ಮಾಹೇಶ್ವರನ ಜ್ಞಾನಿಸ್ಥಲ - ಜಾತಿ
ಹೊಲೆಯ ಮಾದಿಗ ಭಕ್ತನಾದರೆ
ಆತನ ಮನೆಯ ಸೊಣಗಂಗೆ
ಪಂಚಮಹಾವಾದ್ಯದಲ್ಲಿ ಸನ್ಮಾನನೆಯ ಮಾಡೆನೆ?
ನೆಲನನುಗ್ಘಡಿಪೆ ʼಉಘೇ, ಚಾಂಗು ಭಲರೆʼ ಎಂದು!
ಕುಲದಲಧಿಕ ಹಾರುವಂಗೆ ಸಿದ್ಧಿಗೆಯೈಸಲೆ!
ನಿಮ್ಮ ಶರಣರ ಮಹಿಮೆ ಘನಕ್ಕೆ ಘನ!
ಎಲೆ ಕೂಡಲಸಂಗಮದೇವಾ, ನಿಮ್ಮ ನಂಬದವ ಹೊಲೆಯ!
Transliteration Holeya mādiga bhaktanādare
ātana maneya soṇagaṅge
pan̄camahāvādyadalli sanmānaneya māḍene?
Nelananugghaḍipe ʼughē, cāṅgu bhalareʼ endu!
Kuladaladhika hāruvaṅge sid'dhigeyaisale!
Nim'ma śaraṇara mahime ghanakke ghana!
Ele kūḍalasaṅgamadēvā, nim'ma nambadava holeya!
Manuscript
English Translation 2 If but a low-born man
Becomes a devotee, don't I
Honour his very house-dog with
Five major instruments?
I cry hosanna's to the ground he treads!
As for the priest of a superior caste,
I'd rather carry his bier!
The glory of Thy Śaraṇās
Is greather than the great!
O Kūḍala Saṅgama Lord, the man
Is low-born who has no faith in Thee!
Translated by: L M A Menezes, S M Angadi
Hindi Translation अंत्यज भक्त बने, तो क्या उसके घर के श्वान का
पंचमहावाद्य से सम्मान करूँगा?
जमीन लीपकर जयजयकार करूँगा
जैसे उच्छ कुल के ब्राह्मण केलिए करते हैं
तव शरणों की महिमा महान से महान है ।
तव अविश्वासी ही अंत्यज है कूडलसंगमदेव ॥
Translated by: Banakara K Gowdappa
Telugu Translation మాల మాధిగలం దొకడు భక్తుడయ్యెనా
వాని యింటి కుక్కకు పంచమహావాద్యములతో మన్నన సేతు
ఉఘే; చాంగు; భళా యంచు ఘోషింతు; నుర్వి
కులాధికుడగు విప్రుని కిట్లు సేయ తగునే?
నీ శరణుల మహిమ ఘనంబునకు ఘనంబు!
సంగా నిన్ను నమ్మనివాడేనయ్యా మాల!
Translated by: Dr. Badala Ramaiah
Tamil Translation புலையன் பக்தனாயின் அவன் இல்லத்து
நாயை ஐம்பெரும் இசைக்கருவிகளை
இசைத்து கௌரவிக்க மாட்டேனோ?
நிலம் அதிரும் வண்ணம் வாழ்க, வளர்க
நல்வரவு என இயம்ப மாட்டேனோ?
உம் அடியாரின் மகிமை, மேன்மையின் மேன்மையாம்
கூடல சங்கம தேவனே
உம்மை நம்பாதவனே புலையன்.
Translated by: Smt. Kalyani Venkataraman, Chennai
Marathi Translation
महार, मांग भक्त असतील तर त्यांच्या
घरच्या कुत्र्याचा पंचमहावाद्यांनी सन्मान करतो.
सडासंमार्जन करून ` उघे चांगभला` जयघोष करतो.
कुलश्रेष्ठ विप्राचा सन्मान कधीही करणार नाही.
तुमच्या शरणांचा महिमा अपार आहे.
हे कूडलसंगमदेवा तुमच्यावर विश्वास न ठेवणारा महार.
Translated by Shalini Sreeshaila Doddamani
ಶಬ್ದಾರ್ಥಗಳು ಉಗ್ಛಡಿಸು = ; ಐಸು = ; ಘನ = ; ಚಾಂಗು = ; ಭಲಾ = ; ಮಹಿಮೆ = ; ಸನ್ಮಾನ = ; ಸಿದ್ಧಿ = ; ಸೊಣಗ = ; ಹÉÆಲೆಯ = ; ಹಾರುವ = ;
ಕನ್ನಡ ವ್ಯಾಖ್ಯಾನ ಹೊಲೆಯರು ಮಾದಿಗರು ಶಿವಭಕ್ತರಾದರೆ ಅವರ ಮನೆಯ ನಾಯಿಗೂ ಪಂಚಮಹಾವಾದ್ಯಗಳನ್ನು ಮೊಳಗಿಸುತ್ತ ಉಘೇ ಜಾಂಗು ಭಲಾ ಎನ್ನತ್ತ ಮೆರವಣಿಗೆ ಮಾಡಿಸುವೆ-ಕುಲದಲ್ಲಿ ಶ್ರೇಷ್ಠವೆನಿಸಿಕೊಂಡ ಬ್ರಾಹ್ಮಣನಿಗೆ ಚಟ್ಟದ ಮೇಲೆ [ಮೆರವಣಿಗೆ ಮಾಡಿಸುತ್ತೇನೆ] ಎಂಬ ಈ ದಡ್ಡದ್ವೇಷ ಧೋರಣೆ ಬಸವಣ್ಣನವರದಲ್ಲ.
ಇಂಥ ವಚನಗಳನ್ನು ಕೂಡಲಸಂಗಮಾಂಕಿತದಲ್ಲಿ ಬರೆದು ಸೇರಿಸಿದ ಕ್ಷುದ್ರ ಜನರು-ಬಸವಣ್ಣನವರ ಧವಳಕೀರ್ತಿಗೆ ಅಳಿಸಲಾಗದ ಕಳಂಕವಾಗಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು