•  
  •  
  •  
  •  
Index   ವಚನ - 611    Search  
 
ಮಾಹೇಶ್ವರನ ಜ್ಞಾನಿಸ್ಥಲ - ಶರಣಾಗತಿ
ಅಶ್ವಮೇಧಯಾಗವಂತಿರಲಿ. ಅಜಪ ಉಪದೇಶ ಸಮಾಧಿಯಂತಿರಲಿ, ಹೋ! ಹೋಮ-ನೇಮ-ಗಾಯತ್ರಿಯ ಜಪವಂತಿರಲಿ, ಹೋ! ಜನಮೋಹನ ಮಂತ್ರವಂತಿರಲಿ, ಹೋ! ಕೂಡಲಸಂಗನ ಶರಣರ ನುಡಿಗಡಣೆ ಎಲ್ಲಕ್ಕೂ ಅಧಿಕ ನೋಡಾ!
Transliteration Aśvamēdhayāgavantirali. Ajapa upadēśa samādhiyantirali, hō! Hōma-nēma-gāyatriya japavantirali, hō! Janamōhana mantravantirali, hō! Kūḍalasaṅgana śaraṇara nuḍigaḍaṇe ellakkū adhika nōḍā!
Manuscript
English Translation 2 Let be, O, the horse sacrifice, Let be the initiation in the breath; Let be the trance, Let be the sacrifice, vow,Vēdic spell Let be the mass-enchanting charm! The simple word Of Kūḍala Saṅga 's Śaraṇās Behold! is greater than all these! Translated by: L M A Menezes, S M Angadi
Hindi Translation अश्वमेधयाग रहने दे, अजपा के उपदेशसमाधि रहने दे-? होम, नेम, गायत्री जप रहने दे, अहो, जनमोहन मंत्र रहने दे- देखो कूडलसंगमेश के शरणों की वचनावली सर्वाधिक है । Translated by: Banakara K Gowdappa
Telugu Translation ఆశ్వమేధమది అట్లుండనీ; ఆ జపోపదేశ సమాధులట్లుండనీ! హోమనియమగాయత్రీ మంత్రము లట్లుండనీ! జనవశీకరణ మంత్రతంత్రము లట్లుండనీ! గాక మా శరణుల పలుకులాలించుటయే అథికమన్నిటి కంటె నాకు సంగమ దేవా! Translated by: Dr. Badala Ramaiah
Tamil Translation அசுவமேத யாகமாக இருப்பினும் மனதிலே கூறிக்கொள்ளும் உபதேசம் சமாதியைப் போன்று இருப்பினும் ஹோம, நியம, காயத்ரி ஜபமாக இருப்பினும் மக்களின் மனமீர்க்கும் மந்திரமாக இருப்பினும் கூடல சங்கனின் அடியாரின் சொற்கள் அனைத்திற்கும் மேம்பட்டதாம் காணீர். Translated by: Smt. Kalyani Venkataraman, Chennai
Marathi Translation अश्वमेघ यज्ञ, अजपाजप समाधी गायत्री मंत्र सिद्धी, होत व्यर्थ व्यर्थ मोहन मंत्र, कूडलसंगमदेवा शरणवाणी विसावा, सर्व श्रेष्ठ अर्थ - अश्वमेघ यज्ञादी याग, जप जाप्य समाधी, होम, गायत्री मंत्र, मोहन मंत्र इत्यादि, हे कूडलसंगमदेवा (परमेश्वरा ) तुझ्या शरण वाणी पेक्षा श्रेष्ठ नाहीत. Translated by Rajendra Jirobe, Published by V B Patil, Hirabaug, Chembur, Mumbai, 1983 अश्वमेध यज्ञ असो, अजपाचा उपदेश समाधी असो. गायत्री जप असो, जन-मोहन मंत्र असो, कूडलसंगाच्या शरणांची वाणी यासर्वाहून सर्वश्रेष्ठ आहे पहा. Translated by Shalini Sreeshaila Doddamani
ಶಬ್ದಾರ್ಥಗಳು ಅಜಪೆ = ; ಅಧಿಕ = ಹೆಚ್ಚು; ಅಶ್ವ = ಕುದುರೆ, ತುರಗ, ಹಯ; ಉಪದೇಶ = ; ಗಾಯತ್ರಿ = ; ಜಪ = ; ನುಡಿಗಡಣ = ; ನೇಮ = ; ಸಮಾಧಿ = ; ಹೋಮ = ;
ಕನ್ನಡ ವ್ಯಾಖ್ಯಾನ ಶರಣರಾಡುವ ಎರಡು ಮಾತಿಗೆ ಯಾವ ಮಂತ್ರವೂ ಸಮವಲ್ಲವೆನ್ನುತ್ತಿರುವರು ಬಸವಣ್ಣನವರು. ಯಾಗಗಳಲ್ಲಿ ಅಶ್ವಮೇಧಯಾಗ ದೊಡ್ಡದು, ಮಂತ್ರಗಳಲ್ಲಿ ಅಜಪಾ (ಹಂಸಮಂತ್ರ) ಶ್ರೇಷ್ಠವಾದುದು, ಅದರ ಉಪದೇಶ ಅತ್ಯಂತ ಗೋಪ್ಯ, ಅದರಿಂದ ಲಭಿಸುವ ಸಮಾಧಿ ಅನಿರ್ವಚನೀಯ, ಗಾಯಿತ್ರೀಜಪವಂತೂಪಾವನಕರ ಪ್ರಚುರಮಂತ್ರ, ಜನರ ಮನಸ್ಸುಗಳನ್ನು ಇಷ್ಟಾರ್ಥಕ್ಕೆ ತಕ್ಕಂತೆ ಬಗ್ಗಿಸಿ ಒಲಿಸಿಕೊಳ್ಳುವ ಜನಮೋಹನಮಂತ್ರ ನಿತಾಂತಪ್ರಲೋಭನೀಯವಾದುದು, ಆದರೆ ಶಿವಭಕ್ತರೊಡನೆ ಶರಣರು ವಾತ್ಸಲ್ಯದಿಂದಾಡುವ ಆತ್ಮೀಯವಾದ ಮಾತುಗಳಿಗೆ ಮೇಲೆ ಹೇಳಿದ ಅಶ್ವಮೇಧಾದಿ ಯಾವುದೂ ಸಮಬಾರದು. ಆ ಶರಣರ ಮಾತು ಕಿವಿಗೆ ಬೀಳುವ ಭಾಗ್ಯ ದೊರೆತರೆ ಆತ್ಮದಿಗ್ವಿಜಯ ಮಾಡಿದಂತೆಯೇ, ಸಂಸಾರ ಸಾಗರದಲ್ಲಿ ಅಂಟಿಯೂ ಅಂಟದೆ ಹಂಸದ ಮೇಲೆ ಯಾನ ಮಾಡಿ ಆ ಪಾರ ಸೇರಿದಂತೆಯೇ, ಆತ್ಮಶಕ್ತಿಯ ಆವಾಹನೆಗೆ ಓಗೊಟ್ಟಂತೆಯೇ, ಸರ್ವಾತ್ಮರಿಗೂ ಪ್ರಿಯವಾದಂತೆಯೇ. ಶರಣರ ಮಹೋನ್ನತ ಮೂರ್ತಿಯ ಮುಂದೆ ನಿಂತಾಗ-ಮುಸುಗಿದ ಒಂದು ದಿವ್ಯಾವರಣದಲ್ಲಿ-ಅವರಾಡುವ ಮಾತುಗಳ ಗಂಭೀರಧ್ವನಿ ಜನ್ಮ ಜನ್ಮಾಂತರಗಳ ಕರ್ಮಾವರಣವನ್ನು ಛೇದಿಸಿ ನಮ್ಮ ಅಂತರಾತ್ಮವನ್ನು ಮುಟ್ಟಿ ತಟ್ಟಿ ಎಚ್ಚರಿಸಿ ಏನೊಂದು ಹೊಸದಿಗಂತದತ್ತ ನಡೆಸುವುದೆಂಬುದನ್ನು ಪರಿಭಾವಿಸುವುದೇ ಒಂದು ಅಪೂರ್ವ ಆಧ್ಯಾತ್ಮಿಕ ಘಟನೆ. ವಿ: ಅಜಪೆ ಮತ್ತು ಸಮಾಧಿಯನ್ನು ಕುರಿತ ವಿವರಕ್ಕೆ ನೋಡಿ ನಿಜಗುಣ ಶಿವಯೋಗಿಯ ವಿವೇಕ ಚಿಂತಾಮಣಿ ಪುಟ 78. ಸಮಾಧಿಯ ವಿವರಕ್ಕೆ ಅದೇ ಶಿವಯೋಗಿಯ ಅನುಭವಸಾರ 6-4 ನೋಡಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು