•  
  •  
  •  
  •  
Index   ವಚನ - 584    Search  
 
ಮಾಹೇಶ್ವರನ ಜ್ಞಾನಿಸ್ಥಲ - ಪುರಾಣ
ನರಜನ್ಮದಲ್ಲಿ ಹುಟ್ಟಿ ಲಿಂಗಮುಖವನರಿಯದೆ ಉದಮದ ಸೊಕ್ಕಿ ತಲೆಗೇರಿತ್ತೆ, ಅಯ್ಯಾ! `ಜೀವೋ ಜೀವೇನ ಭಕ್ಷ್ಯತೇ', ಕರ್ಮಕರ್ಮದಲಿಪ್ಪೆಯಯ್ಯಾ! ಅಂದೊಮ್ಮೆ ದಕ್ಷನು ಹೋತನ ಕೊಂದಲ್ಲಿ- ಘೋಳಿಡಲಿ ಘೋಳಿಡಲಿಕೆ ತಂದಿಕ್ಕೆ ಅಕ್ಕಿತ್ತೆ! ನಿಮ್ಮ ವೇದಶಾಸ್ತ್ರಂಗಳು ಮೂರುತಿಗೊಂಡಲ್ಲಿ ಚತುರ್ವೇದಿಗಳಿಗೊಮ್ಮೆ ಅಕ್ಕಿತ್ತೆ ಅಯ್ಯಾ ನಮ್ಮ ಕೂಡಲಸಂಗನನರಿಯದ ಕಾರಣ ನಾಯಕನರಕದಲ್ಲಿಕ್ಕಿತ್ತೆ ಅಯ್ಯಾ!
Transliteration Narajanmadalli huṭṭi liṅgamukhavanariyade udamada sokki talegēritte, ayyā! `Jīvō jīvēna bhakṣyatē', karmakarmadalippeyayya! Andom'me dakṣanu hōtana koṇḍalli- ghōḷiḍali ghōḷiḍalike tandige akkitte! Nim'ma vēdaśāstragaḷu mūrutigoṇḍalli caturvēdigaḷigom'me akkitte ayyā nam'ma kūḍalasaṅgamadēvaranariyada kāraṇa nāyakanarakadallikkitte ayyā!
Manuscript
English Translation 2 Born of a human womb, and ignorant Of what is Liṅga's face, Your swollen pride has gone, Sir, to your head! 'A life by life consumed': so you. Sir, dwell In Karma upon Karam once on a time, When Dakṣa slew a ram while it cried and cried: Did he digest it? When your Vedas and Śastrās were Made manifest, did the caturvãdis digest it Sir! Because they knew not Our Kūḍala Saṅgama, They were thrust into arch-hell, Sir! Translated by: L M A Menezes, S M Angadi
Hindi Translation नरजन्म पाकर लिंगमुख न जानने से उन्मत्त मद सिर पर चढा हुआ है । ‘जीवो जीवेन भक्ष्यते’ तुम कर्म कर्म जानने में से ही रहते हो ! उस दिन जब दक्ष ने भेड की हत्या की और वह क्रंदन कर रहा था, तब वह उसे जीर्ण कर सका? जब वेदशास्त्र मूर्तिमान हुए तब चतृर्वेदी उन्हें जीर्ण कर सके? मम कूडलसंगमदेव को न जानने के कारण वे नायक नरक में डाले गये ॥ Translated by: Banakara K Gowdappa
Telugu Translation నరజన్మమున బుట్టి లింగము చూడక మదము తలకెక్కెనయ్యా! ‘‘జీవో జీవేన భక్ష్యతే ‘‘ కర్మ కర్మయందుండెనయ్యా! దక్షు డొకపరి గోడు గోడన హోతను చంపె వేదశాస్త్రంబులు రూపించు చతుర్వేదుల కిది జీర్ణమయ్యెనే అయ్యా? మా సంగని శరణుల తెలియని కారణమున నరకమున పడితిరి గదయ్యా! Translated by: Dr. Badala Ramaiah
Tamil Translation மனிதப்பிறவியை எய்தி, இலிங்கத்தை அறியாமல் உன்மத்தம் தலைக்கு ஏறியதோ ஐயனே? “ஜீவோ ஜீவேன பக்ஷ்ய தே” வினை, வினையையே அற்றுகிறாயன்றோ அன்று ஒருமுறை தட்சன் ஆட்டைக் கொன்ற பொழுது துயரத்துடன், துயரத்துடன் நடுங்கியதன்றோ வேதசாத்திரங்கள் வடிவம் கொண்டபொழுது நான்மறைவல்லோருக்கு நடுக்கம் வந்ததோ ஐயனே நம் கூடல சங்கமதேவனை உணராததால் கீழான நரகத்தை அடைந்தனர் ஐயனே. Translated by: Smt. Kalyani Venkataraman, Chennai
Marathi Translation मानवरुपात जन्म घेऊन, लिंगदेवाचे स्वरुप जाणले नाही. नशेने उन्मत्त झाला देवा ! `जीवो जीवेन भक्ष्यते` कर्माधीन झाला देवा ! दक्षाने बकऱ्याला बळी दिले. बकरा ओरडून म्हणाला वेद शास्त्रात हेच सांगितले आहे? वेद पठण करणाऱ्या चतुर्वेदिना यज्ञाचे फळ मिळाले देवा? आमच्या कूडलसंगमदेवाला न जाणल्याने घोर नरकात पडले देवा. Translated by Shalini Sreeshaila Doddamani
ಶಬ್ದಾರ್ಥಗಳು ಅರಿ = ತಿಳಿ; ಉದಮದ = ; ಕರ್ಮ = ; ಚತುರ್ವೇದಿ = ; ದಕ್ಷ = ; ನರ = ; ಭಷ್ಯ = ; ಸೊಕ್ಕಿ = ; ಹೋತ = ;
ಕನ್ನಡ ವ್ಯಾಖ್ಯಾನ ಶ್ರೇಷ್ಠವಾದ ಮನುಷ್ಯಜನ್ಮದಲ್ಲಿ ಸರ್ವಜೀವಮುಖವೂ ಲಿಂಗಮುಖವೆಂದರಿತು ಅವನ್ನು ಪಾಲನೆ ಪೋಷಣೆ ಮಾಡದೆ-ಜೀವವವು ಜೀವವನ್ನೇ ತಿಂದು ಬದುಕಬೇಕೆಂಬ ಹಿಂಸೆಯನ್ನೇ ಒಂದು ಸಿದ್ಧಾಂತ ಮಾಡಿದಿರಲ್ಲಾ ! ಹೋತನ್ನು-ಅದು ಅರಚುತ್ತ ಅರಚುತ್ತ ಒದ್ದಾಡುತ್ತಿರಲು-ಕೊಂದಿಕ್ಕೆಂದು ಹಿಂದೊಮ್ಮೆ ದಕ್ಷನಿಗೆ (ನಿಮ್ಮ ವೇದಶಾಸ್ತ್ರಗಳು) ಹೇಳಿದ್ದುಂಟೆ? ಆ ವೇದಶಾಸ್ತ್ರಗಳು ಮೂರ್ತಿವೆತ್ತು ಬಂದಾಗಲೂ ಆ ವೇದ ಫಲಗಳು ಆ ಚತುರ್ವೇದಿಗಳಿಗೆ ದಕ್ಕಿದವೇನು ? ದಕ್ಷಾಧ್ವರಧ್ವಂಸಿ ರುದ್ರಶಿವನನ್ನು ಸಾತ್ವಿಕ ಪೂಜಾಮಾರ್ಗದಿಂದ ಸುಪ್ರಸನ್ನನಾಗಿಸಿಕೊಳ್ಳಲರಿಯದ ಕಾರಣ ನೀವು ನರಕಭಾಜನರಾದಿರಿ. ಎನ್ನುತ್ತ ಬಸವಣ್ಣನವರು ಹಿಂಸಾರೂಪದ ಯಜ್ಞಯಾಗಗಳಿಂದ ಐಹಿಕ ಸುಖವಾಗಲಿ ಪಾರಮಾರ್ಥಿಕ ಪರಮ ಸುಖವಾಗಲಿ ದೊರೆಯದೆನ್ನುತ್ತಿರುವರು ವೈದಿಕರನ್ನು ಕುರಿತು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು