•  
  •  
  •  
  •  
Index   ವಚನ - 594    Search  
 
ಮಾಹೇಶ್ವರನ ಜ್ಞಾನಿಸ್ಥಲ - ಶರಣರು
ಹೊನ್ನ ನೇಗಿಲಲುತ್ತು ಎಕ್ಕೆಯ ಬೀಜವ ಬಿತ್ತುವರೆ? ಕರ್ಪುರದ ಮರನ ಕಡಿದು ಕಳ್ಳಿಗೆ ಬೇಲಿಯನಿಕ್ಕುವರೆ? ಶ್ರೀಗಂಧದ ಮರನ ಕಡಿದು ಬೇವಿಂಗೆ ಅಡೆಯನಿಕ್ಕುವರೆ? ನಮ್ಮ ಕೂಡಲಸಂಗನ ಶರಣರಿಗಲ್ಲದೆ ಬೇರೆ ಇಚ್ಛಾಭೋಜನವನಿಕ್ಕಿದರೆ ಕಿಚ್ಚಿನೊಳಗೆ ಉಚ್ಚೆಯ ಹೊಯಿದು ಹವಿಯ ಬೇಳ್ದಂತಾಯಿತ್ತು.
Transliteration Honna nēgilaluttu ekkeya bījava bittuvare? Karpurada marana taridu kaḷḷige bēliyanikkuvare? Śrīgandhada maraṇa taridu bēviṅge aḍeyanikkuvare? Nam'ma kūḍalasaṅgana śaraṇarigallade bēre icchābhōjanavanikkidare kiccinoḷage ucceya hoyidu haviya bēḷdantāyittu.
Manuscript
English Translation 2 Would you plough with a plough of gold, then sow The seed of swallow-wort? Would you Cut down a camphor tree, and then Set it round cactus for a hedge? Would you cut down a sandal tree, and then Let it prop up a neem? If you should serve Choice dainties to any but Our Kūḍala Saṅga's Śaraṇās, It's just like casting ghee into a fire Inwhich you urinated! Translated by: L M A Menezes, S M Angadi
Hindi Translation स्वर्ण हल चलाकर अर्कबीज बोते हैं-? कर्पूर वृक्ष काटकर थूहर को घेरा लगाते हैं? चंदन वृक्ष काटकर नीम को थूनी देते हैं? मम कूडलसंगमेश के शरणों के अतिरिक्त दूसरों को इच्छाभोजन दें-, तो अग्नि में मूत्र विसर्जन कर उसी में हवी अर्पित करने के समान है॥ Translated by: Banakara K Gowdappa
Telugu Translation పసిడిమడకల దున్ని జిల్లేడి విత్తులు విత్తెదరే! కర్పూర వృక్షముల నరికి కంచెకు కల్ల వేతురే? చందన వృక్షముల విరిచి వేపకు ఎరువు వేతురే మా శరణుల విడిచి మృష్టాన్నమును వడ్డింప చిచ్చున ఉచ్చలుపోసి హవిస్సు వ్రేల్పినట్లగురా! Translated by: Dr. Badala Ramaiah
Tamil Translation பொற்கலப்பையால் உழுது எருக்கு விதையை விதைப்பரோ? கற்பூரமரத்தை வெட்டி கள்ளிக்கு வேலியிடுவரோ? சந்தன மரத்தை வெட்டி வேம்பைச் சுற்றி அடைப்பரோ? நம் கூடல சங்கனின் அடியாருக்கின்றி பிறருக்கு விரும்பிய உணவை அளிப்பது அழலினுள்ளே சிறுநீரைப் பெய்து நெய்யை அளித்ததனைய தாயிற்று. Translated by: Smt. Kalyani Venkataraman, Chennai
Marathi Translation सोन्याचा नांगर चालवून रुईचे बी पेरतात का? कापराचे झाड कापून विषवेलीचे कुंपण घालतात का? चंदनाचे झाड कापून निंबाच्या झाडाला चबुतरा करतात ? आमच्या कूडलसंगाच्या शरणाविना अन्य कोणाला इच्छाभोजन घातले तर अग्निला उष्ट्याची आहुती घातल्यासम होईल. Translated by Shalini Sreeshaila Doddamani
ಶಬ್ದಾರ್ಥಗಳು ಅಡೆಯ = ; ಉತ್ತು = ; ಕಿಚÀÄ್ಚ = ; ತರಿದು = ; ನೇಗಿಲು = ; ಹವಿ = ;
ಕನ್ನಡ ವ್ಯಾಖ್ಯಾನ ಪರಡಿಯ ಪಾಯಸ, ಸ್ಯಾವಿಗೆ ಕೀರು, ಓಗರ ಮೇಲೋಗರ, ಪರಮಾನ್ನ, ಅವುಗು, ಪೂರಿ, ಲಡ್ಡುಗೆ ಮುಂತಾದ ಬಗೆಬಗೆಯ ಭಕ್ಷ್ಯಗಳನ್ನು ಮಾಡಿ-ಶಿವಶರಣರಲ್ಲದ ಮತ್ತ್ಯಾರಿಗೂ ನೀಡಲಾಗದೆಂದು ನಿಷೇದಿಸುತ್ತಿರುವ ಈ ವಚನ ಬಸವಣ್ಣನವರದೆನಿಸುತ್ತಿಲ್ಲ. ಮೇಲಾಗಿ “ಕಿಚ್ಚಿನೊಳಗೆ ಉಚ್ಚೆಯ ಹೊಯ್ದು ಹವಿಯ ಬೇಳಿದಂತಾಯಿತ್ತು” ಎಂಬ ಮಾತು ತೀರ ನಿರ್ಲಜ್ಜವಾಗಿದೆಯಷ್ಟೇ ಅಲ್ಲದೆ-ಬ್ರಾಹ್ಮಣಶ್ರದ್ಧೆಯನ್ನೇ ಅವಧಾರಿಸುತ್ತಿರುವುದನ್ನು ಗಮನಿಸಬೇಕು. ರುಚಿಕರವಾಗಿ ಮಾಡಿದ ಅಡುಗೆಯನ್ನು ವೀರಶೈವೇತರ ಬಡಿಸುವುದು ಅಧರ್ಮವೆಂದೂ ಅಕಾರ್ಯವೆಂದೂ ಎಚ್ಚರಿಸುತ್ತ-ಹಾಗೆ ಅನ್ಯರಿಗೆ ಬಡಿಸಿದ್ದೇ ಆದರೆ-ಚಿನ್ನದ ನೇಗಿಲಲ್ಲಿ ಉತ್ತ ಭೂಮಿಗೆ ಎಕ್ಕೆಯನ್ನು ಬಿತ್ತಿದಂತೆ, ಕರ್ಪೂರದ ಮರವನ್ನು ಕಡಿದು-ಕಳ್ಳಿಯ ಸುತ್ತಲೂ ಬೇಲಿಯನ್ನು ಕಟ್ಟುವುದಕ್ಕೆ ಉಪಯೋಗಿಸಿದಂತೆ, ಶ್ರೀಗಂಧವನ್ನು ಕಡಿದು ಬೇವಿಗೆ ಆನಿಸಿದಂತೆ-ಆಗುವುದೆಂದಿರುವುದಂತೂ ತೀರ ಅಸಭ್ಯವಾದ ಜಾತಿವದವನ್ನೇ ವೈಭವೀಕರಿಸಿ ಬೋಧಿಸಿದಂತಿದೆ. ಅನ್ನದಾನಕ್ಕೆ ಅನ್ಯಗಣನೆಯನ್ನು ಬಸವಣ್ಣನವರು ಬೋಧಿಸಿಯಾರು ಹೇಗೆ ? (ನೋಡಿ ವಚನ 230); ಆದ್ದರಿಂದ ಈ ವಚನ ಬಸವಣ್ಣನವರ ನಿಜವಚನವಲ್ಲ. “ನೀನಾವ ಮುಖದಲ್ಲಿ ಬಂದು ಬೇಡಿದಡೀವೆನು” (ವಚನ 432) ಎಂಬ ಬಸವಣ್ಣನವರ ಮಾತನ್ನು ಗಮನಿಸಿರಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು