•  
  •  
  •  
  •  
Index   ವಚನ - 568    Search  
 
ಮಾಹೇಶ್ವರನ ಜ್ಞಾನಿಸ್ಥಲ - ನಡೆ-ನುಡಿ
ಅವಲಕ್ಷಣ, ನಾಯನುಡಿಯ ಸಡಗರ ಡೋವಿಗೆ ಮೃತ್ಯುವಿನ ನುಡಿಗೊಳಗಾಯಿತ್ತು! ಬೇಡವೋ, ಪರವಾದೀ, ಗಳಹದಿರು; ಬೇಡವೋ, ದೂಷಕಾ, ಬಗುಳದಿರು! ಭಕ್ತಿಗೆಯೂ ಬೇಟಕ್ಕೆಯೂ ಜಾತಿಸೂತಕವುಂಟೆ? ಪರುಷ ಮುಟ್ಟಲು ಕಬ್ಬುನ ಹೊನ್ನಾಯಿತ್ತು, ಕಾಣಾ. ನಮ್ಮ ಕೂಡಲಸಂಗನ ಶರಣರನವರಿವರೆಂದರೆ ಕುಂಭಿಯ ಪಾತಕ ನಾಯಕ ನರಕ ತಪ್ಪದು ಕಾಣಾ.
Transliteration Avalakṣaṇa, nāyanuḍiya saḍagara ḍōvige mr̥tyuvina nuḍigoḷagāyitu! Bēḍavō, paravādi, gaḷahadiru; bēḍavō, dūṣakā, baguḷadiru! Bhaktigeyū bēṭakkeyū jātisūtakavuṇṭe? Paruṣa muṭṭalu kabbuna honnāyittu, kāṇā. Nam'ma kūḍalasaṅgana śaraṇaranavarivarendare kumbhiyapātaka nāyaka naraka tappadu kāṇā.
Manuscript
English Translation 2 Parading the speech of dogs is not A lucky sign: your skull Is at the mercy of death! Do not you prate, O heretics! Ye critics, do not bark! In either piety or lust Is there a taint of caste? Look, iron turns to gold At touch of the alchemic stone: If anybody says Our Kūḍala Saṅga's Śaraṇās Are just like common men, He'll not escape An arch-hell called Kumbhi Pātaka! Translated by: L M A Menezes, S M Angadi
Hindi Translation श्वान सा उद्वेग से भूँखना अशुभ है, खोपडी मृत्युवश हो जाती है।- अतः मत बक हे परधर्मवादी-, मत बक हे दूषक, भक्ति तथा प्रेम के लिए जाति सूतक है? देखो पारस स्पर्श से लोहा सोना बनता है। मम कूडलसंगमदेव के शरणों में भेद मानने पर कुंभीपाक नरक अवश्यभांवी है Translated by: Banakara K Gowdappa
Telugu Translation చెడగరికుక్క పలుకు సంభ్రమముగ మిత్తి పల్కుకు వశమయ్యె పుఱ్ఱె! వలదురా పరవాదీ వాగుడు తగదురా; దోషీ మొఱుగుడు భక్తికీ ప్రేమకూ లేదురా జాతిసూతకము స్పర్శవేది సోక ఇనుము బంగార మైపోవుర! మా కూడల సంగని శరణుల వారువీరని వాగకుర కుం;óపాతక నాయక నరకము తప్పదురా! Translated by: Dr. Badala Ramaiah
Tamil Translation அமங்கலமான, கீழான சொற்களைக் கூறும் நாவின் சபலத்திற்கு அழிவு வராதோ? பிறரைக் குறித்து மனம்போன போக்கில் கூறாதீர் இகழ்ந்து, கீழ்மையாகக் கூறாதீர் பக்திக்கும், அன்பிற்கும் சாதி தீட்டு உண்டோ? பரிசவேதி தீண்டிட இரும்பு பொன்னாயிற்று காணாய் நம் கூடல சங்கனின் அடியாரை அவர், இவர் எனின் கீழான நரகம் தப்பாது காணாய். Translated by: Smt. Kalyani Venkataraman, Chennai
Marathi Translation अन्य देवांची स्तुती अवलक्षणी जिभेचे वैभव. त्याची कवटी यम-यातनेची शिकार होते. नको करु अन्यांची स्तुती. नको दुषक कुत्र्याप्रमाणे भुंकू. भक्ती आणि प्रेमाला जात सुतक असते ? परिसस्पर्शाने लोखंडाचे सोने होते पहा. आमच्या कूडलसंगाच्या शरणांच्यात जात-भेद करणाऱ्यांना कुंभीपातकी घोरनरक चुकणार नाही पहा. Translated by Shalini Sreeshaila Doddamani
ಶಬ್ದಾರ್ಥಗಳು ಒಳಗಾಗು = ; ಕಬ್ಬುನ = ; ಕುಂಭಿ = ; ಗಳುಹ = ; ಡೋವು = ; ದೂಷರ = ; ಪರುಷ = ; ಪಾತಕ = ; ಮೃತ್ಯು = ; ಸಡಗರ = ; ಸೂತಕ = ; ಹೊನ್ನ = ;
ಕನ್ನಡ ವ್ಯಾಖ್ಯಾನ ಶರಣರನ್ನು ಆ ಜಾತಿಯವರು, ಈ ಜಾತಿಯವರೆಂದು ತಾರತಮ್ಯ ಮಾಡಬಾರದು-ಲಿಂಗ ಮುಟ್ಟಿದ ಮೇಲೆ ಕೀಳುಜಾತಿಯವರೂ ಮೇಲುಜಾತಿಯವರಾಗುವರು-ಪರುಷದ ಮಣೆ ಸೋಕಿದ ಕಬ್ಬಿಣವೂ ಚಿನ್ನವಾಗುವಂತೆ, ಮತ್ತು ಪ್ರೇಮಕ್ಕೆ ಹೇಗೆ ಕುಲವಿಲ್ಲವೋ ಹಾಗೆ ಭಕ್ತಿಗೂ ಕುಲವಿಲ್ಲ-ಪ್ರೇಮವೆಂಬುದು ಕುಲವನ್ನು ನೋಡಿ ಬರುವುದಿಲ್ಲ-ಪ್ರೇಮಿಸಿದ ಮೇಲೆ ಪ್ರಿಯರಲ್ಲಿ ಜಾತಿಭೇದವೆಲ್ಲಿ ಬಂತು ? ಹಾಗೆಯೇ ಭಕ್ತಿಯಿದ್ದ ಕಡೆ ಕುಲವಿಲ್ಲವೆಂಬುದು ಈ ವಚನದ ಅಭಿಪ್ರಾಯ. ಈ ಜಾತಿಭೇದನಿರಾಕರಣವನ್ನು ವಿರೋಧಿಸುವ ವರ್ಣವಾದಿಗಳನ್ನು ಪರವಾದಿಗಳೆಂದು ಕರೆದು-ಅವರನ್ನು ಜಾತಿಭೇದ ಮಾಡಬೇಡಿರೆಂದು ಜಬರಿಸುತ್ತ ಬಾಯಿಗೆ ಬಂದಂತೆ ಮಾತನಾಡಬಾರದೆಂದು ಎಚ್ಚರಿಸುತ್ತ-“ನಾಲಗೆಯ ಸಡಗರ ಡೋವಿಗೆ ಮೃತ್ಯು”-ಎಂದರೆ ಬಾಯಿಕೊಬ್ಬಿ ಮಾತನಾಡಿದರೆ ತಲೆಗೆ ಮೂಲ ಎಂಬ ಗಾದೆಯನ್ನು ಉಲ್ಲೇಖಿಸಲಾಗಿದೆ. ಈ ಗಾದೆ-“ವೇದಂಗಳಂ ಕೇಳು-ನಂಬದೊಡೆ ಬರುನುಡಿಯೊಳಾದ ಫಲವೇನು ? ನಾಲಗೆಯ ಸಡಗರ ಡೋವಿಗಾದುದಪಮೃತ್ಯುವೆಂಬುದು ತಪ್ಪದು” ಎಂದು ಶಿವತತ್ತ್ವ ಚಿಂತಾಮಣಿ (8-6)ಯಲ್ಲಿ ದೊರೆಯುವುದು. (602-604ನೇ ವಚನಗಳನ್ನು ನೋಡಿ).

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು