ಮಾಹೇಶ್ವರನ ಜ್ಞಾನಿಸ್ಥಲ - ಬ್ರಾಹ್ಮಣಿಕೆ
ನೀವು ಹಿರಿಯರೆಂಬಿರಿ, ಕರ್ಮಿಗಳು ನೀವು ಕೇಳಿರಿ;
ನಿಮ್ಮ ವೇದಶಾಸ್ತ್ರಂಗಳು ಆರ ಹೊಗಳುತ್ತಿದ್ದಾವು?
`ಓಂ ದ್ಯಾವಾ ಭೂಮೀ ಜನಯಂ ದೇವ ಏಕೋ ದೇವʼ
ಎಂದು ಶ್ರುತಿ ಸ್ಮೃತಿಗಳು ಸಾರುತ್ತಲಿದ್ದಾವು.
`ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂಬುದು ಹುಸಿ:
`ವರ್ಣಾನಾಂ ಗುರು' ನಮ್ಮ ಕೂಡಲಸಂಗನ ಶರಣರು.
Transliteration Nīvu hiriyarembiri, kārmikaru nīvu kēḷiri;
nim'ma vēdaśāstragaḷu āra hogaḷuttiddavu?
`Ōṁ dyāvā bhūmi janayaṁ dēva ēkō dēvaḥ
endu śruti smr̥tigaḷu sāruttaliddāvu.
`Varṇānāṁ brāhmaṇō guruḥ' embudu husi:
`Varṇānāṁ guru' nam'ma kūḍalasaṅgana śaraṇaru.
Manuscript
English Translation 2 You claim to be superior, ritualists;
You hear it said: whom have
Your Scriptures and your Revelations praised?
Ōṁ! 'He alone is God
Who has created heaven and earth'
That's what proclaim
Your Revelations and your Scriptures too.
It's false to say
The Brahmin is the Guru of castes:
The Guru of castes
Is our Kūḍala Saṅga's Śaraṇā.
Translated by: L M A Menezes, S M Angadi
Hindi Translation अपने को श्रेष्ठ माननेवाले
ओ कर्मियों, तुम सुनो :
तुम्हारे वेद शास्त्र किनका गुणगान करते हैं?
“ओ द्यावा भूमी जनयन देव एको देव”
यों श्रुतिस्मृतियाँ घोषणा करती हैं ॥
‘वर्णानां ब्राह्मणो गुरुः’यह असत्य है ।
‘वर्णानां गुरुः’मम कूडलसंगमेश के शरण हैं ॥
Translated by: Banakara K Gowdappa
Telugu Translation పెద్దలమంటిరే మీరు వినుడో కర్మఠులారా!
మీ వేద శాస్త్రము లెవరిని పొగడుచుండెనో వినుడయ్యా!
ఓం ‘‘ద్యావాభూమీ జనయం దేవ ఏకో దేవ’’ యని
శ్రుతి స్మృతులు చాటె ‘‘‘‘వర్ణానాం బ్రాహ్మణోగురు’’
యనుట తప్పు వర్ణానాంగురు మా సంగని శరణులు.
Translated by: Dr. Badala Ramaiah
Tamil Translation நீவிர் பெரியோரென்பீர், கர்மிகளே, நீவிர் கேண்மின்
உம் வேத சாத்திரங்கள் யாரைப் புகழ்கின்றன?
“ஓம் த்யாவா பூமீ ஜனயன் தேவ ஏக:”
என்று சுருதி ஸ்ம்ருதிகள் இயம்புகின்றன
“வர்ணானாம் ப்ராஹ்மணோ குரு” என்பது பொய்
“வர்ணானாம் குரு நம் கூடல சங்கனின் அடியாரன்றோ!
Translated by: Smt. Kalyani Venkataraman, Chennai
Marathi Translation
तुम्ही मोठे म्हणणाऱ्या कर्मीनों तुम्ही ऐका!
तुमचे वेदशास्त्र कोणाची स्तुती करते ?
`ॐ द्यावा भूमी जनयन् देव एको देव`
म्हणून श्रुती स्मृती घोषीत करतात.
`वर्णानां ब्राह्मनो गुरु` हे खोटे आहे.
`वर्णानां गुरुः` आमच्या कूडलसंगाचे शरण आहेत.
Translated by Shalini Sreeshaila Doddamani
ಶಬ್ದಾರ್ಥಗಳು ಕರ್ಮಿ = ; ದ್ಯಾವಾ = ; ವರ್ಣ = ; ವೇದ = ; ಶ್ರ‍್ರುತಿ = ; ಸÀ್ಮೃತಿ = ; ಹುಸಿ = ; ಹೊಗಳು = ;
ಕನ್ನಡ ವ್ಯಾಖ್ಯಾನ ಬ್ರಾಹ್ಮಣೇತರರಿಗೆಲ್ಲಾ ತಾವೇ ಗುರುಗಳೆಂದು ಹೇಳಿಕೊಂಡು ಅವರಿಗೆ ಶುಷ್ಕಕರ್ಮಗಳನ್ನು ಬೋಧಿಸುತ್ತಿದ್ದರು ಬ್ರಾಹ್ಮಣರು, ಎರಡನೆಯದಾಗಿ ಅವರು ವರ್ಣವ್ಯವಸ್ಥೆಯನ್ನು ಪ್ರತಿಭಟಿಸುತ್ತಿದ್ದ ಶಿವಪಂಥದವರನ್ನು ಖಂಡಿಸುತ್ತಿದ್ದರು. ಹೀಗಾಗಿ ಬ್ರಾಹ್ಮಣರನ್ನು ಕಾಲದಿಂದಲೂ ಗುರುವೆಂದು ಸಾಂಪ್ರದಾಯಿಕವಾಗಿ ಒಪ್ಪಿದ್ದ ಆ ಬ್ರಾಹ್ಮಣೇತರರ ಪಾಡು ದುರ್ಭರವಾಯಿತು. ಇಂಥ ಗಂಡಾಂತರ ಸಮಯದಲ್ಲಿ ಇಡೀ ಭಾರತದಲ್ಲಿ 800 ವರ್ಷಗಳ ಹಿಂದೆಯೇ ಬ್ರಾಹ್ಮಣನ ಗುರುತ್ವವನ್ನು ಪ್ರಶ್ನಿಸಿದವರೆಂದರೆ ಬಸವಣ್ಣನವರೊಬ್ಬರೇ. ಅವರು “ವರ್ಣಾನಾರಿಗುರು” ಶಿವಶರಣರೆಂದು ಘೋಷಿಸಿದರು. (531ನೇ ವಚನವನ್ನು ನೋಡಿ)
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು