ಮಾಹೇಶ್ವರನ ಜ್ಞಾನಿಸ್ಥಲ - ಭಾವನಿಂದೆ
ವೇದವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ!
`ಭರ್ಗೋ ದೇವಸ್ಯ ಧೀಮಹಿ' ಎಂಬರು:
ಒಬ್ಬರಿಗಾಗಿ ವಿಚಾರವಿಲ್ಲ, ನೋಡಿರೇ,
ಕೂಡಲಸಂಗಮದೇವಾ.
Transliteration Vēdavanōdida vipraru honalalli hōda kēḍa nōḍirē!
`Bhargō dēvasya dhīmahi' embaru:
Obbarigāgi vicāravilla, nōḍirē,
kūḍalasaṅgamadēvā.
Manuscript
English Translation 2 Behold their plight
The priests' who have read the Vedas and
Go down the stream!
They say: 'I bow to the radiant God!'
But look, they have no thought at all
Of anybody else,
O Kūḍala Saṅgama Lord!
Translated by: L M A Menezes, S M Angadi
Hindi Translation वेदपाठी विप्र जो प्रवाह में बह गये-
उनकी दुर्दशा देखो
‘भर्गो देवस्य धीमहि’ कहते हैं,
किंतु उन्हें किसी का विचार नहीं है,
कूडलसंगमदेव ॥
Translated by: Banakara K Gowdappa
Telugu Translation వేదము చదివిన విప్రులేటిపాలౌట చూడుడో!
‘‘భర్గో దేవత్సధీమహి ‘‘ యందురే గాని ఆ యర్థము
విచారింవ డొక్క డైనా కూడల సంగమదేవా!
Translated by: Dr. Badala Ramaiah
Tamil Translation வேதத்தைப் பயின்ற வேதியர்
வெள்ளப் பெருக்கில் சென்ற கேட்டினைக்காணீர்
பர்கோ தேவஸ்ய தீமஹி என்று கூறுவர்
ஒருவருக்கும் விவேகமில்லை
கூடல சங்கமதேவனே, நோக்குவீர்
Translated by: Smt. Kalyani Venkataraman, Chennai
Marathi Translation
वेद पाठी विप्र, वाहूनिया गेले
""भर्गो देवस्य धिमहि"" व्यर्थ झाले
विवेकहिन सारे कूडलसंगमदेवा !
नको त्या स्वभावा, चिंतनेहि
अर्थ - देवाचे पठण करणारे ब्राह्मण नदीच्या पुरात वाहून गेले त्यांचे गायत्री मंत्र भर्गो देवस्य धीमहि’ कुचकामी ठरले. एकातही विवेक नाही. अशा विवेकहीनांची संगती नको. हे कूडलसंगमदेवा (परमेश्वरा) मी तुझ्या चरण चितनी सदैव असावा एवढीच माझ्यावर कृपा करावी.
Translated by Rajendra Jirobe, Published by V B Patil, Hirabaug, Chembur, Mumbai, 1983
वेदपाठी विप्र प्रवाहात वाहून गेले.
`भर्गो देवस्य धिमहि` म्हणतात.
कोणामध्येही विवेक नाही पहा
कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಕೇಡ = ; ಧೀನು = ; ಭರ್ಗೋ = ; ವಿಚಾರ = ; ವಿಪ್ರ = ; ವೇದ = ; ಹೊನಲು = ;
ಕನ್ನಡ ವ್ಯಾಖ್ಯಾನ ವೇದವನ್ನು ಓದುವ ಬ್ರಾಹ್ಮಣರು-ಭರ್ಗೋಃ ದೇವಸ್ಯ ಧೀಮಹಿ ಎಂದು ಗಾಯಿತ್ರೀ ಮಂತ್ರವನ್ನು ಪಠಿಸುವರು-ಆದರೆ ಭರ್ಗನೆಂದರೆ ಶಿವನೆಂಬುದನ್ನು ತಿಳಿಯದೆ ಶಿವಪೂಜೆಯಲ್ಲಿ, ತೊಡಗದೆ-ಯಜ್ಞವೆಂದು ಯಾಗವೆಂದು ಹಲವು ದೆವ್ವಗಳ ಹೆಸರಲ್ಲಿ ಮಾಡಿದ ಹೋಮದ ಹೊಗೆಯ ಪ್ರವಾಹದಲ್ಲಿ ಕೊಚ್ಚಿ ಹೋದರು ಎನ್ನುತ್ತ ವಿಪ್ರರ ಓದಿಗೂ ಆಚರಣೆಗೂ ಇರುವ ಅಂತರ ಅತ್ಯಂತ ಅವೈಚಾರಿಕವೆಂದು ಅಭಿಪ್ರಾಯಪಡುವರು ಬಸವಣ್ಣನವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು