ಮಾಹೇಶ್ವರನ ಜ್ಞಾನಿಸ್ಥಲ - ನೆನಹು
ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ,
ಗ್ರಹಣ-ಸಂಕ್ರಾಂತಿಯಿಂದ ವೆಗ್ಗಳ,
ಏಕಾದಶಿ-ವ್ಯತೀಪಾತದಿಂದ ವೆಗ್ಗಳ,
ಸೂಕ್ಷ್ಮಶಿವಪಥವರಿದವಂಗೆ-
ಹೋಮ-ನೇಮ-ಜಪ-ತಪದಿಂದ ವೆಗ್ಗಳ,
ಕೂಡಲಸಂಗಮದೇವಾ, ನಿಮ್ಮ ಮಾಣದೆ ನೆನೆವಂಗೆ.
Transliteration Eraḍunālku tithiyinda veggaḷa,
grahaṇa-saṅkrāntiyinda vēgagaḷu,
ēkādaśi-vyatīpātadinda vēgagaḷu,
sūkṣmaśivapathavaridavaṅge-
hōma-nēma-japa-tapadinda vēgagaḷu,
kūḍalasaṅgamadēvā, nim'ma māṇade nenevaṅge.
Manuscript
English Translation 2 Above the four-and-twenty days,
Above the solstice and eclipse,
Above the eleventh lunar day
And adverse concourse of the sun and moon
Is he who has known the subtle Śiva-path;
Above the sacrifice,
Vow, penance or the telling of beads
Is he who invokes Thee without cease,
O Kūḍala Saṅgama Lord!
Translated by: L M A Menezes, S M Angadi
Hindi Translation सदा तव स्मरण करनेवाले को
तव स्मरण ही चौबीस तिथियों से अधिक,
ग्रहण-संक्रांतियों से अधिक,
एकादशी व्यतीपात से अधिक है, शिवपथ सूक्ष्म शिव पथवेता के लिए।
कूडलसंगमदेव जो निरंतर स्मरण करता है
उसके लिए तव स्मरण ही होम, नेम,जप, तप से भी अधिक है ॥
Translated by: Banakara K Gowdappa
Telugu Translation ఇరవై నాల్గు తిథులకంటె యెక్కువ,
గ్రహణ సంక్రాంతి కంటే యెక్కువ;
ఏకాదశ -వ్యతీ పాతములకంటె మిన్న
సూక్ష్మమగు శివపధము తెలిసినవానికి ;
హోమ జపతప నియమములకంటె మిన్న
నిన్ను సదాస్మరించువాని స్మరణ సంగమదేవా!
Translated by: Dr. Badala Ramaiah
Tamil Translation இருபத்துநான்கு திதிகளால் பெருமையாம்
கிரகணம் சங்கராத்திகளால் பெருமையாம்
ஏகாதசீ, சூரிய சந்திர அவ யோகத்தினால் பெருமையாம்
நுட்பமான சிவவழியை அறிந்தோனுக்கு
ஹோமம், நியமம், ஜபம், தவத்தினால் பெருமையாம்
கூடல சங்கம தேவனே, உம்மை
இடையறாது நினைப்பவனுக்கு ஐயனே.
Translated by: Smt. Kalyani Venkataraman, Chennai
Marathi Translation
चोवीस त्या तिथि, व्यर्थ वाटताती
प्रहणे संक्रांती, व्यर्थ सर्व
एकादशी व्यतिपात, व्यर्थ वाटतात
तवस्मरण पथ, मांगल्याचा
सुक्ष्म शिवपथ, जाणण्याची वेळ
शुभ घटिका पळ, सर्व श्रेष्ठ
कूडलसंगमदेवा ! व्यर्थ होम जप
स्मरणाविण तप, श्रेष्ठ नाही
अर्थ - चोवीस तिथि, ग्रहणे, संक्रांती, एकादशी आणि व्यतिपात याच्या पालनाथ आपले जीवन व्यर्थ घालवितात. हे प्रभो ! तुझ्या स्मरणापेक्षा श्रेष्ठ होऊ शकत नाही सुक्ष्म शिवपथाची जाणीवेची वेळ हेच सर्व प्रकारच्या होम, नेम, जप तपापेक्षाही शुभ होय. हे कूडलसंगमदेवा (परमेश्वर) तुझ्या स्मरणाहून श्रेष्ठ अशी कोणतीही वस्तू वा साधना नाही. प्रभू चिंतन हीच सर्वश्रेष्ठ होय.
Translated by Rajendra Jirobe, Published by V B Patil, Hirabaug, Chembur, Mumbai, 1983
चोवीस तिथीहून श्रेष्ठ, ग्रहण-संक्रांतीहून श्रेष्ठ, एकादशी व्यतीपाताहून श्रेष्ठ,
सूक्ष्म शिवपथ जाणणारे आहे.
होम, नेम, जप, तपाहून श्रेष्ठ आहे.
कूडलसंगमदेवा तुमचे सदा स्मरण करणारे शरण.
Translated by Shalini Sreeshaila Doddamani
ಶಬ್ದಾರ್ಥಗಳು ಏಕಾದಶಿ = ; ಗ್ರಹಣ = ; ಜಪ = ; ತಿಥಿ = ; ನೇಮ = ; ಮಾಣದೆ = ; ವೆಗ್ಗಳ = ; ವ್ಯತೀಪಾತ = ; ಶಿವಪಥ = ; ಸಂಕ್ರಾಂತಿ = ; ಹೋಮ = ;
ಕನ್ನಡ ವ್ಯಾಖ್ಯಾನ ತಿಥಿ-ಗ್ರಹಣ-ಸಂಕ್ರಾಂತಿ-ಏಕಾದಶಿ-ವ್ಯತೀಪಾತವೆಂದು ಲೆಕ್ಕಹಾಕದೆ ಸೂಕ್ಷ್ಮಶಿವಪಥವನ್ನರಿತು ನಿರಂತರವಾಗಿ ಮಾಡುವ ಶಿವಧ್ಯಾನವು-ಲೆಕ್ಕಾಚಾರವಾಗಿ ಮಾಡುವ ಹೋಮ ನೇಮ ಜಪಾದಿಗಳಿಗಿಂತ ಶ್ರೇಷ್ಠವಾದುದು.
ಹೋಮಕ್ಕೆ ಬೆಂಕಿ ಬೇಕು, ನೇಮಕ್ಕೆ ಹಾಲು ಹಣ್ಣುಬೇಕು, ಜಪಕ್ಕೆ ರುದ್ರಾಕ್ಷಿಮಾಲೆ ಬೇಕು, ತಪಕ್ಕೆ ಅಸನ ಬೇಕು-ಮತ್ತು ಈ ಎಲ್ಲವೂ ನಡೆಯಲು ಒಂದು ನಿಗದಿಯಾದ ಮುಹೂರ್ತಬೇಕು. ಈ ಬಾಹ್ಯವಾದುದೇನೂ ಇಲ್ಲದೆ-ಅಂತರಂಗದಲ್ಲೇ ನಿರಾಲಂಬವಾಗಿ ಅನವರತ ಮಾಡುವ ಶಿವಧ್ಯಾನವು ಹೋಮನೇಮಜಪತಪಾದಿಗಳಿಗಿಂತ ಶ್ರೇಷ್ಠವಾದುದೆಂಬುದಭಿಪ್ರಾಯ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು