•  
  •  
  •  
  •  
Index   ವಚನ - 569    Search  
 
ಮಾಹೇಶ್ವರನ ಜ್ಞಾನಿಸ್ಥಲ - ಮೂಢನಂಬಿಕೆ
ವಿಷ್ಣುವ ಪೂಜಿಸಿ ಮುಡುಹ ಸುಡಿಸಿಕೊಂಬುದ ಕಂಡೆ, ಜಿನನ ಪೂಜಿಸಿ ಬತ್ತಲೆಯಿಪ್ಪುದ ಕಂಡೆ; ಮೈಲಾರನ ಪೂಜಿಸಿ ನಾಯಾಗಿ ಬಗುಳುವುದ ಕಂಡೆ. ನಮ್ಮ ಕೂಡಲಸಂಗನ ಶರಣರ ಪೂಜಿಸಿ ದೇವಾ ಭಕ್ತರೆನಿಸಿಕೂಂಬುದ ಕಂಡೆ.
Transliteration Viṣṇuva pūjisi muḍ'̔uha suḍisikombuda kaṇḍe, jinana pūjisi battaleyippuda kaṇḍe; mailārana pūjisi nāyāgi baguḷuvuda kaṇḍe. Nam'ma kūḍalasaṅgana śaraṇara pūjisi dēvā bhaktarenisikūmbuda kaṇḍe.
Manuscript
English Translation 2 I have seen shoulders branded After Viṣṇu worship; I have seen nakedness After Jina worship; I have seen men barking like dogs After Mailāra worship; I have seen them called Devotees of God After the worship of Our Kūḍala Saṅga's Śaraṇās! Translated by: L M A Menezes, S M Angadi
Hindi Translation विष्णु पूजा कर भुजाएँ जला लेते मैंने देखा, जिनकी पूजा कर नंगा रहते देखा, मैलार की पूजा कर श्वान भूँकते देखा, मम कूडलसंगमेश के शरणों की पूजा कर दैव भक्त कहलाते देखा ॥ Translated by: Banakara K Gowdappa
Telugu Translation విష్ణువును గొల్చి మూపుల కాల్చుగొనుట గంటి; జినుని పూజించి బిత్తల పోవుట గంటి మైలారుని పూజించి కుక్కగా మొఱగుటగంటి మా కూడలసంగని శరణులగొలిచి భక్తు లనిపించుకొనుట గంటిని దేవా. Translated by: Dr. Badala Ramaiah
Tamil Translation திருமாலைப் பூசித்து, தோளைச் சுட்டுக் கொண்டவரைக் கண்டேன் அருகனைப் பூசித்து, நிர்வாணமானதைக் கண்டேன் மைலாரு தேவதையைப் பூசித்து, நாயாகிக் குலைப்பதைக் கண்டேன் நம் கூடல சங்கனைப் பூசித்து, இறைவனே பக்தரானவர்களைக் கண்டேன் Translated by: Smt. Kalyani Venkataraman, Chennai
Marathi Translation विष्णुचा पूजक, झाला मुद्रांकित दंड पोळविता, पाहियेले जिनांचा पूजक, होतांना तो नग्न आश्चर्य हे विघ्न, पाहियेले मैलार पूजक, एवानापरी भूके पाहूनि कौतूके, हसू आले कूडलसंगमदेव, शरणांचे पूजक थोर तेचि भवत, पाहियेले अर्थ - विष्णुची पूजा करणारे गालावर, कपाळावर व दंडावर मुद्रा पोळून घेतात. तसेच जैनांचे देव पूजक वस्त्रे फेडून मग्न होऊन फिरतात. आणि मैलार देवाची पूजा करणारे सदा कुत्र्या प्रमाणे भूकतांना दिसतात या सर्वाना पाहून मला कीव येत आहे माझ्या कूडलसंगम-देवाच्या (परमेश्वर) पूजकांना पोळून घेण्याची, भुंकण्याची वा नग्न होण्याची गरज नाही. फक्त मनोभाव त्याची आराधना करावी. Translated by Rajendra Jirobe, Published by V B Patil, Hirabaug, Chembur, Mumbai, 1983 विष्णूची पूजा केली, दंड मुद्रांकित झाले. जिनाची पूजा केली, दिगंबर झाले. मैलारची पूजा केली, कुत्र्याप्रमाणे भुंकू लागले. आमच्या कूडलसंगमदेवाची पूजा केली, देवभक्त झाले. Translated by Shalini Sreeshaila Doddamani
ಶಬ್ದಾರ್ಥಗಳು ಜಿನ = ; ಬಗಳು = ; ಮುಡುಹ = ;
ಕನ್ನಡ ವ್ಯಾಖ್ಯಾನ ವಿಷ್ಣು-ಜಿನ್ನ(ಅರ್ಹಂತ)-ಮೈಲಾರ ದೇವರುಗಳನ್ನು ಪೂಜಿಸಿದರೆ ಪಡಬೇಕಾದ ಭಂಗವನ್ನು ಹೆಸರಿಸಿ-ಶಿವಶರಣರನ್ನು ಪೂಜಿಸಿದರೆ “ದೈವಭಕ್ತನೆಂಬ ಗೌರವವೇ ಹೊರತು ಅವಮಾನವೇನೂ ಆಗುವುದಿಲ್ಲವೆಂದಿದೆ ಈ ವಚನದಲ್ಲಿ. ಆ ಪ್ರಕಾರ ವೈಷ್ಣವರಿಗೆ ವಿಷ್ಣುವೇ ಆರಾಧ್ಯದೈವ. ಜೈನರಿಗೆ ಅರ್ಹಂತನೇ ಆರಾಧ್ಯದೈವ, ಶೈವದ ಒಂದು ಒಳಪಂಗಡಕ್ಕೆ ಮೈಲಾರನೇ ಆರಾಧ್ಯದೈವ-ಬಸವಣ್ಣನವರ ಶಿವಪಂಥದವರಿಗಾದರೋ ಶಿವಶರಣರೇ ಆರಾಧ್ಯದೈವ. ಬಸವಪಂಥದಲ್ಲಿ ಶರಣರಿಗೆ ಅಷ್ಟೊಂದು ಪೂಜ್ಯಸ್ಥಾನವಿದೆಯೆಂಬುದನ್ನು ಗಮನಿಸಬೇಕು. ವಿ : ಮೈಲಾರ-ಶರಣಪಂಥದಲ್ಲಿ ಮೈಲಾರನ ಪೂಜೆ ಶಂಕರದಾಸಿಮಯ್ಯನ ಕಾಲ(11ನೇ ಶತಮಾನ)ದಿಂದಲೂ ನಿಷಿದ್ದವಿತ್ತೆಂಬುದಕ್ಕೆ ಹರಿಹರನ ಶಂಕರದಾಸಿಮಯ್ಯನ ರಗಳೆಯಲ್ಲಿ ಬಂದಿರುವ ಪೆಂಬೇರ ಮೈಲಾರನ ಪ್ರಸಂಗವೇ ಸಾಕ್ಷಿ. ಶಿವನು ಭೈರವನಾಗಿ ಬಂದು “ಮೈಲಾರಿ”ಯಾಗಿ ಭೂಲೋಕದಲ್ಲಿ ನೆಲಸಿದಂತೆ ಒಂದು ಸ್ಥಳ ಪುರಾಣದ ಹೇಳಿಕೆಯಿರುವುದಾಗಿ “ದಕ್ಷಿಣ ಕರ್ನಾಟಕ ಜನಪದ ಕಾವ್ಯಪ್ರಕಾರಗಳು” ಎಂಬ ಗ್ರಂಥದ ಉಲ್ಲೇಖ (ಪುಟ 249)ದಿಂದ ತಿಳಿದುಬರುವುದು. ಭೈರವೋಪಾಸಕರಾದ ಜೋಗಿಜೋಗಿಣಿಯರ ಆರಾಧ್ಯದೈವ ಭೈರವನೇ ಆಗಿರುವುದರಿಂದ ಕಾಪಾಲಿಕಶೈವರ ಉಪಪಂಗಡಗಳಲ್ಲಿ (ಈ ಜೋಗಿಗಳ ಮತ್ತು) ಗೊರವಯ್ಯಗಳ ಮೈಲಾರಪಂಥ ಸೇರ್ಪಡೆಯಾಗುವುದೆನ್ನಬೇಕಾಗುವುದು. ಈ ಮೈಲಾರ ಶೈವಪಂಥದವರೊಡನೆ ವೀರಶೈವರು ಒಂದು ಕಾಲಕ್ಕೆ ಕೊಟ್ಟು ತರುವ ಸಂಬಂಧವನ್ನು ಇಟ್ಟುಕೊಂಡಿದ್ದುದೂ ಉಂಟು. ವಿರಕ್ತ ತೋಂಟದಾರ್ಯನ ಸಿದ್ದೇಶ್ವರಪುರಾಣದಲ್ಲಿ ತೋಂಟದ ಸಿದ್ದಲಿಂಗನ ದರ್ಶನಮಾಡಲು ಹೊರಟ ಒಬ್ಬ ಶಿವಭಕ್ತನು-ಹೆಂಡತಿಯನ್ನು ಜೊತೆಗೆ ಬರಹೇಳಿದರೆ-ಅವಳು ತನ್ನ ಮನೆ ದೇವರಾದ ಮೈಲಾರನು ಮುನಿಯುವನೆಂದು ತಿರಸ್ಕರಿಸುವಳು. ಮತ್ತು ಭೈರವೇಶ್ವರ ಕಾವ್ಯಕಥಾಸೂತ್ರ ರತ್ನಾಕರ(ಭಾಗ 1, ಪುಟ 203-204)ದ ಪ್ರಕಾರ ಚೋಳದೇಶದ ಕಲಿಗಣನಾಥ (ಇವನು 63 ಜನ ಪುರಾತನರಲ್ಲಿ ಒಬ್ಬ)ನು ರೈತಗೌಡನೋರ್ವನಿಗೆ ಲಿಂಗಧಾರಣೆ ಮಾಡಿಸಿಕೋ ಎಂದಾಗ-“ಕೆಟ್ಟೆ ಕೆಟ್ಟೆ, ನಮ್ಮವನೊಬ್ಬ ಕೊಬ್ಬಿ ಲಿಂಗವನ್ನು ಕಟ್ಟಿಕೊಳ್ಳಲು-ಮನೆ ಬೆಂದು, ಬದುಕು ಹೋಗಿ ಕೆಟ್ಟನು” ಎನ್ನುತ್ತ ನಡುಗುವನು. ಈ ರೈತಗೌಡನೂ ಒಬ್ಬ ಮೈಲಾರಪೂಜಕನೇ. ಆದ್ದರಿಂದ ಈ ಮೈಲಾರ ಶೈವಪಂಥದವರು ಲಿಂಗವನ್ನು ಪೂಜಿಸಿದ್ದೂ ಉಂಟು. ಇದೇ ಮೈಲಾರ ಸಂಪ್ರದಾಯದ ಗೊರವಯ್ಯಗಳಿಗೆ ಮೈಲಾರನ ವಾಹನವಾದ ನಾಯಂತೆ ಬೊಗಳುವುದು ಮತ್ತು ಕೈಯೂ ಸೇರಿದಂತೆ ನಾಲ್ಕು ಕಾಲಾಗಿ ನಾಯಂತೆ ದೇವರ ಎಡೆಯನ್ನು ನೇರವಾಗಿ ಬಾಯಿಂದ ತಿನ್ನುವುದು ಬಹಳ ವಿಶಿಷ್ಟವಾದ ಧಾರ್ಮಿಕ ಆಚರಣೆಗಳು !

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು