•  
  •  
  •  
  •  
Index   ವಚನ - 574    Search  
 
ಮಾಹೇಶ್ವರನ ಜ್ಞಾನಿಸ್ಥಲ - ಪುರಾಣ
ದಕ್ಷಯಾಗವ ನಡೆಸಲೆಂದು ಅಜಮುಖ್ಯರಾದ ಸುರರೆಲ್ಲಾ ನೆರದು ಬಂದ ಬಾಯ ನೋಡಾ, ಬಾಯ ತಪ್ಪಿಸಿ ಉಣಬಂದ ದೈವದ ಬೆಂದ ಬಾಯ ನೋಡಾ! ಉಣ್ಣದೆ ಉಡದೆ ಹೊಗೆಯ ಕೈಯಲಿ ಸತ್ತ ಅಣ್ಣಗಳ ಕೇಡ ನೋಡಾ, ಕೂಡಲಸಂಗಮದೇವಾ!
Transliteration Dakṣayāgava naḍesalendu ajamukhyarāda surarellā neradu banda bāya nōḍā, bāya tappisi uṇabanda daivada benda bāya nōḍā! Uṇṇade uḍade hogeya kaiyali satta aṇṇagaḷa kēḍa nōḍā, kūḍalasaṅgamadēvā!
Manuscript
English Translation 2 Behold the mouths Of all the gods come in crowds-- Their captain the Brahma, Behold the scalded mouths Of gods come to eat What was due to You! Behold the poor gods'plight Who died in smoke Without food or cloth, O Kūḍala Saṅgama Lord! Translated by: L M A Menezes, S M Angadi
Hindi Translation दक्षयज्ञ करने ब्रह्म के नेत्रृत्व में समागत् देवताओं के मुख देखो । मुँह से छीनकर खाने आये हुए देवताओं के तप्त मुँह देखो । बिना खाये, पहले जो भाई धुँए में मर गये उनकी दुर्दशा देखो, कूडलसंगमदेव ॥ Translated by: Banakara K Gowdappa
Telugu Translation దక్షుడు యాగము సేయగ అజ ప్రముఖులగు సురలెల్ల నోరూరు వచ్చిరి చూడుమ; కూటికై గూడు వేల్పుగూడెము; నోరు నొవ్వ నోర్విచ్చుట చూడుడో తినక కట్టక పొగలలో బడి పొగులు వారి వ్యధ చూడరా కూడలసంగమదేవా! Translated by: Dr. Badala Ramaiah
Tamil Translation தட்ச வேள்வியை நடத்துவதற்கு பிரம்மன் போன்ற சுரர் அனைவரின் கூடி வந்தோரின் முகத்தைக் காணாய் சொல் பிறழ்ந்து உண்ண வந்த கடவுளின் வெந்த வாயினைக் காணாய் உண்ணாது, உடுக்காது புகையால் மடிந்தோரின் கேட்டினைக் காணாய், கூடல சங்கமதேவனே. Translated by: Smt. Kalyani Venkataraman, Chennai
Marathi Translation दक्षाच्या यज्ञमंटपात अजासह आलेल्या सर्व देवांचे वैभव पहा. गडबडीत यज्ञ आहुती खाऊन तोंड भाजून घेतलेले देव पहा. जेवल्याविना, पांघरल्याविना यज्ञाच्या धुरामध्ये मेलेल्याची स्थिती पहा कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅಜ = ಬ್ರಹ್ಮ; ಕೇಡು = ; ದಕ್ಷಯಾಗ = ; ನೆರೆದು = ; ಸುರ = ;
ಕನ್ನಡ ವ್ಯಾಖ್ಯಾನ ಯಜ್ಞವೊಂದನ್ನು ಶಿವನಲ್ಲದೆ ಮಾಡಿ ಶಿವನ ಗರ್ವಭಂಗಮಾಡುವೆನೆಂದು ನಿಶ್ಚಯಿಸಿದ ದಕ್ಷನ ಆ ಯಜ್ಞಕ್ಕೆ ವಿಷ್ಣು ಬ್ರಹ್ಮ ಮುಂತಾದ ಎಲ್ಲ ದೇವತೆಗಳೂ ಬೆಂಬಲವಿತ್ತರು. ಶಿವನು ಆಹ್ವಾನಿತನಾಗದ ಆ ಯಜ್ಞಕ್ಕೆ ದಾಕ್ಷಾಯಣಿ ಬಂದು ತಂದೆ ದಕ್ಷನಿಂದ ಅವಮಾನಿತಳಾಗಿ ಆ ಯಜ್ಞಕುಂಡದಲ್ಲೇ ಬಿದ್ದು ದೇಹತ್ಯಾಗ ಮಾಡಿದ ಮೇಲಂತು ಶಿವನು ರುದ್ರನಾದ. ಆ ಯಜ್ಞಧ್ವಂಸಕ್ಕಾಗಿ ತನ್ನ ಕಿಡಿಗಣ್ಣಿಂದ ಹುಟ್ಟಿದ ವೀರಭದ್ರನನ್ನು ಕಳಿಸಿದ. ಯಜ್ಞದಹವಿಸ್ಸಿನಲ್ಲಿ ತಂತಮ್ಮ ಪಾಲನ್ನು ಮೆಲ್ಲಲು ಜೊಲ್ಲು ಸುರಿಸುತ್ತ. ಸಾಲುಗಟ್ಟಿ ನಿಂತಿದ್ದ ದೇವತೆಗಳೆಲ್ಲಾ ವೀರಭದ್ರನನ್ನು ಕಂಡು ದಿಕ್ಕಾಪಾಲಾದರು. ಯಜ್ಞ ಭಂಗವಾಯಿತು. ದಕ್ಷನ ತಲೆ ಕತ್ತರಿಸಿ ಬಿತ್ತು. ಹೀಗೆ ಶಿವನ ಪಾರಮ್ಯವನ್ನೂ, ಯಜ್ಞದ ಗರ್ಹಣೆಯನ್ನೂ ಸಾರುವುದಕ್ಕಾಗಿಯೇ ಬಸವಣ್ಣನವರು ಈ ವಚನದಲ್ಲಿ ದಕ್ಷಯಾಗವನ್ನು ಚಿತ್ರಿಸಿರುವರು. ಅಹಿಂಸೆಯ ಶಿವಮಾರ್ಗದಲ್ಲಿ ಪ್ರಚೋದಿಸದಿದ್ದರೆ ದೇವತೆಗಳಿಗಾದರೂ ಕ್ಷೇಮವಿಲ್ಲೆಂಬುದೀ ವಚನದಲ್ಲಿರುವ ಧ್ವನಿ. ಧಕ್ಷಾಧ್ವರ ಧ್ವಂಸವೆಂಬುದು ಶಿವನ ಇಪ್ಪತ್ತೈದು ಲೀಲೆಗಳಲ್ಲಿ ಒಂದು. ಇದನ್ನು ಕುರಿತುದೇ ಆಗಿದೆ ರಾಘವಾಂಕನ ವೀರೇಶಚರಿತೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು