ಮಾಹೇಶ್ವರನ ಜ್ಞಾನಿಸ್ಥಲ - ಬ್ರಾಹ್ಮಣಿಕೆ
ಹಾರುವನ ಭಕ್ತಿ ಓಡಿನೊಳಗಗೆಯ ಹೊಯಿದಂತೆ:
ಕೆಳಯಿಂಕೆ ಬೇರೂರದು, ಮೇಲೆ ಫಲವಾಗದು!
ಪ್ರಾಣಲಿಂಗದ ಪ್ರಸಾದವ ಮುಂದಿಟ್ಟುಕೊಂಡು
`ಪ್ರಾಣಾಯ ಸ್ವಾಹಾ, ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ,
ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ' ಎಂಬ
ಕರ್ಮಿಗಳನೇನೆಂಬೆ, ಕೂಡಲಸಂಗಮದೇವಾ?
Transliteration Hāruvana bhakti ōḍinoḷagageya hoydante:
Keḷayiṅke bērūradu, mēle phalavāgadu!
Prāṇaliṅgada prasādava mundiṭṭukoṇḍu
`prāṇāya svāhā, apānāya svāhā, vyānāya svāhā,
udānāya svāhā, samānāya svāhā' emba
karmigaḷanēnembe, kūḍalasaṅgamadēvā?
Manuscript
English Translation 2 The sacrificer's piety is like
Throwing a seedling in an earthen pot:
It cannot take
Root in the ground, nor yield a fruit above!
O Kūḍala Saṅgama Lord,
What shall I say of the ritualists
Who, keeping before them the gifts
Of Prāṇaliṅga, recite:
"Let this go to the breathing air,
This to the rectal, this
To the digestive air; this to the air
Within the throat, and this
To the air within the body at large?"
Translated by: L M A Menezes, S M Angadi
Hindi Translation ब्राह्मण की भक्ति तवे पर बीज बिखेरने की भाँति है,
न नीचे जड पकडते हैं, न ऊपर फल लगाते हैं।
प्राणलिंग का प्रसाद सामने रखकर
“प्राणाय स्वाहा, अपनाया स्वाहा, व्यानाय स्वाहा,
उदानाय स्वाहा,समानाया स्वाहा”
कहनेवाले कर्मियों को क्या कहूँ, कूडलसंगमदेव?
Translated by: Banakara K Gowdappa
Telugu Translation పాఱుని భక్తి పెంచుపై నారుపోసినట్లే,
క్రింద వేరూనదు పై కి ఫలమీదు!
ప్రాణలింగ ప్రసాదము ముందు పెట్టుకొని
‘‘ప్రాణాయ స్వాహా; అపానాయ స్వాహా; వ్యానాయ స్వాహా;
ఉదానాయ స్వాహా: సమానాయ స్వాహా ‘‘ అను,
కర్మఠుల నేమందునయ్యా! సంగయ్యా!
Translated by: Dr. Badala Ramaiah
Tamil Translation அந்தணரின் பக்தி ஓட்டினுள்ளே செடியை
நடுவதனையதாம் கீழே வேரூன்றாது
மேலே பயன்தராது, பிராணலிங்கத்தின்
பிரசாதத்தை முன்னிட்டுக் கொண்டு
“ப்ராணா ய ஸ்வாஹா ஸமானாய ஸ்வாஹா” எனும்
கர்மிகளை என்னென்பேன் கூடல சங்கமதேவனே.
Translated by: Smt. Kalyani Venkataraman, Chennai
Marathi Translation
ब्राह्मणाची भक्ती तव्यात रोपलावल्यासम,
खोलवर मूळ जात नाही. वर फळ लागत नाही.
प्राणलिंगाचा प्रसाद समोर ठेवून
`प्राणाय स्वाहा, अपानाय स्वाहा,
व्यानाय स्वाहा, उदानाय स्वाहा, समानाय स्वाहा.` म्हणतात.
अशा कर्मीना काय म्हणू कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಇಂಕೆ = ; ಉದಾನ = ; ಓಡಿನ = ; ಕರ್ಮಿ = ; ಪ್ರಸಾದ = ; ಪ್ರಾಣ = ; ವ್ಯಾನ = ; ಸ್ವಾಹಾ = ; ಹಾರುವ = ;
ಕನ್ನಡ ವ್ಯಾಖ್ಯಾನ ಬ್ರಾಹ್ಮಣರು ಪ್ರಾಣಾಧಾರ(ಪ್ರಾಣಪ್ರಸಾದ)ವಾದ ಅನ್ನವನ್ನು-ಅನ್ನವಿಲ್ಲದೆ ಕಂಗಾಲಾಗಿ ಪ್ರಾಣ ಬಿಡುತ್ತಿರುವ ಬಡಬಗ್ಗರಿಗೆ ಕೊಡದೆ ಹೋಮಾಗ್ನಿಯಲ್ಲಿ ಹಾಕಿ ಸುಡುತ್ತ-ಪ್ರಾಣಾಯ ಸ್ವಾಹಾ ಮುಂತಾದ ಮಂತ್ರಗಳನ್ನು ಬೊಗಳುವುದು ಅಸಹ್ಯಕರವೆಂದು ಬಸವಣ್ಣನವರು ಟೀಕಿಸುತ್ತಿರುವರು.
ಬ್ರಾಹ್ಮಣರ ಇಂಥ ನಿರರ್ಥಕ ಹವನಕ್ರಿಯೆ-ಇತ್ತ ಲೋಕೋಪಕಾರಿಯೂ ಆಗದೆ, ಅತ್ತ ಪರಲೋಕ ಪ್ರಾಪ್ತಿಯನ್ನೂ ಸಂಪಾದಿಸಿಕೊಡದೆ-ಮುಚ್ಚುಳದ ಹಿಡಿಮಣ್ಣಿನಲ್ಲಿ ಬಿತ್ತಿದ ಬೀಜದಂತೆ ಕೆಳಗೆ ಬಲವಾಗಿ ಬೇರನ್ನೂ ಬಿಡದೆ, ಮೇಲೆ ರಸವಾಗಿ ಫಸಲನ್ನೂ ಕೊಡದೆ ಅಂತರದಲ್ಲಿ ಬಿಳಿಚಿ ಹಾಳಾಗುತ್ತಿರುವುದೆಂಬುದು ಬಸವಣ್ಣನವರ ಅಭಿಪ್ರಾಯ.
ಬಾಹ್ಮಣರು ಭಕ್ತಿಯನ್ನು ನಿರ್ದಯಕರ್ಮವಾಗಿ ಆಚರಿಸಿ-ತಮ್ಮ ಅರ್ಚನಾದಿ ಆಧ್ಯಾತ್ಮಿಕ ಕ್ರಿಯಾ ಕಲಾಪದ ಘನತೆಯನ್ನೇ ಕುಂದಿಸಿಕೊಂಡಿರುವುದು ಶೋಚನೀಯ ವಿಚಾರ. ಮಾನವನ ಧೀಮಂತಿಕೆ ಮಾನವೀಯ ಕ್ರಿಯಾಭಿವ್ಯಕ್ತಿಯಿಲ್ಲದೆ ಹೇಗೆ ಭೀಕರವಾಗುವುದೆಂಬುದನ್ನು ಇಲ್ಲಿ ತಿಳಿಯಬೇಕಾಗಿದೆ.
ವಿ : ದೇವತೆಗಳಿಗೆ ಮತ್ತು ಪಿತೃಗಳಿಗೆ ಅರ್ಪಿಸಲು ಅಗ್ನಿಯಲ್ಲಿ ಆಹುತಿಕೊಡುವಾಗ ಸ್ವಾಹಾ ಎಂದೂ ಸ್ವಧಾ ಎಂದೂ ಉಚ್ಚರಿಸುವರು. ಈ ಸ್ವಾಹಾ ಮತ್ತು ಸ್ವಧಾ ಎಂಬ ಉಚ್ಚಾರಣೆಯಿಲ್ಲದ ಮನೆ ಶ್ಮಶಾನಪ್ರಾಯವೆಂಬುದು ಒಂದು ನಂಬಿಕೆ : “ಸ್ವಾಹಾ ಸ್ವಧಾಕಾರವಿವರ್ಜಿತಾನಿ ಶ್ಮಶಾನತುಲ್ಯಾನಿ ಗೃಹಾಣಿ ತಾನಿ.”
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು