•  
  •  
  •  
  •  
Index   ವಚನ - 612    Search  
 
ಮಾಹೇಶ್ವರನ ಜ್ಞಾನಿಸ್ಥಲ - ಶರಣರು
ವೇದಶಾಸ್ತ್ರದವರ ಹಿರಿಯರೆನ್ನೆ; ಮಾಯಾಭ್ರಾಂತಿ ಕವಿದ ಗೀತಜ್ಞರ ಹಿರಿಯರೆನ್ನೆ! ಇವರು ಹಿರಿಯರುಗಳೇ? ಯಾಗನಟ್ಟುವಿಗಪಾಣರು! ಇವರಿಂದಧಿಕವ ಸಾಧಿಸುವರೇನು ಕಿರಿಯರೆ? ಇಂತು ವಿದ್ಯೆ ಗುಣ ಜ್ಞಾನ ಧರ್ಮ ಆಚಾರ ಶೀಲಂಗಳ, ನಮ್ಮ ಕೂಡಲಸಂಗನ ಶರಣರು ಸಾಧಿಸಿದ ಸಾಧನೆಯನೇ ಸಾಧಿಸುವುದು.
Transliteration Vēdaśāstradavara hiriyarenne; māyābhrānti kavida gītajñara hiriyarenne! Ivaru hiriyarugaḷē? Yāganaṭṭuvigapāṇaru! Ivarindadhikava sādhisuvarēnu kiriyare? Intu vidye guṇa jñāna dharma ācāra śīlaṅgaḷu, nam'ma kūḍalasaṅgana śaraṇaru sādhisida sādhaneyannē sādhisuvudu.
Manuscript
English Translation 2 I do not call them great Who deal in Vēdas and in Śastrās too; Nor those who know the Gītā ; they who are Enveloped in illusion's veils! Are these great? Mimes, Dance-masters of the sacrifice! And are they small Who have accomplished greater things than these? All these accomplishments- Learning vortue and enlightenment, Duty and character and discipline- Attained by ,Kūḍala Saṅga 's Śaraṇās Must be achieved. Translated by: L M A Menezes, S M Angadi
Hindi Translation वेद शास्त्रज्ञों को श्रेष्ठ नहीं कहता । माया भ्रांति से घेरे गीतज्ञों को श्रेष्ठ नहीं कहता, माया भ्रांति पूर्ण क्या वे बडे हैं जो याग के नृत्यगीत वेत्ता हैं? इनसे अधिक के साधक छोटे हैं? मम कूडलसंगमेश के शरण जैसे विद्या, गुण, ज्ञान, धर्म, आचार, शील की साधना करते हैं वैसे साधते हैं ॥ Translated by: Banakara K Gowdappa
Telugu Translation వేద శాస్త్రజ్ఞుల పెద్దలనలేను: మాయా భ్రాంతిని బడు గీతజ్ఞుల పెద్దలన పెద్దలగుదురే? క్రతునటకుల పాటకుల - వీరికంటే హెచ్చు సాధించువారు సామాన్యులే? ఈ విద్య లేగాక ధర్మాచార గుణశీలములు మా వారు సాధించిరయ్యా! దేవా నేను వాటినే సాధింతునయ్యా! Translated by: Dr. Badala Ramaiah
Tamil Translation வேத சாத்திர முணர்ந்தோரைப் பெரியோரென்னேன் மாய மருள்கவிந்த பாடகரைப் பெரியோரென்னேன் இவர்கள் பெரியோரா? வேள்வி செய்து இசைப்போர், இவரைவிட மிகுதியாகச் சாதித்தவர் சிறியரோ? இவ்வாறு கல்வி, இயல்பு, ஞானம், தர்மம் போன்ற ஆசாரசீலங்களை நம் கூடல சங்கமதேவனின் அடியார் சாதித்த சாதனையே சாதனையாம் Translated by: Smt. Kalyani Venkataraman, Chennai
Marathi Translation वेदत शास्त्र नव्हती तें श्रेष्ठ माया भ्रांती श्रेष्ठ, दुराचारी क्षुल्लक नृत्य, काव्य विशारद न होती ती सिद्ध, पवित्र ते विद्यागुण ज्ञान, धर्माचार शील काय जाणतील, शरण मार्ग वाऱ्याशि तयांच्या, न जाती ते शरण न बुजे साधन, रुर्वश्रेष्ठ साधना सर्वाची, असे मर्यादित सिद्ध शरण पथ, अमर्याद कूडलसंगम देवा ! शरणांची साधना सर्वाहून जाणा, श्रेष्ठ मज अर्थ - या जगात अनंतकोटी साधना मार्ग आहेत. त्यांच्याशी माझे काय कर्तव्य ? वेदज्ञ, गीत, गायक, विद्यावंत, ज्ञानवंत, धर्मवंत, शीलवंत इत्यादि यापेक्षाही आचारशील व विचारवंत असे माझ्या कूडलसंमदेवाचे शिवशरण निश्चित थोर होत. कारण मायाभ्रांती इत्यादि उपरिनिर्दिष्ठ मर्यादित साधनेचेच धनी होत. कारण त्यातील एक एक अंग, मात्राने प्राप्त करण्यास एक एक जन्म अपुरा पडतो. पूर्णत्वाची तर गोष्टच सोडा ! म्हणून शरणांची साधना ही परीपूर्ण होय. Translated by Rajendra Jirobe, Published by V B Patil, Hirabaug, Chembur, Mumbai, 1983 वेदशास्त्र पंडितांना श्रेष्ठ म्हणणार नाही. मायाभ्रांतीत राहणाऱ्या गीता तज्ञांना श्रेष्ठ म्हणत नाही. योग-नृत्यविशारद हे मोठे श्रेष्ठ असतील? याहून जास्त सिध्दी मिळविणारे श्रेष्ठ असतील? म्हणून विद्या, गुण, ज्ञान, धर्म, आचार, शीलसंपन्न आमच्या कूडलसंगाच्या शरणांनी साधलेली साधना सर्वांनी प्राप्त करून घेणे सर्वश्रेष्ठ आहे. Translated by Shalini Sreeshaila Doddamani
ಶಬ್ದಾರ್ಥಗಳು ಅಧಿಕ = ಹೆಚ್ಚು; ಕವಿದ = ; ಗೀತ = ಹಾಡು; ನಟ್ಟು = ; ಪಾಣರು = ; ಭ್ರಾಂತಿ = ; ಮಾಯ = ; ಯಾಗ = ; ವೇದ = ; ಶೀಲ = ;
ಕನ್ನಡ ವ್ಯಾಖ್ಯಾನ ವರ್ಣವ್ಯವಸ್ಥೆಯನ್ನೂ ಕರ್ಮಕಟ್ಟಲೆಗಳನ್ನೂ ಕಿಂಚಿತ್ತಾದರೂ ಅಲುಗಿಸಲೊಲ್ಲದ, ಮಾನವೀಯ ಉದಾರ ಧೋರಣೆಯಿಲ್ಲದ ವೈದಿಕ ಜನ ವೇದಶಾಸ್ತ್ರಗಳನ್ನು ಬಲ್ಲರೆಂಬ ಮಾತ್ರಕ್ಕೇ ಅವರನ್ನು ಹಿರಿಯರೆನ್ನಲು ಬಸವಣ್ಣನವರು ನಿರಾಕರಿಸುತ್ತಾರೆ. ಆ ವೈದಿಕ ಕ್ಷುದ್ರತೆಯನ್ನೇ ರೂಕ್ಷತೆಯನ್ನೇ ದಿವ್ಯೀಕರಿಸಿ ಕಾವ್ಯ ಕಟ್ಟಿ ಹಾಡುವರನ್ನೂ ಹಿರಿಯರೆನ್ನಲು ಅವರು ಸರಿಸಮಾನವಾಗಿಯೇ ನಿರಾಕರಿಸುತ್ತಾರೆ. ಅವೈಚಾರಿಕವಾದುದನ್ನು ವಿಧಿಸುತ್ತ, ಸರ್ವಜೀವದಯಾಪರತೆಯನ್ನು ನಿಷೇಧಿಸುತ್ತ, ಯಾಗವೆಂದು ಯಜ್ಞವೆಂದು ಅಗ್ನಿಕುಂಡದ ಸುತ್ತಲೂ ಸಂಭ್ರಮಿಸುತ್ತ ಕುಣಿಯುತ್ತ ಹಾಡುತ್ತ ಕಾಲಕಳೆಯುವಂಥ ನಟ್ಟುವರು ಮತ್ತು ಪಾಣ(ಗಾಯಕ)ರು ಆ ಗೀತಜ್ಞರು ಎಂಬುದು ಬಸವಣ್ಣನವರ ಅಭಿಪ್ರಾಯ. ಈ ವೈದಿಕರ ಕೃತ್ಯಗಳು ಎಷ್ಟು ಅವೈದಿಕವೆಂಬುದು ಅರಿವಿಗೆ ಬರಬೇಕಾದರೆ-ಅವನ್ನು ಶರಣರ ನಡೆನುಡಿ ಆದರ್ಶ ಸಾಧನ ಸಿದ್ಧಿಗಳೊಡನೆ ಹೋಲಿಸಬೇಕು. ಎಂದು ಶರಣರ ಪೂರ್ಣವಿದ್ಯೆ, ಅನ್ವಯಿಕ ಗುಣ, ಕ್ರಾಂತದರ್ಶನ, ದಯಾಮೂಲಧರ್ಮ, ಸಾತ್ವಿಕ ಆಚಾರ, ಸರಳ ವ್ರತನೇಮಗಳನ್ನು ಕೊಂಡಾಡುತ್ತಿರುವರು ಬಸವಣ್ಣನವರು. ವಿ : ಪಾಣಶಬ್ದಕ್ಕೆ ಪ್ರಾಕೃತದಲ್ಲಿ ಶ್ವಪಚ ಅಥವಾ ಚಂಡಾಲ ಎಂಬ ಅರ್ಥವಿದೆ. ತಮಿಳಿನಲ್ಲಿ ಪಾಣ್ ಎಂದರೆ ಹಾಡು. ಪಾಣನ್ ಎಂದರೆ ಹಾಡುಗಾರ. ಮಲೆಯಾಳದಲ್ಲಿ-ಪಾಣನ್ ಎಂದರೆ ಅಭಿನಯಿಸುವ ಹಾಡುವ ಕುಣಿಯುವ ಕಸುಬಿನ ಒಂದು ಜಾತಿಯ ಜನ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು