ಮಾಹೇಶ್ವರನ ಜ್ಞಾನಿಸ್ಥಲ - ಬ್ರಾಹ್ಮಣಿಕೆ
ಕಣ್ಣ ಮುಚ್ಚಿ ಕನ್ನಡಿಯ ತೋರುವಂತೆ,
ಇರುಳು ಹಗಲಿನ ನಿದ್ರೆ ಸಾಲದೆ
ಬೆರಳನೆಣಿಸಿ ಪರಮಾರ್ಥವ ಹಡೆವರೆ ಚೋದ್ಯವಲ್ಲವೆ? ಹೇಳಾ.
ಮೂಗ ಮುಚ್ಚಿ ಮುಕ್ತಿಯ ಬಯಸುವ
ನಾಚಿಕೆಯಿಲ್ಲದವರ ನಾನೇನೆಂಬೆ,
ಕೂಡಲಸಂಗಮದೇವಾ?
Transliteration Kaṇṇu mucci kannaḍiya tōruvante,
iruḷu hagalina nidre sālade
beraḷaneṇisi paramārthava haḍevare cōdyavallave? Hēḷā.
Mūga mucci muktiya bayasuva
nācikeyilladavara nānēnembe,
kūḍalasaṅgamadēvā?
Manuscript
English Translation 2 Like looking into a mirror with closed eyes,
They are not content with sleep both night and day:
Were it not strange if they could gain,
By counting fingers, the highest good?
O Kūḍala Saṅgama Lord,
What should I say of those without shame
Who hanker for salvation by closing
Their nose?
Translated by: L M A Menezes, S M Angadi
Hindi Translation आँख बंदकर दर्पण दिखाने की भाँति
दिन-रात की नींद- पर्याप्त न समझ?
उँगलियाँ गिनकर परमार्थ प्राप्त करे;
तो कहो, क्या आश्चर्य नहीं?
कूडलसंगमदेव, नाक बंदकर मुक्ति चाहनेवाले
निर्लज्जों को क्या कहूँ?
Translated by: Banakara K Gowdappa
Telugu Translation కండ్లు మూసి అద్దము చూచినట్లు
రాత్రింబవళ్ళు నిద్ర చాలదే? వేళ్ళను లెక్కింప
పరమార్ధ మందగల రే? చోద్యముగా దే ఇది చెప్పుడో
ముక్కును మూసి ముక్తిని కాంక్షించు
సిగ్గుచెడినవారి నేమందునయ్యా?
Translated by: Dr. Badala Ramaiah
Tamil Translation கண்ணைமூடி ஆடியைக் காட்டுவதனைய
இரவு, பகலிலே உறக்கம் போதாதோ?
விரலை எண்ணி முக்தியடைவது வியப்பன்றோ!
மூக்கை மூடியவாறு, முக்தியை விரும்பும்
நாணமற்றோரை நான் என்னென்பேன்
கூடல சங்கம தேவனே.
Translated by: Smt. Kalyani Venkataraman, Chennai
Marathi Translation
डोळे झाकून आरसा दाखविल्याप्रमाणे
रात्र दिवसाची झोप पुरेशी नाही का ?
बोटे मोजून परमार्थ प्राप्ती होईल का सांगा ?
नाक दाबून मुक्ती मागणाऱ्या निर्लजांना
काय म्हणावे कूडलसंगमदेवा ?
Translated by Shalini Sreeshaila Doddamani
ಶಬ್ದಾರ್ಥಗಳು ಈರುಳು = ; ಚೋದ್ಯ = ; ಪಾರಮಾರ್ಥ = ; ಮುಕ್ತಿ = ; ಹಡೆವಡೆ = ;
ಕನ್ನಡ ವ್ಯಾಖ್ಯಾನ ಯಾವನಾದರೂ ಬೆಳಿಗ್ಗೆ ಕಣ್ಣು ಮುಚ್ಚಿ ಜಪಮಾಡುತ್ತಿದ್ದರೆ ಅವನು ರಾತ್ರಿ ಮಾಡಿದ ನಿದ್ರೆ ಸಾಲದಾಯಿತೋ ಎಂಬಂತೆ, ಸಂಜೆ ಜಪಮಾಡುತ್ತಿದ್ದರೆ ಅವನು ಮಧ್ಯಾಹ್ನ ಮಾಡಿದ ನಿದ್ದೆ ಸಾಲದಾಯಿತೋ ಎಂಬಂತೆ ಸೋಂಬೇರಿಯಾಗಿ ಕಾಣುವನು. ಜಪ ಎಣಿಸುವಾಗ ಬೆರಳನಲುಗಿಸುವುದೇ ದೊಡ್ಡ ಕೆಲಸವಾಗಿರುವ ಆಲಸಿಗಳಿಗೆ ಮುಕ್ತಿ ಸಿಗುವುದೆಂಬುದಕ್ಕಿಂತ ಸೋಜಿಗದ ಮಾತಿನ್ನೊಂದಿಲ್ಲ.
ಕಣ್ಣು ಮುಚ್ಚಿದವನಿಗೆ ಕನ್ನಡಿ ಹಿಡಿದರೆ ಹೇಗೆ ಮುಖ ಕಾಣುವುದಿಲ್ಲವೋ-ಹಾಗೆ ಒಳಗೆ ದಾಸೋಹ ಜ್ಞಾನವಿಲ್ಲದೆ ಹೊರಗೆ ಜಪ ಮಾಡಿದವನಿಗೆ ಸ್ವಸ್ವರೂಪ ಸಾಕ್ಷಾತ್ಕಾರವಾಗುವುದಿಲ್ಲ.
ಈ ವಚನಾಂತರ್ಗತವಾಗಿರುವ “ಮೂಗು ಮುಚ್ಚಿ ಮುಕ್ತಿಯ ಬಯಸುವ” ಚಿತ್ರವು-ಶ್ರಮಜೀವನವನ್ನು ಸಹಿಸದೆ ಅಪಾರ ಸುಖವನ್ನು ಬಯಸುವ ವೈದಿಕ ಐಷಾರಾಮ ಜೀವನಕ್ಕೊಂದು ಸಂಕೇತವಾಗಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು