•  
  •  
  •  
  •  
Index   ವಚನ - 606    Search  
 
ಚತುರ್ವೇದಿಯಾದರೇನು? ಲಿಂಗವಿಲ್ಲದವನೇ ಹೊಲೆಯ! ಶ್ವಪಚನಾದರೇನು? ಲಿಂಗವಿದ್ದವನೇ ವಾರಣಾಸಿ. ಆತನ ನುಡಿಗಡಣವೇ ಲೇಸು, ಆತ ಜಗಕ್ಕೆ ಪಾವನ; ಆತನ ಪ್ರಸಾದವೆನಗಮೃತಸೇವನೆ! 'ನ ಮೇ ಪ್ರಿಯಶ್ಚತುರ್ವೇದೀ ಮದ್ಭಕ್ತಃ ಶ್ವಪಚೋಪಿ ವಾ| ತಸ್ಮಾದೇಯಂ ತತೋ ಗ್ರಾಹ್ಯಂ|| ಸ ಚ ಪೂಜ್ಯೋ ಯಥಾಹ್ಯಹಂ' ಕೂಡಲಸಂಗಮದೇವನನರಿತು ಪೂಜಿಸಿದಾತ ಷಡುದರುಶನಕ್ಕಧಿಕ, ಜಗಕ್ಕೆ ಪಾವನ, ನೋಡಾ!
Transliteration Caturvēdiyādarēnu? Liṅgavilladavane holeya! Śvapacanādarēnu liṅgaviddavane vāraṇāsi. Ātana nuḍigaḍaṇavē lēsu, āta jagakke pāvana; ātana prasādavenagamr̥tasēvane! 'Na mē priyaścaturvēdī madbhaktaḥ śvapacōpi vā| tasmā dēyaṁ tatō grāhyaṁ|| sa ca pūjyō yathāhyaham' endudāgi, kūḍalasaṅgamadēvananaritu pūjisidāta ṣaḍudaruśanakkadhika, jagakke pāvana, nōḍā!
Manuscript
English Translation 2 What if he knows the four Vēdās? Without Liṅga, he is a low- born man! What if he be an outcast? With Liṅga he is a holy place ! His words are gracious, he blesses the world; His Prasāda is to me ambrosia – sweet! ‘ One who has the four Vēdās by heart, He is not dear to me; A Swapaca, Although he cooks dog’s meat, Is dear to me. To him you give, from him receive: He is as venerable as I myself.’ One who knows KudalaSangama and worships Is greater than the six systems; He is holy to the world,You know! Translated by: L M A Menezes, S M Angadi
Hindi Translation चतुर्वेदी होने से क्या? लिंग हीन ही अंत्यज है । श्वपच होने से क्या? लिंगधारी ही वाराणसी है, उसकी वचनावली ही अच्छी है, वह जग के लिए पावन है, उसका प्रसाद हमारे लिए अमृतसेवन है।- न में प्रियश्चतुर्वेदी मदभ्क्तः श्वपचोपि वा। तस्य देयं ततो ग्राह्म सच पूज्यो यथाह्यहं । अतः कूडलसंगमदेव को जानकर पूजनेवाला षड्दर्शन से अधिक है, जग के लिए पावन ॥ Translated by: Banakara K Gowdappa
Telugu Translation చతుర్వేదిjైున నేమి? లింగములేనివా డేమాల! శ్వపచుడెన నేమి? లింగము కలవాడే శివుడు వాని మాట వినుటే మంచిది వాని ప్రసాదమే అమృతము నాకు, వాడు జగత్పావనుడు ‘‘నమే ప్రియశ్చతుర్వేదీ మద్భక్తం శ్వపచోపివా తస్మా దేవతతో గ్రాహ్యం నచపూజ్యో యధాహ్సహం’’ మా మహాదేవుని తెలిసి పూజించువాడే షడ్దర్శనునికంటె మిన్న జగత్పావనుడురా ! Translated by: Dr. Badala Ramaiah
Tamil Translation நான்கு மறையை ஓதியவனாக இருப்பிலென்ன இலிங்கமற்றவனே புலையன் கீழ்க்குலத்தவனாயினென்ன இலிங்கமுள்ளவனே காசியாம் அவன் மொழிகள் நன்மைபயப்பவை. அவன் உலகிலேயே புனிதமானவன் அவன் திருவமுது எனக்கு அமுதத்தைச் சுவைப்பதாம் “ந மே ப்ரியச்சதுரவேதீ மத்பக்த ச்வபசோபி வா தஸ்ய தேயம் ததோ க்ராஹ்யம் ஸ ச பூஜ்யோ யதாஹ்யஹம்” கூடல சங்கமதேவனை அறிந்து வணங்கிய அவன் ஆறு தரிசனங்களிலும் மேலானவன் உலகிலேயே புனிதமானவன், காணாய்! Translated by: Smt. Kalyani Venkataraman, Chennai
Marathi Translation चतुर्वेदी असला तरी काय झाले ? लिंगधारण न करणारा अस्पृश्य आहे. श्वपच असला तरी काय झाले ? लिंगधारी कुलज आहे. त्याची वाणी पावन, तो जगाला पावन. त्याचा प्रसाद माझे अमृत सेवन आहे. न मेप्रियश्चतुर्वेदी मद्भक्तः श्वपचोऽपिवा तस्य देयं ततो ग्राह्यं स च पुज्यो यथाह्यहं। म्हणून कूडलसंगमदेवाचे उपासक षड्दर्शनाहून श्रेष्ठ आहेत. जगाला पावन आहेत पहा. Translated by Shalini Sreeshaila Doddamani
ಶಬ್ದಾರ್ಥಗಳು ಉಪಿ = ; ಗ್ರಾಹ್ಯ = ; ಚತುರ್ವೇದಿ = ; ನುಡಿಗಡಣ = ; ಪಾವನ = ; ಪ್ರಸಾದ = ; ಲೇಸು = ; ಶ್ವಪಚ = ; ಶ್ವಪಚ = ; ಹೊಲೆಯ = ;
ಕನ್ನಡ ವ್ಯಾಖ್ಯಾನ ಯಾವನಾದರೊಬ್ಬನು ಕುಲಜನೇ ಎಂಬುದನ್ನು ನಿರ್ಣಯಿಸುವುದು-ಅವನ ಅಧ್ಯಯನ ಮಾಡಿದ ವೇದವಲ್ಲ. ಧರಿಸಿರುವ ಲಿಂಗ. ಲಿಂಗಧರಿಸಿದವನೇ ತೀರ್ಥರೂಪಿ, ಅವನ ಮಾತೇ ಸೂಕ್ತಿ, ಅವನು ಜಗತ್ತಿಗೆ ಪಾವನ. ಅಂಥವನ ಪ್ರಸಾದವೇ ನನಗೆ ಅಮೃತಪ್ರಾಯ. ಕೂಡಲಸಂಗಮದೇವರನ್ನು ತಿಳಿದು ಪೂಜಿಸಿದಾತನು ಷಡ್ದರ್ಶನಗಳಿಗೂ ಅಧಿಕನು-ಅವನು ಜಗತ್ತಿಗೆ ಪಾವನ. ಉಲ್ಲೇಖಿತ ಶ್ಲೋಕದ ಅರ್ಥ : ಚತುರ್ವೇದಿಯು ನನಗೆ ಪ್ರಿಯನಲ್ಲ. ನನ್ನ ಭಕ್ತನು ಶ್ವಪಚನಾದರೂ ಅವನಿಗೆ ಕೊಟ್ಟು ಅವನಿಂದ (ಪ್ರಸಾದವನ್ನು) ಸ್ವೀಕರಿಸಬೇಕು. ಅವನು ನನ್ನಂತೆಯೇ ಪೂಜ್ಯನು. ಲಿಂಗಧಾರಣೆಯನ್ನು ಒತ್ತಿ ಹೇಳುವ ಸಲುವಾಗಿ ಪ್ರಕ್ಷೇಪವಾದ ವಚನವಿದು. ಬಂಧದಲ್ಲಿ ಶೈಥಿಲ್ಯ, ಪದಪ್ರಯೋಗದಲ್ಲಿ ಪುನರುಕ್ತಿ ಮುಂತಾದ ದೋಷಗಳೂ ಇವೆ. (ಇದರ ಮೇಲೇ ಆಧಾರಗೊಂಡು ಪ್ರಕ್ಷಿಪ್ತವಾಗಿರುವ 628ನೇ ವಚನವನ್ನು ನೋಡಿ).

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು