•  
  •  
  •  
  •  
Index   ವಚನ - 615    Search  
 
ಮಾಹೇಶ್ವರನ ಜ್ಞಾನಿಸ್ಥಲ - ಏಕದೇವೋಪಾಸನೆ
ಕರ್ತಾರನ ಪೂಜಿಸಿ ಕು(ಚ್ಚಿ)ತ ದೈವಕ್ಕೆರಗುವರು ಕತ್ತೆ ಕುದುರೆಗೆ ಹುಟ್ಟಿದ ವೇಸರನಂತೆ! ಭಕ್ತರೆಂತೆಂಬೆ, ಭೃತ್ಯರೆಂತೆಂಬೆ, ಶರಣರೆಂತೆಂಬೆನವರ? ಎರಡುಳ್ಳ ಪ್ರಪಂಚಿಗಳ ಮೆಚ್ಚ ಕೂಡಲಸಂಗಮದೇವಾ!
Transliteration Kartārana pūjisi ku(cci)ta daivakkeraguvaru katte kudurege huṭṭida vēsaranante! Bhaktarentembe, bhr̥tyarentembe, śaraṇarentembenavara? Eraḍuḷḷa prapan̄cigaḷa meccu kūḍalasaṅgamadēvā!
Manuscript
English Translation 2 They who, having adored The Maker of all things, will bow To petty gods, are like the mule Begotten of a horse and ass! Shall I call them Devotees, servants, Śaraṇās? Lord Kūḍala Saṅgama dislikes The worldlings with the double face! Translated by: L M A Menezes, S M Angadi
Hindi Translation कर्तार की पूजा कर कुत्सित देवों को प्रणाम करनेवाले गधी और घोडे से उत्पन्न टट्टू के समान हैं। उन्हें भक्त कैसे कहूँ? भृत्य कैसे कहूँ? शरण कैसे कहूँ? दुरंगी धूर्तों को कूडलसंगमदेव नहीं चाहते ॥ Translated by: Banakara K Gowdappa
Telugu Translation కర్తను పూజించి కల్ల దేవుళ్ళకు మ్రొక్కి గాడిద గుఱ్ఱములకు పుట్టు వేసరముల భక్తులను టెట్లు? భృత్యులను టెట్లు? శరణులను టెట్లు? రెండు గల ప్రాపంచకుల కర్తను పూజించి కల్ల దేవుళ్ళకు మ్రొక్కి గాడిద గుఱ్ఱములకు పుట్టు వేసరముల భక్తులను టెట్లు? భృత్యులను టెట్లు? శరణులను టెట్లు? రెండు గల ప్రాపంచకుల వంచకుల మెచ్చడయ్యా మా సంగమదేవుడు: Translated by: Dr. Badala Ramaiah
Tamil Translation உடையனை வணங்கி, கீழ் தெய்வத்தை ஏற்பவன் கழுதை குதிரைக்குப் பிறந்த கோவேறு கழுதையாம் பக்தன், தொண்டன், சரணன் என எங்ஙனம் அவரைக் கூறுவேன்? இரண்டுள்ள வாழ்வுமுறையை மெச்சுவதில்லை கூடல சங்கமதேவன் Translated by: Smt. Kalyani Venkataraman, Chennai
Marathi Translation कर्त्याची उपासना करुन क्षुद्र देवतांना वंदणारे गाढव घोड्या पोटी जन्मलेले खच्चर असतात. त्यांना भक्त कसे म्हणावे, भृत्य कसे म्हणावे, शरण कसे म्हणावे? द्विपथगामी संसारीला प्रसन्न होणार नाही कूडलसंगमदेव. Translated by Shalini Sreeshaila Doddamani
ಶಬ್ದಾರ್ಥಗಳು ಎರಗು = ; ಕರ್ತಾರ = ; ಕುಚಿತ = ; ಪ್ರಪಂಚ = ; ಭೃತ್ಯ = ; ವೇಸರ = ;
ಕನ್ನಡ ವ್ಯಾಖ್ಯಾನ ವೀರಶೈವಧರ್ಮದಲ್ಲೇ ಪ್ರಚಲಿತವಿದ್ದ ಅನೇಕ ದೇವತೋಪಾಸನೆಯನ್ನು ಈ ವಚನದಲ್ಲಿ ಖಂಡಿಸುತ್ತಿರುವರು ಬಸವಣ್ಣನವರು. ಈ ಧರ್ಮಕ್ಕೆ ಬರುವ ಮುನ್ನ ತಾವು ಪೂಜಿಸುತ್ತಿದ್ದ ದೈವಗಳನ್ನೂ ಶಿವನೊಡನೆ ಒಂದುಗೂಡಿಸಿ ಪೂಜಿಸುವುದು ಅಸಂಗತವೆಂಬುದು ಅವರ ಅಭಿಪ್ರಾಯ. ಏಕೆಂದರೆ ಕಿರುಕುಳ ದೈವಗಳ ಪೂಜೆ ಲಾಭಲೋಭಗಳಿಗಾಗಿ ನೆರವೇರುವುದಾದರೆ ಶಿವಪೂಜೆಯು ಜೀವನಲ್ಲಿ ಶಿವಾಂಶವನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕಾಗಿ. ಲಿಂಗಧಾರಿಯಾಗಿ-ಅನ್ಯದೈವಗಳ ಪೂಜೆಯನ್ನೂ ಯಾವನಾದರೊಬ್ಬನು ಮಾಡುತ್ತಿರುವನೆಂದರೆ-ಅವನನ್ನು ಕಂಡು ಬಸವಣ್ಣನವರಿಗೆ ಹೇಸರಕತ್ತೆಯನ್ನು ಕಂಡಷ್ಟು ಉಪಹಾಸ. ಆ ಹೇಸರ ಅತ್ತ ಅಗಸನ ಕತ್ತೆಯೂ ಅಲ್ಲ. ಇತ್ತ ವೀರನ ಕುದುರೆಯೂ ಅಲ್ಲ. ಬಸವಣ್ಣನವರು ಬೋಧಿಸಿದ ಧರ್ಮಕ್ಕೆ ಒಬ್ಬ ದೇವರು, ಒಂದು ಕುಲ, ಒಂದು ಮನಸ್ಸು-ಕೇವಲಸುಖವೇ ಅದರ ಲಕ್ಷಣ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು