ಮಾಹೇಶ್ವರನ ಜ್ಞಾನಿಸ್ಥಲ - ವಂಚನೆ
ಪ್ರಣವನುಚ್ಚರಿಸುವ ಅಪ್ರಮಾಣಿಕರೆಲ್ಲರೂ
ಪ್ರಣವ ಮಂತ್ರಾರ್ಥವನೋದಿ ಮಂತ್ರಾರ್ಥವನರಿಯರು.
`ಪ್ರಣವ ಓಂ ನಮಃ ಶಿವಾಯ ಪ್ರಣವ ಓಂ ನಮಃ ಶಿವಾಯ,
ಪ್ರಣವ ಓಂ ನಮಃ ಶಿವಾಯ' ಎಂದುವು ಶ್ರುತಿಗಳೆಲ್ಲಾ!
`ಪ್ರಣವ ಭರ್ಗೋ ದೇವಃ' ಎಂಬುವು ಶ್ರುತಿಗಳೆಲ್ಲಾ.
ಕೂಡಲಸಂಗನನರಿಯದ ದ್ವಿಜರೆಲ್ಲ ಭ್ರಮಿತರು!
Transliteration Praṇavanuccarisuva apramāṇikarellarū
praṇavamantrārthavanōdi mantrārthavanariyaru.
`Praṇava ōṁ vaidyara śivāya praṇava ōṁ vaidyarāya,
praṇava om'mu śivāya' endu śratigaḷellā!
`Praṇava bhargō dēvaḥ' embuvu śrutigaḷellā.
Kūḍalasaṅgananariyada dvijarella bhramitaru!
Manuscript
English Translation 2 All worthless persons utter Ōṁ ,
But even as they recite it, do not know
Its meaning... All Vēdas say
'Ōṁ, hail to Śiva , Ōṁ to Śiva hail
Ōṁ, hail to Śiva!'; all Scriptures say
Ōṁ to the shining God!'
In ignorance of Kūḍala Saṅga, all
The twice-born are
But whirling in bewilderment!
Translated by: L M A Menezes, S M Angadi
Hindi Translation प्रणवनुच्चार का सभी अप्रमाणिक
प्रणव मंत्रार्थ पढ़कर भी मंत्रार्थ नहीं जानते।
सभी श्रृतियाँ कहती हैं - प्रणव ऊँ नमः शिवाय,
प्रणव ऊँ नमः शिवाय, प्रणव ऊँ नमः शिवाय।
सभी श्रृतियाँ कहती हैं, प्रणव ऊँ भर्गो देव!
कूडलसंगमदेव से अनभिज्ञ सभी द्विज भ्रमित हैं !
Translated by: Banakara K Gowdappa
Telugu Translation ప్రణవముచ్చరించిరి అప్రమాణికులందరూ;
ప్రణవమంత్రము చదివియూ మంత్రార్థము తెలియరు
ప్రణవము ఓం నమశ్శివాయ, ప్రణవము ఓం నమశ్శివాయ,
ప్రణవము ఓం నమశ్శివాయ, యనుచుండె శ్రుతులెల్లా!
ప్రణవము ఓం భర్గో దేవా’’ యనుచుండె శ్రుతులెల్లా!
కూడల సంగని తెలియని ద్విజులెల్లా భ్రమితులు!
Translated by: Dr. Badala Ramaiah
Tamil Translation பிரணவத்தைக் கூறும் உண்மையற்ற அனைவரும்
பிரணவமந்திரத்தின் பொருளை ஓதுவர்
ஆனால் மந்திரத்தின் பொருளை அறியார்
“ப்ரணவ ஓம் நம, சிவாய, ப்ரணவ ஓம்நம சிவாய
ப்ரணவ ஓம் நம, சிவாய” என சுருதிகள் அனைத்தும் உரைக்கின்றன.
ப்ரணவ ஓம் பர்கோ தேவ” என சுருதிகள் அனைத்தும் இயம்புகின்றன.
கூடல சங்கம தேவனை அறியாத
வேதியரெலாம் மருள் கொண்டவராவர்
Translated by: Smt. Kalyani Venkataraman, Chennai
Marathi Translation
प्रणवाचा अर्थ कळला न विप्रा
श्रुति मान्य मंत्रा, उच्चारितो
ओम् नमः शिवाय श्रुति मान्य मंत्र
उच्चारिती विप्र, अर्थहीन
प्रणव ओम् नमः गभगोंदेवा म्हणती
न कळेचि श्रुति, उद्गार ते
कूडलसंगमदेवा, न जाणता
मंत्रोच्चारी द्विज, शतमूर्ख
अर्थ - - ओम् नमः शिवाय हा मंत्र श्रुतिमान्य असूनही मंत्रोच्चारहीन विप्र द्विजांना त्याचा अर्थ कळला नाही. प्रणव ओम् नमः भर्गोदेवा मंत्र श्रुतिमान्य असूनही कूडलसंगमदेवा ! तुला न जानता त्यातून अनुभव प्राप्त करून न घेता फक्त तोंडाने मंत्रोच्चार करणारे ब्राह्मण मंडळी मूर्खातील मूर्ख वाटतात.
Translated by Rajendra Jirobe, Published by V B Patil, Hirabaug, Chembur, Mumbai, 1983
प्रणवाचा उच्चार करणारे अप्रामाणिक आहेत.
प्रणवाचा मंत्रार्थ सांगणारे मंत्रार्थ जाणत नाहीत.
`प्रणव ॐ नमः शिवाय, `प्रणव ॐ नमः शिवाय`
`प्रणव ॐ नमः शिवाय` सर्व श्रुती म्हणतात.
`प्रणव ॐ भर्गो देव` सर्व श्रुती म्हणतात.
कूडलसंगमदेवाला न जाणणारे सर्व विप्र भ्रमिष्ट आहेत.
Translated by Shalini Sreeshaila Doddamani
ಶಬ್ದಾರ್ಥಗಳು ಉಚ್ಚರಿಸು = ; ದ್ವಿಜ = ; ಪ್ರಾಣವ = ; ಭರ್ಗೋ = ; ಭ್ರಮಿತ = ; ಶ್ರೂತಿ = ;
ಕನ್ನಡ ವ್ಯಾಖ್ಯಾನ ಪ್ರಣವವೆಂದರೆ ಓಂಕಾರ, ಆ ಓಂಕಾರಸಹಿತವಾಗಿ ಮಂತ್ರಗಳನ್ನು ಉಚ್ಚರಿಸುವರು. ಓಂ ಎಂದರೆ ನಮಶ್ಶಿವಾಯ (ಶಿವನಿಗೆ ನಮಸ್ಕಾರ)ವೆಂದರ್ಥ. ಮತ್ತು ಆ ಚಾಕ್ಷುಷಪ್ರಣವಾಕ್ಷರದ ತಾರಕ-ದಂಡ-ಕುಂಡಲ-ಅರ್ಧಚಂದ್ರ-ದರ್ಪಣ-ಜೋತಿರಾಕಾರ ಭಾಗಗಳಿಂದ ಕ್ರಮವಾಗಿ ನ-ಮ-ಶ್ಶಿ-ವಾ-ಯ-ಓಂ ಎಂಬ ಮಂತ್ರ ಉದಯಿಸುವುದೆನ್ನುವರು ಮಂತ್ರಜ್ಞರು. ಮತ್ತ “ಓಂ(ಭೂರ್ ಭುವಃ ಸ್ವಃ) ತತ್ ಸವಿತುರ್ವರೇಣ್ಯಂ ಭರ್ಗೋಃ ದೇವಸ್ಯ ಧೀಮಹಿ-ದಿಯೋ ಯೋ ನಃ ಪ್ರಚೋದಯಾತ್” ಎಂಬ ಗಾಯಿತ್ರಿಮಂತ್ರದಲ್ಲಿ ಭರ್ಗ(ಶಿವ)ನೇ ದೇವರೆಂದು ಘೋಷಿಸಲ್ಪಟ್ಟಿದೆಯಾದರೂ-ವೈದಿಕರು ಆ ಭರ್ಗಶಬ್ಧವನ್ನು ಸೂರ್ಯನೆಂಬ ಅರ್ಥದಲ್ಲಿ ಗ್ರಹಿಸುವರು, ಪರಮಾರ್ಥದಲ್ಲಿ ಆ “ಭರ್ಗ”ವು ಸೂರ್ಯಮಂಡಲ ಮಧ್ಯಾಂತರ್ವರ್ತಿ ಶಿವಾಖ್ಕ ಜಃಪುಂಜಪರವಾದುದು.
“ಹರ- ಸ್ಮರಹರೋ-ಭರ್ಗ” ಎಂದು ಅಮರಕೋಶದಲ್ಲಿರುವುದರಿಂದ-ಭರ್ಗಶಬ್ದವು ರುದ್ರಶಿವನನ್ನೇ ಹೇಳುತ್ತದೆಂಬುದರಲ್ಲಿ ತೊಡಕಿಲ್ಲ.
ಹೀಗೆ ಶ್ರುತಿಗಳ ಅಭಿಪ್ರಾಯದಲ್ಲಿ ರುದ್ರನೇ ಮಹಾದೇವನಾಗಿರುವಾಗ-ಅದನ್ನು ಅಲ್ಲಗಳೆಯುತ್ತ-ಅದೇ ಪ್ರಣವಾಕ್ಷರ ಸಹಿತವಾದ ಗಾಯತ್ರಿಯನ್ನು ವೈದಿಕರು ಉಚ್ಚರಿಸುವುದು ಅಪ್ರಮಾಣಿಕವಾದೀತು.
ವೈದಿಕ ಸಂಪ್ರದಾಯದಲ್ಲಿ ಗಾಯಿತ್ರೀ ಮಂತ್ರದ ಅರ್ಥ ಈ ಮುಂದಿನಂತಿರುವುದು : “ಧರ್ಮಾದಿಗಳಿಗೆ ಪ್ರತ್ಯಕ್ಷನಾದ ಯಾವ ಸೂರ್ಯನು ನಮ್ಮ ಬುದ್ಧಿಯನ್ನು ಪ್ರೇರಿಸತಕ್ಕವನಾಗಿರುವನೋ ಅವನಿಗೆ-ಯಾವ ಕಾರಣದಿಂದ ಭರ್ಗನೆಂಬ ಹೆಸರಿರುತ್ತದೆಯೋ ಆ ಕಾರಣದಿಂದ ಸೂರ್ಯನನ್ನು ಶ್ರೇಷ್ಠನನ್ನಾಗಿ ಭಾವಿಸಿ ಸೇವಿಸುತ್ತೇವೆ”ಎಂದು, (ಸೋಸಲೆ ರೇವಣಾರಾಧ್ಯನ ಶಿವಾದಿಕ್ಯ ಶಿಖಾಮಣಿ).
ಮತ್ತೊಂದು ಉಲ್ಲೇಖವನ್ನು ಗಮನಿಸಿರಿ : “ಪ್ರಣವಃ ಸರ್ವತ ತ್ತ್ವಾತ್ಯಾವಸ ವೈ ಪರಶಿವಾತ್ಮಕಃ| ಯಕಾರ ಐಶ್ವರಂ ತತ್ತ್ವಂ ವಾರ್ಣಂ ಮಾಹೇಶ್ವರಂ ತಥಾ ||57||ಶಿಕಾರಃ ಶಿವತತ್ತ್ವಂ ಸ್ಯಾತ್ ವಿದ್ಯಾ ತತ್ತ್ವಂ ತು ಮಃ ಸ್ಮೃತಃ| ನಕಾರಶ್ಚಾತ್ಮತತ್ತ್ವಂ ಸ್ಯಾದೋಂಕಾರ ಸರ್ವತ್ತ್ವಕಃ||58|| (ಶಿವತತ್ತ್ವ ರತ್ನಾಕರ-ಕಲ್ಲೋಲ ! ತರಂಗ 5)
ಇನ್ನೊಂದು ಉಲ್ಲೇಖವನ್ನು ಗಮನಿಸಿರಿ : “ಬಳಿಕಾ ಸಕಲ ಮಂತ್ರಂಗಳೊಳಗೆ ಮುಖ್ಯಮಾದ ಪ್ರಣವವೇ ಪರಪ್ರಣವವೆಂದು ಅಪರಪ್ರಣವವೆಂದು ದ್ವಿವಿಧಮಾಗಿರ್ಪುದು. ಅವರಲ್ಲಿ ಪರಪ್ರಣವವೇ ವಾಚ್ಯಮಾದ ಸತ್ಯಜ್ಞಾನಾದಿ ಲಕ್ಷಣಮುಳ್ಳ ಪರಬ್ರಹ್ಮವೆನಿಸುವುದು. ಬಳಿಕ ಅಪರ ಪ್ರಣವವೇ ವಾಚಕವಾದ ಶಬ್ದರೂಪವಾಗಿ ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರಧಿದೇವತೆಗಳಾದ ರಕ್ತ-ಶುಕ್ಲ_ಕೃಷ್ಣ-ಜ್ಯೋತಿ-ಸ್ಪಟಿಕಮೆಂಬ ಪಂಚವರ್ಣಕ್ರಮವನ್ನುಳ್ಳ ಅಕಾರ-ಉಕಾರ-ಮಕಾರ-ಬಿಂದು-ನಾದವೆಂಬ ಪಂಚಾಕ್ಷರಾತ್ಮಕತ್ವದಿಂ ತಾರಕ-ದಂಡಕ-ಕುಂಡಲಾಕಾರ-ಅರ್ಧಚಂದ್ರಾಕಾರ-ದರ್ಪಣಾಕಾರ-ಜ್ಯೋತಿರಾಕಾರವೆಂಬಾರು ರೂಪದಿಂ-ಓಂಕಾರವೆಂದು, ಬ್ರಹ್ಮವೆಂದು, ಜ್ಞಾನವೆಂದು, ಶಿವಾತ್ಮಕವೆಂದು, ಸರ್ವಾತ್ಮಕವೆಂದು, ವೇದಾದಿಯೆಂದು, ವೇದಭೂಮಿಯೆಂದು, ಮಂತ್ರಪ್ರಾಣವೆಂದು, ಬ್ರಹ್ಮಮೂರ್ತಿಯೆಂದು, ಆತ್ಮಮಂತ್ರಮೆಂದಿವು ಮೊದಲಾದ ಪರ್ಯಾಯನಾಮಗಳುಳ್ಳದಾಗಿಹುದು (ವಿವೇಕ ಚಿಂತಾಮಣಿ-ಪುಟ 76-77).
ಓಂಕಾರಪ್ರಣವವೂ ಗಾಯತ್ರೀಮಂತ್ರವೂ ಶಿವಪರವಾದುದಾದರೂ ಅದನ್ನು ಹಾಗೆ ತಿಳಿಯದ ವೈದಿಕರು ಭ್ರಮಿತರೆಂಬುದು 599ನೇ ವಚನದ ತಾತ್ಪರ್ಯ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು