ಮಾಹೇಶ್ವರನ ಜ್ಞಾನಿಸ್ಥಲ - ಪ್ರಾಣಿಬಲಿ
ನಿಮ್ಮ ವಚನ ಎನ್ನ ಪುಣ್ಯವೆಂಬುದು ಹುಸಿಯಾಯಿತ್ತು ನೋಡಾ
ಶಾಸ್ತ್ರದ ವಚನ ಹೋತಿಂಗೆ ಮಾರಿ:
ಎಂತು ನಂಬುವೆನಯ್ಯಾ?
ʼನಾನು ಕೊಲ್ಲೆ, ನೇಣು ಕೊಂದಿತ್ತೆಂಬʼ ಸೂನೆಗಾರರನೇನೆಂಬೆ,
ಕೂಡಲಸಂಗಮದೇವಾ?
Transliteration Nim'ma vacana enna puṇyavembudu husiyāyittu nōḍā
śāstrada vacana hōtiṅge māri:
Entu nambuvenayyā?
ʼnānu kolle, nēṇu kondittembaʼ sūnegāraranēnembe,
kūḍalasaṅgamadēvā?
Manuscript
English Translation 2 Look,it is a lie to say there is
My merit in your words...
The word of the Śāstras is
Death to the goat:
What do I say, O Kūḍala Saṅgama Lord,
Of fthe butchers who say:
'I didn't kill, was the rope'?
Translated by: L M A Menezes, S M Angadi
Hindi Translation तव वचन मेरा पुण्य है, यह झूठ निकला
शास्र का वचन भेड के लिए मृत्यु बना,
कैसे विश्वास करूँ?
मैं वध नहीं करता, फाँसी करती है-कहनेवाले
बधिकों को क्या कहूँ, कूडलसंगमदेव ?
Translated by: Banakara K Gowdappa
Telugu Translation మీ నుడుల చూడ తప్పయ్యె కదరా!
శాస్త్రము పల్కులు హోతకు మారి
నమ్ముటెట్లయ్యా!
నేగాదు త్రాడు చంపెనను
సూనరుల నే మందునయ్యా?
కూడల సంగమదేవా!
Translated by: Dr. Badala Ramaiah
Tamil Translation உம் கூற்று என்னைப் புண்ணியன் என இயம்புகிறது
சாத்திரக் கூற்று பொய்த்தது காணாய்
ஆட்டிற்கு அழிவு
எங்ஙனம் நம்புவேன் ஐயனே?
நான் கொல்லேன், கயிறு கொன்றது எனும்
கொலைஞரை என்னென்பேன்
கூடல சங்கம தேவனே?
Translated by: Smt. Kalyani Venkataraman, Chennai
Marathi Translation
तुमचे वचन मला पावन आहे. हे खोटे झाले पहा.
शास्त्रवाणी बकऱ्याला मारक आहे.
त्यावर कसा विश्वास ठेवू ?
मी हत्या केली नाही, दोरीने हत्या केली.
अशा खुनीला काय म्हणावे कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ನೇಣು = ; ಮಾರಿ = ; ವಚನ = ; ಸೂನೆಗಾರ = ; ಹುಸಿ = ; ಹೋತಿ = ;
ಕನ್ನಡ ವ್ಯಾಖ್ಯಾನ ಯಜ್ಞಯಾಗಗಳಲ್ಲಿ ಪಶುವಧೆ ಮಾಡುವವರನ್ನು ಬಸವಣ್ಣನವರು ಕಟುಗರೆಂದು ಖಂಡಿಸಿ-“ವೇದ ಶಾಸ್ತ್ರಗಳಲ್ಲಿ ಹೇಳಿರುವುದನ್ನು ಮಾಡುತ್ತೇವೆ, ಅದರಲ್ಲಿ ತಪ್ಪೇನಿದೆ” ಎನ್ನುವ ವೈದಿಕರ ಮಾತನ್ನು- “ಕೊಲ್ಲುವವನು ನಾನಲ್ಲ. ಕೊರಳಿಗೆ ಜೀರಿದ ಹಗ್ಗ”ಎಂಬ ಕಟುಗನ ಭಂಡಮಾತಿಗೆ ಹೋಲಿಸಿ ಗೇಲಿಮಾಡುತ್ತಿರುವರು.
ಈ ವಚನದ ಸರಳಗದ್ಯಾನುವಾದ ಈ ಮುಂದಿನಂತಿದೆ : ಎಲೆ ಶಿವನೇ, ನಿನ್ನ “ವಚನ”ವೆನಿಸಿದ ವೇದಶಾಸ್ತ್ರಗಳು ಪುಣ್ಯಕರವೆಂಬ ಮಾತು ಸುಳ್ಳಾಯಿತು. ಶಾಸ್ತ್ರದ ಮಾತೆಲ್ಲ ಹೋತಿಗೆ ಪ್ರಾಣಾಂತಕವಾಗಿ ಪರಿಣಮಿಸಿದೆಯಾಗಿ-ಆ ವೇದಶಾಸ್ತ್ರವನ್ನು ಹೇಗೆ ನಂಬಲಿ? ನಾನು ಕೊಲ್ಲುವುದಿಲ್ಲ ನೇಣು ಕೊಂದಿತೆಂಬ ಕಟುಗ(ವೈದಿಕ)ರ ಮಾತಿಗೆ ಹೇಸುತ್ತೇನೆ.
ಈ ವಚನದ ಆಧಾರದಿಂದ ಹೇಳುವುದಾದರೆ-ವೇದ(ಶಾಸ್ತ್ರ)ಗಳಲ್ಲಿ ಹೇಳಿರುವ ಪ್ರಾಣಿವಧೆಯು-ಆ ವೇದಶಾಸ್ತ್ರಗಳು “ಶಿವನ ವಚನ”ವೆಂದುಕೊಂಡಿದ್ದ ಬಸವಣ್ಣನವರ ಶ್ರದ್ಧೆಯನ್ನು ಅಲುಗಿಸಿತು-ಎನ್ನಬೇಕಾಗುವುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು