•  
  •  
  •  
  •  
Index   ವಚನ - 585    Search  
 
ಮಾಹೇಶ್ವರನ ಜ್ಞಾನಿಸ್ಥಲ - ಬ್ರಾಹ್ಮಣಿಕೆ
ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವನ ಮನೆಯಲ್ಲಿ ಕಿಚ್ಚೆದ್ದು ಸುಡುವಾಗ, ಬಚ್ಚಲ ನೀರ ಬೀದಿಯ ಧೂಳ ಹೊಯ್ದು ಬೊಬ್ಬಿಟ್ಟೆಲ್ಲರ ಕರೆವರಯ್ಯಾ! ಕೂಡಲಸಂಗಮದೇವಾ, ವಂದನೆಯ ಮರೆದು ನಿಂದಿಸುತ್ತಿರ್ದರಯ್ಯಾ!
Transliteration Kiccu daivavendu haviyanikkuva hāruvara maneyalli kicceddu suḍuvāga, baccala nīra bīdiya dhūḷa hoydu bobbiṭṭellara karevarayya! Kūḍalasaṅgamadēvā, vandaneya maredu nindisuttirdarayyā!
Manuscript
English Translation 2 In a brahmin house where they feed the fire as a god. when the fire goes wild and burns the house they splash on it the water of the gutter and the dust of the street, beat their breasts and call the crowd. These men then forget their worship and scold their fire, O lord of the meeting rivers!

Translated by: A K Ramanujan
Book Name: Speaking Of Siva
Publisher: Penguin Books
----------------------------------
In the sacrificer's house, who pours Ghee and so forth upon the fire Believing it to be a god, Should fire break out and burn, they throw Sink water or street dust, and call The whole world to their aid with yells! They forget and blame Lord Kūḍala Saṅgama! Translated by: L M A Menezes, S M Angadi

Hindi Translation अग्नि को देव समझकर हवि अर्पित करनेवाले ब्राह्मण के घर में आग लगने पर मोरी का पानी, गली की धूल उडेलकर कोलाहल मचाते हुए सब को बुलाते हैं । कूडलसंगमदेव को वंदना करना भूल निंदा करते हैं ॥ Translated by: Banakara K Gowdappa
Telugu Translation అగ్గి దేవుడని హవిస్సును వ్రేల్చుపాఱునింట; నిప్పుబడి కాల బచ్చలనీరు వీధిదుమ్ము పోసి బొబ్బలిడి యెల్లర పిల్తురు కదయ్యా! సంగయ్యను కొల్చుట మఱచి నిందించు చుండిరి కదయ్యా! Translated by: Dr. Badala Ramaiah
Tamil Translation அழல் கடவுள் என நெய்யைச் சொரியும் வேதியரின் இல்லத்தில் நெருப்பு அடர்ந்து சுடும்பொழுது, கழிவுநீரை, புழுதியைப் பரப்பி கூச்சலிட்டு அனைவரையும் அழைப்பர் ஐயனே கூடலசங்கம தேவனே, வணங்குவதை மறந்து இகழ்ந்து கொண்டிருந்தனர் ஐயனே. Translated by: Smt. Kalyani Venkataraman, Chennai
Marathi Translation घृत हविद्वारे, चेतना दे हवनो जागवितो अवनि, अग्निदेव तोचि अग्निदेव, पेट घेता घरा विझविण्या सारा, करी बोंब टाकिताती धूळ, गटारीचे पाणी वद्य त्या निदोनि होती मूर्ख कूडलसंगमदेवा ! विपरीत लक्षणें अर्थ हीन जिणे, नोहे काय ? अर्थ - अग्निला देव मानून हवि आणि तूप चंदन इत्यादिद्वारे चेतना देऊन पृथ्वीवरील अग्निदेवास चेतवितात व तोच अग्निदेव घराला पेट घेता. त्यास विझविण्यासाठी रस्त्यावरील धूळ व गटारीचे पाण्याचा मारा करण्यासाठी बोंब ठोकून लोकांना बोलावितात. त्यांना पूजनिय व वंदनिय असलेल्या अशा अग्निचा हे अपमानच करतात. हे कूडलसंगम देवा ? (परमेश्वरा ) हा मूर्खपणा व वंदित्याणी निंदा करण्याचा प्रकार नव्हे काय? Translated by Rajendra Jirobe, Published by V B Patil, Hirabaug, Chembur, Mumbai, 1983 अग्नीस देव म्हणून आहुती देणाऱ्या विप्राच्या घराला आग लागली असता, मोरीचे पाणी, रस्त्याची धूळ टाकतात. बोंब मारुन हाका मारतात देवा. कूडलसंगमदेवाची प्रार्थना सोडून निंदा करतात. Translated by Shalini Sreeshaila Doddamani
ಶಬ್ದಾರ್ಥಗಳು ಕಿಚ್ಚು = ; ನಿಂದಿಸು = ; ಬೊಬ್ಬಟ್ಟು = ; ಹವಿ = ; ಹಾರುವ = ;
ಕನ್ನಡ ವ್ಯಾಖ್ಯಾನ ವಿಪರ್ಯಾಸ! ಕ್ಷುದಾಗ್ನಿಯ ತಾಪದಿಂದ ಬೇಸತ್ತು ಬಳಲಿ ‘ಅನ್ನಾ, ಅನ್ನಾ’ ಎಂದುಮೊರೆಯಿಡುವ ಹಸಿದವರ ಹೊಟ್ಟೆಯೇ ಯಜ್ಞಕುಂಡ. ಅಂತಹ ಯಜ್ಞಕುಂಡದಲ್ಲಿ ಅನ್ನವನ್ನು ಹಾಕಬೇಕು. ಆದರೆ ಹಾಗೆ ಮಾಡದೆ ಇಟ್ಟಿಗೆಗಳಿಂದ ಪ್ರತ್ಯೇಕ ಒಂದು ಯಜ್ಞಕುಂಡವನ್ನು ನಿರ್ಮಿಸಿ ಅದರಲ್ಲಿ ಹಾಲು ತುಪ್ಪವನ್ನು ಸುರಿಯುವರು ವೈದಿಕರು. ಇದನ್ನು ಕಂಡೇ ಕೆರಳಿದ ಬಸವಣ್ಣನವರು ಅಂತಹವರನ್ನು ಕುರಿತು ಕಟಕಿಯಾಡುತ್ತಿದ್ದಾರೆ ಈ ವಚನದಲ್ಲಿ. ವೈದಿಕನು ಅಗ್ನಿಯೇ ದೇವರೆಂದು ನಂಬಿ ವೇದ ಮಂತ್ರಗಳಿಂದ ಅದನ್ನು ಸುತ್ತಿಸುತ್ತಾ ಯಜ್ಞಕುಂಡದಲ್ಲಿ ಹವಿಸ್ಸನ್ನು ಹಾಕುವನು. ಒಂದು ವೇಳೆ ಅವನ ಭಕ್ತಿಗೆ ಮೆಚ್ಚಿ ಆ ಆಗ್ನಿದೇವ ಅವನ ಮನೆತುಂಬಾ ಪ್ರತ್ಯಕ್ಷನಾದರೆ ಆಗ ಅವನ ಸ್ಥಿತಿಯೇನು? ಅಗ್ನಿದೇವ ಪ್ರತ್ಯಕ್ಷನಾದನೆಂದು ಸಂತೋಷದಿಂದ ನಮಸ್ಕರಿಸುವನೇ? ಆಗಲೂ ವೇದ ಮಂತ್ರಗಳನ್ನು ಪಠಿಸಿ ಹವಿಸ್ಸನ್ನು ಹಾಕುವನೇ? ಅವೆಲ್ಲಾ ಇರಲಿ, ಅಯ್ಯೋ ಈ ಹಾಳು ಬೆಂಕಿಯು ಮನೆಯನ್ನೆಲಾ ಸುಡುತ್ತಿರುವುದಲ್ಲಾ ಎಂದು ನಿಂದಿಸುತ್ತಾ ಹವಿಸ್ಸಿನ ಬದಲು ಬಚ್ಚಲ ನೀರನ್ನು, ಬೀದಿಯ ಧೂಳನ್ನೂ ಅಷ್ಟೆ ಏಕೆ ಕೈಗೆ ಸಿಕ್ಕುದನ್ನೆಲ್ಲ ಎರಚುತ್ತಾ, ಬೆಂಕಿಯನ್ನು ಶಪಿಸಿ ಬೊಬೆಯಿಟ್ಟು ಊರಿನ ಜನರನ್ನೆಲ್ಲಾ ಕೂಗಿ ಕರೆಯುತ್ತಾನೆ. ಅದೇ ವೈದಿಕನ ಯಜ್ಞದಲ್ಲಿ ಹವಿಸ್ಸನ್ನು ಹಾಕುತ್ತಿರುವಾಗ ಇವನು ಶೂದ್ರ, ಇವನು ಹೊಲೆಯ, ಇವನು ಬಂದರೆ ಯಜ್ಞಶಾಲೆ ಅಪವಿತ್ರವಾಗುವುದು ಎಂದು ಜನರನ್ನು ಹೀನವಾಗಿ ಕಂಡು ದೂರ ಇರಿಸಿದ್ದ. ಆದರೆ ಅವನಿಗೆ ಈಗ ಅದೇ ಜನ ಬೇಕಾಗಿದ್ದಾರೆ. ಅವನೇ ಅವರನ್ನು ಕೂಗಿಕರೆಯುತ್ತಿದ್ದಾನೆ. ಎಂತಹ ವಿಪರ್ಯಾಸ! ‘..... ವಂದನೆಯ ಮರೆದು ನಿಂದಿಸುತಿರ್ದರಯ್ಯಾ ಕೂಡಲಸಂಗಮದೇವಾ’. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.