•  
  •  
  •  
  •  
Index   ವಚನ - 571    Search  
 
ಮಾಹೇಶ್ವರನ ಜ್ಞಾನಿಸ್ಥಲ - ಪುರಾಣ
ಆದಿ ಪುರಾಣ ಅಸುರರಿಗೆ ಮಾರಿ, ವೇದ ಪುರಾಣ ಹೋತಿಂಗೆ ಮಾರಿ, ರಾಮ ಪುರಾಣ ರಕ್ಕಸರಿಗೆ ಮಾರಿ, ಭಾರತ ಪುರಾಣ ಗೋತ್ರಕ್ಕೆ ಮಾರಿ. ಎಲ್ಲಾ ಪುರಾಣ ಕರ್ಮಕ್ಕೆ ಮೊದಲು: ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲಾ ಕೂಡಲಸಂಗಮದೇವಾ.
Transliteration Ādi purāṇa asurarige māri, vēdapurāṇa hōtiṅge māri, rāmapurāṇa rakkasarige māri, bhāratapurāṇa gōtrakke māri. Ellā purāṇa karmakke modalu: Nim'ma purāṇakke pratiyilla kūḍalasaṅgamadēvā.
Manuscript
English Translation 2 The first Purāṇa is to the demons death; The Veda Purāṇa is death to the goat; The Rāma Purāṇa is to Rākṣasas death; The Bhārata Purāṇa is death to the clan... Every Purāṇa is Karma's origin: O Kūḍala Saṅgama Lord, there is To Thy Purāṇa no parallel! Translated by: L M A Menezes, S M Angadi
Hindi Translation आदि पुराण असुरों के लिए मृत्यु बना, वेद, पुराण, भेड के लिए मृत्यु बना, रामपुराण राक्षसों के लिए मृत्यु बना- भारतपुराण गोत्र के लिए मृत्यु बना- सभी पुराण कर्म – मूल हैं कूडलसंगमदेव तव पुराण अप्रतिम है॥ Translated by: Banakara K Gowdappa
Telugu Translation ఆదిపురాణము అసురులకు మారి; వేదపురాణము హోతకు మారి; రాముని కధ రక్కసులకు మారి భారత చరిత్ర గోత్రమునకు మారి నీ పురాణములెల్ల కర్మకు మూలము నీ పురాణమునకు ప్రతి లేదు. కూడల సంగమదేవా! Translated by: Dr. Badala Ramaiah
Tamil Translation ஆதி புராணம் அரக்கருக்கு அழிவு வேத புராணம் ஆட்டிற்கு அழிவு இராமபுராணம் அரக்கருக்கு அழிவு பாரத புராணம் கோத்திரத்திற்கு அழிவு அனைத்துப் புராணமும் வினைக்கு முதலாம் உம் புராணத்திற்கு ஈடு இல்லை கூடார சங்கம தேவனே. Translated by: Smt. Kalyani Venkataraman, Chennai
Marathi Translation आदि पुराण हे असुराति काळ वेद पुराण हे, बोकडासि राम पुराण हे राक्षसासि काळ भारत पुराण हे काळ गोवा सर्व पुराण हे कर्माच्या आधिन केला कर्मठाते मान्य आम्हा नाही कूडलसंगमदेवा-सम नाही अन्य प्रत्यक्षा प्रमाण काय द्यावे ? अर्थ - आदि पुराण हे अनुरांना काळ तर वेद पुराण हे बोकडांना काळ आहेत. तसेच रामायण हे राक्षसांचा सहार करण्यास सांगितले. तर महाभारत आपल्याच कुळ-गोत्रांचा (आपल्याच बंधूचा, नातेवाईकांचा) संहार करण्यास सांगते. म्हणून हे सर्व पुराण कर्माच्या आधिन आहेत. मात्र माझ्या कूडलसंगमदेवाचे (परमेश्वराचे) पुराण "" जगा जगु द्या” असे सांगते. शिवाय धन, संपत्ती, राज्य, परस्त्री इत्यादि आशा अमिप धरण्याची शिकवण त्यात नाही म्हणून या जगात त्या समान कोणतेही पुराण नाही. Translated by Rajendra Jirobe, Published by V B Patil, Hirabaug, Chembur, Mumbai, 1983 आदि पुराण असुरांना मारक आहे. वेद पुराण बकऱ्यांना मारक आहे. राम पुराण राक्षसांना मारक आहे. भारत पुराण गोत्रांना मारक आहे. सर्व पुराण कर्माधीन आहेत. तुमच्या पुराणासम अन्य नाही कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅಸುರ = ರಾಕ್ಷಸ; ಆದಿ = ಮೊದಲು; ಕರ್ಮ = ಕೆಲಸ; ಗೋತ್ರ = ; ಮಾರಿ = ; ರಕ್ಕಸ = ; ಹೋತಿ = ;
ಕನ್ನಡ ವ್ಯಾಖ್ಯಾನ ಶಿವಪುರಾಣ(ಶಿವಾಗಮಗಳನ್ನು ಬಿಟ್ಟು ಮಿಕ್ಕೆಲ್ಲ ಪುರಾಣಗಳೂ ಇತಿಹಾಸಗಳೂ ವೇದಗಳೂ ಆಗಮಗಳೂ ಹಿಂಸಾಮಯ ವಿಚಾರಗಳಿಂದ ತುಂಬಿದೆಯೆಂದು ಗೇಲಿಮಾಡುವುದೇ ಈ ವಚನದ ಉದ್ದೇಶ. ಈ ವಚನವನ್ನು ಬಸವಣ್ಣನವರ ಅಂಕಿತದಲ್ಲಿ ಬರೆದು ಸೇರಿಸಿದವನು ಏಕಕಾಲದಲ್ಲಿ ಒಬ್ಬ ಗಾವಿಲನೂ ಧೂರ್ತನೂ ಆಗಿದ್ದಿರಬೇಕು. ಅವನು ವೇದ ಪುರಾಣ ಇತಿಹಾಸ ಆಗಮ ಎಲ್ಲವನ್ನೂ ಪುರಾಣವೆಂದೇ ಕರೆದಿರುವನು-ಮತ್ತು ಹಾಗೆ ಕರೆಯುವಲ್ಲಿ ಗೇಲಿಯ ಕಾಕನ್ನೂ ಬೆರೆಸಿರುವನು-ಅದು ತನ್ನ ಶಿವಪುರಾಣದ ಮೇಲೂ ತುಳುಕಿದೆಯೆಂಬುದನ್ನು ಅರಿಯನು. ಆದಿಪುರಾಣ ಅಸುರರಿಗೆ ಮಾರಿ, ರಾಮಪುರಾಣ ರಕ್ಕಸರಿಗೆ ಮಾರಿ ಎನ್ನುತ್ತ ಅಸುರರಿಗೂ ರಕ್ಕಸರಿಗೂ ಇಲ್ಲದ ಭೇದವನ್ನು ಕಲ್ಪಿಸಿ-ನಮ್ಮನ್ನು ದಿಕ್ಕು ತಪ್ಪಿಸುವನು-ನಾವು ದಿಕ್ಕು ತಪ್ಪಿದ್ದನ್ನು ಕಂಡು ಒಳಗೊಳಗೇ ತುಂಟನಗೆಯನ್ನು ನಗುವನು. ಜಕ್ಕಣಾರ್ಯನು ವೀರಶೈವದ ಏಕೋತ್ತರ ಶತಸ್ಥಲಗಳನ್ನು ಪ್ರತಿಪಾದಿಸುವಾಗ ರಾಮಾಯಣ ಮಹಾಭಾರತ ಭಾಗವತಾದಿ ಗ್ರಂಥಗಳಿಂದಲೂ ಉಲ್ಲೇಖಿಸಿರುವನೆಂಬುದು ಗಮನಾರ್ಹ. ಈ ಎಲ್ಲ ವಿವರಣೆಯ ಹಿನ್ನಲೆಯಲ್ಲಿ-ಈ ವಚನ ಬಸವಣ್ಣನವರ ನಿಜವಚನವಲ್ಲವೆಂಬುದು ಸ್ಪಷ್ಟವೇ ಇದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು