•  
  •  
  •  
  •  
Index   ವಚನ - 601    Search  
 
ಮಾಹೇಶ್ವರನ ಜ್ಞಾನಿಸ್ಥಲ - ಜಾತಿ
ನಿಜಭಾವ ಲಕ್ಷ್ಮೀ ಸರಸ್ವತಿ ಒಲಿದರೆ ಕುಲವನರಸಲದೇಕೆ? ಆ ದೇವನೊಲಿದ ಭಕ್ತಂಗೆ ಇನ್ನಾವ ಮಂತ್ರವೇಕೆಯೋ? ಕಾಮಧೇನು ಮನೆಯಲಿರಲು ಬೇರೆ ಹಯನನರಸಲೇಕೆ? ಮೋಹವುಳ್ಳ ಠಾವಿನಲ್ಲಿ ಲಜ್ಜೆಯನರಸಲದೇಕಯೋ? ಮಹಾದಾನಿ ಕೂಡಲಸಂಗಯ್ಯನೊಲಿದು ಮಾದಾರ ಚೆನ್ನಯ್ಯನ ಮನೆಯಲುಂಡ. ವೇದವನೋದಿದವರು ಲಿಂಗವನೊಲಿಸಿ ತೋರಿರೋ.
Transliteration Nijabhāva lakṣmī sarasvati olidare kulavanarasaladēke? Ā dēvanolida bhaktaṅge innāva mantravēkeyō? Kāmadhēnu maneyaliralu bēre hayananarasalēke? Mōhavuḷḷa ṭhāvinalli lajjeyanarasadalēkeyō? Mahādāni kūḍalasaṅgayyanolidu mādara cennayyana maneluṇḍa. Vēdavanōdidavaru liṅgavanolisi tōrirō.
Manuscript
English Translation 2 If Lakúmi the truth and Saraswati the devotion favour you Why worry about caste? Why should a devotee Beloved of God Depend on any other charm? Why look for any other dairy fare Having at home the wishing-cow? Why look for shame where there is love? Lord Kūḍala Saṅga, most bountiful, Dined, out of love, At Mādāra Cennayya's house! Do you win Liṅga first, and then tell me, You readers of the holy books! Translated by: L M A Menezes, S M Angadi
Hindi Translation स्वयंप्रेरणा से लक्ष्मि और सरस्वती के प्रसन्न होने पर जाति क्यों ढूंढते हो? ईश्वर के कृपा पात्र भक्त का अन्य मंत्र क्यों? कामधेनु के घर में रहते किसी अन्य धेनों को क्यों ढूंढते हो? प्रणय-प्रसंग में लज्जा की क्या बात? महादानी कूडलसंगमदेव ने प्रसन्न होकर चमार चन्नय्या के घर में भोजन किया । वेद पाठकों, लिंग को प्रसन्न कर दिखाओ ॥ Translated by: Banakara K Gowdappa
Telugu Translation నిజభావ లక్ష్మీ సరస్వతుల జూచి మెచ్చ కులమునేటికి చూతురో? మహాదేవుడు మెచ్చిన భక్తునకు మఱి వేఱె మంత్రమేటికో? ఇంట కామధేనువుండగ మఱి గొడ్డు నేటికి వెదకుటో? మోహముగలచోట వెదకు టేటికో సిగ్గు? మహాదాత సంగయ్య మెచ్చి మాదార చెన్నయ్యయింట భుజియించె యీ వేదవిదులెవరైనా మెప్పించిరే మా శివుని? చూచిన చెప్పుడో చూతము! Translated by: Dr. Badala Ramaiah
Tamil Translation அலைமகள், கலைமகளின் அருள் இருப்பின் குலத்தை எதற்குத் தேட வேண்டும்? இறைவனருளிய பக்தனுக்கு வேறு மந்திரம் எதற்கோ? காமதேனு இல்லத்திலிருக்க வேறு பசுவைத் தேடுவதேன்? மோகமுள்ள இடத்தில் நாணத்தைத் தேடுவரோ? பெருவள்ளல் கூடல சங்கமதேவன் அருள் செய்து சக்கிலி சென்னய்யனின் இல்லத்தில் உண்டனன் வேதமோதியோர் இலிங்க அருள் பெற்றுக் காட்டுவீர் Translated by: Smt. Kalyani Venkataraman, Chennai
Marathi Translation लक्ष्मी सरस्वतीची कृपा झाल्यावर कुळ का शोधावे ? देव प्रसन्न झालेल्या भक्ताला मंत्राची काय गरज ? कामधेनू घरात असता अन्य दुभत्याची काय गरज ? प्रेमाच्या ठिकाणी लाज कसली? महादानी कूडलसंगमदेव प्रसन्न होऊन मादार चन्नय्याच्या घरी जेवला. वेदपाठीनी लिंगाला प्रसन्न करुन दाखवावे. Translated by Shalini Sreeshaila Doddamani
ಶಬ್ದಾರ್ಥಗಳು ಅರಸು = ಹುಡುಕು; ಕಾÀಮಧೇನು = ; ಠಾವು = ; ಭಾವ = ; ಮಹಾದಾನಿ = ; ಮೋಹ = ; ಲಜ್ಜೆ = ; ಹಯನ = ;
ಕನ್ನಡ ವ್ಯಾಖ್ಯಾನ ಐಶ್ವರ್ಯ ವಿದ್ಯೆ ಎರಡೂ ಇದ್ದ ಕಡೆ-ಜಾತಿಯನ್ನು ನೋಡುವುದೇಕೆ ? ಪ್ರೇಮವಿದ್ದೆಡೆ ಲಜ್ಜೆಪಡಬೇಕೇಕೆ ? ಎನ್ನುತ್ತ ಈ ಲೌಕಿಕ ಪ್ರಶ್ನೆಗಳ ಜೊತೆ ಜೊತೆಗೆ-ದೇವರೊಲಿದ ಮೇಲೆ ಮಂತ್ರದ ಸುದ್ದಿಯೇಕೆ ಎಂದು ಅಬದ್ಧವಾದ ಧಾರ್ಮಿಕ ವಿಚಾರವನ್ನು ಬಾಲಿಶವಾಗಿ ಬೆರೆಸುತ್ತ-ಶಿವನು ಮಾದಾರ ಚೆನ್ನಯ್ಯನ ಜೊತೆಯಲ್ಲಿ ಉಂಡಿದ್ದನ್ನು ಸಮರ್ಥಿಸಿ-ನಿಮಗೆ ವೇದಾಧ್ಯಯನ ಮಾಡಿದ ಮಹಿಮೆಯಿದ್ದರೆ ಚೆನ್ನಯ್ಯನಂತೆ ಶಿವನನ್ನು ಒಲಿಸಿ ತೋರಿರೆಂದು ಬ್ರಾಹ್ಮಣರಿಗೆ ಸವಾಲೆಸೆಯುತ್ತಿರುವ ಈ ವಚನ ಬಸವಣ್ಣನವರದಲ್ಲವೆನ್ನಬೇಕಾದ-ಹಲವಾರು ಅನನ್ವಯಗಳನ್ನು ಒಳಗೊಂಡಿದೆ. ಐಶ್ವರ್ಯ-ವಿದ್ಯೆ ಇದ್ದ ಮೇಲೆ ಜಾತಿಯನ್ನು ಎಣಿಸಬಾರದೆಂಬ ಮಾತು-ಮಾದರ ಚೆನ್ನಯ್ಯನ ಸಂದರ್ಭಕ್ಕೆ ಹೊಂದುವು ಹೇಗೆ ? ದೇವರು ಒಲಿದ ಮೇಲೆ ಮಂತ್ರದ ಗೊಡವೆಯೇಕೆ ಎಂಬುದು ತನಗೆ ತಾನೇ ಪೆಚ್ಚು ಪೆಚ್ಚಾದ ಉಕ್ತಿಯಾಗಿರುವುದಲ್ಲದೆ ಸಂದರ್ಭಕ್ಕೂ ಹೊಂದುತ್ತಿಲ್ಲ. ಹಾಗೆಯೇ-ಕಾಮದೇನುವಿನ ನಿದರ್ಶನ ಕೂಡ. ಇದು ಬಸವಣ್ಣನವರ ವಚನವಾಗಲು ಸಾಧ್ಯವಿಲ್ಲ. “ಮೊಹವುಳ್ಳ ಠಾವಿನಲ್ಲಿ ಲಜ್ಜೆಯನರಸಲದೇಕೋ” ಎಂಬುದಕ್ಕೆ ಸಂಬಂಧಿಸಿದಂತೆ 569ನೇ ವಚನವನ್ನು ನೋಡಿ. 603. ಶಿವಭಕ್ತರೇ ಕುಲಜರು-ಅವರಲ್ಲಿ ಜಾತಿಭೇದವನ್ನು ಮಾಡಬಾರದು. ಆದ್ಯರಿಗೆ ಅನ್ವಯಿಸಿ ನೋಡಿದಾಗ ಈ ಮಾತು ಚೆನ್ನಾಗಿ ತಿಳಿಯುವುದು. ಮಾರ್ಕಂಡೇಯನೆಂಬ ಋಷಿ ಹುಟ್ಟಿದ್ದು ಒಬ್ಬ ಬೆಸ್ತರವಳ ಹೊಟ್ಟೆಯಲ್ಲಿ-ಯಾವನಾಗಲಿ ಬ್ರಾಹ್ಮಣನಾಗುವುದು ತಾನು ಮಾಡುವ ತಪಸ್ಸಿನಿಂದಲೇ(ಹೊರತು ಜನ್ಮಜಾತಿಯಿಂದಲ್ಲ). ಆದ್ದರಿಂದ ಮಹನೀಯರಲ್ಲಿ ಜಾತಿಯನ್ನು ಎಣಿಸಬಾರದು. ಮಹಾತಪಸ್ವಿಗಳಾದ ನಮ್ಮ ಶಿವಶರಣರಿಗೆಲ್ಲಿಯದು ಜಾತಿ-ಜಾತರೆನ್ನೋಣವೆಂದರೆ ಅವರು ಸಂಸಾರಕ್ಕೆ ಅಂಟಿದವರಲ್ಲ. ಅಜಾತರೆನ್ನೋಣವೆಂದರೆ ಅವರು ಎಲ್ಲಿಯಾದರೊಂದೆಡೆ ಜನ್ಮತಳೆದೇ ಬಂದವರು. ಈ ಅರ್ಥದಲ್ಲಿ ಅವರು ಜಾತರೂ ಅಲ್ಲದ ಅಜಾತರೂ ಅಲ್ಲದ ನಿಸ್ಸೀಮರು. (590ನೇ ವಚನ ನೋಡಿ)

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು