ಮಾಹೇಶ್ವರನ ಜ್ಞಾನಿಸ್ಥಲ - ಜಾತಿ
ಜಾತಿವಿಡಿದು ಸೂತಕವನರಸುವೆ:
ಜ್ಯೋತಿವಿಡಿದು ಕತ್ತಲೆಯನರಸುವೆ!
ಇದೇಕೊ ಮರುಳ ಮಾನವಾ?
ಜಾತಿಯಲ್ಲಿ ಅಧಿಕನೆಂಬೆ:
ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನು?
`ಭಕ್ತ ಶಿಖಾಮಣಿ' ಎಂದುದು ವಚನ.
ನಮ್ಮ ಕೂಡಲಸಂಗನ ಶರಣರ ಪಾದಪರುಷವ ನಂಬು,
ಕೆಡಬೇಡಾ ಮಾನವಾ.
Transliteration Jātiviḍidu sūtakavanarasuve:
Jyōtiviḍidu kattaleya narasuve!
Ideko maruḷamānavā?
Jātiyalli adhikanembe:
Vipra śatakōṭigaḷiddalli phalavēno?
`Bhakta śikhāmaṇi' endu vacana.
Nam'ma kūḍalasaṅgana śaraṇara pādaparuṣava nambu,
keḍabēḍa mānavā.
Manuscript
English Translation 2 Clinging to caste, you seek impurities:
You look for darkness, while you cling to light
Why you, you silly man!
You claim to be superior by your caste:
Is there any benefit
By a hundred billion priests?
The saying goes, "The devotee
Is the crest-jewel" Do but believe
In the transmuting feet
Of our Kūḍala Saṅga's Śaraṇās
and save yourself from ruin,man!
Translated by: L M A Menezes, S M Angadi
Hindi Translation जाति के सहारे सूतक खोजते हो,
ज्योति के सहारे तम खोजते हो,
यह क्यों पागल मानव?
जाति में बड़े मानते हो ।
शत कोटी विप्रों के रहने से भी क्या लाभ?
वचनानुसार ‘भक्त ही शिखामणि’ है
मम कूडलसंगमेश के शरणों की चरण स्पर्श मणि पर
विश्वास रखो, नष्ट मत होओ मानव ॥
Translated by: Banakara K Gowdappa
Telugu Translation జాతిని బట్టి సూతకము తరతువే;
జ్యోతిని బట్టి చీకటి చూతువే!
ఇదియేటికో పిచ్చివాడా; జాతిచే నధికుడెట్లయ్యె!
శతకోటి విప్రులున్న ఫలమేమి? భక్తుడే శ్రేష్ఠుడనె వచనము
మా శరణుల చరణము స్పర్శవేదియని నమ్ముమా
నమ్మక చెడిపోకురా మానవా!
Translated by: Dr. Badala Ramaiah
Tamil Translation சாதியைப் பற்றிக் கொண்டு, தீட்டைத் தேடுவாய்
விளக்கைப் பிடித்துக் கொண்டு, இருளைத் தேடுவாய்
இது எதற்கோ மருளடைந்த மனிதனே
மேல்சாதி எனக்கூறுவாய் எண்ணற்ற
வேதியரிருந்து பயன் என்ன?
“பக்தனே மேலானவன்” என்று ஒரு கூற்று உள்ளது.
நம் கூடல சங்கனின் அடியாரின் திருவடி எனும்
பரிசிவேதியை நம்புவாய் மனிதனே கெடாய்.
Translated by: Smt. Kalyani Venkataraman, Chennai
Marathi Translation
शिवभक्त होऊनि, पाळणे सूतक
हाती ज्योति काळोख, दिसे कैसा
जातीचे श्रेष्ठत्व, हाचि वेडाचार
शतकोटी विप्र, काय किजे ?
भक्त शिखांमणी, वचन हे एैसे
न पाळिता कैसे, शरणत्व ते
कूडलसंगमदेवा! पवित्र शरण चरण
परिसासम जाण, सोडू नये
कर्मठ-आचार, व्यर्थ निराधार
जीवन व्यवहार, व्यर्थ जाय
अर्थ - शिवभक्त होऊन जातीभेद सूतक पाळणे हे ज्योति धरून अंधार शोधल्याप्रमाणेच होय. भक्त शिखामणीतील वचनानुसार श्रेष्ठ म्हणून घेणारे शतकोटी कर्मठ विप्र मूर्ख ठरतात. शरण होऊ पाहणाऱ्यांनी अशा वेडाचारापाठी लागून माझ्या कूडलसंगमदेवास प्रिय असलेल्या शरणातील विश्वास घालवून बसू नका. शिवशरण शरण परिसाप्रमाणे लोखंडाला सुवर्ण करणारे म्हणजेच जीवन उद्धारक होत.
Translated by Rajendra Jirobe, Published by V B Patil, Hirabaug, Chembur, Mumbai, 1983
जातीला धरुन सुतक शोधतात !
ज्योतीला धरुन अंधार शोधतात !
हा कसला मुर्खपणा ? जातीचा गर्व कशाला ?
शतकोटी विप्रांचा काय उपयोग ?
`भक्त शिखामणि` चे वचन सांगते
आमच्या कूडलसंगाच्या शरणांच्या
चरण परिसावर विश्वास ठेव. व्यर्थ जावू नकोस मानवा.
Translated by Shalini Sreeshaila Doddamani
ಶಬ್ದಾರ್ಥಗಳು ಅಧಿಕ = ಹೆಚ್ಚು; ಅರಸು = ಹುಡುಕು; ಪರುಷ = ; ಮರುಳು = ; ವಿಪ್ರ = ; ಶಿಳಾಮಣ = ; ಸೂತಕ = ;
ಕನ್ನಡ ವ್ಯಾಖ್ಯಾನ ಶಿವಧರ್ಮವನ್ನು ಸ್ವೀಕರಿಸಿ ಶಿವಭಕ್ತನಾದಮೇಲೆ-ಯಾವನಾಗಲಿ ಅವನು ಕುಲಜನಾದ. ಹೀಗೆ ಶಿವಕುಲದವನಾದ ಮೇಲೂ ಶಿವಭಕ್ತರು ಪರಸ್ಪರ ಗತಕಾಲದ ಜಾತಿಭೇದಗಳನ್ನು ಕೆದಕಿನೋಡಿ-ಇವನು ಅಂಬಿಗ, ಇವನು ಕ್ಷೌರಿಕ ಎಂದು ಮುಂತಾಗಿ ಜಾತಿಸೂತಕವನ್ನು ಆಚರಿಸುವುದು ಮೂಢತನ. ದೀಪವನ್ನು ಹಿಡಿದ ಮೇಲೆ ಸುತ್ತೆಲ್ಲೂ ಕತ್ತಲೆ ನಿಲ್ಲದಂತೆ-ಶಿವದೀಕ್ಷೆಯನ್ನು ಸ್ವೀಕರಿಸಿದ ಮೇಲೆ ಜಾತಿಸೂತಕವೆಂಬುದಿರುವುದಿಲ್ಲ.
ಶಿವಭಕ್ತರಾದವರು ಬ್ರಾಹ್ಮಣರೇ ಆಗಿದ್ದರೂ-ತಾವು ಶಿವಭಕ್ತರ ಸಮೂಹದಲ್ಲಿ ಅಧಿಕರೆಂದು ಪ್ರತ್ಯೇಕತೆಯನ್ನು ಸಾಧಿಸಲಾಗದು. ಮತ್ತು ಶಿವಧರ್ಮಕ್ಕೆ ಸೇರಿದವನೊಬ್ಬ ಹಿಂದುಳಿದ ಜಾತಿಯಿಂದ ಬಂದವನೇ ಆಗಿರಲಿ-ಅವನು ಆ ಬ್ರಾಹ್ಮಣರಿಗೆ ಕಡಿಮೆಯೇನಲ್ಲ-ಆಧಿಕನೆಂದರೂ ತಡೆದೀತು.
ಶಿವಭಕ್ತನ ಪಾದ ಸೋಕಿದ್ದೆಲ್ಲಾ ತನ್ನ ಅವಲೋಹತೆಯನ್ನು ನೀಗಿಕೊಂಡು ಚಿನ್ನವಾಗಿ ಕಾಂತಿಮಯವೂ ಅನರ್ಘ್ಯವೂ ಆಗುವುದು-ಅವನ ಉದಾತ್ತ ಆಲೋಚನೆ ಮತ್ತು ಸರ್ವಸಮಾನತೆಯ ಧೋರಣೆ ಅಷ್ಟು ಪ್ರಭಾವಶಾಲಿಯಾಗಿರುವುದೆಂದು ಬಸವಣ್ಣನವರು ಶಿವಧರ್ಮಸೋದರರಿಗೆ ಮಾರ್ಗದರ್ಶನಮಾಡುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು