ಮಾಹೇಶ್ವರನ ಜ್ಞಾನಿಸ್ಥಲ - ಬ್ರಾಹ್ಮಣಿಕೆ
ಮೀಂಬುಲಿಗನ ಹಕ್ಕಿಯಂತೆ ನೀರ ತಡಿಯಲಿದ್ದು
ಮೂಗ ಹಿಡಿದು ಧ್ಯಾನವ ಮಾಡುವರಯ್ಯಾ.
ಬಿಟ್ಟ ಮಂಡೆವೆರೆಸಿ ಬಾಯ ಮಿಡುಕಿಸುತ
ಕಣ್ಣು ಮುಚ್ಚಿ ಬೆರಳನೆಣಿಸುವರಯ್ಯಾ-
ನಿಮ್ಮ ಕೈಯಲ್ಲಿ ಕಟ್ಟಿದ ದರ್ಭೆಯ ಹುಲ್ಲು
ಕೂಡಲಸಂಗನನರಿಯದೆ ಮೊರೆಯಿಡುವಂತೆ!
Transliteration Mīmbuligana hakkiyante nīra taḍiyalide
mūga hiḍidu dhyānamāḍuvarayya.
Biṭṭa maṇḍeveresi bāya miḍukisuta
kaṇṇu mucci beraḷaneṇisuvarayya-
nim'ma kaiyalli kaṭṭida darbheya hullu
kūḍalasaṅgananariyade moreyiḍuvante!
Manuscript
English Translation 2 Upon the river's border, like a crane,
Holding your nose, you meditate;
Let hang your head, and move your lips,
And count your fingers with eyes shut:
As if the grass-knot on your hand
Should wail, in ignorance
Of Kūḍala Saṅga!
Translated by: L M A Menezes, S M Angadi
Hindi Translation सारस सा जलतट रहकर -
नाक पकड़कर ध्यान करते हैं ।
खुली शिखा लटकाए मुहँ से बड- बडाते
आँख मूँदकर उँगलियाँ गिनते हैं
मानों तुम्हारे हाथ में बंधा दर्भ
कूडलसंगमदेव को न जानकर विलाप करता हो ॥
Translated by: Banakara K Gowdappa
Telugu Translation ఏటిగట్టున చేపలకై కూర్చున్న కొంగ రీతి
ముక్కు బట్టి ధ్యానించు మూరు?లారా ! వినుడో
వేళ్ళకు గట్టిన దర్భలు
సంగని తెలియక మొఱలిడునట్లు
తలను పైకెత్తి పెదవి కదుపుచు
కనుల మూసి వేళ్ళ లెక్కింతురు కదయ్యా?
Translated by: Dr. Badala Ramaiah
Tamil Translation கொக்குப் பறவையனைய படித்துறையிலே
மூக்கைப் பிடித்தவாறு தியானிப்பரையனே
சிகை விரிந்திருக்க, வாயை அசைத்தவாறு
கண்ணை மூடி விரலை எண்ணுவர் ஐயனே
அவர் கையில் தரித்துள்ள தர்பைப்புல்
கூடல சங்கனை அறியாது முறையிடுவதனையதாம்
Translated by: Smt. Kalyani Venkataraman, Chennai
Marathi Translation
बगळ्याप्रमाणे जलाच्या काठावर
नाक धरुन ध्यान करतात देवा.
केस सोडून, ओठाने पुटपुटत
डोळे झाकून बोटेमोजतात देवा.
त्यांच्या हाती दर्भाचे गवत
कूडलसंगमदेवाला जाणल्याविना या पूजांचा काय उपयोग ?
Translated by Shalini Sreeshaila Doddamani
ಶಬ್ದಾರ್ಥಗಳು ಒರಸಿ = ; ದರ್ಭೆ = ; ಧ್ಯಾನ = ; ಮಂಡೆ = ; ಮಿಡುಕು = ; ಮೀಂಬುಲಿಗ(ಮಿಂಗುಲಿಗ) = ; ಮೊರೆಯಿಡು = ;
ಕನ್ನಡ ವ್ಯಾಖ್ಯಾನ ಶಿವನಿಗೆ ಶರಣಾಗದೆ ಮಾಡುವ ಕರ್ಮಾತ್ಮಕವಾದ ಸ್ನಾನ ಧ್ಯಾನ ಜಪಾದಿಗಳೆಲ್ಲ ದಂಡವೆಂಬುದು ಈ ವಚನದ ತಾತ್ಪರ್ಯ.
ನದೀನೀರ ತಡಿಯಲ್ಲಿ ನಿಂತಿರುವ ಮೀಂಬುಲಿಗನ ಹಕ್ಕಿಯನ್ನು ಕಂಡವರಿಗೆ-ಅದು ದೈವಧ್ಯಾನಮಗ್ನವಾಗಿರುವಂತೆ ಕಾಣುವುದು. ವಾಸ್ತವವಾಗಿ ಅದು ಅಲ್ಲಿ ನಿಂತಿರುವುದು ಮೀನಿನ ಗ್ರಾಸದಿಂದ ಹೊಟ್ಟೆ ಹೊರೆಯುವುದಕ್ಕಾಗಿ. ಹಾಗೆಯೇ ಶಿವಭಕ್ತಿಯಿಲ್ಲದೆ ಹೊಟ್ಟೆಯ ಪಾಡಿಗಾಗಿ ಧ್ಯಾನದ ವೇಷ ಧರಿಸಿದವರನ್ನು ಆ ಮೀಂಬುಲಿಗನಿಗೆ ಹೋಲಿಸಲಾಗಿದೆ. ಇಂಥವರು ನೀರಲ್ಲಿ ಮಿಂದು ಬಂದು, ತಲೆಗೂದಲನ್ನು ಚೆಲ್ಲಿಕೊಂಡು, ಕಣ್ಣನ್ನು ಮುಚ್ಚಿಕೊಂಡು ತುಟಿಯನ್ನು ಮಿಡುಕಿಸುತ್ತ, ಎತ್ತಿದ ಕೈಯಲ್ಲಿ ಕಟ್ಟಿದ ದರ್ಭೆಯ ಬೆರಳನ್ನು ಎಣಿಸುವ ಪ್ರಾರ್ಥನಾಭಂಗಿಯು ಕಾಣಿಸುವಷ್ಟು ಮಂಗಳಕರವಾದುದೇನೂ ಅಲ್ಲ : ಹಿಂದಿನ ಕಾಲದಲ್ಲಿ ಆಪತ್ತೇನಾದರೂ ಒದಗಿದರೆ-ಮೊರೆಯಿಡಬೇಕಾದ ವ್ಯಕ್ತಿ ಕೈಯಲ್ಲಿ ಹುಲ್ಲನ್ನು ಎತ್ತಿ ಹಿಡಿಯಬೇಕಾಗಿತ್ತು, ಅಂತೆಯೇ ದರ್ಭೆಯ ಹುಲ್ಲನ್ನು ಕಟ್ಟಿದ ಕೈಯ್ಯನ್ನು ಮೇಲೆತ್ತಿ ಬಾಯಿ ಮಿಟುಕಿಸುವ ಜನ-ಶಿವನ ಮಹಿಮೆಯನ್ನರಿಯದೆ ಕೆಟ್ಟೆ ನಾನೆಂದು ಮೊರೆಯಿಡುವಂತೆ ಕಾಣುವರೆನ್ನುವರು ಬಸವಣ್ಣನವರು.
ಕಪಟಜಪದ ಕರ್ಮಠರಿಗೆ ಹೃತ್ಪೂರ್ವಕ ಶಿವಶರಣಾಗತಿಯು ತಾರಕವೆಂದು ತಿಳಿದಿದ್ದರೆ-ಅವರು ಈ ಜಪತಪಾದಿ ವ್ಯರ್ಥಹವ್ಯಾಸದಲ್ಲಿ ತೊಡಗಿ ಹಾಸ್ಯಾಸ್ಪದವಾಗುತ್ತಿರಲಿಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು