ಮಾಹೇಶ್ವರನ ಜ್ಞಾನಿಸ್ಥಲ - ಲಿಂಗ-ಜಂಗಮ
ಲಿಂಗವಿಲ್ಲದೆ ನಡೆವವರ, ಲಿಂಗವಿಲ್ಲದೆ ನುಡಿವವರ-
ಲಿಂಗವಿಲ್ಲದೆ ಉಗುಳ ನುಂಗಿದರೆ-
ಅಂದಂದಿಗೆ ಕಿಲ್ಬಿಷವಯ್ಯಾ! ಏನೆಂಬೆನೇನೆಂಬೆನಯ್ಯಾ?
ಲಿಂಗವಿಲ್ಲದೆ ನಡೆವವರ ಅಂಗ ಲೌಕಿಕ: ಮುಟ್ಟಲಾಗದು:
ಲಿಂಗವಿಲ್ಲದೆ ನುಡಿದ ಶಬ್ದ ಸೂತಕ: ಕೇಳಲಾಗದು!
ಲಿಂಗವಿಲ್ಲದೆ ಗಮನಿಸಿದೊಡೆ ಆ ನಡೆನುಡಿಗೊಮ್ಮೆ ವ್ರತಗೇಡಿ,
ಕೂಡಲಸಂಗಮದೇವಾ!
Transliteration Liṅgavillade naḍevavara, liṅgavillade nuḍivavara-
liṅgavillade uguḷa nuṅgidare-
andandige kilbiṣavayya! Ēnembenēnembenayyā?
Liṅgavillade naḍevara aṅga laukika: Muṭṭalāgadu:
Liṅgavillade nuḍida śabda sūtaka: Kēḷalāgadu!
Liṅgavillade gamanisidoḍe ā naḍenuḍigom'me vratagēḍi,
kūḍalasaṅgamadēvā!
Manuscript
English Translation 2 You from whose Walk and words
Liṅga is absent- even if you
Swallow your spit apart from Him-
It is a nasty poison all the time!
What shall I say, good Sir,
What shall I say?
The body of those who live
Without Liṅga is of the world-
You shun its touch;
The words he speaks
Without Liṅga are impure-
You cannot bear to hear them !
If you move about
Without Liṅga, your walk and speech
Is, all the time,a breach of vows,
O KudalaSangama Lord!
Translated by: L M A Menezes, S M Angadi
Hindi Translation लिंग बिना चलनेवालों का
लिंग बिना बोलनेवालों का
लिंग बिना थूक निगले, क्या कहूँ, क्या कहूँ?
तो तभी विष बनता है ।
लिंग बिना चलनेवालों का
अंग लौकिक है, स्पर्श नहीं करना चाहिए ।
लिंग बिना उच्चरित श्ब्द अपवित्र है
नहीं सुनना चाहिए ।
लिंग बिना चलते हो
तो प्रत्येक चाल और वचन से व्रतभंग करते हो,
कूडलसंगमदेव ॥
Translated by: Banakara K Gowdappa
Telugu Translation లింగములేక నడచువారల; లింగములేక పలుకు వారల
లింగములేక యెంగిలి మ్రింగిన
అప్పటప్పటికే దోషమేమందు నేమందు
లింగములేక నడచువాని అంగము
లౌకికము ముట్టరాదు; లింగహీనునిమాట
సూతకము వినరాదు! లింగములేక కలియగ
ఆ నడనుడులు వ్రతమునకుచేటగు సంగమదేవా!
Translated by: Dr. Badala Ramaiah
Tamil Translation இலிங்கமின்றி ஒழுகுவோருக்கு, இலிங்கமின்றி உரைப்போருக்கு
இலிங்கமின்றி மிச்சிலை விழுங்குவோருக்கு
அன்றன்றே பாவம் ஐயனே
என்னென்பேன், என்னென்பேன் ஐயனே?
இலிங்கமின்றி ஒழுகுவோரினுடல் உலகியல் சார்ந்தது
தீண்டலாகாது, இலிங்கமின்றி உரைப்போர்
மாசு சொல் மாசு கேட்கலாகாது
இலிங்கமின்றிச் செல்வோரின் நடை, சொல் போன்றவை
நியமமற்றவை, கூடல சங்கமதேவனே
Translated by: Smt. Kalyani Venkataraman, Chennai
Marathi Translation
लिंगधारणेविना आचरण, लिंगधारणविना वाणी.
लिंगधारणेविना थुकी गिळणेही सदा किल्मीष आहे.
काय सांगू ? काय सांगू ?
लिंगधारणेविना आचरण करणारांचे अंग लौकिक.
त्याला स्पर्शही करु नये.
लिंगधारणेविना बोलणाराची वाणी सुतक आहे. ती ऐकू नये.
लिंगधारणेविना आचरण अनाचार आहे कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಕಿಲ್ಬಿಷ = ; ಗಮನಿಸು = ; ಲೌಕಿಕ = ; ವ್ರತ = ; ಸೊತಕ = ;
ಕನ್ನಡ ವ್ಯಾಖ್ಯಾನ ಬಂಧದೃಷ್ಟಿಯಿಂದ ಹರಿಕು ಮುರಿಕಾಗಿರುವ, ಮತ್ತು ಭವಿಗಳನ್ನು ಮುಟ್ಟಿಸಿಕೊಳ್ಳಬಾರದು, ಅವರ ಶಬ್ದವನ್ನೂ ಕಿವಿಯಿಂದ ಕೇಳುವುದು ಪಾಪವೆನ್ನುವ ಈ ವಚನ ಮತ್ತೊಂದು ವಿಧವಾದ ಅಸ್ಪೃಶ್ಯತಾಚರಣೆಯನ್ನು ಬೋಧಿಸುತ್ತಿರುವುದಾಗಿ-ಬಸವಣ್ಣನವರ ನಿಜವಚನವಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು