•  
  •  
  •  
  •  
Index   ವಚನ - 579    Search  
 
ಮಾಹೇಶ್ವರನ ಜ್ಞಾನಿಸ್ಥಲ - ಪೂಜೆ
ಮಾಣದೆ ಅರಳೆಯ ತಿಟ್ಟನೆ ತಿರುಗುವ ಗಾಣದೆತ್ತಿನಂತೆ, ಪೂರ್ವಲಿಖಿತ ಮುಂದುಗಾಣಲೀಯದು. ನೀವೆಲ್ಲಾ ವಾಯಕ್ಕೆ ಕೆಡಬೇಡ: ಮಾಣದೆ ಪೂಜಿಸು ಲಿಂಗವ. ಹೆರರ ಗೋಣ ಕೊಯ್ದೆನೆಂದು ಮಂತ್ರವನೋದುವ ನೇಣುಗಾರರ ಮೆಚ್ಚ ಕೂಡಲಸಂಗಮದೇವ.
Transliteration Māṇade araḷeya tiṭṭane tiruguva gāṇadettinante, pūrvalikhita mundugāṇalīyadu. Nīvella vāyakke keḍabēḍa: māṇade pūjisu liṅgava. Herara gōṇa koydenendu mantravanōduva nēṇugārara mecca kūḍalasaṅgamadēva.
Manuscript
English Translation 2 Even as an ox Turning and turning round the oil-mill pole Ceaseless, you cannot see ahead The ancient writ... Do you not all Endure this loss in vain: Do you adore our Liṅga without fail. Lord Kūḍala Saṅgama reproves The hangmen, wearing their cords, Who read their hocus-pocus, so they may Cut others'' throats! Translated by: L M A Menezes, S M Angadi
Hindi Translation निरंतर स्थाणु के चारों ओर घूमनेवाले कोल्हू के बैल सा पूर्वलेख भविष्य को देखने नहीं देता । तुम सब माया से नष्ट मत होओ । निरंतर लिंग पूजा करो । मैंने दूसरों का गला काटा, समझ मंत्र जपनेवाले डोरिधारियों पर कूडलसंगमदेव प्रसन्न नहीं होते । Translated by: Banakara K Gowdappa
Telugu Translation ఆగక కిర్రనతిరిగెడి గానుగెద్దు రీతి పూర్వలిఖితము మిమ్ము ముందు చూడనీదు మాయలబడి మీరెల్ల చెడకుడో ! మానక పూజింపుడో మహాదేవుని పరుల గొంతుగోయు మంత్రము పఠియించు త్రాటి బాపల మెచ్చడయ్యా సంగమదేవుడు Translated by: Dr. Badala Ramaiah
Tamil Translation இடையறாது அரளியை கிர்என சுழற்றும் செக்கு எருதைப்போல தலை எழுத்து முன்னேற விடுமோ? நீங்கள் வரிதே கெடாதிருப்பீர் இடயறாது இலிங்கத்தை பூசிப்பாய் பிறர் கழுத்தைக் கொய்தேன் என மந்திரம் ஓதும் முப்புரிநூல் தரித்த வேதியரைக் கூடல சங்கமதேவன் மெச்சுவனோ? Translated by: Smt. Kalyani Venkataraman, Chennai
Marathi Translation वडा पिंपळा गुंफुनी दोरा परिक्रमा करिशी परी न तू कर्म मुक्त होशी असत्यावरी ठेऊनि आस्था जीवन बिघडविशो कसा रे शिलवान हौशी लिंग पूजना सोडुनि ऐसा व्यर्थ का भटकशी खाटिका लिंगदेवा मुकशी मंत्र तंत्र दंभाचाराशी व्यर्थ बळी पडशी कूडलसंगा मान्य न होशी अर्थ - वडा पिंपळाच्या झाडांना देव समजून परिक्रमा घालणारे कसे कर्म मुक्त होऊ शकतात. असत्यावर विश्वास ठेवणारे आपले जीवन व्यर्थ लपवितात ते शिलवान होऊच शकत नाहीत. लिंगदेवाची पूजा करणे सोडून तथ्यहिन देवी देवतांना भजणारे व मंत्र तंत्रांना बळी घेण्याचा प्रघास आहे. असले माझ्या कुडलसंगमदेवास (परमेश्वराम ) मान्य होणार नाही. Translated by Rajendra Jirobe, Published by V B Patil, Hirabaug, Chembur, Mumbai, 1983 घाण्याच्या बैलाप्रमाणे सदा पिंपळाला प्रदक्षिणा घातल्याने पूर्वलिखित नष्ट होत नाही. तुम्ही असल्यावर अंध विश्वास ठेवून व्यर्थ जाऊ नका. सदैव लिंगपूजा करा. दुसऱ्यांचा गळा कापण्यासाठी मंत्रपठण करणाऱ्या हत्याऱ्याला आपले करीत नाही कूडलसंगमदेव. Translated by Shalini Sreeshaila Doddamani
ಶಬ್ದಾರ್ಥಗಳು ಅರಳÉ = ; ಗೋಣು = ; ತಿಟ್ಟನೆ = ; ನೇಣುಗಾರ = ; ಪೂರ್ವಲಿಖಿತ = ; ಮಾಣು = ; ವಾಯ = ; ಹೆರರ = ;
ಕನ್ನಡ ವ್ಯಾಖ್ಯಾನ ವೈದಿಕರಂತೆ ಅರ್ಥಹೀನಕರ್ಮಠರಾಗಬೇಡಿರೆಂದು-ದುಡಿಮೆಯಿಂದಲೇ ಜೀವನವನ್ನು ಸಾಗಿಸಬೇಕಾದ ಅಬ್ರಾಹ್ಮಣರಿಗೆ ಬುದ್ಧಿ ಹೇಳುತ್ತಿರುವರು ಬಸವಣ್ಣನವರು-ಈ ವಚನದ ಮೂಲಕ. ಗಾಣದ ಎತ್ತಿನಂತೆ ಅರಳಿಯ ಮರವನ್ನು ಸುತ್ತುವನು ವೈದಿಕ. ಅವನ ಕರ್ಮ ಅವನಿಗೆ ಪ್ರಗತಿಯ ಮಾರ್ಗವನ್ನು ಕಾಣದಂತೆ ಮಾಡಿ-ಅವನು ಸುತ್ತಿದ್ದನ್ನೇ ಸುತ್ತುವಂತೆ ಮಾಡಿದೆ. ಎಲೆ ಅಬ್ರಾಹ್ಮಣರೇ, ಶಿವಭಕ್ತರೇ, ನೀವೂ ಅವನಂತೆ ವ್ಯರ್ಥಕರ್ಮಗಳಲ್ಲಿ ತೊಡಗಿ ಹಾಳಾಗಬೇಡಿ. ನಿಮಗೆ ದುಡಿಮೆಯೇ ಪೂಜೆ ಧ್ಯಾನ ಜಪತಪ. ವೈದಿಕನೊಬ್ಬನು ಓದುವ ಮಂತ್ರದ ಅರ್ಥ-ಅವನು ತಾನು ಯಾರ ಯಾರ ಕೊರಳನ್ನು ಕೊಯ್ದೆನೆಂದು ಹಾಕುವ ಲೆಕ್ಕವೇ ಆಗಿದೆ-ಎನ್ನುತ್ತ ಅವರ ಸುಲಭಜೀವನವನ್ನು ಅಥವಾ ಯಾಗದ ನೆಪದಲ್ಲಿ ಅವರು ಮಾಡುವ ಪ್ರಾಣಿವಧೆಯನ್ನು ಪ್ರಸ್ತಾಪಿಸುತ್ತಿರುವರು ಬಸವಣ್ಣನವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು