ಮಾಹೇಶ್ವರನ ಜ್ಞಾನಿಸ್ಥಲ - ಬ್ರಾಹ್ಮಣಿಕೆ
ಎನಿಸನೋದಿದರೇನು? ಎನಿಸ ಕೇಳಿದರೇನು?
ಚತುರ್ವೇದಪಾಠ ತೀವ್ರವಾದರೇನು?
ಲಿಂಗಾರ್ಚನೆ ಹೀನನಾದರೆ; ಶಿವಶಿವಾ.
ಬ್ರಾಹ್ಮಣನೆಂಬೆನೆ? ಎನಲಾಗದು.
'ಜನ್ಮನಾ ಜಾಯತೇ ಶೂದ್ರಃ|| ಕರ್ಮಣಾ ದ್ವಿಜ ಉಚ್ಯತೇ
ಶ್ರುತೇನ ಶ್ರೋತ್ರಿಯಶ್ಚೈವ|| ಬ್ರಹ್ಮ ಚರತೀತಿ ಬ್ರಾಹ್ಮಣಃ'
ಎಂಬುದಾಗಿ, ಬ್ರಹ್ಮನಾಸ್ತಿ ಶ್ವಪಚರಧಮರೆಂದುದಾಗಿ,
ಇದು ಕಾರಣ, ಕೂಡಲಸಂಗಮದೇವಾ
`ವೇದಭಾರಭರಾಕ್ರಾಂತಾಃ ಬ್ರಾಹ್ಮಣಾ ಗರ್ದಭಾ' ಎಂಬೆನು.
Transliteration Enisikoṇḍirēnu? Enisidarēnu?
Caturvēdapāṭha tīvravādarēnu?
Liṅgārcane hīnanādare; śivaśivā.
Brāhmaṇanembene? Enalāgadu.
'Janmanā jāyatē śūdraḥ|| karmaṇā dvija ucyatē
śrutēna śrōtriyaścaiva|| brahma caratīti brāhmaṇaḥ'
embudāgi, brahmanāsti śvapacaradhamarendudāgi,
idu kāraṇa, kūḍalasaṅgamadēvā
`vēdabhārabharākrāntāḥ brāhmaṇa gārdabhā' embenu.
Manuscript
English Translation 2 What though you have read so much?
What though you have heard so much?
What though you know by heart
All the four Vedas inside out?
Good God! unless you do
Service to Liṅga , should I call
You a Brahman? No, never!
Since it is said, "A man
Is born a Śūdra, and becomes
A twice-born by his deeds;
A scholar by his lore; a Brahmin he
Who walks the Brahmin way";
Since it said, "The man
.In whom No Brahman is
Is low-born and beyond the pale",
Therefore, O Kūḍala Saṅgama Lord,
They say, "The Brahmin is the ass
Who carries Vedas as a load",
Translated by: L M A Menezes, S M Angadi
Hindi Translation कितना पढ़कर भी क्या प्रयोजन?
कितना सुनकर भी क्या प्रयोजन?
चतुर्वेद पाठ तीव्र होने से क्या प्रयोजन?
शिव शिव लिंगार्चन न करनेवालों को
ब्राह्मण कह नहीं ? कदापि नहीं ।
“जन्मना जायते शूद्रः कर्मणा द्विज उच्यते ।
श्रुतेन श्रोत्रियश्र्चैव ब्रह्म चती ब्राह्मणः॥”
यह भी कहा जाता है, ‘ब्रह्म नास्ति श्वपचरधमः’
इस कारण से, कूडलसंगमदेव,
मैं कहता हूँ, “वेदभारभराक्रांताः ब्राह्मणाः गार्दभाः” ॥
Translated by: Banakara K Gowdappa
Telugu Translation ఎంత చదివినా? ఎంత, వినినా? ఏమి ఫలము?
చతుర్వేదపారగుడైన నేమి?
లింగార్చనావిముఖుడయ్యెనా; శివశివా,
వాని నెట్లు బ్రాహ్మణుడందు?
‘‘జన్మనా జాయతే శూద్రః కర్మణా ద్విజ ఉచ్యతే
శ్రుతేన శ్రోత్రియశ్చైవ బ్రహ్మంచరతి బ్రాహ్మణః’’
కాన బ్రహ్మ బాహ్యుడధముడు దేవా! -
‘‘వేద భార భరాంతా? బ్రాహ్మణా గర్దబా’’ యందు.
Translated by: Dr. Badala Ramaiah
Tamil Translation எதைப் படித்தால் என்ன
எதைக் கேட்டால் என்ன
நான்கு மறைகளை விரைந்து கற்றாலென்ன
இலிங்க அர்ச்சனை செய்யவில்லை எனின்
சிவனே, சிவனே அந்தணன் என்பேனோ?
கூறக்கூடாது
“ஜன்மனா ஜாயதே சூத்ர கர்மணா த்விஜ உச்யதே
ச்ருதேன ச்ரோத்ரியச்சைவ ப்ரஹ்மணா சரதி ப்ராஹ்மண
என்பதால் ப்ரஹ்ம நாஸ்தி ச்வபசரதமரெம்
எனவே கூடல சங்கம தேவனே
வேத பார ப ராக்ராந்தா ஸ வை ப்ராஹ்மண
கார்தபா இவ என்பேன் ஐயனே
Translated by: Smt. Kalyani Venkataraman, Chennai
Marathi Translation
अनंत वाचुनि लिहूनि ऐकुनि
बहुश्रुत होऊनि, काय कीजे ?
विद्यावंत आणि बहुश्रुत दोन्ही
होन लिंगार्चनि, चतुर्वेदी
देव वेडे सर्व डोईभार होती
हीन गर्दभ जाती, ब्राह्मण ते
""जन्मना जायते"" कळेल वाचून
""भाराकांता ब्राह्मणः "" धरणी भार
शोल्क: जन्मना जायते शूद्रः कर्मणाद्विज उच्यते ।
श्रुतेन श्रोत्रियश्चैव ब्रह्म चरति ब्राह्मणः ॥
म्हनून: ""वेदमारभराक्रांता ब्राह्मणाः गर्दभाः ॥
कूडलसंगमदेवा ! मतीहीन चांडाळ
शरणापरि निर्मळ, कैसे होती ?
अर्थ - बहूत वाचून आणि श्रवण करुन श्रोते ब्रह्मनिष्ठ होऊन जर ते आचारहीन असतील तर अशांना हीन समजले जाते. त्याप्रमाणे वेदाचे वेडे, लिंगार्चनाचे अर्थ न जाणणारे हीन चतुर्वेदी वेडेपीर डोईभार व धरणीभारच समजावे. कारण अशा मतीहीन चांडाळांना श्लोकातील अर्थ कळला नाही असेच म्हणावे लागले. म्हणून हे कूडलसंगमदेवा! अशांना मी गर्दभच (गाढव) म्हणेन.
Translated by Rajendra Jirobe, Published by V B Patil, Hirabaug, Chembur, Mumbai, 1983
खूप वाचले म्हणून काय झाले?
खूप ऐकले म्हणून काय झाले?
चतुर्वेद पाठ केला म्हणून काय झाले?.
लिंगार्चनाहीन झाले, शिवशिवा !
यांना ब्राह्मण म्हणता येईल? येणार नाही.
जन्मना जायते क्षुद्रः कर्मणा द्विज उच्यते।
श्रुतेन श्रोत्रियश्चैव ब्रह्म चरीत ब्राह्मणः।
म्हणून लिंगाला न मानणारे श्वपच अधम आहेत
कूडलसंगमदेवा
त्यामुळे म्हणतो `वेदभारभराक्रांता सब्राह्मणाः गर्दभाः`
Translated by Shalini Sreeshaila Doddamani
ಶಬ್ದಾರ್ಥಗಳು ಅರ್ಚನೆ = ಪೂಜೆ; ಉಚÀ್ಯ = ; ಎನಿಸು = ; ಚತುರ್ವೇದ = ; ಚರಡಿ = ; ಜನ್ಮ = ; ತೀವ್ರ = ; ದ್ವಿಜ = ; ನÁಸ್ತಿ = ; ಶÀÄ್ರತ = ; ಶೂದ್ರ = ; ಶ್ಚೆöÊವ = ; ಶ್ರೋತ್ರಿ = ; ಶ್ವಪಚ = ; ಹೀನ = ;
ಕನ್ನಡ ವ್ಯಾಖ್ಯಾನ ಬ್ರಾಹ್ಮಣ ಎನ್ನುವುದು ಕೇವಲ ಹುಟಿನಿಂದಾಗಲಿ, ಶಾಸ್ತ್ರಪುರಾಣಾದಿಗಳನ್ನು ಕೇಳುವುದರಿಂದಾಗಲಿ, ಚತುರ್ವೇದಗಳನ್ನೂ ಬಾಯಿಪಾಠ ಮಾಡುವುದರಿಂದಾಗಲಿ ಸಿದ್ಧಿಸುವುದಿಲ್ಲ. ಲಿಂಗಾರ್ಚನೆ ಮಾಡದವನು ಬ್ರಾಹ್ಮಣನಾಗುವುದಿಲ್ಲ. ಜನ್ಮದಿಂದ ಎಲ್ಲರೂ ಶೂದ್ರರೇ, ಕ್ರಿಯೆಯಿಂದ ಬ್ರಾಹ್ಮಣರಾಗುತ್ತಾರೆ. ಬ್ರಾಹ್ಮಣನೆಂದರೇನು? (ಪರಶಿವ)ಬ್ರಹ್ಮವನ್ನು ಉಪಾಸಿಸುವವನೆಂದರ್ಥ. ಆದ್ದರಿಂದ ಆ ಬ್ರಹ್ಮೋಪಾಸನೆಯಿಲ್ಲದವನು ಬ್ರಾಹ್ಮಣನಲ್ಲವಷ್ಟೇ ಅಲ್ಲ-ಅವನು ಶ್ವಪಚ. ಕೇವಲ ವೇದಭಾರ ಹೊತ್ತುವನು-ಕತ್ತೆಯೇ ಹೊರತು ಬ್ರಾಹ್ಮಣನಲ್ಲ.
ಶಿವಪಂಥದವರನ್ನು ಶೂದ್ರರೆಂದೂ ಶ್ವಪಚರೆಂದೂ ಜಾತಿಭೇದ ಮಾಡುತ್ತಿದ್ದ ಬ್ರಾಹ್ಮಣರಿಗೆ ಬಸವಣ್ಣನವರು ಹಾಕಿದ ಸವಾಲಿದು.
ಯಾವನೂ ಕೇವಲ ಹುಟ್ಟಿನಿಂದ ಬ್ರಾಹ್ಮಣನಾಗಲಿ ಶ್ವಪಚನಾಗಲಿ ಆಗುವುದಿಲ್ಲ-ಲಿಂಗಾರ್ಚನಾ ಕ್ರಿಯೆಯುಳ್ಳವನು ಬ್ರಾಹ್ಮಣ ಇಲ್ಲದವನು ಶ್ವಪಚ ಎಂಬ ಬಸವಣ್ಣನವರ ನಿಲುವು ಅವರು ನಡೆಸಿದ ಕ್ರಾಂತಿಯ ತಿರುಳೇ ಆಗಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು