ಮಾಹೇಶ್ವರನ ಜ್ಞಾನಿಸ್ಥಲ - ಜಾತಿ
ದೇವಾ, ನಿಮ್ಮ ಪೂಜಿಸಿ ಚೆನ್ನನ ಕುಲ ಚೆನ್ನಾಯಿತ್ತಯ್ಯಾ;
ದೇವಾ, ನಿಮ್ಮ ಪೂಜಿಸಿ ದಾಸನ ಕುಲ ದೇಸೆವಡೆಯಾಯಿತ್ತು.
ದೇವಾ, ನಿಮ್ಮಡಿಗೆರಗಿದ ಮಡಿವಾಳ ಮಾಚಯ್ಯನಿಮ್ಮಡಿಯಾದ!
ನೀನೊಲಿದ ಕುಲಕ್ಕೆ, ನೀನೊಲ್ಲದ ಹೊಲೆಗೆ ಮೇರೆಯುಂಟೆ, ದೇವಾ?
'ಶ್ವಪಚೋಪಿ ಮುನಿಃಶ್ರೇಷ್ಠೋ|| ಯಸ್ತು ಲಿಂಗಾರ್ಚನೇ ರತಃ
ಲಿಂಗಾರ್ಚನವಿಹೀನೋಪಿ|| ಬ್ರಾಹ್ಮಣಃ ಶ್ವಪಚಾಧಮಃ'
ಎಂದುದಾಗಿ, ಜಾತಿ-ವಿಜಾತಿಯಾದರೇನು?
ʼಅಜಾತ ಶರಣೆನ್ನದವನು, ಆತನೆ ಹೊಲೆಯ!
ಕೂಡಲಸಂಗಮದೇವಾ.
Transliteration Dēvā, nim'ma pūjisi cennana kula cennāyittayyā;
dēvā, nim'ma pūjisi dāsana kula dēsevaḍeyāyittu.
Dēvā, nim'maḍigeragida maḍivāḷa mācayyanim'maḍiyāda!
Nīnolida kulakke, nīnollada holakke mēreyuṇṭe, dēvā?
'Śvapacōpi muniḥśrēṣṭhō|| yastu liṅgārcanē rataḥ
liṅgārcanavihīnōpi|| brāhmaṇaḥ śvapacādhamaḥ'
endu, jāti-vijātiyādarēnu?
ʼajāta śaraṇennadavanu, ātana holeya!
Kūḍalasaṅgamadēvā.
Manuscript
English Translation 2 O God, after adoring Thee
The caste of Cenna changed to good!
O God, after adoring Thee,
The caste of Dāsa became agreeable;
O God, when Maḍivāḷa Mācayya
Fell at Thy feet!
Fused in Thy feet!
What boundary is there, O Lord,
Unto the caste Thou love'st,
The filth Thou lovest not?
"He who is dedicate
To Liṅga-worship, though he be
An outcast, is an eccellent sage;
Whereas a Brahmin void of it
Is but an outcast"-this being so,
What means this high and lower caste?
It's he who does not say
'I salute Thee, O unborn'
That is the low-born man!
Translated by: L M A Menezes, S M Angadi
Hindi Translation देव, तव पूजा से चन्न का कुल पावन हुआ;
देव, तव पूजा से दास का कुल सुंदर हुआ;
देव, माचय्या तव चरणों पर गिरकर लीन हुआ।
देव तव वांछित कुल की अवांछित
मालिन्य की कोई सीमा है?
“श्वपचोपि मुनिश्रेष्ठो यस्तु लिंगार्चने रतः ।
लिंगार्चनविहीनो पि ब्राह्मण: श्वपचाधम:॥“
अतः जात का हो या विजात का
अजात को प्रणाम नहीं करनेवाला ही अंत्यज है
कूडलसंगमदेव ॥
Translated by: Banakara K Gowdappa
Telugu Translation దేవా, నిన్ను పూజించి చెన్నునికులము వన్నెకెక్కె;
దేవా, నిన్ను పూజించి దాసునికులము వాసిగాంచె
దేవా; నీ పాదములబడు మడివాల మాచయ్య నీ పాదమయ్యె;
నీవు మెచ్చిన కులమునకు మెచ్చని మాలకు మేరగలదే దేవా !
‘‘శ్వపచోపి మునిః శ్రేషో! యస్తులింగార్చనే రతః
లింగార్చనా విహీనోపి! బ్రాహ్మణః శృపచాధమః’’
గాన జాతి విజాతి jైుననేమి?
శరణు డజాతుడననివాడే మాల
కూడల సంగమదేవా!
Translated by: Dr. Badala Ramaiah
Tamil Translation இறைவா உம்மை வணங்கி சென்னனின் குலம் விளங்கியது
இறைவா உம்மை வணங்கி தாசனின் குலம் விளங்கியது
இறைவா உம் அடிபணிந்த வண்ணான் மாசய்யன்
நிம்மருள் பெற்றனன், நீ அருளிய குலம், நீ அருளாத
கீழ்மையோருக்கு எல்லையுளதோ இறைவா?
“ச்வபசோபி முனிச்ரேஷ்டோ யஸ்து லிங்கார்ச்சனே ரத
லிங்கார்ச்சனவிஹீனோபி ப்ராஹ்மண ச்வபசாதம”
எந்த ஜாதியாக இருப்பிலென்ன, பிறப்பிலிக்குத் தஞ்சம்
என்னாதவன், அவன் புலையனே கூடல சங்கமதேவனே.
Translated by: Smt. Kalyani Venkataraman, Chennai
Marathi Translation
मातंग चन्नया, सदैव प्रसन्न
शूद्र नोहे जाण तया कुल
दासय्य प्रख्यात भक्तीमुळे झाला
जाणे दसोहात तोची धन्य
परीट माचय्या, तोहि शुद्ध झाला
वैभवे वाढला भक्ति मार्ग
कूडलसंगमदेव ज्यावरी प्रसन्न
थोर तो कुलिन, मान्य होय
श्लोक : "" श्वपचो ऽपि मुनिश्रेष्ठोयस्तु लिंगार्चने रतः।
लिंगार्चनाविद्दोनो ऽपि ब्राम्हणः श्वपचाद्यमः ॥“
म्हणूनः म्हणवितो जरि, अजात शरण
शूद्र तो ब्राम्हण, वाटे मज
अर्थ - हे प्रभो! शिवशरण चन्नय्या मातंग असून तुझ्या पूजनाने उद्धरला. शिवभक्त दासव्या धोबी माचय्याचे कूल धूतले गेले. तू ज्यावर प्रसन्न झालास त्यांचे कुल न शुद्र होय न अशुद्ध होय. तुला न जाणता स्वतःला अजात शिवभक्त म्हणून घेणारे, ब्राह्मण कुळातले म्हणून घेणारे असो ते मला शुद्रातिशुद्र वाटतात.
Translated by Rajendra Jirobe, Published by V B Patil, Hirabaug, Chembur, Mumbai, 1983
देवा, तुमची पूजा केल्याने चन्नय्याचे कुल पावने झाले.
देवा, तुमची पूजाकेल्याने दासिमय्यचे कुल प्रख्यात झाले.
देवा, तुम्हा शरणआल्याने माचय्या प्रसिध्दी द्विगुणी झाली.
तुमची कृपा असलेला श्रेष्ठ कुलीन.
तुमची कृपा नसलेला कनिष्ठ कुलाचा देवा.
श्वपचोऽपि मुनिश्रेष्ठो यस्तु लिंगार्चने रतः।
लिंगार्चनविहीनोऽपि ब्राह्मणःश्वपचा धमः।
म्हणून कोणत्याही जातीचा असला तरी
परशिवाला शरण न येणारा अस्पृश्य आहे कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಅಜಾತ = ಹುಟ್ಟಿ ಇಲ್ಲದ ಭವವಳಿದ ಶರಣ; ಅಡಿ = ಹೆಜ್ಜೆ, ಪಾದ; ಅರ್ಚನೆ = ಪೂಜೆ; ಉಪಿ = ; ಎರಗು = ; ಒಡೆ = ; ಚÉನ್ನ = ; ದಾಸ = ; ದೇಸೆ = ; ಮೇರೆ = ; ವಿಹಿನ = ; ಶ್ವಪಚ = ; ಹೊಲೆ = ;
ಕನ್ನಡ ವ್ಯಾಖ್ಯಾನ ಶಿವಭಕ್ತನಾದವನು ಚೆನ್ನಯ್ಯನಂತೆ ಮಾದಾರನಾಗಲಿ, ದಾಸಯ್ಯನಂತೆ ನೆಯ್ಗೆಯವನಾಗಲಿ, ಮಾಚಯ್ಯನಂತೆ ಮಡಿವಾಳನಾಗಲಿ-ಎಲ್ಲರೂ ಸತ್ಕುಲದವರೆನಿಸಿದರು, ಎಲ್ಲರೂ ಅಭಿವೃದ್ಧಿಗೆ ಬಂದರು. ಹೀಗೆ ಕುಲಮತಗಳ ಭೇದವಿಲ್ಲದೆ ಸರ್ವರ ಉದ್ಧಾರವಾಗಲು ಬೇಕಾದ ಅವಕಾಶಗಳನ್ನು ಒದಗಿಸಿ ಪ್ರೋತ್ಸಾಹ ಮಾಡುವುದೇ ಶೈವಧರ್ಮದ ಉದ್ದೇಶ.
ಮತ್ತೊಮ್ಮೆ ಹೇಳುತ್ತೇನೆ-ಈ ಶಿವಧರ್ಮವನ್ನು ಆಶ್ರಯಿಸಿದವರು ಅಧಮಜಾತಿಯವರೇ ಆಗಲಿ-ಅವರು ಉತ್ತಮೋತ್ತಮರೆಂದು ಗಣನೆಗೆ ಬರುವರು. ಶಿವಾಗಮದ ಈ ಮುಂದಿನ ವಾಕ್ಯವನ್ನು ನೋಡಿ: “ಲಿಂಗಪೂಜಾನಿರತನು ಶ್ವಪಚನಾದರೇನು ಮುನಿಶ್ರೇಷ್ಠನಾಗುವನು, ಲಿಂಗಪೂಜಾರಹಿತನು ಹೊಲೆ ಮಾದಿಗರಿಗಿಂತ ಮೇಲಲ್ಲ.”
ಹುಟ್ಟಿನ ಸೂತಕವಿಲ್ಲದ ಶಿವಭಕ್ತರಲ್ಲಿ ಜಾತಿಯಿಲ್ಲ ವಿಜಾತಿಯಿಲ್ಲ-ಎಲ್ಲರೂ ಸರಿಸಮಾನರು, ಸಮಾನ ಮಾನ್ಯರು, ಭಾಗ್ಯವಾನರು.
ಒಮ್ಮೆ ಶಿವಪಂಥಕ್ಕೆ ಸೇರಿದವರೆಂದ ಮೇಲೆ-ಪರಸ್ಪರ ವಂದ್ಯರು. ಜಾತಿತಾರತಮ್ಯ ಮಾಡಿ ವಂದಿಸಿದವನು ಹೊಲೆಯನು-ಅವನನ್ನು ತಿರಸ್ಕರಿಸಬೇಕು. ಇದು ಬಸವಣ್ಣನವರ ಸಾಮಾಜಿಕ ನ್ಯಾಯದ ನಿಲುವು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು