ಮಾಹೇಶ್ವರನ ಜ್ಞಾನಿಸ್ಥಲ - ಬ್ರಾಹ್ಮಣಿಕೆ
ಕುಲದಲ್ಲಿ ಹಾರುವನು ಬ್ರಹ್ಮೇತಿಗೆ ಸಾರುವನು:
ಆರೋ ಮಾಡಿದ ಪಾಪಕ್ಕೆ ತಾನೆ ಕೈಯಾನುವನು!
ಸರಿಯೆ ದೇವಭಕ್ತರಿಗಿವನು? ಸರಿಯೆ ಲಿಂಗಭಕ್ತರಿಗಿವನು?
ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆನೆಂದು
ಹೊನ್ನ ಕಪಿಲೆಯ ರಾವಣಶಾಖದುಚ್ಛಿಷ್ಟದ ಹಾಲಿನಿಂದ
ಕೂಳನಟ್ಟುಂಬವರನೇನೆಂಬೆ, ಕೂಡಲಸಂಗಮದೇವಾ?
Transliteration Kuladalli hāruvanu brahmētige sāruvanu:
Ārō māḍida pāpakke tāne kaiyānuvanu!
Sariye dēvabhaktarigivanu? Sariye liṅgabhaktarigivanu?
Baḍagi mācaladēviya kulajeya māḍ'̔ihenendu
honna kapileya rāvaṇaśākhaducchiṣṭada hālininda
kūḷanaṭṭumbavaranēnembe, kūḍalasaṅgamadēvā?
Manuscript
English Translation 2 The sacrificer, by his caste, inclines
To slay the Brahma principle
When he extends his palm for alms
For sins committed by some one else!
Is he the equal of the god's devotees?
Is he the equal of Liṅga's devotees?
O Kūḍala Saṅgama Lord, what shall I say
Of those who cook and eat their food
Out of the boiling milk,
Emerging from the mouth
Of a cow wrought of gold
To turn Macaladevi, born of carpenters,
Into a well-born dame.
Translated by: L M A Menezes, S M Angadi
Hindi Translation जाति से ब्राह्मण ब्रह्म हत्या का भागी बनता है,
और के परकृत पाप के लिए हाथ पसारता है!
यह देवभक्त के समान है?
यह लिंगभक्त के समान है?
बढइन माचलादेवी को कुलीन बना का वादा कर
सुवर्ण धेनु के उच्छिष्ट एरंड के पत्ते के दूध से
खाना पकाकर खानेवालों को क्या कहूँ कूडलसंगमदेव?
Translated by: Banakara K Gowdappa
Telugu Translation బ్రహ్మహత్యను తెగవాగు జాతి. విప్రుడు;
ఎవని పాసమునకో చేసాచు సరికాదిది
శివభక్తులకు; వడ్రంగి మాచలదేవిని
కులజను చేసెద మంచు కపిల గోవుపాలును
రావణోచ్ఛిష్టమును వండి తినువారి నే మందు దేవా?
Translated by: Dr. Badala Ramaiah
Tamil Translation குலத்தில் அந்தணன், வேதியனைக் கொன்றவனைச் சார்ந்தவன்
யாரோ செய்த பாவத்திற்குத் தானே பொறுப்பேற்பான்
இவன் கடவுள் பக்தருக்கு இணையோ?
இவன் இலிங்க பக்தருக்கு இணையோ?
பொற்பசுவின் ஆமணக்கு இலையின் எஞ்சியுள்ள
பாலிலிருந்து கஞ்சியைச் செய்து உண்பவரை
என்னென்பேன் கூடல சங்கமதேவனே.
Translated by: Smt. Kalyani Venkataraman, Chennai
Marathi Translation
कुळ ब्राह्मणाचे असे, ब्रह्महत्या करतात.
दुसऱ्यांच्या पापाचे प्रायश्चित करुन स्वयं पाप करतात.
हे देवभक्तांच्या समान होतील? हे लिंगभक्तंच्या समान होतील?
सुतार माचलदेवीला कुलीन करण्याचे आश्वासन देवून,
सोन्याची गाय घेऊन, एरंडाच्या पानावर
उष्ट्या दूधात दूध भात करून सेवन करणाऱ्यांना
काय म्हणावे कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಉಂಬು = ; ಕಪಿಲೆ = ; ಕುಲ = ; ಕುಲಜೆ = ; ಕೂಳು = ; ಕೈಯಾನು = ; ದುಚ್ಚಿಷ್ಟ = ; ಬ್ರಹ್ಮೇತಿ = ; ಸಾರು = ; ಹಾರುವ = ; ಹೊನÀÄ್ನ = ;
ಕನ್ನಡ ವ್ಯಾಖ್ಯಾನ ಬ್ರಾಹ್ಮಣನು ದುಡ್ಡಿಗಾಗಿ ಹೊನ್ನಿಗಾಗಿ ಏನನ್ನಾದರೂ ಮಾಡಲು ಮತ್ತು ತಿನ್ನಲು ಹೇಸನೆಂಬುದು ಈ ವಚನದ ತಾತ್ಪರ್ಯ. ಕೂಡಲ ಸಂಗಮಾಂಕಿತದಲ್ಲಿ ಇಂಥ ವಚನಗಳನ್ನು ಬರೆದು ಬಸವಣ್ಣನವರಿಗೆ ಅಳಿಸಲಾಗದ ಕಳಂಕವನ್ನು ಹಚ್ಚುತ್ತಿರುವೆವೆಂಬುದನ್ನು ಅಂದಿನ ಪ್ರಕ್ಷೇಪಕಾರರು ತಿಳಿಯಲಿಲ್ಲ. ಅವರ ಒಂದೇ ಒಂದು ಹೊಟ್ಟೆ ಉರಿಯೆಂದರೆ-ತಮಗಿಲ್ಲದ ಸವಲತ್ತು ಬ್ರಾಹ್ಮಣನಿಗಿದೆಯೆಂಬುದೇ ಆಗಿದೆ. ಮಾಚಲದೇವಿಯ ಪ್ರಸಂಗದಲ್ಲಿರುವ ಬ್ರಾಹ್ಮಣರ ನಡೆವಳಿ ನಿಜವೇ ಸುಳ್ಳೇ ಎಂಬುದು ಪ್ರಸ್ತುತವಲ್ಲ. ಅಂಥದೊಂದು ಕಥೆಯನ್ನು ಬಳಸಿಕೊಂಡು ಶಿವಭಕ್ತರಲ್ಲಿ ಬ್ರಹ್ಮಾಣದ್ವೇಷವನ್ನು ಬಿತ್ತುವುದೇ ಮಹೋದ್ದೇಶವಾಗಿತ್ತು ಪ್ರಕ್ಷೇಪಕಾರರಿಗೆ.
ಹೇಗೂ ಈ ವಚನದಲ್ಲಿರುವುದು ಬ್ರಾಹ್ಮಣವಿಮರ್ಶೆಯಲ್ಲ ದೂಷಣೆ. ಇಂಥ ದೂಷಣೆ-ಇದಿರ ಹಳಿಯಲು ಬೇಡ(ನೋಡಿ ವಚನ-236)ವೆಂದ ಬಸವಣ್ಣನವರದೆಂದು ಕ್ಷಣವಾಗಲಿ ನಂಬುವುದು ಅವಿವೇಕ.
ವಿ : ಮಾಚಲದೇವಿಯ ಕಥೆ : ವಿಪ್ರಕುಲದ ಆದಿಯನೆತ್ತಿ ಖಂಡಿಸುತ್ತಿರ್ದನು : ಬಡಗಿ ಮಾಚಲದೇವಿಯ ಕುಲಜೆಯ ಮಾಡಬೇಕೆಂದು ನಳಚಕ್ರವರ್ತಿ ಕೇಳಲು ಹದಿನೆಂಟು ಲಕ್ಷ[+ಣR]ದಲ್ಲಿ ಹೊನ್ನ ಗೋವ ಮಾಡಿಸಿ-ಆ ಸತಿಯು ಅದರಲ್ಲಿ ನುಸಿದು ಬಂದರೆ ಜನ್ಮವಳಿದೀತೆಂದು ಪೇಳಲು-ನಳನು ನನಗೆ ಸಂದೇಹವೆನಲು. ಅದಕ್ಕೆ ವಿಪ್ರರು ಮೂರು ಕೊಪ್ಪರಿಗೆಯಲ್ಲಿ ಹಾಲು ತುಂಬಿಸಿ ಆಕೆಯನದರಲ್ಲಿ ಮುಳುಗಿಸಿ ಸರ್ವಾಂಗವೂ ತೊಳೆದು ಕುಲವಳಿಯಿತು-ಸಂಕಲ್ಪ ಬೇಡವೆಂದು ನೃಪನಿಗೆ ಹೇಳಿ-ಅಂಗದ ಉಚ್ಚಿಷ್ಟದಾ ಹಾಲೊಳಗೆ ರಾಜಾನ್ನದಕ್ಕಯನ್ನು ಹಾಕಿ ಹರಳ ದಂಟ ಸಟ್ಟುಗವ ಮಾಡಿ ತೊಳಸಿ ಪಾಯಸವನಟ್ಟುಂಡು-ಉಳಿದ ಹಾಲ ಮಂತ್ರಿಸಿ ಕುಡಿದು ಕುಲ ಶುದ್ಧವಾಯಿತ್ತೆಂದು ಅಬದ್ಧವ ಭೂಪಗೆ ಪೇಳಿ-ಹೊನ್ನ ಗೋವ ಕಡಿದು ಭಾಗೆಯ ಮಾಡುವಾಗ-ಮುನ್ನ ವಿಪ್ರರ ತಂದೆ ದಧೀಚಿ, ಆತಂಗೆ ಮಾತಂಗಿ, ರೇಣುಕೆ (ಎಂಬ ಹೆಂಡತಿಯರು. ಮಾತಂಗಿಯ ಮಕ್ಕಳೆ ವಿಪ್ರರು, ರೇಣುಕೆಯ ಮಕ್ಕಳೇ ಶ್ವಪಚರು. ಅದು ಕಾರಣ ಹೊನ್ನ ಗೋವ ಕಡಿವಾಗ ಶ್ವಪಚರು ದಾಯದ್ಯಭಾಗೆಯ ಬೇಡಿ ಕದನವ ಮಾಡಲು-ಅಷ್ಟರೊಳಗೆ ದಧೀಚಿ ಬಂದು ಕೊಂಬು ಕೊಳಗು ತಲೆ ಬಾಲವ ಶ್ವಪಚರಿಗೆ ಕೊಟ್ಟು ಉಳಿದ ಹೇಹವನ್ನು ನೀವು ತೆಗೆದುಕೊಳ್ಳಿ ಎಂದು ವಿಪ್ರರಿಗೆ ಕೊಡಲು-ಅವರು ಅದರೊಳಗೆ ಹದಿನೆಂಟು ಭಾಗೆಯ ಮಾಡಿಕೊಂಡು-ತಂದೆಯಾದ ದಧೀಚಿಯು ಊರೊಳಗೆ ವಿಪ್ರರನಿಟ್ಟು ವೇದಾಗಮವ ಕಲಿಸಿ ಯಜ್ಞಾದಿ ಮೊದಲಾದ ಎಂಬತ್ತೆಂಟು ಲೌಕಿಕಾಚಾರದಲ್ಲಿ ಇರಿಯೆಂದು ಇರಿಸಿದನು. ಶ್ವಪಚರನು ಊರ ಹೊರಗೆ ಇಟ್ಟು ಕೂಲಿಯ ಮಾಡಿದುಡಿದುಣ್ಣಿ ನೀವು ಸಜ್ಜನರು-ದುರ್ಜನರಾದ ವಿಪ್ರರ ಕಂಡರೆ ಸಂಬೋಳಿ ಎನ್ನಿ ಎಂದು ಜಗಳವ ಬಿಡಿಸಿದನು (ಭೈರವೇಶ್ವರಕಾವ್ಯಕಥಾ ರತ್ನಾಕರ ಪುಟ 424-425).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು