•  
  •  
  •  
  •  
Index   ವಚನ - 582    Search  
 
ಮಾಹೇಶ್ವರನ ಜ್ಞಾನಿಸ್ಥಲ - ಹರಿ-ಹರ
ಬ್ರಹ್ಮಸಭೆ ನೆರೆದಲ್ಲಿ ಬ್ರಹ್ಮವಿತ್ತುಗಳು ಬ್ರಹ್ಮತತ್ವವಡೆದು, ತಮ್ಮ ವಚನಬ್ರಹ್ಮರೆನಿಸಿಕೊಂಡು ನೆಮ್ಮುವರು ವಿಷ್ಣುವನು- ತಮ್ಮ ದೈವವ ಬಿಡುವುದಾವುದುಚಿತ? ವಿಷ್ಣು ಶಿವಭಕ್ತನಾಗಿ ನಿಷ್ಠೆಯಿಂದ ಕಣ್ಣನಿತ್ತು ಹಡೆದನು ಶಿವಭಕ್ತಿಯಿಂದ! ಕಷ್ಟಜಾತಿ ಜೀವಿಗಳಿಗೆ ಮಟ್ಟಿಯೆಂತು ಬಂದತ್ತೊ! ಮುಟ್ಟರೊಂದುವನು ಮೂವಿಧಿಬಟ್ಟರೂ! ʼಹುಸಿವನೆ ಹೊಲೆಯನೆಂದುʼ ವಚನವುಂಟು ಲೋಕದಲ್ಲಿ: ಹುಸಿದ ಜನ ಶಿರ ಹೋಯಿತ್ತಾದಿಯಲ್ಲಿ! ಎಸವೋದ ಕಿರು ಪಶುವನುಸುರಲೀಯದೆ ವಿಧಾನಿಸಿ ತಿಂಬ ಜನ್ನ ಅದಾವ ಫಲವೋ: ದಕ್ಷ ಯಾಗವ ಮಾಡಿ ನಿಕ್ಷೇತ್ರನೆರೆದುದಕಟಕಟಾ, ಕೇಳಿಯೂ ಏಕೆ ಮಾಣರೋ? ಮಮಕರ್ತ ಕೂಡಲಸಂಗನ ಶರಣರು ಅಕ್ಷಯರಧಿಕರು: ವಿಪ್ರರು ಕೀಳು ಜಗವೆಲ್ಲರಿಯಲು!
Transliteration Brahmasabhe nereyalli brahmavittugaḷu brahmatatvavaḍedu, tam'ma vacanabrahmarenisikoṇḍu nem'muvaru viṣṇuvanu- tam'ma daivava biḍuvudāvuducita? Viṣṇu śivabhaktanāgi niṣṭheyinda kaṇṇanittu haḍedanu śivabhaktiyinda! Kaṣṭajāti jīvigaḷige maṭṭi entu bandatto! Muṭṭaronduvanu mūvidhibaṭṭaro! ʼhusivane holeyanendu' vacanavuṇṭu lōkadalli: Husidajana śira hoyittādiyalli! Esavoda kirupaśuvanusaralīyade Vidhānasi timba janna adāva phalavō: Dakṣa yāgava māḍi nikṣētra neredudakaṭakaṭā, kēḷiyū ēke māṇarō? Mamakarta kūḍalasaṅgana śaraṇaru akṣayaradhikaru: Vipraru kīḷu jagavellariyalu!
Manuscript
English Translation 2 The Brahma scholars who have met In gatherings of Brahmans, mastering The Brahma principles and being thought Brahmans of words, rely On Viṣṇu: is it right to leave one's gods? Viṣṇu himself became A devotee of Śiva and, for his faith Giving his eye, recovered it Through piety for Śiva ! How did clay come To creatures with such wicked castes? The priests who sing the matins, vespers, nones, They will not achive a single thing! There is a saying in the world: "The outcaste is the man who tells a lie." In days of yore, the Unborn lost his head For telling of a lie! What sort of fruit can it expect- The sacrifice wherein you eat After performing rites Upon a suffocated little beast Whose coat has been removed? When Dakṣa performed his sacrifice The spot: alas! became unsanctified... When they have heard of this Why don't they leave their ways? The Śaraṇās of Kūḍala Saṅga, who made me, Are greater and beyond decay: The whole world knows The priests are vile! Translated by: L M A Menezes, S M Angadi
Hindi Translation ब्रह्म – सभा में एकत्र ब्रह्मज्ञानी ब्रह्मत्व प्राप्त कर अपने को वचन – ब्रह्म कहलाते विष्णु पर विश्वास करते हैं । अपने देव को त्यागना कहाँ तक उचित है? विष्णुने शिवभक्त बनकर निष्ठा से नेत्र दिया, शिवभक्ति द्वारा प्राप्त किया । कष्ट जाति के जीवियों को मिट्टी कैसे आयी ! त्रिकाल संध्या से भी वे कुछ न पाते, लोकोक्ति है असत्य भाषी चमार है, आदि में असत्य भाषी का सिर गया । विधि-व्याज से दुर्बल नन्हें पशु का गला घोंट भक्षाणार्थ आचरित यज्ञ से कौन सा फल होगा? दक्ष यज्ञ से वह क्षेत्र अपवित्र हुआ यह सुनकर भी क्यों नहीं छोडतें? सारा जग जानता है, मम कर्ता कूडलसंगमेश का शरण अक्षय तथा सर्वश्रेष्ट है, विप्र अधम हैं ॥ Translated by: Banakara K Gowdappa
Telugu Translation బ్రహ్మ సదస్సున బ్రహ్మ ;జులు బ్రహ్మ తత్త్వము పొంది తామే వచన బ్రహ్మలమనిపించుకొని, నమ్మిన తమ దేవుడగు విష్ణుని విడుచుట న్యాయమే? విష్ణువు శివభక్తుడై నిష్ఠతో నిజనేత్రమిచ్చి ఇష్టార్ధముల పొందె కాని ఎటువచ్చెనో మట్టి యీ కష్టజాతి జీవులకు? ముట్టకముప్పులబడి పోదురు; తప్పు చెప్ప మాలయనె లోకము! ఆదిలో తప్పుచెప్ప బ్రహ్మతల తెగే; అసదైన పశువును గ్రుక్క త్రిప్పుకోనీక తిన జంపుజన్నమున ఫలమేమో! జన్నము చేసి దక్షుడు నిశ్శేష మైపోయె ఇది వినియూ విడువ రేటికో : మా సంగని శరణులు అక్షయు లధికులు విశ్వ మెఱుగ విప్రు లధములయ్యా Translated by: Dr. Badala Ramaiah
Tamil Translation பிரம்மசபை நிறைந்திருக்க, பிரம்மனை உணர்ந்தோர் பிரம்ம நிலையடைந்து, தம் சொற்கள் பிரம்மனுடையது என எண்ணி திருமாலைத் தஞ்சமடைவர் தம் கடவுளை விடுவது முறையோ? திருமால் சிவ பக்தனாகி, நியமத்துடன் கண்ணை ஈந்து சிவபக்தியால் பெற்றனன் வாழ்க்கையில் துன்பமுற்றோர்க்கு திருமண் எப்படிக் கிட்டுமோ? உலகில் புலையன் பொய் உரைப்பானோ என்னும் கூற்று உள்ளது பொய் உரைத்தவனின் தலை முன்பு அகன்றது ஆற்றல் குறைந்த பசுங்கன்றைக் கொன்று உண்ணும் வேள்வி, அதனால் பயனென்ன? தட்சன் வேள்வியைச் செய்து, தலைமற்றுப் போயினன் இதனைக் கேட்டும் ஏன் விடுவதில்லை? நம் உடையன் கூடல சங்கனின் அடியார் அழிவற்றோர், மேலானோர் உலகமெலாம் அறிய அந்தணர் கீழானவரன்றோ Translated by: Smt. Kalyani Venkataraman, Chennai
Marathi Translation ब्रह्मसभेत ब्रह्म ब्राह्मण्यत्त्वाचा उपदेश घेऊन आपले वचन ब्रह्म मानतात आणि विष्णूला आपलेसे करतात. आपल्या देवाची उपेक्षा करणे उचित आहे ? विष्णू शिवभक्त होऊन निष्ठेने नेत्रकमल अर्पण करुनी पाचजन्य सुदर्शनचक्रदी मिळविले. नीच जातीच्या संपर्कात येऊन तिलकधारी कसे झाले ! काहीही स्पर्शित नाहीत त्रिकर्मी भट. मिथ्यापण हीच अस्पृश्यता आहे अशी लोकोक्ती आहे. आदिमध्ये असत्य अजाचे शिर काढले गेले. भोळ्या पशुचा यज्ञात बळी देवून खाणाऱ्यांना कोणते फळ मिळणार ? दक्षाने यज्ञ करुन आपले सर्वस्व गमावले. हे ऐकूनही लोक का समजून घेत नाही ? मम कर्ता कूडलसंगाचे शरण अक्षय श्रेष्ठ आहेत. विप्र नीच आहे हे जग जाणते आहे Translated by Shalini Sreeshaila Doddamani
ಶಬ್ದಾರ್ಥಗಳು ಉಚಿತ = ; ನಿಷ್ಠೆ = ; ನೆರೆ = ; ಬಟ್ಟರು = ; ಬ್ರಹ್ಮತತ್ವ = ; ಮಟ್ಟಿ = ; ಮೂವಿಧಿ = ; ವಿತ್ತು = ; ಹಡೆ = ; ಹುಸಿ = ; ಹೊಲೆ = ;
ಕನ್ನಡ ವ್ಯಾಖ್ಯಾನ ಈ ವಚನದ ಸರಳಾನುವಾದವನ್ನು ಈ ಮುಂದಿನಂತೆ ಕಟ್ಟಿಕೊಡಬಹುದು: ಬ್ರಹ್ಮವಿತ್ತು(ವೇದಾಧ್ಯಯನ ಮಾಡಿದವರು)ಗಳು ಬ್ರಹ್ಮ(ಬ್ರಾಹ್ಮಣರ)ಸಭೆಯಲ್ಲಿ ವಚನ(ಮಾತಾಡುವ)ಬ್ರಹ್ಮ ಎನಿಸಿಕೊಳ್ಳುವರು. ಅವರು ಹೀಗೆ ಬ್ರಹ್ಮಸ್ವರೂಪಿಗಳಾಗಿಯೂ ವಿಷ್ಣುವನ್ನೇಕೆ ಆಶ್ರಯಿಸುವರು ? ಸ್ವತಃ ವಿಷ್ಣುವೇ ಶಿವನಿಗೆ ಭಕ್ತಿಯಿಂದ ಕಣ್ಣನ್ನೇ ಹೂವಾಗಿ ಅರ್ಪಿಸಿ ಅರ್ಚಿಸಿ ಮರಳಿ ಆ ಕಣ್ಣನ್ನು ಪಡೆದನು-ಶಿವಭಕ್ತಿಯ ಮಹಿಮೆ ಸಾಮಾನ್ಯವೆ ? ಆ ಕಾರಣಕ್ಕಾಗಿಯೇ ಬ್ರಾಹ್ಮಣರು ಶಿವಭಕ್ತನಾದ ಆ ವಿಷ್ಣುವನ್ನು ಆಶ್ರಯಿಸಿದರು. ಬ್ರಹ್ಮಾಣರು ತಮ್ಮ ದೈವವಾದ ಬ್ರಹ್ಮವನ್ನು ಬಿಟ್ಟಿದ್ದು ಉಚಿತವೇ ಎಂಬ ಪ್ರಶ್ನೆಗೆ ಉತ್ತರವೂ ಇದೇ ಆಗಿದೆ. ಹೀಗೆ ವಾಸ್ತವವಾಗಿ ಶಿವನಿಗೆ ಪ್ರಶಿಷ್ಯರಾದ ಬ್ರಾಹ್ಮಣರಿಗೆ ಭಸ್ಮ(ತ್ರಿಪುಂಡ್ರ)ಕ್ಕೆ ಬದಲಾಗಿ ಮಟ್ಟಿಯ ಊರ್ಧ್ವತ್ತಿಪುಂಡ್ರ(ಮೂರು ನಾಮ) ಹೇಗೆ ಬಂದಿತೋ?! ಅವರು ಯಾವಾಗಲೂ ಮಡಿಮಡಿಯೆನ್ನುತ್ತಲೇ ಮೂರಾಬಟ್ಟೆಯಾದರು. ಹುಸಿ ಹೇಳಿದವನೇ ಹೊಲೆಯನೆನ್ನುವ ಗಾದೆಯಿದೆ-ಹುಸಿ ಹೇಳಿದ ಬ್ರಹ್ಮನು ತಲೆಹೊಯ್ಸಿಕೊಂಡ ದೃಷ್ಟಾಂತವೂ ಇದೆ-ಆದರೂ ಹೆದರದೆ ಬ್ರಾಹ್ಮಣರು ತಾವು ಆಖೈರಾಗಿ ಶಿವಭಕ್ತರೇ ಆದರೂ ವಿಷ್ಣು ಭಕ್ತರೆಂದು ಸುಳ್ಳು ಹೇಳುತ್ತಿರುವರು. ವಿ : ಈ ವಚನ ಅಸಾಧಾರಣ ರೀತಿಯಲ್ಲಿ ದೀರ್ಘವಾಗಿರುವುದಲ್ಲದೆ-ದೋಷಯುಕ್ತವಾದ ವಾಕ್ಯ ವಿನ್ಯಾಸ ಮತ್ತು ಭಾವಕಾಲುಷ್ಯದ ಅತಿರೇಕದಿಂದ ಕೂಡಿದೆ. “ವಿಪ್ರರು ಕೀಳು ಜಗವೆಲ್ಲರಿಯಲು” ಮುಂತಾದ ಮಾತುಗಳು ಅಬದ್ಧ. ಬ್ರಾಹ್ಮಣದ್ವೇಷಿಯಾದ ಮೂರ್ಖನೊಬ್ಬನು ಬಸವಣ್ಣನವರ ಪದಗಳನ್ನೂ ಶೈಲಿಯನ್ನು ಕದ್ದು ಈ ವಚನವನ್ನು ರಚಿಸಿ ಸಿಕ್ಕಿಬಿದ್ದಿರುವನು, ಇದು ಬಸವಣ್ಣನವರ ನಿಜವಚನವಲ್ಲ. ಒಂದು ಕಾವ್ಯದ ಶೃಂಗಾರಸ್ಥಾನಗಳಲ್ಲಿ ಪ್ರಕ್ಷಿಪ್ತಗಳು ಹೆಚ್ಚಾದರೆ-ಧಾರ್ಮಿಕ ಗ್ರಂಥದ ಮತೀಯ ಭಾವಸ್ಥಾನಗಳಲ್ಲಿ ಪ್ರಕ್ಷಿಪ್ತಗಳು ಇನ್ನೂ ಹೆಚ್ಚಾಗಿರುತ್ತವೆ, ಏಕೆಂದರೆ ಪ್ರೀತಿಗಿಂತ ದ್ವೇಷ ಪ್ರಕರ್ಷವಾದ್ದು !

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು