ಆದ್ಯರಿಗಲ್ಲದೆ ವೇದ್ಯವಾಗದು: ಮಾಣಿ ಭೋ, ಮಾಣಿ ಭೋ!
ಶಿವಭಕ್ತನೇ ಕುಲಜ:
'ಕೈವರ್ತಕೇ ಗರ್ಭಸಂಭಾವನೇ ಮಾರ್ಕಂಡೇಯ ಮಹಾಮುನಿಃ
ತಪಸಾ ಜಾಯತೇ ವಿಪ್ರಕುಲೇ ತಸ್ಮಾತ್ ಜಾತಿಭೇದಂ ನ ಕುರ್ಯಾತ್ʼ
ಜಾತನಲ್ಲ ಅಜಾತನಲ್ಲ.
ಕೂಡಲಸಂಗನ ಶರಣರು ನಿಸ್ಸೀಮರಯ್ಯಾ!
Transliteration Ādyarigallade vēdyavāgadu: Māṇi bhō, māṇi bhō!
Śivabhaktanē kulaja:
'Kaivartakē garbhasambhāvanē mārkaṇḍēya mahāmuniḥ
tapasā jāyatē viprakulē tasmāt jātibhēdaṁ na kuryāt॥
jātanalla ajātanalla.
Kūḍalasaṅgana śaraṇaru nis'sīmarayya!
Manuscript
English Translation 2 You give it up! Give up!
He is not to be grasped
By any but the pioneers
The Śivabhakta is well- born:
‘ Mārkaṇḍēya, the mighty sage,
Begotten of a fisher’s lions,
By penance moved into the pristly caste:
Do, not, therefore,
Distinguish between caste and caste.’
He’s neither high- born nor low-born:
Beyond all bounds
Is Kūḍala Saṅga’s Śaraṇaś!
Translated by: L M A Menezes, S M Angadi
Hindi Translation छोडो छोडो, पुरातनों के सिवा
किसी को वेद्य नहीं होता शिवभक्त ही कुलीन है ।
कैवर्तगर्भ संभूत मार्कण्डेय महामुनिः
तपसा जायते विप्रकुलमंजातिर्नविद्यते ॥
न वह जात है, न अजात है ।
कूडलसंगमेश के शरण निस्सीम हैं ॥
Translated by: Banakara K Gowdappa
Telugu Translation ఆద్యులకు గాని వేద్యముగాదు; విడుడో, విడుడో, శివభక్తుడే కులజుడు:
‘‘కై వర్తకే గర్భసంభావనే మార్కండేయ మహామునిః
తపసాజాయతే విప్రకు లేతస్మాత్ జాతి భేదం నకుర్యాత్ ‘‘
జాతా జాతులుగారు సంగని శరణులునిస్సీములయ్యా!’’
Translated by: Dr. Badala Ramaiah
Tamil Translation முன்னோரால் மட்டுமே இயலும், சிறுவன், சிறுவன் அன்றோ
சிவபக்தனே நற்குலத்தவன்
“கைவர்த கர்ப ஸம்பூத மார்கண்டேய மஹாமுனி
தபஸா ஜாயதே விப்ரகுலம் ஜாதிர்ன வித்யதே”
தோன்றுவதில்லை, தோன்றாமலும் இல்லை
கூடல சங்கனின் அடியார் எல்லையற்றோ ரையனே
Translated by: Smt. Kalyani Venkataraman, Chennai
Marathi Translation
आद्याविना कोणी जाणत नाही,
कोणी जाणत नाही. शिवभक्त हा श्रेष्ठ कुलीन.
कैवर्तगर्भसंभूतमार्कडेयमहामनेः ।
तपसा जायते विप्रकुलं जातिर्नविद्यते।
जात नाही, अजात नाही.
कूडलसंगमदेवाचे शरण निस्सीम आहेत देवा.
Translated by Shalini Sreeshaila Doddamani
ಶಬ್ದಾರ್ಥಗಳು ಅಜಾತ = ಹುಟ್ಟಿ ಇಲ್ಲದ ಭವವಳಿದ ಶರಣ; ಆದ್ಯರು = ಪುರಾತನರು, ಶಿವಶರಣರು; ಕುಲಜ = ; ಕೈವರ್ತಾ = ; ಜಾತ = ; ನಿಸ್ಸೀಮ = ; ಮಾಣಿ = ; ವಿಪ್ರ = ; ವೇದ್ಯ = ; ಸಂಭೂತ = ;
ಕನ್ನಡ ವ್ಯಾಖ್ಯಾನ ಶಿವಭಕ್ತರೇ ಕುಲಜರು-ಅವರಲ್ಲಿ ಜಾತಿಭೇದವನ್ನು ಮಾಡಬಾರದು. ಆದ್ಯರಿಗೆ ಅನ್ವಯಿಸಿ ನೋಡಿದಾಗ ಈ ಮಾತು ಚೆನ್ನಾಗಿ ತಿಳಿಯುವುದು. ಮಾರ್ಕಂಡೇಯನೆಂಬ ಋಷಿ ಹುಟ್ಟಿದ್ದು ಒಬ್ಬ ಬೆಸ್ತರವಳ ಹೊಟ್ಟೆಯಲ್ಲಿ-ಯಾವನಾಗಲಿ ಬ್ರಾಹ್ಮಣನಾಗುವುದು ತಾನು ಮಾಡುವ ತಪಸ್ಸಿನಿಂದಲೇ(ಹೊರತು ಜನ್ಮಜಾತಿಯಿಂದಲ್ಲ). ಆದ್ದರಿಂದ ಮಹನೀಯರಲ್ಲಿ ಜಾತಿಯನ್ನು ಎಣಿಸಬಾರದು.
ಮಹಾತಪಸ್ವಿಗಳಾದ ನಮ್ಮ ಶಿವಶರಣರಿಗೆಲ್ಲಿಯದು ಜಾತಿ-ಜಾತರೆನ್ನೋಣವೆಂದರೆ ಅವರು ಸಂಸಾರಕ್ಕೆ ಅಂಟಿದವರಲ್ಲ. ಅಜಾತರೆನ್ನೋಣವೆಂದರೆ ಅವರು ಎಲ್ಲಿಯಾದರೊಂದೆಡೆ ಜನ್ಮತಳೆದೇ ಬಂದವರು. ಈ ಅರ್ಥದಲ್ಲಿ ಅವರು ಜಾತರೂ ಅಲ್ಲದ ಅಜಾತರೂ ಅಲ್ಲದ ನಿಸ್ಸೀಮರು. (590ನೇ ವಚನ ನೋಡಿ)
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು