ಮಾಹೇಶ್ವರನ ಜ್ಞಾನಿಸ್ಥಲ - ವಂಚನೆ
ನಾನು ಭಕ್ತ, ನಾನು ಪ್ರಸಾದಿ ಎಂದು
ವಿಪ್ರಕರ್ಮವ ಮಾಡುವೆ ಕರ್ಮೀ:
ಲಿಂಗದೇವನ ಮುಟ್ಟಿ ಮಜ್ಜನಕ್ಕೆರೆವ ಕೈಯಲು
ವಿಪ್ರನ ಕಾಲ ತೊಳೆವರೆ
ಲಿಂಗೋದಕ ಹೃದಯದಲ್ಲಿ,
ವಿಪ್ರನ ಕಾಲ ತೊಳೆದ ನೀರು ಮಂಡೆಯ ಮೇಲೆ!
'ಶ್ರೋತ್ರೋತ್ಕಟ ದುರಾಚಾರೀ| ಯಜ್ಞ ಕೂಪಸಘಾತಕಃ
ಉದ್ರಿದೈಕವಿಧಿಃ ಶಾಂತೇ| ವಿಪ್ರರೂಪೇಣ ರಾಕ್ಷಸಃ'
ಇದು ಕಾರಣ, ಕೂಡಲಸಂಗಮದೇವಾ,
ಇಂತಪ್ಪ ದುರಾಚಾರಿಗಳ ಮುಖವ ನೋಡಲಾಗದು.
Transliteration `Nānu bhakta, nānu prasādi' endu
viprakarmava māḍuve karmī:
Liṅgadēvana muṭṭi majjanakkereva kaiyalu
viprana kāla toḷevare
liṅgōdaka hr̥dayadalli,
viprana kāla toḷeda nīru maṇḍeya mēle!
'Śrōtkaṭa durācārī| yajñakūpasaghātakaḥ
udridaikavidhiḥ śāntē| viprarūpēṇa rākṣasaḥ'
idu kāraṇa, kūḍalasaṅgamadēvā,
intappa durācārigaḷa mukhava nōḍalāgadu.
Manuscript
English Translation 2 O ritualists, you perform your rites,
Claiming, "I am a devotee, I am
A maker of oblations": if you wash
A priest's feet with the hands
That touched Divinity and poured His bath-
It's Liṅga-water in your heart,
And on the head
The water that has washed a Brahmin's feet!
"He is a demon in a Brahmin's form
Who perpetrates the wicked deeds
The Vēdas sanction;
A butcher at the sacrificial post,
An enemy of the peace."
Therefore, O Kūḍala Saṅgama Lord,
One cannot bear to see
The faces fo such wicked ones!
Translated by: L M A Menezes, S M Angadi
Hindi Translation ‘मैं भक्त हूँ, मैं प्रसादी हूँ’ कहकर
तुम विप्र कर्म करते हो, कर्मि,
लिंगदेव का स्पर्श कर मज्जन करनेवाले कर से
विप्र के पैर धोने से लिंगोदक हृदय में होगा ,
विप्र पादोदक सिर पर!
श्रुत्यत्काट दुराचारी यज्ञकूपसघातकः ।
उद्रेकेण कृते, शांते, विप्ररूपेण राक्षसः ।
इस कारण से कूडलसंगमदेव,
ऐसे दुराचारियों का मुख नहीं देखना चाहिए ॥
Translated by: Banakara K Gowdappa
Telugu Translation భక్తుడనేను ప్రసాది నేనని విప్రకర్మను సల్పు కర్మఠుడా!
లింగదేవర ముట్టి మజ్జనము సేయు చేతుల
విప్రుని కాళ్ళు కడిగెదరే? ఎదపై లింగోదకము
తలపై విప్రునికాళ్ళు కడిగిన నీరు!
‘‘శ్రోత్రోత్కట దురాచారీ! యజ్ఞ కూపసఘాతకః
ఉద్రిదై కవిధిః శాంతే! విప్రరూపేణ రాక్షసః’’ కాన
ఇట్టి దురాచారుల ముఖము చూడరాదు.
Translated by: Dr. Badala Ramaiah
Tamil Translation “நான் பக்தன், நான் பிரசாதி” என வேதியருக்குப்
பணியாற்றும் கர்மியே.
இலிங்கத்தைத் தீண்டி, திருமஞ்சனமாற்றும் கையால்
வேதியர் பாதத்தைத் தூய்மை செயின்
இலிங்க நீர் இதயத்தில் வேதியரின்
பாதத்தைத் தூய்மை செய்த நீர் தலையின்மீது
“ச்ருத்யுத்கடதுராசாரீ யஜ்ஞ கூபஸகாதக
உத்ரேகேண க்ருதே சாந்தே விப்ரரூபேண ராக்ஷஸ”
எனவே கூடல சங்கமதேவனே, இத்தகு
நெறியிலிகளின் முகத்தைக் காணாலாகாது.
Translated by: Smt. Kalyani Venkataraman, Chennai
Marathi Translation
मीच भक्त थोर, मीच तो प्रसादी
नीच तो प्रमादी, शरण कैसा ?
करी लिगांर्चन, स्विकारी मज्जन
अभिषेक तो जाण, करो तोचि
तोचि दुराचारी, धरी विप्र चरण
पाद पूजा करून घेई तीर्थ
""भत्यत्कट दुराचारी यज्ञकूपसेघातकः ।
उद्रेकेण कृते शांते विप्ररूपेण राक्षसः ?
कूडलसंगमदेवा, ऐसा भ्रष्टाचारी
ठेवावा तो दुरी, दृष्टी आड
अर्थ - मी भक्त आहे. मी प्रसादी आहे म्हणून अभिमानाने सांगणाऱ्यानी विप्रकर्मात का पडावे? एकीकडे लिंगार्चना करावे व लिंगोदक स्विकारावे आणि त्याच हाताने अभिषेक करून ब्राह्मणांचे पाय धुवून त्याने पादोदक मस्तकी घ्यावे हे शिवभक्तिचे शुद्ध विडंबन नव्हे काय? इहलोकातहि तेच सिद्ध केले गेले आहे. म्हणून हे कूडलसंगमदेवा ? (परमेश्वरा) ऐसा दुराचारी व भ्रष्ट तोंड देखिल माझ्या दृष्टीस पाडू नकोस.
Translated by Rajendra Jirobe, Published by V B Patil, Hirabaug, Chembur, Mumbai, 1983
मी भक्त, मी प्रसादी` म्हणणारे विप्रकर्म कसे करतात हो.
लिंगदेवाला आपले म्हणून अभिषेक करणारे हात
विप्राचे चरण धुतात, लिंगोदक हृदयात,
विप्राच्या चरणाचे जल मस्तकावर घेतात.
श्रुत्यत्कट दुराचारी यज्ञकूपसघातकः।
उदकेण कृते शांते विप्ररुपेण राक्षसः।
म्हणून कूडलसंगमदेवा अशा
दुराचारीचे मुखदर्शन करु नये.
Translated by Shalini Sreeshaila Doddamani
ಶಬ್ದಾರ್ಥಗಳು ಅತ್ಕಟ = ಅಯ್ಯೋ! ದುಃಖ ಸೂಚಕ ಅವ್ಯಯ; ಉದಕ = ; ಎರÉ = ; ಕರ್ಮ = ; ಕರ್ಮಿ = ; ಕೂಪ = ; ಘಾತಕ = ; ತೊಳೆ = ; ದಾರಾಜಾರಿ = ; ಪ್ರಸಾದಿ = ; ಮಂಡೆ = ; ಮಜ್ಜನ = ; ಯಜ್ಞ = ; ವಿಪ್ರ = ; ಶ್ರುತ್ಯ = ;
ಕನ್ನಡ ವ್ಯಾಖ್ಯಾನ ನಾನು ಭಕ್ತ, ನಾನು ಮಾಹೇಶ್ವರ, ನಾನು ಪ್ರಸಾದಿ, ನಾನು ಪ್ರಾಣಲಿಂಗಿ, ನಾನು ಶರಣ, ನಾನು ಐಕ್ಯ ಎನ್ನುತ್ತ ಷಟ್ಸ್ಥಲವನ್ನು ಜಾತಿವಿಂಗಡಣೆಯಾಗಿ ಮಾಡಿ ಆಚರಿಸುವ ಜಾತಿವಾದಿ(ಸಂಪ್ರದಾಯಸ್ಥರು)ಗಳನ್ನು ಬಸವಣ್ಣನವರು ವೀರಶೈವರಲ್ಲೇ ಕಂಡಿದ್ದರಾಗಬಹುದು. ಈಗಲೂ “ಮಾಹೇಶ್ವರ”ಎಂಬ ಪದ ಜಾತಿಜಂಗಮವೆಂಬ ಅರ್ಥದಲ್ಲಿ ಕೆಲವೊಮ್ಮೆ ಬಳಕೆಯಾಗುತ್ತಿರುವುದನ್ನು ಕಾಣಬಹುದು. ಈ ವಿಧವಾದ ವಿಂಗಡಣೆ ವೈದಿಕ ವರ್ಣ ವ್ಯವಸ್ಥೆಯ ಅಂಧಾನುಕರಣೆಯ ಫಲವೆಂಬದು ಸ್ಪಷ್ಟವೇ ಇದೆ.
ಈ ಅನುಕರಣೆಯಾದರೂ ಹೇಗೆ ವೀರಶೈವದೊಳಕ್ಕೆ ನುಸುಳಿತೆಂದರೆ-ಶೂದ್ರ ಮುಂತಾದವರು ವೈದಿಕ ಧರ್ಮವನ್ನು ಬಿಟ್ಟು ಶಿವಧರ್ಮಕ್ಕೆ ಬಂದ ಮೇಲೂ ಬ್ರಾಹ್ಮಣರನ್ನು ಅವರು ಆರಾಧ್ಯಭಾವದಿಂದ ಕಾಣುವ ತಮ್ಮ ಪೂರ್ವಾಚರಣೆಯನ್ನು ಸಂಪೂರ್ಣವಾಗಿ ಬಿಟ್ಟುಕೊಡಲಾಗದೆ ಬ್ರಾಹ್ಮಣರಿಗೆ ಪಾದಪೂಜೆ ಮಾಡುವ ಪದ್ಧತಿಯನ್ನು ಕೆಲವೊಮ್ಮೆ ಮುಂದುವರಿಸಿಕೊಂಡು ಬಂದಿದ್ದರಾಗಿರಬಹುದು. ಅಂಥ ಸಂದರ್ಭವೊಂದನ್ನು ಬಸವಣ್ಣನವರು ಈ ವಚನದಲ್ಲಿ ಪ್ರಸ್ತಾಪಿಸಿರುವರು.
ಲಿಂಗಧಾರಣೆಯು ಜಾತಿ ನಿರಾಕರಣಕ್ಕೆ ಚಿಹ್ನವಾಗಿರುವಾಗ-ಆ ಲಿಂಗವನ್ನು ಪೂಜಿಸಿದ ಕೈಯಲ್ಲೇ ಬ್ರಾಹ್ಮಣನ ಪಾದೋದಕವನ್ನು (ಕುಡಿಯದಿದ್ದರೂ)ತಲೆಯ ಮೇಲಾದರೂ ಪ್ರೋಕ್ಷಿಸಿಕೊಳ್ಳುವುದು ಅಸಂಗತವಾಗುವುದೆಂದು ಬಸವಣ್ಣನವರು ತಮ್ಮ ಅನುಯಾಯಿಗಳಿಗೆ ಭಯಭೀತಿ ಹುಟ್ಟಿಸಿಯಾದರೂ ಮನವರಿಕೆ ಮಾಡಿಕೊಡುತ್ತಿರುವರು.
ಬ್ರಾಹ್ಮಣ್ಯವನ್ನು ಒಮ್ಮೆ ಮಾನ್ಯ ಮಾಡಿದರೆ-ಅದು ವರ್ಣವ್ಯವಸ್ಥೆಯ ಮಾನ್ಯತೆಯಲ್ಲಿ ಕೊನೆಗಂಡೀತೆಂಬುದು ಅವರ ಆತಂಕವಾಗಿತ್ತು-ವರ್ಣವ್ಯವಸ್ಥೆಯೆಂಬುದು ಅಷ್ಟು ಪ್ರಬಲವಾದ ಸಾಮೂಹಿಕ ಮನೋರೋಗ. ವೈದಿಕಕ್ಕೆ ತೀರ ವಿರುದ್ಧವಾದ ಜೈನ ಬೌದ್ಧ ಮತಗಳಲ್ಲಿಯೂ ವರ್ಣವ್ಯವಸ್ಥೆ ಕಾಲಕ್ರಮದಲ್ಲಿ ಕಾಲೂರಿತೆಂಬುದು ಒಂದು ಚಾರಿತ್ರಿಕ ಸತ್ಯವೇ ಆಗಿರುವಾಗ-ಆ ಪಾಡು ವೀರಶೈವಕ್ಕೂ ಬರಬಾರದೆಂಬುದೇ ಬಸವಣ್ಣನವರ ಕಾಳಜಿಯಾಗಿತ್ತು. (ನೋಡಿ ವಚನ601).
ಈ ವಚನದಲ್ಲಿ ಉಲ್ಲಿಖಿತವಾಗಿರುವ ಸಂಸ್ಕೃತ ಶ್ಲೋಕದ ನಿಜಪಾಠವೇನೋ ತಿಳಿಯದು. ಆದರೂ ಅದರ ಅಭಿಪ್ರಾಯವನ್ನು ಈ ಮುಂದಿನಂತೆ ಸಂಗ್ರಹಿಸಬಹುದು : ಎಲೆ ಶ್ರುತ್ಯುತ್ಕಟದುರಾಚಾರಿಯೇ ಯಜ್ಞಕೂಪದಲ್ಲಿ ಮುಳುಗಿದವನೇ (ಬ್ರಾಹ್ಮಣಪಾದೋದಕ ಸ್ವೀಕಾರ ಮುಂತಾದ) ನಿನ್ನ ಉದ್ರೇಕದ ಪರಿಣಾಮವಾಗಿ ನೀನು ಬ್ರಹ್ಮರಾಕ್ಷಸನಾಗಿ ಹುಟ್ಟುವೆ.
ವಿ: ಏನೆಲ್ಲ ಸಮಾಧಾನಮಾಡಿಕೊಂಡರೂ ಈ ವಚನ ಬಸವಣ್ಣನವರದು ಎನಿಸುವುದಿಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು