ಮಾಹೇಶ್ವರನ ಜ್ಞಾನಿಸ್ಥಲ - ಪ್ರಾಣಿಬಲಿ
ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
ಎಲೆ ಹೋತೇ, ಅಳು, ಕಂಡಾ!
ವೇದವನೋದಿದವರ ಮುಂದೆ ಅಳು, ಕಂಡಾ!
ಶಾಸ್ತ್ರವ ಕೇಳಿದವರ ಮುಂದೆ ಅಳು, ಕಂಡಾ!!
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ.
Transliteration Mātina mātige ninna kondaharendu
ele hōtē, aḷu, kaṇḍā!
Vēdavanōdidavara munde aḷu, kaṇḍā!
Śāstrava kēḷidavara munde aḷu, kaṇḍa!!
Nīnattudakke takkuda māḍuva kūḍalasaṅgamadēva.
Manuscript
English Translation 2 Cry,cry,O goat,
That you're slain
In accordance with the Vedas
Cry,cry,before them
That read the Vedas!
Cry,cry,before them
That hear the Śāstras!
Lord Kūḍala Saṅgama
Will take a fit toll
For what you've wept!
Translated by: L M A Menezes, S M Angadi
Hindi Translation हे बकरे कि वेदविधि से तेरा वध होगा –
हे वेद – पाठकों के सामने रोओ
हे श्रृत शास्र श्रोताओं के सामने रोओ ।
तेरे रोदन का उचित दंड देंगे कूडलसंगमदेव ॥
Translated by: Banakara K Gowdappa
Telugu Translation పలుకు పల్కునకు నినుబట్టి చంపెదమనగా,
ఓ పశువా యేడ్చెదవా
వేదము చదివినవారి యెదుట విలపింతువా!
శాస్త్రము విన్నవారిముందు దుఃఖింతువా !
నీ యేడ్పులకు దగు ప్రతి సేయును
మా కూడల సంగమదేవుడు.
Translated by: Dr. Badala Ramaiah
Tamil Translation வேதம் கூறுகிறது என உன்னைக் கொன்றனர்
ஏ ஆடே, அழு, கண்டாய்
வேதம் ஓதியவர் முன்பு அழு, கண்டாய்
சாத்திரத்தைக் கேட்டவர் முன்பு அழு, கண்டாய்
நீ அழுததற்குத் தகுந்ததைச் செய்வான்
கூடல சங்கம தேவன்
Translated by: Smt. Kalyani Venkataraman, Chennai
Marathi Translation
पटता पठता, करोताती ठार
करि वारंवार, वेदघोष
काय रडतोसी, बापड्या बोकडा
कोण तो निवाडा, करो तुझा
वेदपाठी सामोरी, शास्त्रज्ञा समोरी
कोण होंय कैवारी, बापड्यांनो ?
कूडलसंगमदेव घेतील बदला
तुझ्या रडण्याला पाहोनिया
अर्थ - महात्मा बसवेश्वर युगा युगापासून चालत आलेल्या वैदिक संप्रदायाच्या घोड चुकीबद्दल दुखवटा व्यक्त करताना दिसतात. वैदाज्ञा प्रमाण मानून यज्ञात पशुवध करणारे बुद्धीहीन मुळीच आवडत नाहीत. ते बळी आणाऱ्या बोकडास म्हणतात, की हे बोकडा जे लोक तुला बोलणा बोलण्यातच (मंत्रघोषणातच) ठार मारतात हे तुला का कळत नसावे? तुला अद्याप अक्कल अली नाही तुला जर त्यांच्या तावडीतून सुटायचे असेल तर तृन शहाणा झाला पाहिजेस. तुला झुल घालून बधस्थलो नले जाते. हे क्षणभरचे मोठेपण देणारे घात करणारेच होते हे तुझ्या लक्षात कसे येत नाही ?रडावयाचेच असेल तर तु शास्त्रवेदाध्ययन करण्याऱ्यापुढे रडल्यास तुझी आर्त हाक त्यांना कापरे सोडील, व ते आपणास बदलून घेतील का ? तु शहाणा हो. शरणांच्या ओरडोम माझ्या कूडलसंगमदेव माद दिल्याखेरीज राहणार नाही.
Translated by Rajendra Jirobe, Published by V B Patil, Hirabaug, Chembur, Mumbai, 1983
प्रत्येक शब्दाला मारुन टाकतात तुला.
अरे बोकडा रड रे बाबा !
वेद वाचणाऱ्यासमोर रड रे बाबा !
शास्त्र ऐकणाऱ्यासमोर रड रे बाबा !
ते तुझ्या रडण्याचा योग्य बदला घेतील कूडलसंगमदेवा.
Translated by Shalini Sreeshaila Doddamani
Urdu Translation کچھ ہی لمحوں کےبعد لوگ تجھے
مارڈالیں گے خوبصورت بھیڑ
کس لیےاشک توبہاتا ہے
کون ہےجویہاںسُنے فریاد
غمزدہ بھیڑمیری بات توسُن
ایسےلوگوں کےسامنےرونا
وید اورشاسترجو پڑھتے ہیں
تیری ان اشکبارآنکھوں کو
دیکھ کرمیرے کوڈلا سنگا
تجھ کواپنی پناہ میںلیں گے
Translated by: Hameed Almas
ಶಬ್ದಾರ್ಥಗಳು ತಕ್ಕು = ; ಹೋತ = ;
ಕನ್ನಡ ವ್ಯಾಖ್ಯಾನ ಶವಯಾತ್ರೆಯನ್ನು ಕಂಡುದೇ ಬುದ್ಧನ ವೈರಾಗ್ಯಕ್ಕೆ ಕಾರಣವಾದಂತೆ-ಯಜ್ಞಶಾಲೆಯ ಮುಂದೆ ಕಟ್ಟಿದ ಹೋತನ್ನು ಕಂಡುದೇ ಬಸವಣ್ಣನವರು ವೈದಿಕಪಂಥವನ್ನು ತ್ಯಜಿಸಿ ಭಕ್ತಿಪಂಥವನ್ನು ಸೇರಿದುದಕ್ಕೆ ಕಾರಣವಾಯಿತೆನ್ನಬಹುದು.
ಯಜ್ಞ ಶಾಲೆಯ ಮುಂದೆ ಅರಚುತ್ತಿರುವ ಹೋತವೊಂದನ್ನು ಕಂಡ ಬಸವಣ್ಣನವರು-ಅದರ ಆರ್ತ ಸ್ವರಕ್ಕೆ ಮರುಗಿ-ಅದರ ತಲೆಯನ್ನು ನೇವರಿಸುತ್ತ ಆಡಿದ ಮಾತಿನ ಚಿತ್ರ ಈ ವಚನದಲ್ಲಿದೆ. ಬಸವಣ್ಣನವರು ಆ ಹೋತಿಗೆ ಅಳಬೇಡವೆಂದು ಹೇಳುತ್ತಿಲ್ಲ-ಬದಲಾಗಿ ವೇದಶಾಸ್ತ್ರಗಳನ್ನು ಓದಿದವರ ಮುಂದೆ ಮತ್ತೆ ಮತ್ತೆ ಅಳು ಎಂದು ಪ್ರೇರೇಪಿಸಿ ತಾವು ದುಃಖಿಸುತ್ತಿರುವರು. ಹೃದಯವಿದ್ರಾವಕವಾಗಿ ಮರಳಿ ಮರಳಿ ನೀನರಚುವ ಧ್ವನಿಯನ್ನು ಶಿವನು ಕೇಳಿಸಿಕೊಳ್ಳುವವರೆಗೆ ಅಳು-ಶಿವನು ಆ ವೈದಿಕರಿಗೆ ತಕ್ಕ ಶಿಕ್ಷೆಯನ್ನು ಮಾಡುವನೆನ್ನುತ್ತ-ದಕ್ಷಾಧ್ವರ ಪ್ರಸಂಗವನ್ನು ನೆನಪಿಸಿಕೊಂಡರಾಗಬಹುದು ಬಸವಣ್ಣನವರು. (ಮಾತಿನಮಾತಿಂಗೆ : ನಿಷ್ಕಾರಣವಾಗಿ). (ನೋಡಿ 573ನೇ ವಚನ).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು