ಮಾಹೇಶ್ವರನ ಜ್ಞಾನಿಸ್ಥಲ - ಬ್ರಾಹ್ಮಣಿಕೆ
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಗೌತಮಮುನಿಗೆ ಗೋವಧೆಯಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಬಲಿಗೆ ಬಂಧನವಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಕರ್ಣನ ಕವಚ ಹೋಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ದಕ್ಷಂಗೆ ಕುರಿದಲೆಯಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಪರಶುರಾಮನು ಸಮುದ್ರಕ್ಕೆ ಗುರಿಯಾದನು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ನಾಗಾರ್ಜುನನ ತಲೆ ಹೋಯಿತ್ತು.
ದೇವಾ ಭಕ್ತನೆಂದು ನಂಬಿದ ಕಾರಣ
ನಮ್ಮ ಕೂಡಲಸಂಗನ ಶರಣರು ಕೈಲಾಸವಾಸಿಗಳಾದರು.
Transliteration Brāhmaṇane daivavendu nambida kāraṇa
gautamamunige gōvēdheyittu.
Brāhmaṇane daivavendu nambida kāraṇa
balige bandhanavāyittu.
Brāhmaṇane daivavendu nambida kāraṇa
karṇana kavaca hōyittu.
Brāhmaṇane daivavendu nambida kāraṇa
dakṣaṅge kuridaleyāyittu.
Brāhmaṇane daivavendu nambida kāraṇa
paraśurāmanu samudrakke guriyādanu.
Brāhmaṇane daivavendu nambida kāraṇa
nāgārjunana tale hōyittu.
Dēvā bhaktanendu nambida kāraṇa
nam'ma kūḍalasaṅgana śaraṇaru kailāsavāsigaḷādaru.
Manuscript
English Translation 2 Because he believed the Brahmans to bo gods,
Gautama the sage did suffer for a cow;
Because he believed the Brahmans to be gods,
Bali did suffer bondage;
Because he believed the Brahmans to be gods,
Karṇa did lose his armour;
Because he believed the Brahmans to be gods,
Dakṣa did earn the head of a lamb;
Because he believed the Brahmans to be gods,
Paraśurāma was exposed to the sea;
Because he believed the Brahmans to be gods,
Nāgārjuna lost his head;
Because our Kūḍala Saṅga's Śaraṇās
Believed they were God's devotees,
They dwell in Kailāsa !
Translated by: L M A Menezes, S M Angadi
Hindi Translation ब्राह्मण को ही दैव मानने के कारण
गौतम मुनि को गो – वेधा हुई,
ब्राह्मण को ही दैव मानने के कारण
बलि बंधन में फँसा ।
ब्राह्मण को ही दैव मानने के कारण
कर्ण से कवच खोया ।
ब्राह्मण को ही दैव मानने के कारण
दक्ष को भेड का सिर मिला ।
ब्राह्मण को ही दैव मानने के कारण
परशुराम समुद्र का आश्रयी बना ।
ब्राह्मण को ही दैव मानने के कारण
नागार्जुन का सिर गया ।
अपने को दैव मानने के कारण
मम कूडलसंगमेश के शरण कैलासवासि हुए ॥
Translated by: Banakara K Gowdappa
Telugu Translation బ్రాహ్మణుని దేవుడని నమ్ము కారణమున
గౌతమమునికి గోహత్య కలిగె;
బ్రాహ్మణుని దేవుడని నమ్మిన కారణమున
బలికి బంధనము ప్రాప్తించె
బ్రాహ్మణుని దేవుడని నమ్మిన కారణమున
కర్ణునికి కవచముపోయె
బ్రాహ్మణుని దేవుడని నమ్మన కారణమున
దక్షునకు మేక తల వచ్చె
బ్రాహ్మణుని దైవమని నమ్మిన కారణమున;
పరశురాముడు జలధిపాలయ్యె
బ్రాహ్మణుని దేవుడని నమ్మిన కారణమున;
నాగార్జునుని తల యెగిరిపోయె;
దేవుని భక్తుడని నమ్మిన కారణమున
మా సంగని శరణులు కై లాసవాసులైరి.
Translated by: Dr. Badala Ramaiah
Tamil Translation அந்தணனே கடவுள் என நம்பியதால்
கௌதமமுனியின் பசு வதைக்கப்பட்டது
அந்தணனே கடவுள் என நம்பியதால்
பலி பிணைக்கப்பட்டனன்
அந்தணனே கடவுள் என நம்பியதால்
கர்ணனின் கவசம் அகன்றது
அந்தணனே கடவுள் என நம்பியதால்
தட்சனுக்கு ஆட்டுத்தலையாயிற்று
அந்தணனே கடவுள் என நம்பியதால்
பரசுராமன் கடலிற்கு இலக்கானான்
அந்தணனே கடவுள் என நம்பியதால்
நாகார்ஜூனனின் தலை அகன்றது.
இறைவன் பக்தன் என நம்பியதால்
நம் கூடல சங்கனின் அடியார்
கைலாசத்தில் வாழ்கின்றனர்.
Translated by: Smt. Kalyani Venkataraman, Chennai
Marathi Translation
मानल्याने गौतम, देव ब्राह्मणास
पापी ठरला खास, गोहत्येचा
पाप लागले त्यास, गोहत्येचा
मानल्याने कर्ण, देव ब्राह्मणास
कवचकुंडल त्यास, देता झाला
मानिले बळिराम, देव ब्राह्मणास
भोगी बंदीवास, कैसा देख
मानल्याने दक्ष, देव ब्राह्मणास
शिर लागे त्यास, बोकडाचे
मानल्याने परशु, देव ब्राह्मणास
बुडता झाला खास, सागरात
मानिले नागार्जुन, देव ब्राह्मणास
शिर कापण्यास, देता झाला
मानल्याने देव, कूडलसंगमास
मिळविती कैलास, शरण ते
अर्थ – ज्यांनी ज्यांनी ब्राह्मणांना देव मानले त्यांच्यावर विश्वास केला. त्यामुळे त्यांचा विश्वासघात झाला. त्यांना अकाली मृत्यू आला. त्यातून थोर विचारवंत, साधू, संतमहात्मे देखिल सुटले नाहीत अशा थोर महात्म्याची यादी देऊन त्यांना कशा प्रकारे आत्मघात करुन घ्यावा लागला, हे वरील वचनातून स्पष्ट होते. म्हणून ब्राह्मणावर विसंबून न राहता, त्यांच्यावर विश्वास न ठेवता व त्यांना देव न मानता रास्त परमेश्वरावरच विश्वास करावा. तोच एकमेव आपणा सर्वाना तारणार आहे. गौतम मुनीने ब्राह्मणावर विश्वास केला म्हणून त्यास गोवध केल्याचे पाप लागले. बळी राजास बंदीवासात खितपत पडावे लागले. कर्णाने आपले कवचकुंडल गमविले, दक्षब्रह्म राजास बकऱ्याचे शिर लावावे लागले. परशुरामाला समुद्रात बुडून मरावे लागले. सिद्ध पुरुष नागार्जुनास आपले शिर कापून घ्यावे लागले. आणि माझ्या शिवशरणांनी ब्राह्मणावर विश्वास न करता फक्त परमेश्वरावर विश्वास ठेऊन भक्ति केल्यामुळे त्याना कैलास प्राप्त झाले.
Translated by Rajendra Jirobe, Published by V B Patil, Hirabaug, Chembur, Mumbai, 1983
ब्राह्मणाला देव मानल्यामुळे गौतममुनीला गो हत्येचे पाप लागले.
ब्राह्मणाला देव मानल्यामुळे बळीला बंधनात रहावे लागले.
ब्राह्मणाला देव मानल्यामुळे कर्णाला कवच कुंडले गमवावी लागली.
ब्राह्मणाला देव मानल्यामुळे दक्षाला बकरीचे शिर लावावे लागले.
ब्राह्मणाला देव मानल्यामुळे परशुरामाला समुद्रात बुडून मरावे
लागले. ब्राह्मणाला देव मानल्यामुळे नागार्जुनाचे शिर छाटले गेले.
देवा तुझे भक्त झाल्यामुळे आमच्या कूडलसंगमदेवाचे शरण
कैलासवासी झाले.
Translated by Shalini Sreeshaila Doddamani
ಶಬ್ದಾರ್ಥಗಳು ಕವಚ = ; ದಕ = ; ಬಲಿ = ; ವಧೆ = ;
ಕನ್ನಡ ವ್ಯಾಖ್ಯಾನ ಬ್ರಾಹ್ಮಣನೇ ದೈವವೆಂದು ನಂಬಿದ್ದರಿಂದ ಗೌತಮ ಬಲಿ ಕರ್ಣ ದಕ್ಷ ಪರಶುರಾಮ ನಾಗಾರ್ಜುನರು ನಾನಾವಿಧವಾದ ಕಷ್ಟಕಾರ್ಪಣ್ಯಕ್ಕೆ ಸಾವಿಗೆ ಪಕ್ಕಾದರು ಎಂದು ನಿಂದಿಸುತ್ತ-ಶಿವಭಕ್ತರನ್ನು ನಂಬಿದ ಶಿವಶರಣರು ಶಿವಪದವಿಯನ್ನು ಪಡೆದರು-ಎನ್ನುವುದು ಈ ವಚನ.
ಈ ವಚನವನ್ನು ಬಸವಣ್ಣನವರ ನಿಜವಚನವೆಂದು ನಂಬುವುದಾದರೆ-ಬ್ರಾಹ್ಮಣರೆಂಬವರಿಗೆ ಬರಗಾಲದಲ್ಲಿಯೂ ಅನ್ನಹಾರಬಾರದೆಂಬಂಥ ಜಿದ್ದು ಬಸವಣ್ಣನವರಲ್ಲಿತ್ತೆಂದು ಒಪ್ಪಬೇಕಾಗುವುದು. ಗೌತಮನು ಮಾಡಿದ ತಪ್ಪೆಂದರೆ ಬರಗಾಲದಲ್ಲಿ ದಾರುಕಾದಿ ಋಷಿಗಳಿಗೆ ಅನ್ನವಿಟ್ಟು ಸತ್ಕರಿಸಿದ್ದಷ್ಟೆ! ಮತ್ತು ಬಲಿ ಕರ್ಣ ಪರಶುರಾಮರ ದಾನಗುಣ-ಬ್ರಾಹ್ಮಣರ ಪರವಾಗಿದ್ದಿತೆಂದ ಮಾತ್ರಕ್ಕೆ ಗರ್ಹ್ಯವಾಗುವುದಾದರೆ-ಅಂಥ ಅವಿವೇಕದ ನಿಲುವನ್ನು ಬಸವಣ್ಣನವರಲ್ಲಿ ನಾವು ಮೆಚ್ಚುವುದಾದರೂ ಹೇಗೆ?
ಬಸವೋತ್ತರ ವೀರಶೈವರು ಶೈವತೇಜಸ್ಸನ್ನು ಕಳೆದುಕೊಂಡು ಕೇವಲ ಬ್ರಾಹ್ಮಣದ್ವೇಷದಿಂದ ಉರಿಯುತ್ತ-ಆ ತಮ್ಮ ಈರ್ಷಾಸೂಯೆಗೆ ಬಸವಣ್ಣನವರ ಅಂಕಿತದಲ್ಲಿ ಕಟ್ಟಿಕೊಂಡಿರುವ ವಚನವಿದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು