•  
  •  
  •  
  •  
Index   ವಚನ - 597    Search  
 
ಮಾಹೇಶ್ವರನ ಜ್ಞಾನಿಸ್ಥಲ - ಅರಿವು
ಕುರಿವಿಂಡು ಕಬ್ಬಿನ ಉಲಿವ ತೋಂಟವ ಹೊಕ್ಕು- ತೆರನನರಿಯದೆ ತನಿರಸದ, ಹೊರಗಣೆಲೆಯನೆ ಮೇದುವು! ನಿಮ್ಮನರಿವ ಮದಕರಿಯಲ್ಲದೆ ಕುರಿ ಬಲ್ಲುದೆ ಕೂಡಲಸಂಗಮದೇವಾ?
Transliteration Kuriviṇḍu kabbina uliva tōṇṭava hokku- terananariyade tanirasada, horagaṇaleyane mēduvu! Nim'manariva madakariyallade kuri ballude kūḍalasaṅgamadēvā?
Manuscript
English Translation 2 A flock of sheep Entering a garden rustling with sugar-cane Not knowing where the sweet juice be, Nibbles its outer leaves! The elephant in ecstasy knows Thee; But does the sheep, O Kūḍala Saṅgama Lord? Translated by: L M A Menezes, S M Angadi
Hindi Translation भेड का झुंड गन्ने के लहलहाते खेत में प्रवेश कर, रसास्वादन की रीति न जान बाहर के पत्ते ही खाता है । मदकरि ही तुम्हें जान सकता है, भेड नहीं, कूडलसंगमदेव ॥ Translated by: Banakara K Gowdappa
Telugu Translation చెఱకుతోటలబడి గొట్టెలమంద రసయేదియో తెలియక ; గడలపై గల ఆకులమేసె! నిన్ను తెలియ మదకరికిగాక గొఱ్ణెకు తెలియునే కూడల సంగమదేవా! Translated by: Dr. Badala Ramaiah
Tamil Translation ஆட்டுமந்தை இரும்பு ஒலிக்கும் தோட்டத்திற்குச் சென்று இனிமையான சுவையின் முறையினை அறியாது வெளியிலே இலையையே மெல்லும் மதயானை உம்மை அறியுமன்றி ஆடு உம்மை அறியுமோ கூடல சங்கமதேவனே. Translated by: Smt. Kalyani Venkataraman, Chennai
Marathi Translation मेंढराचा कळप उसाच्या समृध्द शेतात शिरला तर उसाचा स्वाद घेणार नाही तर वरचा पाला खाईल ! आपले ज्ञान मदगजच जाणतील पण मेंढरे काय जाणणार कूडलसंगमदेवा ? Translated by Shalini Sreeshaila Doddamani
ಶಬ್ದಾರ್ಥಗಳು ಉಲಿ = ; ತನಿರಸ = ; ಮದಕರಿ = ; ಮೆಲಿ = ; ಹೊಕ್ಕು = ;
ಕನ್ನಡ ವ್ಯಾಖ್ಯಾನ ಕುರಿಗಳು ಕಬ್ಬಿನ ತೋಟಕ್ಕೆ ಹೋದರೆ-ಅವು ಬರಿ ತರಗನ್ನು ತಿಂದಾವು-ರಸವತ್ತಾದ ಗಣೆಯನ್ನು ಸಿಗಿದು ಸವಿಯಲಾರವು. ಹಾಗೆಯೇ ಮಂದಮತಿಗಳು ಧರ್ಮಶಾಸ್ತ್ರಗಳಲ್ಲಿರುವ ಸಾರವತ್ತಾದ ತತ್ತ್ವಭಾಗವನ್ನು ಗ್ರಹಿಸಲಾರದೆ ಮತ್ತು ಆ ಗ್ರಹಿಕೆಗೆ ತಕ್ಕಂತೆ ನವೋನವ್ಯವಾಗಿ ಶ್ರಮಿಸದೆ ಕೇವಲ ಯಜ್ಞಯಾಗ ಮುಂತಾದ ಕರ್ಮಕಾಂಡದಲ್ಲಿ ತಮ್ಮ ಡೊಂಬರಾಟದ ಜೀವನವನ್ನು ಮುಗಿಸಿಬಿಡುವರು. ಸಾರಜ್ಞರಾದ ಶಿವಶರಣರು ಮದಕರಿಗಳಂತೆ ತರಗನ್ನು ತೊರೆದು ತಿರುಳನ್ನು ಗ್ರಹಿಸಿದರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು