•  
  •  
  •  
  •  
Index   ವಚನ - 613    Search  
 
ಮಾಹೇಶ್ವರನ ಜ್ಞಾನಿಸ್ಥಲ - ಶರಣಾಗತಿ
ಹಾರುವರೆಲ್ಲರೂ ನೆರೆದು ಶೂದ್ರನ ಹಾರುವನ ಮಾಡುವಲ್ಲಿ ನಂದಿಮುಖವಲ್ಲದೆ ಮಾಡಲಾಗದು; ವಿಭೂತಿಯಲ್ಲದೆ ಮತ್ತೇನನೂ ಮಾಡಲಾಗದು; `ಭರ್ಗೋ ದೇವ' ಎಂಬ ಮಂತ್ರವಲ್ಲದೆ ಮತ್ತೇನನೂ ಮಾಡಲಾಗದು. ನಿಮ್ಮಿಂದ ಕುಲಜರಾಗಿ ಮತ್ತೆ ಅನ್ಯದೈವಕ್ಕೆರಗುವ ಜಗದನ್ಯಾಯಿಗಳಳೇನೆಂಬೆ, ಕೂಡಲಸಂಗಮದೇವಾ?
Transliteration Hāruvarellarū neredu śūdrana hāruvana māḍuvalli nandimukhavillade māḍalāgadu; vibhūtiyallade mattēnannū māḍalāgadu; `bhargō dēva' emba mantravallade mattēnannū māḍalāgadu. Nim'minda kulajarāgi matte an'yadaivakkeraguva jagadan'yāyigaḷanēnembe, kūḍalasaṅgamadēvā?
Manuscript
English Translation 2 When all the sacrificers meet To turn a low-born into one of them, Without the aid of Nandi, it can't be done; You can do nothing else Without the sacred ash; without the spell 'Radiant is God,' you can do nought! What shall I say, Kūḍala Saṅgama Lord, Of those the greatest sinners of the world, Ever impenitent, Who, being ennobled by Thy grace, Yet bow before an alien god? Translated by: L M A Menezes, S M Angadi
Hindi Translation सभी विप्र मिलकर शूद्र को विप्र बनाना चाहें, तो नंदी मुख के बिना नहीं कर सकते; विभूति के बिना कुछ भी नहीं कर सकते; ‘भर्गोदेव:’ मंत्र के बिना कुछ भी नहीं कर सकते तव द्वारा कुलीन होकर फिर अन्य देवों को नमन करनेवाले जगत के अन्यायियों को क्या कहूँ कूडलसंगमदेव ॥ Translated by: Banakara K Gowdappa
Telugu Translation విప్రులెల్ల జేరి శూద్రుని విప్రుని జేయుచు నంది ముఖములేక ముందుకు నడుపలేరు; విభూతిలేక పనిసాగదు; ‘భర్గోదేవ’ యను మంత్రములేక ఏమీ చేయలేరు; మీ వలన కులజులై అన్యదై వములకు మొక్కు లోకవంచకుల నే మందునయ్యా? కూడల సంగమదేవా! Translated by: Dr. Badala Ramaiah
Tamil Translation அந்தணரனைவரும் கூடி இழிந்தோனை அந்தணனாகச் செய்யும்பொழுது நந்திமுகமின்றி, வேறு எதையும் செய்யவியலாது திருநீறின்றி வேறு எதையும் செய்யவியலாது “பர்கோதேவ” என்னும் மந்திரமின்றி வேறு எதையும் செய்ய வியலாது உம்மால் நற்குலத்தவனாகி பிறகு வேறு தெய்வத்தை ஏற்கும் முறையற்றோரை என்னென்பேன் கூடல சங்கமதேவனே. Translated by: Smt. Kalyani Venkataraman, Chennai
Marathi Translation शुद्रासि ब्राह्मण, करावे म्हणून जगातील ब्राह्मण, होती गोळा नंदीमुखापुढे, चर्चूनि विभूती शुद्रा बसविती, सोपस्कारे भर्गोदेव: मंत्र, उच्चारितो सारे गळा घालोनि दोरे, जाणिवेदे नंदीसि वंदितो विभुति चर्चति अन्यदेवा भजती, कवण्यागुणे कूडलसंगमदेवा! जगी हे अन्यायी निद्य क्रिया होई, शुद्धत्वाची अर्थ - महादेवापुढील नंदी, महादेवाला प्रिय असलेली विभूति व भर्गोदेव: मंत्र या तिन्हीचा उपयोग करून जगातील श्रेष्ठ ब्राम्हण मंडळी एखाद्या शुद्राला शुद्ध करण्यासाठी या सर्व क्रिया करतात आणि तेच अन्यायी नंदी विभूति व भर्गोदेव: हा मंत्र न कळल्यामुळे इतर देवी-देवतांच्या पूजाहि करतात. हे कूडलसंगमदेवा! अशा अन्यायी ब्राम्हणाना सरळ स्वभावी भावीक शुद्राला शुद्ध करण्याचा अधिकार तरी कसा पोहोचतो हे मला कळत नाही. अशा अज्ञानी व जगावर अन्याय करणाऱ्याना मी काय म्हणू ? Translated by Rajendra Jirobe, Published by V B Patil, Hirabaug, Chembur, Mumbai, 1983 सर्व विप्र एकत्र येऊन शुद्राला विप्र करण्याचे ठरविले तर नंदी मूर्तीशिवाय काही करु शकत नाही. विभूतीविना दुसरे काही लावता येणार नाही. `भर्गोदेव` मंत्राविना अन्य मंत्र देता येणार नाही. तुमच्यामुळे कुलीन झालेले अन्य देवाला वंदन करु लागले तर त्यांना जगातील अन्यायी कुत्रे म्हणतो कूडलसंगमदेव. Translated by Shalini Sreeshaila Doddamani
ಶಬ್ದಾರ್ಥಗಳು ಎರಡು = ; ಕುಲಜ = ; ನಂದಿ = ; ನೆರೆ = ; ಭರ್ಗೋ = ; ಶೂದ್ರ = ; ಹಾರುವ = ;
ಕನ್ನಡ ವ್ಯಾಖ್ಯಾನ 584ನೇ ವಚನದಲ್ಲಿ ಒಂದು ಮತಾಂತರ ಪ್ರಸಂಗ ಪ್ರಸ್ತಾಪಿತವಾಗಿರುವುದುಂಟು. ಆದರೆ ಅಲ್ಲಿಯ ಮತಾಂತರ ಒಬ್ಬ ಶೂದ್ರಳನ್ನು ರಾಜನ ಹೆಂಡತಿಯಾಗುವಂತೆ ಒಬ್ಬ ಕ್ಷತ್ರಿಯಳನ್ನಾಗಿ ಪರಿವರ್ತಿಸುವುದಾದರೆ-ಈ ವಚನದಲ್ಲಿ ಒಬ್ಬ ಶೂದ್ರನನ್ನು ಬ್ರಾಹ್ಮಣನನ್ನಾಗಿ ಪರಿವರ್ತಿಸುವ ವಿಧಾನವೊಂದು ಪ್ರಸ್ತಾಪಿತವಾಗಿದೆ. ಈ ಎರಡನೆಯ ಮತಾಂತರಪ್ರಸಂಗ ಮೊದಲನೆಯದಕ್ಕಿಂತ ಹೆಚ್ಚು ಅಸಂಭವ. ವರ್ಣಸಾಂಕರ್ಯವನ್ನು ಎಳ್ಳಷ್ಟೂ ಸಹಿಸದ ಮಧ್ಯಕಾಲೀನ ವೈದಿಕರಲ್ಲಿ ಶೂದ್ರನನ್ನು ಹಾರುವನನ್ನಾಗಿ-ಹೇಗೇ ಆಗಲಿ-ಮಾಡುತ್ತಿದ್ದುದು ಉಂಟೆನ್ನುವುದಾದರೆ-ಧಾರ್ಮಿಕರ ಕಣ್ಣು ತಪ್ಪಿಸಿ ಭ್ರಷ್ಟ ವೈದಿಕರು ಹಣ ಅಥವಾ ಮತ್ತಾವುದೋ ಆಮಿಷಕ್ಕಾಗಿ ಮಾಡುತ್ತಿದ್ದ ಒಂದು ವಂಚನೆಯ ಪ್ರಕರಣವೆನ್ನಬೇಕಾಗುವುದು. ಹೀಗೆ ಬ್ರಾಹ್ಮಣರನ್ನು ಹಳಿಯುವ ತೆವಲು ಬಸವಣ್ಣನವರಿಗಿರಲಿಲ್ಲ. ಈ ವಚನವೂ 584ನೇ ವಚನದಂತೆ ಪ್ರಕ್ಷಿಪ್ತವೇ ಆಗಿದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು

C-573 

  Tue 07 Jan 2025  

 ಈ ವಚನದಲ್ಲಿ ಬರುವ "ಶೂದ್ರನ ಹಾರುವನ ಮಾಡುವಲ್ಲಿ" ಎಂದರೆ ಹುಟ್ಟುತ್ತ ಎಲ್ಲರೂ ಶೂದ್ರರು ದ್ವಿಜ ಸಂಸ್ಕಾರದಿಂದ ಶೂದ್ರ ಮಗು ಹಾರುವನಾಗುತ್ತಾನೆ. ಎಂಬರ್ಥ ಬರುವುದರಿಂದ ಇದು ಪ್ರಕ್ಷಿಪ್ತ ವಚನವಲ್ಲ.
  Panchakshari H V
Halebeedu