•  
  •  
  •  
  •  
Index   ವಚನ - 576    Search  
 
ಮಾಹೇಶ್ವರನ ಜ್ಞಾನಿಸ್ಥಲ - ಜಾತಿ
ಹೊಲೆಯೊಳಗೆ ಹುಟ್ಟಿ ಕುಲವನರಸುವ, ಎಲವೋ, ಮಾತಂಗಿಯ ಮಗ ನೀನು! ಸತ್ತುದನೆಳೆವನೆತ್ತಣ ಹೊಲೆಯ? ಹೊತ್ತು ತಂದು ನೀವು ಕೊಲುವಿರಿ. ಶಾಸ್ತ್ರವೆಂಬುದು ಹೋತಿಂಗೆ ಮಾರಿ, ವೇದವೆಂಬುದು ನಿಮಗೆ ತಿಳಿಯದು. ನಮ್ಮ ಕೂಡಲಸಂಗನ ಶರಣರು ಕರ್ಮವಿರಹಿತರು, ಶರಣಸನ್ನಿಹಿತರು, ಅನುಪಮಚರಿತ್ರರು: ಅವರಿಗೆ ತೋರಲು ಪ್ರತಿಯಿಲ್ಲವೋ!
Transliteration Holeyoḷage huṭṭi kulavanarasuva, elavō, mātaṅgiya maga nīnu! Sattudaneḷevanettaṇa holeya? Hottu tandu nīvu koluviri. Śāstravembudu hōtiṅge māri, vēdavembudu nimage tiḷiyadu. Nam'ma kūḍalasaṅgana śaraṇaru karmavirahitaru, śaraṇasannihitaru, anupamacaritraru: Avarige tōralu pratiyillavō!
Manuscript
English Translation 2 You man who, born of flow of blood, Are keen on caste, you are The son of a common wench! Who is he a low-born man Who carries carrion? You kill your meat, Shouldering it home! What you call Śāstra is death to a goat; What you call Veda is Greek to you! Our Kūḍala Saṅga's Śaraṇās Are karma-free, have God in them; Their lives are without peer: You cannot show A parallel to them! Translated by: L M A Menezes, S M Angadi
Hindi Translation रजस में जन्म लेखर जाति ढूँढता है, अरे मातंगपुत्र है तू - मृतक को ढोनेवाला कहाँ का चाँडाल है? तू ढोकर लाता है और मारता है । शास्त्र बकरी के लिए मृत्यु बना, वेद तुमको विदित नहीं है । मम कूडलसंगमेश के शरण कर्म विरहित शरण सन्निहित वे अप्रतिम है, अनुपम चरित हैं ॥ Translated by: Banakara K Gowdappa
Telugu Translation మైలలో బుట్టు మాతంగి కొడుకా! కులమంచు గుణియింతువే? నీవు చచ్చిన దూడల మోయువాడు మాలయే? బ్రతికిన ప్రాణుల బట్టి దెచ్చి చంపెదరే మీరు శాస్త్రమన్న హోతకు మారి వేదమన్నది మీకు తెలియదు సంగని శరణులు కర్మవిరహితులు శరణా సన్నహితులు; అనుపమ చరిత్రులు వారికి ప్రతి యెవ్వరూ లేరురా చూడ. Translated by: Dr. Badala Ramaiah
Tamil Translation அழுக்கிலே பிறந்து, குலத்தைத் தேடுவாய் நீ புலைச்சியின் மகனாவாய் மடிந்ததை இழுத்து வருபவன் எத்தகு புலையன்? சுமந்து வந்து நீவிர் கொல்வீர் சாத்திரம் என்பது ஆட்டிற்கு அழிவு நீங்கள் வேதத்தை அறியீர் நம் கூடல சங்கனின் அடியார் வினையற்றோர் அடியாருடன் கூடியிருப்போர் ஒப்பற்ற வரலாற்றை உடையோர் அவர்களை வேறு எதனுடனும் ஒப்பிடவியலுமோ? Translated by: Smt. Kalyani Venkataraman, Chennai
Marathi Translation विटाळातुनि जन्म घेऊनी कुल गोत्रा शोधिशो खचित तू मातंगी सुत असशी शव नेणाऱ्या शुद्र म्हणशी तू प्राणीयास वधशी खचित त मातंगी सुत असशी शास्त्र काळ ते त्या बकऱ्याशी वेदा नच जाणशी खचित तू मातंगी सुत असशी कूडलसंगमदेव! शरण हे अनुपम चरित्र राशी कर्मविरहित शरणसन्निहित त्या समान नच पाहशी अर्थ - हे मानवा! तुझा जन्म विटाळातून! तरी पण तू कुलगोत्र शोधतोस ? यावरुन तू खास मातंगी पुत्रच आहेस मृतास वाहून नेणाऱ्याना तू शुद्र समजतोस आणि स्वत: मात्र प्राणीयाचा वध करण्यास भाग सांगते पाडतोस. शास्त्र हे बोकडाचा बळी घेण्यास असल्यामुळे त्याचा तु परिपूर्ण उपभोग करून घेण्याच्या पाठी लागला आहेस. असलें शास्त्र, वेद व पुराण तुला अंध करुन टाकले आहे. माझ्या कूडलसंगमदेवाचे शरणाकडे पहा ते अनुपम चरित्र आहेत. कर्मविरहित व शरण सन्निहित आहेत. असे इतरत्र तुला कोठे पाहण्यास मिळणार नाही. Translated by Rajendra Jirobe, Published by V B Patil, Hirabaug, Chembur, Mumbai, 1983 सुतकात जन्म घेऊन कुलाचा शोध घेता. तू मातंगीचा पुत्र आहेस. मेलेल्यांना वाहणारे अस्पृश्य कसे होतात? बकरी आणून तुम्ही बळी देता. शास्त्र बकऱ्यांना मारक आहे. वेदाला तुम्ही जाणत नाही. आमच्या कूडलसंगाचे शरण कर्म विरहीत शरण सन्निहीत, अनुपमचरित्र त्यांच्या समान कोणीही नाही. Translated by Shalini Sreeshaila Doddamani
ಶಬ್ದಾರ್ಥಗಳು ಅನುಪಮ = ಅಸಮಾನವಾದ್ದು, ಹೋಲಿಕೆ ಮೀರಿದ, ಶ್ರೇಷ್ಠ; ಅರಸು = ಹುಡುಕು; ಕುಲ = ; ಮಾರಿ = ; ವಿರಹಿತ = ; ವೇದ = ; ಸನ್ನಿಹಿತ = ; ಹೊಲೆ = ; ಹೋತಿ = ;
ಕನ್ನಡ ವ್ಯಾಖ್ಯಾನ 590ನೇ ವಚನದಲ್ಲಿ ಮಾರ್ಕಂಡೇಯ ಋಷಿ ಒಬ್ಬ ಮಾತಂಗಿ(ಅಸ್ಪೃಶ್ಯಸ್ತ್ರೀ)ಯಲ್ಲಿ ಹುಟ್ಟಿದವನೆಂದು ಬಸವಣ್ಣನವರು ಹೇಳಿದ್ದಾರೆ. ಹೀಗೆ ಸ್ವತಃ ಅಸ್ಪೃಶ್ಯನಾದ ವೈದಿಕನು (ಸಾಮಾಜಿಕ) ಅಸ್ಪೃಶ್ಯರಲ್ಲಿ ಅಸ್ಪೃಶ್ಯತೆಯನ್ನು ಎಣಿಸುವುದನ್ನು ಸಹಿಸುತ್ತಿಲ್ಲ ಇದು ಹುಟ್ಟಿನ ವಿಚಾರವಾಯಿತು-ಇನ್ನು ಆಚರಣೆಯಿಂದಲಾದರೂ ಪಶುಬಲಿಯನ್ನು ಕೊಟ್ಟು ಯಾಗ ಮಾಡುವ ವೈದಿಕನು ಒಬ್ಬ ಅಸ್ಪೃಶ್ಯನಿಗಿಂತಲೂ ಮೇಲಲ್ಲವೆಂದು ವಾದಿಸುತ್ತಿರುವರು. ಅಸ್ಪೃಶ್ಯರು ಸತ್ತ ಪ್ರಾಣಿಗಳನ್ನು ಮಾತ್ರ ಎಳೆದು ತಂದು ತಿಂದರೆ-ವೈದಿಕನು ಹೋತು ಮುಂತಾದ ಪ್ರಾಣಿಗಳನ್ನು ಯಜ್ಞಶಾಲೆಗೆ ಜೀವಂತವಾಗಿದ್ದಾಗಲೇ ಹೊತ್ತುತಂದು ಕತ್ತು ಹಿಸುಕಿ ಕೊಂದು ತಿನ್ನುವನೆಂಬುದು ಅವರ ಆಕ್ಷೇಪಣೆ. ವೇದದ “ಬ್ರಾಹ್ಮಣ”ವಿಭಾಗದ ಕರ್ಮಠತೆಗೆ ತಮ್ಮ ವಿವೇಕವನ್ನೆಲ್ಲ ಮಾರುಗೊಟ್ಟು, ಅನರ್ಘ್ಯವಾದ ಉಪನಿಷದ್ವಿಭಾಗದ ಸರ್ವಜೀವದಯಾಪರತೆಯ ಸಮಾನತೆಯ ಅದ್ವೈತನಿಷ್ಠೆಯನ್ನು ಕಡೆಗಣಿಸಿದ್ದ ತಮ್ಮ ಕಾಲದ ವೈದಿಕರಿಗೆ-ವೇದವೆಂದರೇನೆಂಬುದು ಗೊತ್ತಿಲ್ಲವೆಂದು ಬಸವಣ್ಣನವರು ಆರೋಪಿಸುತ್ತಿರುವುದರಲ್ಲಿ ಸತ್ಯದೂರವಾದುದೇನೂ ಇಲ್ಲವೆನಿಸುವುದು. ಮತ್ತು ಅವರ ಈ ಹೇಳಿಕೆಯಲ್ಲಿ ವೇದದ ಬಗೆಗಿನ ಉತ್ತಮ ದೃಷ್ಟಿಯನ್ನೂ ಕಾಣಬಹುದಾಗಿದೆ. ಈ ದೃಷ್ಟಿಯಿಂದಲೇ ಬಸವಣ್ಣನವರು ಶರಣರನ್ನು ಕರ್ಮವಿರಹಿತರೆಂದೂ ಸಚ್ಚರಿತ್ರರೆಂದೂ ಉಪಮಾತೀತರೆಂದೂ ಪ್ರಶಂಸಿಸುತ್ತಿರುವರು. ವೈದಿಕ ಪೂಜಾವಿಧಾನಗಳನ್ನು ಸಾತ್ವಿಕಗೊಳಿಸಿದ ಕೀರ್ತಿಯ ಒಂದಂಶ ಬುದ್ಧ ಮಹಾವೀರರಿಗೇ ಅಲ್ಲದೆ ಬಸವಣ್ಣನವರಿಗೂ ಸಲ್ಲುವುದೆಂಬುದನ್ನು ಮರೆಯಲಾಗದು. (ಮಾತಂಗಿಯ ಮಗನೆಂಬುದಕ್ಕೆ ನೋಡಿ 584ನೇ ವಚನ ವ್ಯಾಖ್ಯಾನವನ್ನು.)

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು