•  
  •  
  •  
  •  
Index   ವಚನ - 588    Search  
 
ಮಾಹೇಶ್ವರನ ಜ್ಞಾನಿಸ್ಥಲ - ಬ್ರಾಹ್ಮಣಿಕೆ
ನಿಮ್ಮನರಿಯದ ಕಾರಣ ಕೈಯಲ್ಲಿ ಹುಲ್ಲು! ನಿಮಗೆರಗದ ಕಾರಣ ಕೊರಳಲ್ಲಿ ನೇಣು!! ಹಿಂಡಲೇಕೋ? ತೊಳೆಯಲೇಕೋ? ಮುಳುಗಿ ಮುಳುಗಿ ಮೂಗ ಹಿಡಿಯಲೇಕೋ? ಕೂಡಲಸಂಗನ ಶರಣರಲ್ಲಿ ಡೋಹಾರ ಕಕ್ಕಯ್ಯನಾವ ತೊರೆಯಲ್ಲಿ ಮಿಂದ?
Transliteration Nim'manariyada kāraṇa kaiyalli hullu! Nimageragada kāraṇa koraḷalli nēṇu!! Hiṇḍalēkō? Toḷeyalēkō? Muḷugi muḷugi mūga hiḍiyalēkō? Kūḍalasaṅgana śaraṇaralli dōhara kakkayyanāva toreyalli minda?
Manuscript
Music Courtesy:
English Translation 2 Because they know Thee not, they have Grass in their hands! Because they do not bow to Thee, they have A noose around their necks! What means this washing and this wringing! This holding of the nose to dip and dip? Among Kūḍala Saṅga's Śaraṇās , In what stream did Ḍ'̔ōhara Kakkayya dip? Translated by: L M A Menezes, S M Angadi
Hindi Translation तुमको न जानने के कारण हाथ में घास है ! तुमको न जानने के कारण गले में पाश है ! निचोडना क्यों? धोना क्यों? नाक पकडकर बारंबार डुबकी क्यों लगानी है? कूडलसंगमेश के शरणों में डोम कक्कय्या किस नदी में नहाया? Translated by: Banakara K Gowdappa
Telugu Translation నిన్ను తెలియని కారణమున చేతికి గడ్డి వచ్చె! నిన్ను దెలియని కారణమున మెడలో త్రాడు బడె; ఉతుకు టేటికో! పిండు టేటికో! మునుగు చేటుకో ముక్కు పట్టు టేటికో! మా శరణులందు డోహర కక్కయ్య యే యేటమునిగెనయ్యా? Translated by: Dr. Badala Ramaiah
Tamil Translation உம்மை அறியாததால் கையிலே புல் உம்மை வணங்காததால் கழுத்திலே முப்புரி நூல் பிழிவது எதற்கோ? கசக்குவது எதற்கோ? மூழ்கி, மூழ்கி மூக்கைப் பிடிப்பது எதற்கோ? கூடலசங்கனின் அடியார்களில் சண்டாளன் கக்கையன் எந்தத் துறையில் நீராடினன்? Translated by: Smt. Kalyani Venkataraman, Chennai
Marathi Translation तुझी नाही जाण, हराळी दर्भ हाती दोर गळ्याभोवती फासाचा तो तया धुऊ काय ? तया पिळू काय ? कुठे बुडू हा ऽऽय! कशपाई ? कोठे होता बुडला ? कक्कय्या तो ढोर तोचि शरण धीर, शुद्ध सत्व कूडलसंगमदेवा ! यज्ञोपवित हीन धन्य धन्य शरण विश्वामाजी अर्थ - धन्य ते अज्ञानी जन ! जे परमेश्वराला न जाणता हातात हराळी दर्भ घेतात आणि गळ्यात जानवे म्हणून जणू फासाचा दोर घालून स्वतःला महान भक्त म्हणून मिरवून घेतात. शिवाय नाक धरून पाण्यात बुडतात. अशाने त्या अज्ञानी लोंकांचे शुद्धीकरण होत नसते. माझ्या कूडलसंगमदेवाचा (परशिवाचा) शरण ढोर कक्कय्या कोणत्या नदीत बुडाला होता? त्याच्या गळ्यात कसले दोर होते ? किंवा हातात कसले दर्भ हराळे होते ? पण तो परशिवास निजी शुद्ध सत्वामुळे अतिप्रीय ठरला. Translated by Rajendra Jirobe, Published by V B Patil, Hirabaug, Chembur, Mumbai, 1983 तुम्हाला न जाणल्याने हातात गवत ठेवतात. तुमच्यावर श्रध्दा नसल्याने गळ्यात जाणवे घालतात. पिळतो कशाला? धुतोस कशाला ? नाक दाबून डुबकी मारुन काय उपयोग? कूडलसंगमदेवाचे शरण डोहर कक्कय्यांनी कोणत्या नदीत स्नान केले ? Translated by Shalini Sreeshaila Doddamani
ಶಬ್ದಾರ್ಥಗಳು ಎರಗು = ; ತೊರೆ = ; ನೇಣು = ; ಮಿಂದ = ;
ಕನ್ನಡ ವ್ಯಾಖ್ಯಾನ ಧರ್ಮವೆನ್ನುವುದು ಹೃದಯಕಮಲದಲ್ಲಿ ಹೊಮ್ಮುವ ಮಕರಂದವೆಂದರಿಯದ ಮೂಢರು-ಅದನ್ನು ಮೈಯಿಂದ ಒಸರುವ ಬೆವರೆಂದು ಭ್ರಮಿಸಿ ವ್ಯರ್ಥಾಚರಣೆಯಲ್ಲಿ ಆಯಾಸಗೊಳ್ಳುವರು. ಕೈಯಲ್ಲಿ ದರ್ಭೆಯ ಹುಲ್ಲನ್ನು ಹಿಡಿಯುವುದು, ಯಜ್ಞಸೂತ್ರವನ್ನು ಕೊರಳಿಗೆ ಸುತ್ತುವುದು, ಹಿಂಡುವುದು, ತೊಳೆಯುವುದು, ಮುಳುಗುವುದು ಮೂಗು ಹಿಡಿಯುವುದು ಮುಂತಾದ ದೇಹಶ್ರಮದಲ್ಲಿ ಅವರು ಬಳಲುವರು. ಇಂಥವರನ್ನು ಕಂಡರೆ ಏನಾದರೊಂದು ಆಪತ್ತೊದಗಿದಾಗ ಗಡಬಡಿಸುವ ಭೀತಜೀವಿಗಳ ನೆನಪಾಗುವುದೇ ಹೊರತು-ಧರ್ಮ ಶ್ರದ್ಧೆಯಿಂದ ಮಿಂಚುವ ಸಂಯಮ ಶಾಂತಿ ದಾರ್ಢ್ಯವನ್ನು ಅವರಲ್ಲಿ ಕಾಣಲಾಗುವುದಿಲ್ಲ. ಧಾರ್ಮಿಕ ಕ್ಷೇತ್ರದಲ್ಲಿ ಇಷ್ಟು ತಮೋಗುಣವೂ ರಾಜಸ ಚಟುವಟಿಕೆಯೂ ತುಂಬಿದ್ದ ಕಾಲಕ್ಕೆ-ಡೋಹರಕಕ್ಕಯ್ಯ ಮುಂತಾದ ಶಿವಶರಣರು-ತಾವು ಕೀಳುಜಾತಿಯವರೆಂದು ತೇಜೋವಧೆಗೆ ಒಳಗಾಗುತ್ತಿದ್ದ ವಿಷಮ ಪರಿಸ್ಥಿತಿಯಲ್ಲಿಯೂ-ಆತ್ಮವಿಶ್ವಾಸದಲ್ಲಿ ನಿಶ್ಚಲವಾಗಿ ನಿಂತು ಧರ್ಮಕ್ಕೆ ನೇರವಾಗಿ ನಡೆಯಲು ಬೇಕಾದ ಅವಾರ್ಯಚೇತನವನ್ನು ಆತ್ಮಬಲದಿಂದ ಪಡೆದರೇ ಹೊರತು ಮಡಿಮೈಲಿಗೆ ಮತ್ತು ಜಪತಪಾದಿ ಗತಾನುಗತಿಕ ದೈಹಿಕ ಕುಚೇಷ್ಟೆಗಳಿಂದಲ್ಲವೆಂಬುದನ್ನು ಬಸವಣ್ಣನವರು ನಮಗೆ ಅವಧಾರಿಸಿ ಹೇಳುತ್ತಿರುವರು. ವಿ : ಬಸವಣ್ಣನವರು ವೈದಿಕರ ಜನಿವಾರವನ್ನು “ಕೊರಳಲ್ಲಿ ನೇಣು”ಎಂದು ಮರಳಿ ಮರಳಿ ಗೇಲಿ ಮಾಡಿರುವುದನ್ನು ಗಮನಿಸಿದರೆ-ಅವರ ಕಾಲಕ್ಕೆ ಶಿವಪಂಥದವರು ಲಿಂಗವನ್ನು ಈಗಿನಂತೆ ಒಂದು ಶಿವದಾರದ ಆಧಾರದಲ್ಲಿ ಕೊರಳಿಗೆ ನೇತುಬಿಡುತ್ತಿರಲಿಲ್ಲವೆನಿಸುವುದು. ನೋಡಿ ವಚನ-559. ಕೈಯಲ್ಲಿ ಹುಲ್ಲು ಎಂಬುದಕ್ಕೆ ವಿವರಣೆಗಾಗಿ ನೋಡಿ ವಚನ-579.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು