•  
  •  
  •  
  •  
Index   ವಚನ - 590    Search  
 
ಮಾಹೇಶ್ವರನ ಜ್ಞಾನಿಸ್ಥಲ - ಜಾತಿ
ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ. ಜಲ-ಬಿಂದುವಿನ ವ್ಯವಹಾರವೊಂದೇ: ಆಶೆಯಾಮಿಷ ರೋಷಹರುಷ ವಿಷಯಾದಿಗಳೆಲ್ಲಾ ಒಂದೇ. ಏನನೋದಿ, ಏನ ಕೇಳಿ, ಏನು ಫಲ? ಕುಲಜನೆಂಬುದಕ್ಕಾವುದು ದೃಷ್ಟ? 'ಸಪ್ತಧಾತು ಸಮಂ ಪಿಂಡಂ| ಸಮಯೋನಿ ಸಮುದ್ಭವಂ ಆತ್ಮಜೀವಸಮಾಯುಕ್ತ| ವರ್ಣಾನಾಂ ಕಿಂ ಪ್ರಯೋಜನಂ' ಎಂದುದಾಗಿ, ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ; ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ! ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ? ಇದು ಕಾರಣ, ಕೂಡಲಸಂಗಮದೇವಾ, ಲಿಂಗಸ್ಥಲವನರಿದವನೇ ಕುಲಜನು.
Transliteration Hoḷegaṇḍallade piṇḍada nelegāśrayavilla. Jala-binduvina vyavahāra ondē: Āśeyāmiṣarōṣaharuṣaviṣayādigaḷella ondē. Ēnanōdi, ēna kēḷi, ēnu phala? Kulajanembudakkāvudu dr̥ṣṭa? 'Saptadhātusamaṁ piṇḍaṁ| samayōnisamudbhavam ātmajīvasamāyuktaṁ| varṇānāṁ kiṁ prayōjanam' endu, kāsi kam'māranāda, bīsi maḍivāḷanāda; hāsanikki sāliganāda, vēdavanōdi hāruvanāda! Karṇadalli janisidavaruṇṭe jagadoḷage? Idu kāraṇa, kūḍalasaṅgamadēvā, liṅgasthalavanaridavane kulajanu.
Manuscript
Music Courtesy: Vachana Gaanamruta ℗ 2021 Pebble Productions Released on: 2017-11-09 Music Publisher: Pebble Productions Composer: Revayyaa Vasthramatha
English Translation 2 Unless the flow of blood appear, There is no harbourage Wherein the embryo may dwell. The function of the seed is e'er the same. Greed, lust, anger and joy, All other passions are the same. Whatever you read or hear, what fruit? What is the rule to judge a caste? "The embryo needs the seven elements; It is the same birth out of the same womb; Same the alliance of self and soul: What, then, the usefulness of caste?" You are a blacksmith if you heat; A washerman if you beat; A weaver, If you lay the warp; A Brahmin, if you read the Books! Is anybody in the world Delivered through the ear? Therefore, O Kūḍala Saṅgama Lord, The well-born is the man who knows The nature of Divinity! Translated by: L M A Menezes, S M Angadi
Hindi Translation रजश्वला हुए बिना पिंड के लिए आश्रय नहीं जल बिंदु का व्यवहार एक ही है । आशा, आमिष, रोष, हर्ष आदि विषय सब एक ही है । जो भी पढो, जो भी सुनो, क्या प्रयोजन है? कुलीन का क्या प्रमाण है? कहा जाता है कि “सप्तधातु समं पिंडम्। समयोनिसमुद्भवम् । आत्मजीव समायुक्तं। वर्णानां किं प्रयोजनम्।” तपाकर लोहार बना, धोकर धोबी बना; ताना तानकर जुलाहा बना, वेद पढ़कर ब्राह्मण बना; जग में कोई कान से पैदा हुआ? इस कारण से कूडलसंगमदेव, लिंगस्थल का ज्ञाता ही कुलीन है ॥ Translated by: Banakara K Gowdappa
Telugu Translation మైలగాకయె పిండమున కాశ్రయము లేదు; జలబిందువుల వ్యవహార మొక్కటే? ఆశ యభిలాష హర్షరోష విషయాదు లన్నియూ నొక్కటే; ఏమిచదివినా; ఏమి వినినా; ఏమిఫలము? కులజుడనుటకు ప్రమాణ మేది? ‘‘స ప్తధాతు సమం పిండం. సమయోని సముద్భవం ఆత్మజీవ సమాయుక్తం వర్ణానాం కింప్రయోజనం?’ కాచి కమ్మరియయ్యె; ఉతికి చాకలియయ్యె! చెవినుండి యూడిపడినవారు; కలరే భూమిపై ? సంగా! లింగ స్థలమెఱిగినవాడే కులజుడయ్యా! Translated by: Dr. Badala Ramaiah
Tamil Translation சுரோணிதம் சுக்கில இணைவின்றி பிண்டம் நிலைக்காது நீர், பிந்துவின் விவகாரமும் ஒன்றே விருப்பம், சினம், உவகை, புலனின்பம் அனைத்தும் ஒன்றே எதைப்படித்து, எதைக் கேட்டு என்ன பயன்? நற்குலத்தோன் என்பதற்கு எது அடையாளம்? “ஸப்த தாதுஸமம் பிண்டம் ஸமயோனிஸமுத்பவம் ஆத்ம ஜீவஸமாயுக்தம் வர்ணானாம் கிம் ப்ரயோஜனம்” என்பதால் காய்ச்சிக் கம்மாரனானான் வீசி வண்ணானானான், தறியை அசைத்து நெசவாளியானான், வேதம் ஓதி வேதியனானான் உலகத்தில் செவியில் பிறந்தவர் உண்டோ? எனவே கூடல சங்கமதேவனே, இலிங்கத்தலத்தை அறிந்தவனே நற்குலத்தோன். Translated by: Smt. Kalyani Venkataraman, Chennai
Marathi Translation पिडाला विटाळची आधार नश्वर देहाचा एकची व्यवहार अशा ? आमिष, हर्षादि रोष विषयाचे एकचि गुणदोष काय वचूनि काय ऐकूनि व्यर्थचि सारे कुलीनतेला नोहे कशाचा आधार ""सप्त धात्समं पिंड समयोनिसमुभ्ववं आत्मजी वसमायुक्तं वर्णानां किं प्रयोजनं"" या कारणें कूडलसंगमदेवा झालासे लोह तापवूनी लोहार झालासे कपड़े विणूनि विणकर शाबासे वेद पाहूनि ब्राह्मण झालासे कपडे धुवूनि परिट जन्मला कोण या जगात कानातून यास्तव लिंगस्थल जाणणारेच कुलीन अर्थ - स्त्री-पुरुषांना शुद्र म्हणल्यास कसलाही आधार नाही. मासिक पाळीच्या वेळी होणाऱ्या रक्तस्त्रावामुळे स्त्रीयांना विटाळ शुद्र म्हणतो. त्या रक्ताला अशुद्ध म्हणतो. पण त्याच रक्तात पिंड जीवात्मा वाढीला लागतो. शरिर, हाड, मांस व बुद्धीचा तेथे विकास होतो. कारण या नश्वर देहाचा आहार एकच आहे. त्यातील आशा, आमिष, रोष, हर्ष विषयाहि गुणधर्म एकच आहेत. कोणाला दीन वा शुद्र म्हणावे वा कोणाला कुलीन म्हणावे हे ग्रंथ, पुराण वाचूनही अर्थबोध होत नाही. कारण तेथे कोठेही याबद्दल आधार सापडला नाही. म्हणून कूडलसंगमदेवा ! ( परमेश्वरा ) हे स्पष्ट आहे की जात-पात, हीन- कुलीन कोणालाही ठरविता येणार नाही. कारण कोणीही या जगात कानातून जन्मलेले नाही. प्रत्येकाच्या जन्माचीच रीत आहे जातीभेद ज्यांच्या त्यांच्या व्यहारावरुन ठरविले गेले आहेत लोखंड तापविणारा लोहार झाला. धुणारा परीट झाला. कपडे विणणारा विणकर झाला. वेद वाचून पोट भरणारा ब्राह्मण झाला. म्हणून जन्माचे रहस्य जाणणारे लिंगपूजकच श्रेष्ठ कुलीन होत. Translated by Rajendra Jirobe, Published by V B Patil, Hirabaug, Chembur, Mumbai, 1983 गर्भ हाच पिंडाचा आधार आहे. जलबिंदूचा व्यवहार एकच आहे. आशा-आमिष, रोष-हर्ष सर्व विषय एकच आहे. वाचून ऐकून काय उपयोग आहे ? हेच कुलीनतेचे प्रमाण आहे ? सप्त धातुसमं पिंडं समयोनिसमुद्भयं। आत्मजीवसमायुक्तं वर्णानां किं प्रयोजनं। म्हणून लोखंड तापविणारा लोहार, कपडे धुणारा धोबी झाला. सुवर्णालंकार करणारा सोनार, वेदपाठ करणारा विप्र झाला. कानातून जन्मणारे जगात कोणी आहे ? म्हणून कूडलसंगमदेवा, लिंगस्थल जाणणारा श्रेष्ठ कुलीन. Translated by Shalini Sreeshaila Doddamani
Urdu Translation بہت غلیظ سہی ، وہ تورحم ِمادرہے ہرایک شخص اسی کو کوکھ سے نکلتا ہے پھراس کے بعد جومَرجائے آدمی تواسے وہ جا ملےگی جسےکوئی چاہتا ہی نہیں ہَو س اُمنگ طمع اُس اورغیظ وغضب شریک ہیں یہ سبھی آدمی کی فطرت میں کوئی بھی چیز کسی شخص کےخمیرمیں ہو بُری نظرسے جو دیکھیں تو فائدہ کیا ہے کسی کے پاس ضمانت توہونہیں سکتی ہوا ہے اُس کا جنم خاندانِ اعلٰی میں جودیکھیے توحقیقت میں جسم انساں کا اک ایسی چیزسے بنتا ہے جوبیان نہ ہو الگ الگ تونہیں ہوتی آتما سب کی جب اپنا حال ہےایسا تو اس زمانےمیں یہ ذات پات،یہ طبقات کیوں بناتے ہو کسی کوکہتے ہودھوبی، کسی کوآہن گر کوئی بناہے برہمن ، کوئی جُلاہا ہے بتاؤ کان سےہوتا ہےکیا کوئی پیدا اسی لیےتو یہ کہتے ہیں کوڈلا سنگا وہی ہےذات کا اُونچا جو لِنگ کوجانے Translated by: Hameed Almas
ಶಬ್ದಾರ್ಥಗಳು ಆಮಿಷ = ಮಧ್ಯ-ಮಾಂಸ ಮುಂತಾದ ಮನಸೆಳೆಯವ ಪದಾರ್ಥ, ಮೋಸ, ಲಂಚ; ಕಿಮ್ = ; ಕುಲಜ = ; ಗಂಡ = ; ದೃಷÀ್ಟ = ; ಧಾತು = ; ಪಿಂಡ = ; ರೋಷ = ; ವರ್ಣ = ; ವಿಷಯ = ; ಸಮುದ್ಭವ = ; ಹೊಲೆ = ;
ಕನ್ನಡ ವ್ಯಾಖ್ಯಾನ ಯಾವ ಗರ್ಭವೂ ಮುಟ್ಟುಗಂಡಲ್ಲದೆ ನಿಲ್ಲದು. ಗರ್ಭವಾವುದೂ ಶುಕ್ಲ-ರೇತದಿಂದಲ್ಲದೆ ಕಟ್ಟದು, ಆಶೆಪಡುವುದು ಹಲುಬುವುದು ಮುನಿಯುವುದು ನಲಿಯುವುದು ಅನ್ನನೀರಿಗಾಗಿ ಹತೊರೆಯುವುದು ಎಲ್ಲರಿಗೂ ಸಮಾನವೇ ಆಗಿದೆ. ಅಂದ ಮೇಲೆ ಒಬ್ಬನು ಶ್ರೇಷ್ಠ(ಜಾತಿಯವ)ನು, ಇನ್ನೊಬ್ಬನು ಕನಿಷ್ಠ(ಜಾತಿಯವ)ನೆಂದು ತಾರತಮ್ಯ ಮಾಡಲು ಆಧಾರವೇನು ? ಈ ಪ್ರಕೃತಿಸಿದ್ದವಾದ ವಿಚಾರವನ್ನು ತಿಳಿಯದ ಮೇಲೆ ಮೇಲುಜಾತಿಯವರೆಸಿಕೊಂಡ ಜನ ಓದು ಬರಹವನ್ನು ಕಲಿತುದಾದರೂ ಯಾವ ಮಣ್ಣಿಗಾಗಿ ? ಎಲ್ಲರ ದೇಹವೂ ಮಜ್ಜೆ ಮೂಳೆ ಮಾಂಸ ಮುಂತಾದ ಸಪ್ತಧಾತುಗಳಿಂದಲೇ ರಚಿತವಾಗಿದೆ, ಎಲ್ಲರೂ ಹುಟ್ಟಿ ಬರುವ ಮಾರ್ಗ ಯೋನಿಯೇ ಆಗಿದೆ. ಎಲ್ಲರ ಆತ್ಮ(ದೇಹ)ವೂ ಜೀವಸಹಿತವಾದುದೇ ನಿಶ್ಚಯ-ಹೀಗಿರುವಲ್ಲಿ ಇವನು ಬ್ರಾಹ್ಮಣ (ಇವನು ಕ್ಷತ್ರಿಯ, ಇವನು ವೈಶ್ಯ)ಇವನು ಶೂದ್ರ, ಇವನು ಅಸ್ಪೃಶ್ಯ ಇತ್ಯಾದಿಯಾಗಿ ಜನರನ್ನು ಒಬ್ಬರ ಮೇಲೊಬ್ಬರಂತೆ ಎತ್ತಿ ಕಟ್ಟುವುದರಿಂದ ಪ್ರಯೋಜನವೇನು? ಕಬ್ಬಿಣವನ್ನು ಕಾಸಿ ಬಡಿದವನು ಕಮ್ಮಾರನಾದ, ಬಟ್ಟೆಯನ್ನು ಬೀಸಿ ಒಗೆದವನು ಮಡಿವಾಳನಾದ, ಹಾಸನಿಕ್ಕಿ ನೇದವನು ನೆಯ್ಗೆಯವನಾದ, ವೇದವನ್ನು ಓದಿದವನು ಬ್ರಾಹ್ಮಣನಾದ. ಶೂದ್ರ ಮುಂತಾದವರು ಕಮ್ಮಾರಿಕೆ ಮುಂತಾದ ದೇಹಶ್ರಮದಲ್ಲಿ ತಮ್ಮ ಜೀವನೋಪಾಯವನ್ನು ಕಂಡು ಕೊಂಡಿದ್ದರೆ-ಬ್ರಾಹ್ಮಣರೆಸಿಕೊಂಡವರು. ತಮ್ಮ ಜೀವನೋಪಾಯವನ್ನು ದೇಹದಂಡನೆಯಿಲ್ಲದ ವೇದಾಧ್ಯಯನದಲ್ಲಿ ಕಂಡುಕೊಂಡಿರುವರು. ಇಷ್ಟರಿಂದ ಮೇಲುಕೀಳೇಕೆ ? ಬ್ರಾಹ್ಮಣರೂ ಹುಟ್ಟಿದ್ದು ಯೋನಿಯಲ್ಲೇ ಅಲ್ಲವೆ? ಕಿವಿಯಲ್ಲಿ ಹುಟ್ಟಿದವರು ಯಾರಿದ್ದಾರೆ? ಯಾರಿಗೆಲ್ಲ ಶಿವಜ್ಞಾನವಿದೆಯೋ ಅವರೆಲ್ಲಾ ಉತ್ತಮ ಜಾತಿಯವರೇ-ಇದರಲ್ಲಿ ಸಂಶಯವಿಲ್ಲ. ಜಾತಿಯಲ್ಲಿ ಭೇದವಿರುವುದೇ ಆದರೆ-ಅದು ನಿರ್ಣಯವಾಗುವುದು ಶಿವಜ್ಞಾನದಿಂದಲೇ ಹೊರತು ಜೀವನೋಪಾಯಕ್ಕೆ ಮಾಡುವ ಕಸುಬಿನಿಂದಲ್ಲವೆನ್ನುತ್ತಿರುವರು ಬಸವಣ್ಣನವರು. ಬಸವಣ್ಣನವರು ತಮ್ಮ ಕಾಲಕ್ಕೆ ಶಿವಪಂಥಕ್ಕೆ ಸೇರಿದ ಶೂದ್ರರನ್ನೂ ಅಸ್ಪೃಶ್ಯರನ್ನೂ ವಿದ್ಯಾಬುದ್ಧಿ ಕೌಶಲ್ಯ ಆಧ್ಯಾತ್ಮಿಕ ಸಿದ್ಧಿ ದೃಷ್ಟಿಯಿಂದ ಅತ್ಯುನ್ನತ ಮಟ್ಟಕ್ಕೆ (ಅಂದರೆ ಬ್ರಾಹ್ಮಣರ ಮಟ್ಟಕ್ಕೇ) ತಂದಿದ್ದರು. ಆದರೂ ಆ ಬ್ರಾಹ್ಮಣರು ಈ ಶಿವಪಂಥದ ಭಕ್ತಜನಾಂಗವನ್ನು ಶೂದ್ರ ಅಸ್ಪೃಶ್ಯ ಎಂದು ಮೊದಲಿನಂತೆಯೇ ಕೀಳಾಗಿ ಕಾಣುತ್ತಿದ್ದುದನ್ನು ಈ ವಚನದಲ್ಲಿ ಅತ್ಯಂತ ವೈಜ್ಞಾನಿಕವಾಗಿ ತರ್ಕಬದ್ಧವಾಗಿ ಖಂಡಿಸಿರುವರು ಬಸವಣ್ಣನವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು