•  
  •  
  •  
  •  
Index   ವಚನ - 575    Search  
 
ಮಾಹೇಶ್ವರನ ಜ್ಞಾನಿಸ್ಥಲ - ಬ್ರಾಹ್ಮಣಿಕೆ
ಏನಯ್ಯಾ, ವಿಪ್ರರು ನುಡಿದಂತೆ ನಡೆಯರು: ಇದೆಂತಯ್ಯಾ? ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ! ಕೂಡಲಸಂಗಮದೇವಾ, ಹೊಲೆಯರ ಬಸುರಲ್ಲಿ ವಿಪ್ರರು ಹುಟ್ಟಿ ಗೋಮಾಂಸ ತಿಂಬುವರೆಂಬುದಕ್ಕೆ ಇದೆ ದೃಷ್ಟ!
Transliteration Ēnayya, vipraru nuḍidante naḍeyaru: Identayyā? Tamagondu baṭṭe, śāstrakkondu baṭṭe! Kūḍalasaṅgamadēvā, holeyara basuralli vipraru huṭṭi gōmānsa timbarembudakke ide dr̥ṣṭa!
Manuscript
English Translation 2 What Sir,these chanting priests Do not do what they say: how's that? One way for their own selves, Another for the holy books! It's proof enough, O Kūḍala Saṅgama Lord, to say these priests, born In pariah wombs, eat beef! Translated by: L M A Menezes, S M Angadi
Hindi Translation हे, विप्र कथनानुसार आचरण नहीं करते, यह कैसा? उनका मार्ग एक है, और शास्र का दूसरा ! कूडलसंगमदेव , यही इस का दृष्टांत है, कि विप्र मातंगों के गर्भ से उत्पन्न होकर गोमाँस भक्षण करते हैं ॥ Translated by: Banakara K Gowdappa
Telugu Translation ఏమయ్యా విప్రులు చెప్పినటు చేయ రెట్టులయ్యా ఇది తమకొక్కదారి శాస్త్రమున కొక్కదారి మాలల కడుపున విప్రులు బుట్టి గోమాంసము తిందురనుటకిదే సాక్షి! Translated by: Dr. Badala Ramaiah
Tamil Translation ஐயனே, அந்தணர் கூறியதைப்போல நடவார் இது என்ன ஐயனே? தனக்கொரு வழி, சாத்திரத்திற்கு ஒருவழி. கூடல சங்கம தேவனே, புலையரின் கருவிலே அந்தணர் பிறந்து, பசுவின் புலாலை உண்பர் என்பதற்கு இதே கண்கூடு. Translated by: Smt. Kalyani Venkataraman, Chennai
Marathi Translation सांगणे आगळे, वागणें आगळे शास्त्रार्थ न कळे, विप्र कैसे ? अभक्ष भक्षितो, शास्त्राते रक्षिती ब्राह्मण म्हणवितो, विपरीत हे कूडलसंगमदेवा ! ऐसे हे लक्षण हेच ते प्रमाण, हीन दीन अर्थ - स्वत:ला उच्च कुळात जन्मलेले मानुन अन्य जनांना हीन समजणारे ते ब्राह्मण कसे होऊ शकतात ? त्यांचे आचार व विचार, त्यांचे बोलणे व त्यांचे वागणे यात कसलाही ताळमेळ नसतो. यज्ञ करणारे, बळी घेणारे, अभक्ष भक्षण करणारे हे शास्त्राचे रक्षण करू इच्छितात. हेच त्यांच्या पतीतपणाचे लक्षण व प्रमाण होय. हे कूडलसंगमदेवा! सांगतात एक व वागतात एक हेच शुद्रातिशूद्रत्वाचे प्रमाण होय. Translated by Rajendra Jirobe, Published by V B Patil, Hirabaug, Chembur, Mumbai, 1983 काय हो देवा, विप्रांचे बोलणे एक, करणे दुसरेच हे कसले वर्तन देवा ? आपला मार्ग वेगळा, शास्त्राचा मार्ग वेगळा ? कूडलसंगमदेवा, अस्पृश्यापोटी विप्र जन्म घेऊन गोमांस खातात हेच प्रमाण आहे. Translated by Shalini Sreeshaila Doddamani
ಶಬ್ದಾರ್ಥಗಳು ದೃಷ್ಟ = ; ಬಟ್ಟೆ = ; ಬಸುರ = ; ವಿಪ್ರ = ; ಹೊಲೆಯ = ;
ಕನ್ನಡ ವ್ಯಾಖ್ಯಾನ ಎಲ್ಲವನ್ನೂ ತನ್ನಂತೆ ಕಾಣು ಎನ್ನುತ್ತ ಪ್ರಾಣಿವಧೆಯಲ್ಲಿ ತೊಡಗಿದ ಬ್ರಾಹ್ಮಣರ ದ್ವಂದ್ವವನ್ನು ಬಸವಣ್ಣನವರು ಈ ವಚನದಲ್ಲಿ ಖಂಡಿಸುತ್ತಿರುವರು. ಮತ್ತು ಗೋವು ಪವಿತ್ರವೆಂದೂ ಗೋಹತ್ಯೆ ಮಹಾಪಾತಕವೆಂದೂ ಶಾಸ್ತ್ರಗಳಲ್ಲಿ ಹೇಳಿದ್ದಾರೆ-ಇದರ ಆಚರಣೆ ಅದಕ್ಕೆ ವಿರುದ್ಧವಾಗಿಯೇ ಇದೆ. ಆ ಗೋವುಗಳನ್ನೇ ಔತಣಕ್ಕಾಗಿ(ಯೂ) ಅಟ್ಟುತ್ತಿನ್ನುವ ಅವರ ನಿರ್ಲಜ್ಜ ರುಚಿಲಾಂಪಟ್ಯವನ್ನು ಬಸವಣ್ಣನವರು ಮನಸಿನಲ್ಲಿಟ್ಟುಕೊಂಡು ಈ ಮಾತನಾಡುತ್ತಿರುವರೆನಿಸುವುದು. ವಾಲ್ಮೀಕಿಋಷಿಗಳ ಆಶ್ರಮಕ್ಕೆ ವಸಿಷ್ಠ ಋಷಿಗಳು ಬಂದಾಗ ಅವರನ್ನು ಸತ್ಕರಿಸಲು ಹಸುವಿನ ಎಳಗರುವೊಂದನ್ನು ಕೊಂದು ಅಡಿಗೆ ಮಾಡಿ ಬಡಿಸಲಾಯಿತೆಂದು ಕವಿ ಭವಭೂತಿಯು ತನ್ನ ಉತ್ತರರಾಮಚರಿತ್ರೆಯಲ್ಲಿ ಹೇಳಿರುವುದು ಪ್ರಸಿದ್ಧವೇ ಇದೆ. ಅಷ್ಟೇ ಅಲ್ಲ, ಬಸವಣ್ಣನವರ ಕಾಲದಲ್ಲೂ ಬ್ರಾಹ್ಮಣರು (ಯಜ್ಞದ ನೆಪದಲ್ಲೇ ಆಗಲಿ) ಗೋಮಾಂಸವನ್ನು ತಿನ್ನುತ್ತಿದ್ದರೆಂಬುದು ಈ ವಚನದಿಂದಲೇ ಸ್ಪಷ್ಟವಾಗುತ್ತಿದೆ. ಬ್ರಾಹ್ಮಣರು ಹೀಗೆ ಗೋಮಾಂಸವನ್ನು ತಿನ್ನುವ ರೂಢಿಯನ್ನು ಬೆಳೆಸಿಕೊಂಡುದಕ್ಕೆ ಕಾರಣ-ಅವರು ಹೊಲೆಯಲ್ಲಿ ಹುಟ್ಟಿದವರು ಎನ್ನುತ್ತಿರುವ ಬಸವಣ್ಣನವರ ಮಾತಂತೂ ಅವರ ವಾಕ್ಶುದ್ಧಿಯನ್ನೇ ಕಲುಷಿತಗೊಳಿಸುವಂಥ ಬಹಳ ಕೆಟ್ಟ ಮಾತೆನಿಸೀತು. ಒಂದು ಪಕ್ಷ ಈ ವಚನ ನಿಜವಾಗಿಯೂ ಬಸವಣ್ಣನವರದೇ ಆದರೆ-ಬ್ರಾಹ್ಮಣರ ಗೋತ್ರಪುರುಷರಲ್ಲಿ ಹಲವರು ಹುಟ್ಟಿನಿಂದ ಮಚ್ಚಿಗ(ಅಸ್ಪೃಶ್ಯ)ರಾಗಿದ್ದರೆಂಬುದಷ್ಟೇ ಅವರ ಅಭಿಪ್ರಾಯ-ನೋಡಿ ವಚನ 590. ಇಷ್ಟರಿಂದಲೇ ಮಚ್ಚಿಗ ಮುಂತಾದವರಲ್ಲಿ ಬಸವಣ್ಣನವರು ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದರೆಂಬುದು ಸಿದ್ಧವಾಗುವುದಿಲ್ಲ. ಅದೇ 590ನೇ ವಚನದಲ್ಲಿ “ಶ್ವಪಚೋಪಿಯಾದರೇನು ಶಿವಭಕ್ತನೇ ಕುಲಜನು”ಎಂದು ಬಸವಣ್ಣನವರು ತಮ್ಮ ಆಚರಣೆಯ ನಿಲುವನ್ನು ಸ್ಪಷ್ಟಪಡಿಸಿಕೊಂಡಿರುವರು. (ನೋಡಿ 584ನೇ ವಚನದ ವ್ಯಾಖ್ಯಾನ).

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು