•  
  •  
  •  
  •  
Index   ವಚನ - 607    Search  
 
ಮಾಹೇಶ್ವರನ ಜ್ಞಾನಿಸ್ಥಲ - ದಾಸೋಹ
ಭಕ್ತಿಹೀನನ ದಾಸೋಹವ ಸದ್ಭಕ್ತರು ಸವಿಯರು: ಬೇವಿನ ಹಣ್ಣು ಕಾಗೆಗೆ ಇನಿದಲ್ಲದೆ ಕೋಗಿಲೆಗೆ ಮೆಲಬಾರದು. ಲಿಂಗಸಂಬಂಧವಿಲ್ಲದವರ ನುಡಿ ಕೂಡಲಸಂಗನ ಶರಣರಿಗೆ ಗಮನಿಸದು.
Transliteration Bhaktihīnana dāsōhava sadbhaktaru saviyaru: Bēvina haṇṇu kāgege innillade kōgilege melabāradu. Liṅgasambandhavilladavara nuḍi kūḍalasaṅgana śaraṇarige samanisadu.
Manuscript
English Translation 2 The real devotees Reject the service of the impious man: The neem fruit to the crow is dear; It's wormwood to the cuckoo-bird. The speech of those who have No touch with Liṅga Is bitter to the Śaraṇās Of Kūḍala Saṅga ! Translated by: L M A Menezes, S M Angadi
Hindi Translation भत्किहीन का भोजन सदभत्क नहीं खाते निबौरी काक के लिए प्रिय है उसे कोयल नहीं खा सकती । जो लिंगांगी नहीं है उनकी वाणी कूडलसंग के शरणों को नहीं भाती ॥ Translated by: Banakara K Gowdappa
Telugu Translation భక్తి హీనుని దాసోహము సద్భక్తులు చవి చూడరు; వేసపండు కాకికి ప్రియముగాని కోకిలకు గాదు; లింగ సంబంధము లేనివాని పలుకు సంగని శరణులకు సరిపడదయ్యా! Translated by: Dr. Badala Ramaiah
Tamil Translation பக்தியற்றவனின் உணவை நல்ல பக்தர் ஏற்பதில்லை வேப்பங்கனி காக்கைக்கு இனிக்குமல்லது குயிலால் மெல்லவியலாது இலிங்கத்துடன் தொடர்பற்றவரின் சொல் கூடல சங்கனின் அடியார்க்கு ஏற்புடையதன்று. Translated by: Smt. Kalyani Venkataraman, Chennai
Marathi Translation अभक्ताचा तो दासोह स्विकारी ना सद्भक्त लिंगधारी अनासक्त माझा शिवशरण ।। १ ।। कागा आवडे लिंबोळी टाळी कोफीळ लिंब डाहळी अभवताचे अन्न टाळी माझा शिवशरण ।। २ ।। अभक्ताचा शब्द जाप कूडलसंगमदेव - शरण कधी नच देई कान माझा शिवशरण ॥ ३ ॥ अर्थ - शिवशरणास भक्तिहीनांचा दासोह मुळीच आवडत नसतो. तसा दासोह स्विकारणे म्हणजे कोकिळाने लिंबोळ्याचे सेवन केल्यागत होय. जी लिंबोळी कावळ्याचे भक्ष असते. माझ्या कूडलसंगमदेवाचे शिवशरण आधारहीन लिंगधाऱ्यांचे अथवा लिंगधारी आधारहीनांचे दासोह स्विकारीत नाहीत. शिवाय आचारहीनाचे तोंडून निघालेले शब्द देखील आपल्या कानावर पडू देत नाहीत. Translated by Rajendra Jirobe, Published by V B Patil, Hirabaug, Chembur, Mumbai, 1983 भक्तीहीनाचा दासोह सद्भक्तांना रुचत नाही. निंबोळी कावळ्याला आवडते. कोकिळेला आवडत नाही. लिंग संबंधाविना असणारांची वाणी कूडलसंगाच्या शरणांना आवडत नाही. Translated by Shalini Sreeshaila Doddamani
ಶಬ್ದಾರ್ಥಗಳು ಇನಿದು = ; ದಾಸೋಹ = ; ಸಮನಿಸು = ; ಸವಿ = ;
ಕನ್ನಡ ವ್ಯಾಖ್ಯಾನ ಈ ವಚನದಲ್ಲಿ ಭಕ್ತಿಹೀನ ಎಂಬ ಶಬ್ದವನ್ನು ಲಿಂಗಧಾರಿಯಲ್ಲದ (ಭವಿ) ಎಂಬುದಕ್ಕೆ ಪರ್ಯಾಯವಾಗಿ ಬಳಸಲಾಗಿದೆ. ಆ ಪ್ರಕಾರ ಆ ಭವಿ (ಭಕ್ತಿಹೀನವಾಗಿಯೇ ಆಗಲಿ) ದಾಸೋಹ ಮಾಡುವನೆಂದಂತಾಗುವುದು ಇದು ಅಸಂಗತ. ಮತ್ತು ಸದ್ಭಕ್ತರು ಕೋಗಿಲೆಯಂತೆ, ಭವಿಗಳು ಕಾಗೆಯಂತೆ ಎಂದು ಮುಂತಾದ ವೃಥಾ ನಿಂದೆಗಳು ಧ್ವನಿತವಾಗಿ-ಉಕ್ತಿಯ ಘನತೆಯನ್ನು ಕುಂದಿಸಿವೆ. ಕೊನೆಯದಾಗಿ ಲಿಂಗಧಾರಿಯಲ್ಲದವನ ಮನೆಯಲ್ಲಿ ಉಣ್ಣಬಾರದೆಂಬ ಮಾತನ್ನು ಒಪ್ಪಬಹುದಾದರೂ-ಆ ಭವಿಯ ಮಾತೇ ಇವನಿಗೆ ಸರಿಬೀಳುವುದಿಲ್ಲವೆಂಬಂತಿರುವುದು ಅತಿರೇಕವಾಯಿತಾಗಿ ಒಪ್ಪಲಾಗದು (ವ್ಯವಹಾರವಿರುದ್ಧವೆಂದರ್ಥ). ಈ ಎಲ್ಲ ಕಾರಣಗಳಿಂದ ಈ ವಚನ ಬಸವಣ್ಣನವರ ನಿಜವಚನವಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು