•  
  •  
  •  
  •  
Index   ವಚನ - 577    Search  
 
ಮಾಹೇಶ್ವರನ ಜ್ಞಾನಿಸ್ಥಲ - ಹೋಮ
ಇಟ್ಟೆಯ ಹಣ್ಣ ನರಿ ತಿಂದು ಸೃಷ್ಟಿ ತಿರುಗಿತೆಂಬಂತೆ ಮಟ್ಟಿಯನಿಟ್ಟ ದ್ವಿಜರ ಮಾತದೇಕೆ? ಹಗಲುಗಾಣದ ಗೂಗೆ ಇರುಳಾಯಿತ್ತೆಂದರೆ, ಜಗಕ್ಕೆ ಇರುಳಪ್ಪುದೆ, ಮರುಳೆ|| ಹೋಮದ ನೆವದಲ್ಲಿ ಹೋತನ ತಿಂಬ ಅನಾಮಿಕರೊಡನಾಡಿ ಗೆಲುವುದೇನು ಕೂಡಲಸಂಗಮದೇವಾ?
Transliteration Iṭṭeya haṇṇa nari tindu sr̥ṣṭi tirugittembante maṭṭiyaniṭṭa dvijara mātadēke? Hagalugāṇada gūge iruḷāyitendare, jagakke iruḷappude, maruḷe|| hōmada nevadalli hōtana timba anāmikaroḍanāḍi gelivudēnu kūḍalasaṅgamadēvā?
Manuscript
English Translation 2 Why talk of the clay-mark-wearing twice-born one Who, like jackal swallowing a vomit-nut, Swears it's the earth turns round! If an owl, that cannot see the day, Swears it is night, Would it be night, o fool, For the whole world? What sense in scoring points With the infamous ones Who, in pretence of sacrifice, Devour goat's flesh? Translated by: L M A Menezes, S M Angadi
Hindi Translation बच्छनाग खाकर जैसे सियार कहता है, मृत्ति का धारी सृष्टि घूम रही है । मिट्टी से चिन्ह लगाये हुये द्विजों की बात क्यों? यदि दिनांध उल्लू कहे, कि रात हुई, तो रे पागल जग के लिए रात होगी? होम के बहाने बकरी मारकर खानेवाले अनामकों से जूझकर जीतना क्या है कूडलसंगमदेव? Translated by: Banakara K Gowdappa
Telugu Translation పెట్టి పుచ్చకాయను తిన్న నక్క చుట్టు గల సృష్టి చుట్టుచున్నదన్నట్లు మట్టిని మైనలముకొను బాపల మాటలేల? పగలు చూడని గూబ రాత్రి ఐనదనగా రాత్రి వచ్చునే? జగతికి హోమవ్యాజమున హోతను తిను అనామకులతో వాదించి గెలువ నేల? కూడల సంగమదేవా; Translated by: Dr. Badala Ramaiah
Tamil Translation எருக்கம் பழத்தை உண்ட நரிக்குத் தலை சுழலும் என்பதனைய, திருமண் தரித்த வேதியரின் பேச்சு எதற்கு? பகல் என அறியாத கூகை, இருளாயிற்று எனின் உலகம் இருண்டு விடுமோ மருளே? வேள்வியைச் செய்கிறேனென ஆட்டைக் கொன்று உண்ணும் பெயரற்றவருடன் கூடி வெல்வது என்னவோ கூடல சங்கம தேவனே. Translated by: Smt. Kalyani Venkataraman, Chennai
Marathi Translation मादक फळ खाऊन सृष्टी फिरते आहे. असे कोल्हा म्हणतो तसे तिलकधारी द्विजवाणीला सत्य समजता? दिवस न पाहणारे घुबड रात्र झाली असे म्हणता. जगाल ती रात्र होईल मूर्खा ? होमाच्या निमित्ताने बकरा बळी देवून खाणाऱ्या अनामिका बरोबर चर्चेची काय गरज आहे ? कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅನಾಮಿಕ = ಹೆಸರು ಇಲ್ಲದ; ಇಟ್ಟಿಯ = ; ಇರುಳು = ; ಒಡನಾಡಿ = ; ಜಗ = ; ದ್ವಿಜ = ; ಮಟ್ಟಿಯ = ; ಮರುಳೆ = ; ಹೋತ = ; ಹೋಮ = ;
ಕನ್ನಡ ವ್ಯಾಖ್ಯಾನ ಪ್ರಕಟ ಅನಾಮಿಕ(ಅಸ್ಪೃಶ್ಯ)ನು ಪ್ರಕಟವಾಗಿ ಮಾಂಸವನ್ನು ತಿಂದರೆ_ಪ್ರಚ್ಛನ್ನ ಅನಾಮಿಕ(ವೈದಿಕ)ನು ಮಾಂಸವನ್ನು ಅಗ್ನಯೇ ಸ್ವಾಹಾ ಇಂದ್ರಾಯ ಸ್ವಾಹಾ ಎಂದು ದೇವರ ನೆಪಮಾಡಿ (ತಾನೇ) ತಿನ್ನುವನು. ಈ ನಿಕೃಷ್ಟ ಜಿಹ್ವಾಚಾಪಲ್ಯವನ್ನು ಪೂಜೆಯೆಂದು ಪ್ರಸಾದವೆಂದು ಎಷ್ಟು ಕಾಲ ಬಚ್ಚಿಡಲಾದೀತು ? ಗೂಬೆ ಹಗಲ(ಬೆಳ್ಳಂ ಬೆಳುಕ)ನ್ನೇ ರಾತ್ರಿಯೆಂದರೆ-ಮಿಕ್ಕವರಿಗೆ ಕಣ್ಣು ಕಾಣದಿದ್ದೀತೆ ? ಇಟ್ಟಿಯ ಹಣ್ಣನ್ನು ತಿಂದ ನರಿಗೆ ತರೆತಿರುಗಿ ಮರಗಿಡ ಬೆಟ್ಟಗುಡ್ಡ ತಿರುಗಾಡಿದಂತೆನಿಸಿದರೆ-ಮಿಕ್ಕವರಿಗೂ ಹಾಗೆನಿಸೀತೆ ?

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು