•  
  •  
  •  
  •  
Index   ವಚನ - 614    Search  
 
ಮಾಹೇಶ್ವರನ ಜ್ಞಾನಿಸ್ಥಲ - ಏಕದೇವೋಪಾಸನೆ
ದೇವನೊಬ್ಬ, ನಾಮ ಹಲವು: ಪರಮ ಪತಿವ್ರತೆಗೆ ಗಂಡನೊಬ್ಬ; ಮತ್ತೊಂದಕ್ಕೆರಗಿದರೆ ಕಿವಿ-ಮೂಗ ಕೊಯ್ವನು! ಹಲವು ದೈವದ ಎಂಜಲ ತಿಂಬವರನೇನೆಂಬೆ, ಕೂಡಲಸಂಗಮದೇವಾ?
Transliteration Dēvanobba, nāma halavu: Parama pativratege gaṇḍanobba; mattondakkeragidare kivi-mūga koyvanu! Halavu daivada en̄jala timbavaranēnembe, kūḍalasaṅgamadēvā?
Manuscript
English Translation 2 God is but one, many His names; The faithful wife knows but one lord; Should she fall for another man, He chops her nose and ears! Should I, O Kūḍala Saṅgama Lord, Regard them as the sort that eat The crumbs of several gods? Translated by: L M A Menezes, S M Angadi
Hindi Translation देव एक है, नाम अनेक, परम पतिव्रता को पति एक है। किसी और को नमन करे, तो नाक कान काटेंगे। अनेक देवों की जूठन खानेवालों को, क्या कहूँ, कूडलसंगमदेव ? Translated by: Banakara K Gowdappa
Telugu Translation దేవుడొకడు పేర్లు పెక్కు పరమ పతివ్రతకు మగండొకడు పరులకు మ్రొక్క చెవి ముక్కుకోయును! పలు దేవతల యెంగిలి తినువారి నే మందునయ్యా కూడల సంగమదేవా! Translated by: Dr. Badala Ramaiah
Tamil Translation இறைவன் ஒருவன், பல நாமங்கள் உயர்ந்த பதிவிரதைக்குக் கணவன் ஒருவன் மற்றொன்றை ஏற்பின் காது மூக்கைக் கொய்வான் பல தெய்வங்களின் மிச்சிலை உண்பவரை என்னென்பேன் கூடல சங்கம தேவனே. Translated by: Smt. Kalyani Venkataraman, Chennai
Marathi Translation एकचि तो देव, शिवभक्तासाठी कोटी नामे खोटी, तयासाठी पति तो एकचि, पतिव्रतेसाठी येर वार्ता खोटो, तिचेसाठी कूडलसंगमदेव ! प्रिय अमुचा एक पूजिता अनेक, नाक कापी वावडे उचिष्ट, परपुरूषाचे ते तसे परदेवाचे शरणांशी अर्थ - परमेश्वर हा सदभक्तासाठी निर्गुण, निरवयव, निराकार असा एकच आहे. त्यालाच अनेक नावे दिली जातात. परंतु पतिव्रता जशी एक पतिशिवाय अन्य कोणासही आपला प्राणेश्वर मानीत नाही आणि अनेक नावे उच्चारीत नाही अगदी तसेच कूडलसंगमदेवाचे शरणही एकमेव परमेश्वराशिवाय अन्य देवी देवतेस मानीत नाही. जसे सतीस परपुषाचे उष्टे चालत नाही तसेच शिवभक्तास परशिवाच्या प्रसादाशिवाय अन्य देवतांचा प्रसाद चालत नाही. Translated by Rajendra Jirobe, Published by V B Patil, Hirabaug, Chembur, Mumbai, 1983 देव एक आहे, नाव अनेक आहे. परम पतीव्रतेला पती एक आहे. अन्य देवाला वंदन करणाऱ्यांचे नाक- कान कापेल. अनेक देवांचे उष्टे खाणाऱ्यांना काय म्हणावे कूडलसंगमदेवा ! Translated by Shalini Sreeshaila Doddamani
Urdu Translation خدا تو ایک ہے لیکن ہیں اس کےنام کئی جہاںمیںجیسےکسی پاکبازبیوی کا نہیں ہےکوئی بھی آقا سوائے شوہرکے جھکائیں ہم جوکسی اوردر پہ سراپنا توجانیے کہ سلامت رہےگی ناک نہ کان بتاؤکوڈلا سنگا میں کیا کہوں اس کو جومانتےہوںجہاں میں کئی خداؤں کو جوپل رہےہوں فقط ان کےسرد ٹکڑوں پر Translated by: Hameed Almas
ಶಬ್ದಾರ್ಥಗಳು ಎಂಜಲ = ; ಎರಗು = ; ನಾಮ = ; ಪತಿವ್ರತೆ = ; ಪರಮ = ;
ಕನ್ನಡ ವ್ಯಾಖ್ಯಾನ ಏಕಂ ಸದ್ವಿಪ್ರಾ ಬಹುಧಾ ವದಂತಿ-ಎಂಬ ವೇದವಾಕ್ಯಕ್ಕೆ ಸಮಭಾವದಲ್ಲಿದೆ-ದೇವನೊಬ್ಬ ನಾಮ ಹಲವೆಂಬ ಬಸವಣ್ಣನವರ ಮಾತು. ಪತಿವ್ರತೆಯಾದವಳು ಒಬ್ಬ ಪುರುಷನಲ್ಲಿ ಸ್ನೇಹಿಸುವಂತೆ-ಭಕ್ತನಾದವನು ರುದ್ರನೇಕೋದೇವನನ್ನು ಮಾತ್ರ ಉಪಾಸಿಸಬೇಕೆಂಬುದೇ ಈ ವಚನದ ತರ್ಕಸರಣಿ. ಹಾದರಭಾವ ತೋರಿದ ಹೆಣ್ಣಿಗೆ ಕಿವಿಯನ್ನೂ ಮೂಗನ್ನೂ ಕೊಯ್ಯುವುದು ಬಸವಣ್ಣನವರ ಕಾಲಕ್ಕಿದ್ದ ಶಿಕ್ಷೆ. ಅದೇ ಗತಿ ಏಕದೇವತಾನಿಷ್ಠೆಯಿಲ್ಲದವರಿಗೂ ಪರದಲ್ಲಿ ಪ್ರಾಪ್ತವಾಗುವುದೆನ್ನುತ್ತಿರುವರು ಮತ್ತು ಹಲವು ದೈವದೆಂಜಲ ತಿಂಬವರನೇನೆಂಬೆನೆನ್ನುತ್ತ-ಲೌಕಿಕವಾದ ಹಾದರಕ್ಕಿಂತಲೂ ಅನೇಕ ದೇವತೆಗಳ ಉಪಾಸನೆ ಕುತ್ಸಿತವೆಂಬುದನ್ನು-ಎಂಜಲು ಎಂಬ ಒಂದು ಮಾತು ಮಿಂಚಿ ಹೊಳೆಯುವಂತೆ ಮಾಡಿರುವುದು ಈ ವಚನದಾಕಾಶದಲ್ಲಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು