ఱముగ కట్టడే?
గురుని లఘువను వారల నోట దుమ్ము కొట్టక మానునే?
పర స్త్రీ రతులను పట్టి గానుగపెట్టి ద్రిప్పడే?
పరధనంబుల గోరువారిని బట్టి కండలు గోయడే?
సంగమదేవా నీ పల్కిన పల్కుల తొలిమైల
తొలగురా త్రిజగంబుల.
Translated by: Dr. Badala Ramaiah
Tamil Translation நெற்றிக்கண் உள்ளவனும் வேறு கடவுளும் சமம் எனக்
கூறுபவனின் வாயில் ஒளிரும் கூரான
கத்தியை இடாமல் விடுவனோ?
பொய்யுரைப்போனை நாயாகக் குலைக்க
வைக்காமல் விடுவனோ? சான்றோர்
உயர்ந்தோர் என்னாதோரைக் குதிரையாகக்
கட்டமாட்டானோ?
குரு கீழானவர் என்பவனை மிதித்து வாயில்
பொடியைத் தூவாமல் விடுவனோ?
பிறன்மனையை நயப்போரை செக்கிலிட்டுப்
பிழியாமல் இருப்பானோ? பிறர் செல்வத்தை
நயப்போனைப் பிடித்துக் கண்டத்தைக்
கொய்யாமல் விடுவனோ? கூடல சங்கமதேவனே
உம்முடைய ஆணையால் மைலாறு கிராம தேவதையுடன்
நட்புப் பூண்டிருந்தான், மூவுலகத்திலே காணாய்
Translated by: Smt. Kalyani Venkataraman, Chennai
Marathi Translation
त्रिनेत्र लिंगासम अन्य देव आहे असे म्हणणाऱ्यांच्या
तोंडात धारदार चाकू घातल्याशिवाय राहतील का ?
खोटे बोलणाऱ्यांना कुत्र्यासम भूकायला लावणार नाहीका ?
मोठ्यांना श्रेष्ठ न म्हणणाऱ्यांना घोड्याप्रमाणे बांधणार नाही का ?
गुरुला कनिष्ठ म्हणणाऱ्यांच्या तोंडात माती घातल्याशिवाय राहतील का ?
परस्त्रीवर आसक्त होणाऱ्यांना घाण्यात पिळून काढल्याशिवाय राहतील का?
परधनाची आशा करणाऱ्यांचे तुकडे केल्याविना राहतील का?
कूडलसंगमदेवा, तव आदेशानुसार असे लोक
मैलार देवताप्रमाणे नाचतात तिन्ही जगात.
Translated by Shalini Sreeshaila Doddamani
ಶಬ್ದಾರ್ಥಗಳು ಅಸಮಾಕ್ಷ = ; ಉಪಿ = ; ಕೂರಲಗು = ; ಖಂಡ = ; ಗÁಣ = ; ಬಗುಳಿ = ; ಮಸದ = ; ಮಾಣ್ಬು = ; ಮೆಟ್ಟಿ = ; ಲಘು = ; ಹಿಳಿ = ; ಹುಡಿ = ; ಹ್ರಸಿ = ;
ಕನ್ನಡ ವ್ಯಾಖ್ಯಾನ ಈ ವಚನದ ಮುಖ್ಯ ಆಶಯ ಶಿವನಿಗೆ ಸಮಾನವಾದ ದೇವರಿನ್ನೊಂದಿಲ್ಲ ಎನ್ನುವುದೇ ಆಗಿದೆ-ಆದರೆ ಇದನ್ನು ಸಮರ್ಥಿಸಲು ಪೆಂಬೇರ ಮೈಲಾರನೆಂಬ ಒಂದು ಕ್ಷುದ್ರ ದೈವ ಶಿವನಿಗೆ ಸೇವಾವೃತ್ತಿ ಮಾಡಿದ್ದನ್ನು ಸಾಕ್ಷಿಯಾಗಿ ಉದಾಹರಿಸಿರುವುದು ಕ್ಷುಲ್ಲಕವೆನಿಸುತ್ತದೆ. ಮೇಲಾಗಿ ವಚನದುದ್ದಕ್ಕೂ ಬಾಯಿಗೆ ತಿವಿಯುವ ಬಾಯಿಗೆ ಮಣ್ಣು ಹೊಯ್ಯುವ ಮುಂತಾದ ಹಿಂಸೆಯ ಮತ್ಸರದ ಬೈಗುಳೇ ತುಂಬಿವೆ. ಗುರು-ಲಘು ಎಂಬ ಶುಷ್ಕ ಪಾಂಡಿತ್ಯದ ಪದಪ್ರಯೋಗವಿದೆ. ಈ ಗುರುಲಘು ಎಂದು ಹಿರಿಯರುತ್ತಮರೆಂದು ಮುಂತಾಗಿ ಅಪ್ರಬುದ್ಧ ಪುನರುಕ್ತಿಗಳಿವೆ. ಇಂಥದೊಂದು ವಚನವನ್ನು ಬಸವಣ್ಣನವರದೆನ್ನಲು ಕಾರಣವೇ ಇಲ್ಲ.
ಹರಿಹರನ ಶಂಕರದಾಸಿಮಯ್ಯನ ರಗಳೆಯಲ್ಲಿ ಬಂದಿರುವ ಪೆಂಬೇರ ಮೈಲಾರನು ಶಂಕರದಾಸಿಮಯ್ಯನಿಗೆ ಆಳಾದನೆಂಬ ಕಥೆಯನ್ನು ದುರ್ಬಳಕೆಮಾಡಿಕೊಂಡು ಈ ವಚನವನ್ನು ಯಾವನೋ ಒಬ್ಬ ಕಟ್ಟಿದಂತಿದೆ. ಬಸವಣ್ಣನವರು 282 ಮತ್ತು 570ನೇ ವಚನಗಳಲ್ಲಿ ಮೈಲಾರನನ್ನು ಪ್ರಸ್ತಾಪಿಸಿರುವುದು ನಿಜ-ಆದರೆ ಅಲ್ಲಿಯ ನವುರಾದ ಹಾಸ್ಯವಾಗಲಿ, ಅನುಭವವಿಸ್ತಾರವಾಗಲಿ, ಅಭಿವ್ಯಕ್ತಿಯ ಅಚ್ಚುಕಟ್ಟುತನವಾಗಲಿ ಈ ವಚನದಲ್ಲಿಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು